ತುಮಕೂರು ಜಿಲ್ಲಾ ಕಾಂಗ್ರೆಸ್ನಲ್ಲಿ ಮುಂದುವರಿದ ಅಸಮಾಧಾನ ; ಕುರುಬ ಸಮಾವೇಶಕ್ಕೆ ಗೈರಾದ ಜಿ.ಪರಮೇಶ್ವರ್
ತುಮಕೂರು ಜಿಲ್ಲಾ ಕಾಂಗ್ರೆಸ್ನಲ್ಲಿ ಮುಂದುವರಿದ ಅಸಮಾಧಾನ; ಕುರುಬ ಸಮುದಾಯದ ಸಮಾವೇಶಕ್ಕೆ ಡಾ.ಜಿ.ಪರಮೇಶ್ವರ್ ಬಂದಿರಲಿಲ್ಲ. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, ಡಿಕೆಶಿ ಬಂದರೂ ಪರಮೇಶ್ವರ ಗೈರಾಗಿದ್ದರು.
ತಮಕೂರು: ತುಮಕೂರು (Tumakuru) ಜಿಲ್ಲಾ ಕಾಂಗ್ರೆಸ್ನಲ್ಲಿ (Congress) ಅಸಮಾಧಾನ ಮುಂದುವರಿದರುವ ಲಕ್ಷಣಗಳು ಕಾಣುತ್ತಿವೆ. ಕುರುಬ ಸಮುದಾಯದ ಸಮಾವೇಶಕ್ಕೆ ಡಾ.ಜಿ.ಪರಮೇಶ್ವರ್ (Dr.G Parmeshwar) ಬಂದಿರಲಿಲ್ಲ. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, (Siddaramaiah) ಡಿಕೆಶಿ ಬಂದರೂ ಪರಮೇಶ್ವರ ಗೈರಾಗಿದ್ದರು. ಈ ಹಿಂದೆ ಮೇ 22ರಂದು ತುಮಕೂರಿನಲ್ಲಿ ನಡೆದಿದ್ದ ಮಡಿವಾಳ & ಅಲ್ಪಸಂಖ್ಯಾತರ ಕಾರ್ಯಕ್ರಮಕ್ಕೂ ಪರಮೇಶ್ವರ್ ಗೈರಾಗಿದ್ದರು. ಈ ಹಿಂದಿನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, ಡಿಕೆಶಿ ಬಂದರೂ ಡಾ.ಜಿ.ಪರಮೇಶ್ವರ್ ಗೈರಾಗಿದ್ದರು. ಇದು ಜಿಲ್ಲಾ ಕಾಂಗ್ರೆಸ್ನಲ್ಲಿ ಅಸಮಾಧಾನದ ಬಗ್ಗೆ ಚರ್ಚೆಯಾಗೆ ಕಾರಣಚಾಗಿತ್ತು. ಇಂದು ಮತ್ತೆ ಕುರುಬ ಸಮುದಾಯದ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಪರಮೇಶ್ವರ್ ಕಾಂಗ್ರೆಸ್ ಜತೆಗಿನ ಮುನಿಸು ಎಂದು ಕಾರ್ಯಕರ್ತರಲ್ಲಿ ಗುಸು ಗುಸು ಮಾತು ಕೇಳಿ ಬರುತ್ತಿದೆ.
ಇದನ್ನು ಓದಿ: ಕನ್ನಡಿಗರನ್ನು ತಡವಿಕೊಂಡರೆ ಉಗ್ರಕ್ರಮ ಎದುರಿಸಬೇಕಾಗುತ್ತದೆ ಅಂತ ಎಮ್ ಈ ಎಸ್ ಸದಸ್ಯರಿಗೆ ಬೊಮ್ಮಾಯಿ ಎಚ್ಚರಿಕೆ ನೀಡಿದರು!
ಮಿಸ್ಟರ್ ಈಶ್ವರಪ್ಪ ನಿನಗೆ ಕುರುಬರ ಮೇಲೆ ವಿಶ್ವಾಸ ಇದ್ದರೆ ಕೇಂದ್ರ ಸರ್ಕಾರದಿಂದ ಕುರುಬರ ಸಮಾಜಕ್ಕೆ ಎಸ್ಟಿ ಸರ್ಟಿಫಿಕೇಟ್ ಕೊಡಿಸು : ಸಿದ್ದರಾಮಯ್ಯ
ತುಮಕೂರು: ಮಿಸ್ಟರ್ ಈಶ್ವರಪ್ಪ ನಿನಗೆ ಕುರುಬರ ಮೇಲೆ ವಿಶ್ವಾಸ ಇದ್ದರೆ ಕೇಂದ್ರ ಸರ್ಕಾರಕ್ಕೆ ಹೋಗಿ ಕುರುಬರ ಸಮಾಜಕ್ಕೆ ಎಸ್ಟಿ ಸರ್ಟಿಫಿಕೇಟ್ ಕೊಡಿಸು. ನಿಮಗೆ ಕುರುಬರ ಬಗ್ಗೆ ಕಾಳಜಿ ಇದ್ರೆ ಕೊಡಿಸು ನೋಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತುಮಕೂರು ಜಿಲ್ಲಾ ಕುರುಬ ಸಮಾವೇಶದಲ್ಲಿದಲ್ಲಿ ಕೆ.ಎಸ್ ಈಶ್ವರಪ್ಪ ಅವರಿಗೆ ಸವಾಲ್ ಎಸೆದಿದ್ದಾರೆ.ಸುಮ್ ಸುಮ್ನೆ ಈಶ್ವರಪ್ಪ,ಕುರುಬರನ್ನ ಎಸ್ಟಿ ಮಾಡಿಸ್ದೇ ಅಂತಾರೆ. ನಾನೇ ಶಿಫ್ಫಾರಸ್ಸು ಮಾಡಿ ಕಳಿಸಿದ್ನಲ್ಲಾ,ಈಶ್ವರಪ್ಪ ಅವರೇ.ಈಗ ನಿಮ್ಮದೇ ಕೇಂದ್ರ ಸರ್ಕಾರ ಇದೆ, ರಾಜ್ಯ ಸರ್ಕಾರ ಇದೆ. ಸುಮ್ನೆ ಪಾದಯಾತ್ರೆ ಮಾಡ್ತೀರಾ, ಈ ಬೂಟಾಟಿಕೆ ಬಿಡಬೇಕು. ಸಭೆಗೆ ಬಂದಿಲ್ಲ ಎಂದು ನನ್ನ ಮೇಲೆ ಗೂಬೆ ಕೂರಿಸ್ತೀಯಾ? ನಾವು ಈಶ್ವರಪ್ಪ, ಬಿಜೆಪಿ ನಾಯಕತ್ವದಲ್ಲಿ ಹೋಗಬೇಕಿತ್ತಾ? ಬೂಟಾಟಿಕೆ, ಈ ನಾಟಕ ಇಡೀ ರಾಜ್ಯದ ಕುರುಬರು ಅರ್ಥ ಮಾಡಿಕೊಂಡಿದ್ದಾರೆ ಎಂದು ಗುಡುಗಿದರು.
ಇದನ್ನು ಓದಿ: ಅನುಮತಿ ಪಡೆಯದೆ ಲಂಡನ್ಗೆ ಹೋದ ಸಂಸದ ರಾಹುಲ್ ಗಾಂಧಿ; ಪಕ್ಷದ ವತಿಯಿಂದ ಬಂತು ಪ್ರತಿಕ್ರಿಯೆ: ಏನದು? ಮತ್ತದೇ ಯಡವಟ್ಟು!
ನೀವು ನಾಟಕ ಮಾಡುವವರ ಜೊತೆಗೆ ಹೋಗ್ತೀರಾ ನಾನು ನಿಮ್ಮ ಪರವಾಗಿ ಇಲ್ಲದಿದ್ರೆ ನನ್ನನ್ನ ವಿರೋಧ ಮಾಡಿ. ನಾನು ನಿಮ್ಮ ಪರವಾಗಿ ನಿಂತರೆ ನನ್ನ ಪರವಾಗಿ ನೀವು ನಿಲ್ಲಿ. ನಿಮಗೆ ಕೈಮುಗಿದು ಕೇಳಿಕೊಳ್ತೇನೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ,ಜೆಡಿಎಸ್ ಮಾತು ಕೇಳಬೇಡಿ. ನನ್ನ ಜೊತೆ ಇದ್ದು,ನನಗೆ ಬೆಂಬಲ ಕೊಟ್ಟು,ನನ್ನ ಪಕ್ಷವನ್ನ ಗೆಲ್ಲಿಸಿಕೊಡಿ. ನಾನು ಅಧಿಕಾರಕ್ಕೆ ಬಂದ್ಮೇಲೆ ತುಮಕೂರಿನಲ್ಲಿ ಸಮುದಾಯ ಭವನ ಕಟ್ಟೋಣ.ಈಗಾಗಲೇ 50 ಲಕ್ಷ ಕೊಟ್ಟಿದ್ದೀನಿ,ಇನ್ನು 2 ಕೋಟಿ ಕೊಡ್ತೇನೆ.ಎಂದು ಕುರುಬ ಸಮಾಜವನ್ನು ಕೇಳಿಕೊಂಡರು.
ಒಂದು ಆಯೋಗ ಮಾಡಿ ರಿಪೋರ್ಟ್ ತೆಗೆದುಕೊಂಡು,ಒಂದು ವರ್ಷ ನಿದ್ದೆ ಮಾಡಿಬಿಟ್ರು. ಹಿಂದುಳಿದ ವರ್ಗಗಳಿಗೆ 33% ಮೀಸಲಾತಿ ಕೊಡಬೇಕೆಂದು ತೀರ್ಮಾನಿಸಿದ್ದೇ ನಾವು. 1995 ಇಸವಿವರೆಗೂ ಹಿಂದುಳಿದವರಿಗೆ ಅಷ್ಟು ಮೀಸಲಾತಿ ಇರಲಿಲ್ಲಾ. ಇವತ್ತು ಅದನೆಲ್ಲಾ ಹಾಳು ಮಾಡೋಕೆ ಹೊರಟಿದ್ದಾರೆ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪುಟ್ಟರಂಗಶೆಟ್ಟಿಗೆ ಹೆದರಿಸಿಬಿಟ್ರು.ಹಿಂದುಳಿದ ವರ್ಗಗಳ ಮೀಸಲಾತಿ ವರದಿ ತೆಗೆದುಕೊಳ್ಳಲಿಲ್ಲಾ. ಮತ್ತೇ ಕಾಂಗ್ರೆಸ್ ಪಕ್ಷಾನೇ ಅಧಿಕಾರಕ್ಕೆ ಬರಬೇಕು ಎಂದರು.
ಜಪ್ಪಯ್ಯ ಅಂದರೂ ಬಿಜೆಪಿ ಅವರು ವರದಿ ತೆಗೆದುಕೊಳ್ಳೋಕೆ ತಯಾರಿಲ್ಲಾ.ನಾವು ಬಂದ ತಕ್ಷಣ ತೆಗೆದುಕೊಳ್ತೇವೆ. ಜೆಡಿಎಸ್,ಬಿಜೆಪಿಯಲ್ಲಿ ಹಿಂದುಳಿದ ಮುಖ್ಯಮಂತ್ರಿಯನ್ನ ಮಾಡ್ತಾರಾ..? ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು,ಇದು ಎಲ್ಲಿದೆ. ಶ್ರೀಮಂತರು ಶ್ರೀಮಂತರೇ,ಬಡವರು ಬಡವರೇ. ಇಂದು ಕನಕಗುರು ಪೀಠ ನಾನ್ ಮಾಡ್ದೇ ನಾನ್ ಮಾಡ್ದೆ ಅಂತಾರೇ.. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೋಗಿ ಕನಕ ಗುರುಪೀಠ ಮಾಡಿದವರು ನಾವು. ಇಡೀ ರಾಜ್ಯಕ್ಕೆ ಒಂದು ಗುರುಪೀಠ ಬೇಕು ಎಂದು ಮಾಡಿದ್ವಿ. ಆ ಈಶ್ವರಪ್ಪ ಇದಾನಲ್ಲಾ,ಶಿವಮೊಗ್ಗಗೆ ಹೋಗಿದ್ವಿ. ಅಲ್ಲಿ ಮೊದಲನೇ ಮೀಟಿಂಗ್ ಮಾಡಿ,ಮೂರು ಲಕ್ಷ ಕೊಡಬೇಕೆಂದು ಹೇಳಿದ್ವಿ. ಎರಡನೇ ಮೀಟಿಂಗ್ ನಲ್ಲಿ ದುಡ್ಡು ಕೊಡಬೇಕು ಅಂತೇಳಿ ಈಶ್ವರಪ್ಪ ಸಭೆಗೆ ಬರಲೇ ಇಲ್ಲಾ ಎಂದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Sat, 28 May 22