Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ನಿಗದಿಯಾದಂತೆ ಪರೀಕ್ಷೆಗಳು ಮತ್ತು ಆಫ್‌ಲೈನ್ ಕ್ಲಾಸ್ ನಡೆಯುತ್ತದೆ ಆಫ್‌ಲೈನ್ ಕ್ಲಾಸ್ ಮತ್ತು ನಿಗದಿತ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಕೊವಿಡ್ ಕಾರಣಕ್ಕಾಗಿ ಪದವಿ ಕೋರ್ಸ್‌ಗಳ ಆಫ್‌ಲೈನ್ ಕ್ಲಾಸ್ ನಡೆಸಲಾಗುತ್ತದೆ. ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಬದಲಾವಣೆಗಳಿಲ್ಲ. Link: ನಿಗದಿಯಂತೆ ಪರೀಕ್ಷೆ, ಆಫ್‌ಲೈನ್ ಕ್ಲಾಸ್
2) ಫೇಲ್ ಆದರೂ ಹಲವು ಅನುಕೂಲ ಭಾರತೀಯ ನಾಗರಿಕ ಸೇವೆ ಪರೀಕ್ಷೆಗಳಿಗೆ ನೋಂದಣಿ ಮಾಡಿಕೊಂಡವರು ಪ್ರಿಲಿಮಿನರಿ ಮತ್ತು ಮೇನ್ಸ್ನಲ್ಲಿ ಮುನ್ನಡೆ ಸಾಧಿಸಿ, ಸಂದರ್ಶನದ ಹಂತದಲ್ಲಿ ವಿಫಲರಾದರೂ ಹಲವು ಉನ್ನತ ಹುದ್ದೆಗಳು ಸಿಗುವಂತೆ ಅವಕಾಶ ಮಾಡಿಕೊಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. Link: UPSC Exam 2021: ಐಎಎಸ್ ಪರೀಕ್ಷೆ ಕಟ್ಟಿದವರು ಸಂದರ್ಶನದಲ್ಲಿ ಫೇಲ್ ಆದರೂ ಹಲವು ಅನುಕೂಲ
3) ಸಿದ್ದರಾಮಯ್ಯಗೆ ಬಾಲಚಂದ್ರ ಜಾರಕಿಹೊಳಿ ಮನವಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸಿದ್ದರಾಮಯ್ಯ ಹೇಳಿದ ಮಾತನ್ನು ಒಪ್ಪುವುದಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಯುವತಿಯ 34 ಸೆಕೆಂಡ್ನ ವಿಡಿಯೋ ಇಟ್ಟುಕೊಂಡು ರಮೇಶ್ ಮೇಲೆ ಕೇಸ್ ಹಾಕಬೇಕು ಎನ್ನುವುದನ್ನು ಒಪ್ಪಲು ಆಗುವುದಿಲ್ಲ ಎಂದಿದ್ದಾರೆ. Link: ರೇಪ್ ಶಬ್ದ ಬಳಸಬೇಡಿ- ಸಿದ್ದರಾಮಯ್ಯಗೆ ಬಾಲಚಂದ್ರ ಜಾರಕಿಹೊಳಿ ಮನವಿ
4) ಕಾಂಗ್ರೆಸ್ ಶಾಸಕರ ವಿರುದ್ಧ ಸ್ಪೀಕರ್ ಗರಂ ದಯವಿಟ್ಟು ವಿಧಾನಸಭಾ ಕಲಾಪದಲ್ಲಿ ಚರ್ಚೆ ಸುಗಮವಾಗಿ ನಡೆಯಲು ಸಹಕಾರ ನೀಡಿ ಎಂದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು. Link: ಬೇಕಿದ್ದರೆ ಸರ್ಕಾರದ ವಿರುದ್ಧ ಸದನದ ಹೊರಗೆ ಹೋರಾಟ ಮಾಡಿಕೊಳ್ಳಿ
5) ಎಷ್ಟು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು? ಆರೋಗ್ಯ ವಿಮೆ (ಹೆಲ್ತ್ ಇನ್ಷೂರೆನ್ಸ್) ಎಂಬುದು ಅಗತ್ಯ. ಇದರ ಮೂಲಕವಾಗಿ ತೆರಿಗೆ ಕೂಡ ಉಳಿತಾಯ ಮಾಡಬಹುದು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80D ಮೂಲಕ ವೈಯಕ್ತಿಕ ತೆರಿಗೆದಾರರು ಆರೋಗ್ಯ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮೇಲೆ ವಿನಾಯಿತಿ ಕ್ಲೇಮ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. Link: ಆರೋಗ್ಯ ವಿಮೆ ಮೂಲಕ ಆದಾಯ ತೆರಿಗೆಯನ್ನು ಉಳಿಸಬಹುದು
6) ತಲೈವಿ ಸಿನಿಮಾದ ಟ್ರೇಲರ್ ಬಿಡುಗಡೆ ಜಯಲಲಿತಾ ಜೀವನವೀಗ ಸಿನಿಮಾ ಆಗಿ ತೆರೆಕಾಣುತ್ತಿದೆ. ಕಂಗನಾ ರಣಾವತ್ ನಟಿಸಿರುವ ‘ತಲೈವಿ’ ಚಿತ್ರವು ಏಪ್ರಿಲ್ 23ರಂದು ತೆರೆಕಾಣಲಿದೆ. ಇಂದು ಚಿತ್ರದ ಟ್ರೇಲರ್ ಸಹ ರಿಲೀಸ್ ಆಗಿದೆ. Link: ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ
7) ವಿಧಾನಸೌಧದಲ್ಲಿ ಸಿಡಿ ಸರ್ಕಾರವೆಂದು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವಿಂದು ವಿಧಾನಸೌಧದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಕಾಂಗ್ರೆಸ್ ನಾಯಕರ ಆಕ್ರೋಶ ಜೋರಾಗಿದೆ. ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಸಿಡಿ ಸರ್ಕಾರವೆಂದು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. Link: ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು; ಸಿಡಿ ಯುವತಿಗೆ ರಕ್ಷಣೆ ಕೊಡಬೇಕು -ಸಿದ್ದರಾಮಯ್ಯ
8) ಕೆಎಲ್‌ಇ ಆಸ್ಪತ್ರೆಯಲ್ಲಿ ಹೃದಯ ಕಸಿ 52 ವರ್ಷದ ವ್ಯಕ್ತಿಯ ಹೃದಯವನ್ನು 17 ವರ್ಷದ ಬಾಲಕನಿಗೆ ಕಸಿ ಮಾಡುವಲ್ಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆ ಯಶಸ್ವಿಯಾಗಿದೆ. ಪಾರ್ಶ್ವವಾಯುವಿನಿಂದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯವನ್ನು ಬಾಲಕನಿಗೆ ಕಸಿ ಮಾಡಲಾಗಿದೆ. Link: ಮಹಾರಾಷ್ಟ್ರದ ಹೃದಯ ಕನ್ನಡಿಗನಲ್ಲಿ ಮಿಡಿಯಿತು; ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ
9) ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್ ಹೋಳಿ ಹಬ್ಬಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಇರುವಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ಹಬ್ಬಗಳ ಮುಂಗಡ ಭತ್ಯೆ ವಿಶೇಷ ಯೋಜನೆಯಡಿ ಕೇಂದ್ರ ಸರ್ಕಾರ ನೌಕರರಿಗೆ 10,000 ರೂ.ಮುಂಗಡ ಹಣ ನೀಡುತ್ತಿದ್ದು, ಅದನ್ನು ಪಡೆಯಲು ಮಾರ್ಚ್ 31 ಕೊನೇ ದಿನ. Link: ಹೋಳಿ ಹಬ್ಬದ ನಿಮಿತ್ತ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್; ಮಾರ್ಚ್ 31 ಕೊನೇ ದಿನ
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.
Published On - 6:15 pm, Tue, 23 March 21