ತುಮಕೂರಿಗೆ ಬೆಂಗಳೂರು ಉತ್ತರ ಅಂತ ಮರುನಾಮಕರಣಕ್ಕೆ ಭಾರಿ ವಿರೋಧ

ಬ್ರ್ಯಾಂಡ್ ಬೆಂಗಳೂರಿಗೆ ರಾಮನಗರ ಸೇರುಸುತ್ತಿದ್ದಂತೆ ಈಗ ತುಮಕೂರಿನ ಹೆಸರು ಪ್ರಸ್ತಾಪವಾಗುತ್ತಿದೆ. ಇತ್ತೀಚೆಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ತುಮಕೂರಿಗೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡುವ ಬಗ್ಗೆ ಮಾತನಾಡಿದ್ದರು. ಆದರೆ, ಈ ಜಿ. ಪರಮೇಶ್ವರ್ ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ತುಮಕೂರನ್ನು ಬೆಂಗಳೂರಿಗೆ ಸೇರಲು ಬಿಡುವುದಿಲ್ಲ ಎಂಬ ಮಾತು ಕೇಳಿ ಬಂದಿದೆ.

ತುಮಕೂರಿಗೆ ಬೆಂಗಳೂರು ಉತ್ತರ ಅಂತ ಮರುನಾಮಕರಣಕ್ಕೆ ಭಾರಿ ವಿರೋಧ
ಶಾಸಕ ಸುರೇಶ್​ ಗೌಡ
Edited By:

Updated on: Jun 14, 2025 | 4:12 PM

ತಮಕೂರು, ಜೂ.14: ಇತ್ತೀಚೆಗೆ ರಾಮನಗರ (Ramnagar) ಜಿಲ್ಲೆಗೆ ಬೆಂಗಳೂರು ದಕ್ಷಿಣ (Bengaluru South) ಅಂತ ಮರುನಾಮಕರಣ ಮಾಡಲಾಯಿತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ರಾಮನಗರಕ್ಕೆ ಬೆಂಗಳೂರು ದಕ್ಷಿಣ ಮರುನಾಮಕರ ಮಾಡಿದ್ದಾರೆ. ಈ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ (G Parmeshwara) ಅವರು ತಮಕೂರಿಗೆ (Tumakuru) ಬೆಂಗಳೂರು ಉತ್ತರ (Bengaluru North) ಎಂದು ಮರುನಾಮಕರಣ ಮಾಡಲು ಮುಂದಾಗಿದ್ದಾರೆ. ಆದರೆ, ತುಮಕೂರಿಗೆ ಬೆಂಗಳೂರು ಉತ್ತರ ಮರುನಾಮಕರಣಕ್ಕೆ ವಿರೋಧ ವ್ಯಕ್ತವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಲ್ಪತರು ನಾಡು ತುಮಕೂರಿಗೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಬೇಕೆಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಗೃಹ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ಇದು ರಿಯಲ್ ಎಸ್ಟೇಟ್ ಮಾಫಿಯಾ ಮಾಡುವ ಕೆಲಸ ಅಂತ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.

ತುಮಕೂರಿಗೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಲು ನಾವು ಬಿಡುವುದಿಲ್ಲ ಎಂದು ಸುರೇಶ್ ಗೌಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ಜನರನ್ನು ಯಾಮಾರಿಸುತಿದ್ದಾರೋ ಅಥವಾ ಮಕ್ಮಲ್ ಟೋಪಿ ಹಾಕುತಿದ್ದಾರೋ ಗೊತ್ತಿಲ್ಲ. ಬೆಂಗಳೂರು ಉತ್ತರ ಎಂದ ತಕ್ಷಣ ಅಭಿವೃದ್ಧಿಯಗಲ್ಲ. ಕೇವಲ ಹೆಸರು ಮಾತ್ರ ಬದಲಾಗುತ್ತದೆ ಅಷ್ಟೇ. ತುಮಕೂರಿಗೆ ಅದರದ್ದೇ ಆದ ಇತಿಹಾಸವಿದೆ. ತಮಕೂರಿಗೆ ಬೆಂಗಳೂರು ಉತ್ತರ ಅಂತ ಮರುನಾಮಕರಣ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ: ಹಠ ಸಾಧಿಸಿ ಗೆದ್ದ DKS
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂಚಾರಕ್ಕೆ ಮುಕ್ತ: ಟೋಲ್ ಎಷ್ಟು?

ಇದನ್ನೂ ನೋಡಿ: ರಾಮನಗರ ಇವತ್ತಿನಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಸಿಕೊಳ್ಳುವುದು: ಡಿಕೆ ಶಿವಕುಮಾರ್, ಡಿಸಿಎಂ

ಇಲ್ಲಿ ಭೂಮಿ ನೀಡದ ಕಾರಣ ಕೈಗಾರಿಕೆಗಳು ನೆರೆ ರಾಜ್ಯಗಳಿಗೆ ಹೊಗುತ್ತಿವೆ. ಈ ನಡುವೆ ಬೆಂಗಳೂರು ಉತ್ತರ ಅಂದ ತಕ್ಷಣ ಇಲ್ಲಿ ಬಂದು ಹೂಡಿಕೆ ಮಾಡಲು ಜನ ಮೂರ್ಖರಲ್ಲ. ಜೊತೆಗೆ ತುಮಕೂರಿನ ಕೆಲ ಹೊರಾಟಗಾರರು ಸಹ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬ್ರ್ಯಾಂಡ್ ಬೆಂಗಳೂರಿಗೆ ತುಮಕೂರು ಸೇರಿಸುವ ಬದಲು ತುಮಕೂರನ್ನೇ ಬ್ರ್ಯಾಂಡ್ ಮಾಡಿ. ಯಾವುದೇ ಕಾರಣಕ್ಕೂ ಈ ನಿರ್ಧಾರ ಒಪ್ಪುವಂತದಲ್ಲ. ಇದಕ್ಕೆ ವಿರೋಧವಿದೆ ಎಂದರು.
ಇನ್ನು ವಿದೇಶದಲ್ಲಿರುವವರಿಗೆ ತುಮಕೂರು ಬದಲಿಗೆ ಬೆಂಗಳೂರು ಉತ್ತರ ಎಂದರೆ ತುಂಬಾ ವ್ಯತ್ಯಾಸವಿರುತ್ತೆ ಎಂಬ ಗೃಹ ಸಚಿವರ ಹೇಳಿಕೆಗೆ ತಿರುಗೇಟು ಕೊಟ್ಟ ಶಾಸಕ ಸುರೇಶ್, ಇಡೀ ಕರ್ನಾಟಕವನ್ನೇ ಬೆಂಗಳೂರು ಎಂದು ನಾಮಕರಣ ಮಾಡಿ ಘೋಷಿಸಿ. ಕರ್ನಾಟಕ ಹೆಸರೇ ಬದಲಾಯಿಸಿಬಿಟ್ಟರೆ ಎಲ್ಲವೂ ಬೆಂಗಳೂರೆಂದೇ ಆಗಿಬಿಡತ್ತೆ ಅಂತ ಕೌಂಟರ್ ಕೊಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Sat, 14 June 25