AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಚಿತ್ರರಂಗದ ಮೇಕಪ್ ಆರ್ಟಿಸ್ಟ್ ಮನೆಯಲ್ಲಿ ಚಿನ್ನಾಭರಣ ಕಳ್ಳತನ: 24 ಗಂಟೆಯಲ್ಲೇ ಆರೋಪಿಗಳ ಬಂಧನ

ಕನ್ನಡ ಚಿತ್ರರಂಗದಲ್ಲಿ ಮೇಕಪ್ ಆರ್ಟಿಸ್ಟ್ ಆಗಿದ್ದ ಕಲಾವಿದೆ ಮನೆಯಲ್ಲಿ ಕಳ್ಳತನ ನಡೆದಿರುವಂತಹ ಘಟನೆ ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ನಡೆದಿದೆ. ಚಿನ್ನಾಭರಣ ಸೇರಿ ಚಿನ್ನದ ಪದಕವನ್ನು ಕಳ್ಳರು ಹೊತ್ತೊಯ್ದಿದ್ದರು. ಪ್ರಕರಣ ದಾಖಲಾದ 24 ಗಂಟೆಯಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಕನ್ನಡ ಚಿತ್ರರಂಗದ ಮೇಕಪ್ ಆರ್ಟಿಸ್ಟ್ ಮನೆಯಲ್ಲಿ ಚಿನ್ನಾಭರಣ ಕಳ್ಳತನ: 24 ಗಂಟೆಯಲ್ಲೇ ಆರೋಪಿಗಳ ಬಂಧನ
ಹೇಮಲತಾ, ಚಿನ್ನದ ಪದಕ
Jagadisha B
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 12, 2025 | 10:28 PM

Share

ತುಮಕೂರು, ಡಿಸೆಂಬರ್​ 12: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ (Kannada cinema) ಅದೆಷ್ಟೋ ನಾಯಕ, ನಾಯಕಿರಿಗೆ ಬಣ್ಣ ಹಚ್ಚಿ ಕಣ್ಮನ ಸೆಳೆಯುವಂತೆ ಮಾಡಿದವರು ಹೇಮಲತಾ. ಅವರ ಸಾಧನೆಗೆ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಚಿನ್ನದ ಪದಕ ಸಹ ನೀಡಿದ್ದರು. ಚಿತ್ರರಂಗದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದ ಹೇಮಲತಾ ಅವರು ವೃದ್ದಾಪ್ಯದಲ್ಲಿ ಹಳ್ಳಿ ಸೇರಿದ್ದರು. ಒಂಟಿಯಾಗಿ ವಾಸಿಸುತಿದ್ದ ಅವರ ಮನೆಯಲ್ಲಿ ಅದೊಂದು ದಿನ ಕಳ್ಳತನವಾಗಿದ್ದು (theft), ಚಿನ್ನಾಭರಣ, ಪದಕವನ್ನು ಕಳ್ಳರು ಹೊತ್ತೊಯ್ದಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಪರಿಚಯಸ್ಥರೇ ಎಂಬುವುದು ಅಚ್ಚರಿಯ ಸಂಗತಿ.

ಚಿನ್ನಾಭರಣ ಸಹಿತ ಪದಕ ಕಳ್ಳತನ

ವರನಟ ಡಾ. ರಾಜಕುಮಾರ್​​​​​ ಕಾಲದ ಕನ್ನಡ ಚಿತ್ರರಂಗದಲ್ಲಿ ಹೇಮಲತಾ ಹೆಸರು ಚಿರಪರಿಚಿತ. ಅದೆಷ್ಟೋ ಕನ್ನಡ ಸಿನಿಮಾಗಳಲ್ಲಿ ನಾಯಕ, ನಾಯಕಿಯರಿಗೆ ಬಣ್ಣ ಹಚ್ಚಿದ್ದ ಮೇಕಪ್ ಆರ್ಟಿಸ್ಟ್. ಚಿತ್ರರಂಗದಲ್ಲಿ ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಬಂದಿದ್ದು, ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಚಿನ್ನದ ಪದಕ ಸಹ ನೀಡಿದ್ದರು. ಸಾಧನೆಯ ಗುರುತಾಗಿ ಪದಕವನ್ನು ತಮ್ಮ ಚಿನ್ನಾಭರಣಗಳ ಜೊತೆ ಭದ್ರವಾಗಿಟ್ಟಿದ್ದ ಹೇಮಲತಾ, ಮೊನ್ನೆ ಶಾಕ್ ಆಗಿದ್ದಾರೆ. ಯಾರಿಗೂ ಗೊತ್ತಾಗದಂತೆ ಚಿನ್ನಾಭರಣ ಸಹಿತ ಪದಕ ಕೂಡ ಕಳುವಾಗಿತ್ತು.

ಇದನ್ನೂ ಓದಿ: ಬದುಕಿರುವ ಮಹಿಳೆಗೆ ಡೆತ್ ಸರ್ಟಿಫಿಕೇಟ್: ಆಸ್ತಿಗಾಗಿ ಬದುಕಿರುವ ವೃದ್ಧೆಯನ್ನೇ ಸಾಯಿಸಿದ್ರು!

ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕಲಾವಿದೆ ತಮ್ಮ ವೃತ್ತಿ ಬದುಕಿನ ಬಳಿಕ ಊರಿನಲ್ಲಿ ಒಂಟಿಯಾಗಿ ವಾಸವಿದ್ದರು. ಮನೆಯ ಕೆಲಸಗಳನ್ನು ಆಗಾಗ ಪರಿಚಿತರಾದ ಶಂಕರ್ ಬಾಬು, ಗುರುರಾಜ್, ಮನೋಜ್ ಎಂಬ ಯುವಕರ ಬಳಿ ಮಾಡಿಸಿಕೊಳ್ಳುತ್ತಿದ್ದರು. ಯಾವುದೇ ಸಮಸ್ಯೆ ಇಲ್ಲದೆ ವಾಸವಿದ್ದ ಇವರು, ಮೊನ್ನೆ ಆತಂಕಕ್ಕೆ ಒಳಗಾಗುವಂತಹ ಘಟನೆ ನಡೆದಿದೆ.

24 ಗಂಟೆಯೊಳಗೆ ಆರೋಪಿಗಳ ಬಂಧನ

ಮನೆಯಲ್ಲಿ ಜೋಪಾನವಾಗಿ ಪರ್ಸನಲ್ಲಿಟ್ಟಿದ್ದ 70 ಗ್ರಾಂ ಚಿನ್ನಾಭರಣ ಸಹಿತ ಸರ್ಕಾರ ನೀಡಿದ್ದ 20 ಗ್ರಾಂ ಚಿನ್ನದ ಪದಕ ಕಣ್ಮರೆಯಾಗಿತ್ತು. ವಿಚಾರ ತಿಳಿದ ಕೂಡಲೇ ತಿಪಟೂರು ನಗರ ಪೊಲೀಸ್ ಠಾಣೆಗೆ ಹೇಮಲತಾ ಅವರು ದೂರು ನೀಡಿದ್ದು, ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಅಸಲಿಗೆ ಈ ಕೃತ್ಯ ಎಸಗಿದವರೆಲ್ಲರೂ ಯುವಕರೇ. ಮೇಲಾಗಿ ಹೇಮಲತಾ ಅವರಿಗೆ ಪರಿಚಯಸ್ಥರೇ ಆಗಿದ್ದಾರೆ. ಅವರ ಮನೆ ಕೆಲಸ ತಾವೇ ಮಾಡಿಕೊಟ್ಟಿದ್ದರು. ಹೀಗೆ ಅವರ ನಂಬಿಕೆ ಗಳಿಸಿದ್ದ ಮೂವರು ತಮ್ಮ ವೈಯಕ್ತಿಕ ಸಾಲಗಳನ್ನು ತೀರಿಸಲು ವೃದ್ದೆ ಬಳಿಯಿದ್ದ ಚಿನ್ನದ ಮೇಲೆ ಕಣ್ಣು ಹಾಕಿದ್ದರು. ಅದರಂತೆ ಡಿ. 10ರಂದು ಮನೆ ಕೆಲಸಕ್ಕೆಂದು ಬಂದ ಮೂವರು ಸಂಜೆ 5 ಗಂಟೆ ಸುಮಾರಿಗೆ ಹೇಮಲತಾರ ಗಮನಕ್ಕೆ ಬಾರದಂತೆ ಪರ್ಸ್ ನಲ್ಲಿದ್ದ ಚಿನ್ನ ಎಗರಿಸಿದ್ದರು. ಆದರೆ ಪ್ರತಿ ದಿನ ಮಲಗುವಾಗ ಚಿನ್ನ ನೋಡುತಿದ್ದ ಹೇಮಲತಾ, ಅಂದು ಕೂಡ ಪರಿಶೀಲಿಸಿದಾಗ ಚಿನ್ನ ಇಲ್ಲದಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಫೈರಿಂಗ್​: ಕೂದಲೆಳೆ ಅಂತರದಲ್ಲಿ ಬಚಾವ್​!

ಸದ್ಯ ಆರೋಪಿಗಳನ್ನು ಬಂಧಿಸಿರುವ ತಿಪಟೂರು ನಗರ ಪೊಲೀಸರು, ಬಂಧಿತರಿಂದ ಚಿನ್ನದ ಪದಕ ಸಹಿತ 90 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕಲಾವಿದೆಗೆ ತಮ್ಮ ವಸ್ತು ವಾಪಾಸ್ ನೀಡುವ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ. ಆದರೆ ನಂಬಿಕಸ್ಥರು ಅಂತ ಮನೆಗೆ ಸೇರಿಸಿಕೊಂಡು ವೃದ್ಧೆಗೆ ಮೋಸ ಮಾಡುವ ಈ ಯುವಕರ ಯೋಚನೆ ನಿಜಕ್ಕೂ ಬೆಚ್ಚಿಬೀಳಿಸುವ ಸಂಗತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:26 pm, Fri, 12 December 25

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!