Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ: ಮತದಾರರಿಗೆ ನೆನಪಾಗ್ತಾರಾ ಜಯಲಲಿತಾ?

AIADMK ಪಕ್ಷದ ನಾಯಕಿಯಾಗಿ, ಆರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾದವರು ಜಯಲಲಿತಾ. ತಮಿಳುನಾಡು ರಾಜಕೀಯವನ್ನು ಹಾಗೂ ಮತದಾರರ ಮನಸನ್ನು ಈಗಲೂ ಪ್ರಭಾವಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ನಾಯಕಿಯ ಸಿನಿಮಾ ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ತೆರೆಕಾಣುತ್ತಿದೆ.

ತಮಿಳುನಾಡು ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ: ಮತದಾರರಿಗೆ ನೆನಪಾಗ್ತಾರಾ ಜಯಲಲಿತಾ?
ಕಂಗನಾ ರಣಾವತ್ ಅಭಿನಯದ ‘ತಲೈವಿ’
Follow us
TV9 Web
| Updated By: ganapathi bhat

Updated on:Apr 05, 2022 | 1:17 PM

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಹೆಸರು ಜಯಲಲಿತಾ. ತನ್ನ ಅಭಿಮಾನಿಗಳಿಂದ ‘ಅಮ್ಮ’ ಎಂದು ಕರೆಯಲ್ಪಡುತ್ತಿದ್ದ ಜಯಲಲಿತಾ ತಮಿಳುನಾಡು ರಾಜಕಾರಣದಲ್ಲಿ ಬೃಹತ್ತಾಗಿ ಬೆಳೆದದ್ದು ಅದ್ಭುತ ಇತಿಹಾಸ. ಜಯಲಲಿತಾ ಜೀವನವೀಗ ಸಿನಿಮಾವಾಗಿ ತೆರೆಕಾಣುತ್ತಿದೆ. ಕಂಗನಾ ರಣಾವತ್ ನಟಿಸಿರುವ ‘ತಲೈವಿ’ ಚಿತ್ರವು ಏಪ್ರಿಲ್ 23ರಂದು ತೆರೆಕಾಣಲಿದೆ. ಇಂದು ಚಿತ್ರದ ಟ್ರೇಲರ್ ಸಹ ರಿಲೀಸ್ ಆಗಿದೆ.

ಜಯಲಲಿತಾ ಬದುಕು ಕೇವಲ ಸಿನಿರಂಗಕ್ಕೆ ಸೀಮಿತವಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜಯಲಲಿತಾ ನಟಿಗಿಂತ ಹೆಚ್ಚು ರಾಜಕಾರಣಿ. ರಾಜಕಾರಣಿಗಿಂತ ಹೆಚ್ಚು ನಟಿ. ಹೀಗೆ ಎರಡೂ ವೃತ್ತಿಗಳಲ್ಲಿ ಅಭೂತಪೂರ್ವ ಯಶಸ್ಸು ತಲೈವಿಯದ್ದು. ಅದರಂತೆ, ಜಯಲಲಿತಾ ಸಿನಿಮಾದಲ್ಲೂ ಸಿನಿರಂಗ ಹಾಗೂ ರಾಜಕೀಯ ಎರಡೂ ಇರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಟ್ರೇಲರ್ ಕೂಡ ಇದನ್ನು ಸಾಕ್ಷೀಕರಿಸುತ್ತಿದೆ.

AIADMK ಪಕ್ಷದ ನಾಯಕಿಯಾಗಿ, ಆರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾದವರು ಜಯಲಲಿತಾ. ತಮಿಳುನಾಡು ರಾಜಕೀಯವನ್ನು ಹಾಗೂ ಮತದಾರರ ಮನಸನ್ನು ಈಗಲೂ ಪ್ರಭಾವಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ನಾಯಕಿಯ ಸಿನಿಮಾ ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ತೆರೆಕಾಣುತ್ತಿದೆ.

ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲೇ ಸಿನಿಮಾ ಟ್ರೇಲರ್ ಬಿಡುಗಡೆಯಾಗಿರುವುದಕ್ಕೆ ಹಾಗೂ ಚುನಾವಣಾ ಬಿರುಸಿನ ಮಧ್ಯೆ ಪ್ರಭಾವಿ ನಾಯಕಿ ಜಯಲಲಿತಾ ಸಿನಿಮಾ ಹವಾ ಶುರುಮಾಡಿರುವುದಕ್ಕೆ ವಿಪಕ್ಷಗಳು ಏನು ಹೇಳುತ್ತವೆ ಎಂಬ ಕುತೂಹಲ ಉಂಟಾಗಿದೆ.

ಮೋದಿ ಸಿನಿಮಾ ವಿಚಾರದಲ್ಲಿ ಹಾಗಾಗಿತ್ತು.. ವಿವೇಕ್ ಒಬೆರಾಯ್ ನಟನೆಯ ಪ್ರಧಾನಿ ನರೇಂದ್ರ ಮೋದಿ ಕುರಿತ ಸಿನಿಮಾವು 2019ರ ಲೋಕಸಭಾ ಚುನಾವಣೆ ವೇಳೆ ಸದ್ದುಮಾಡಿತ್ತು. ಚುನಾವಣೆಯ ವೇಳೆ ರಾಜಕೀಯ ನಾಯಕನ ಸಿನಿಮಾ ಬಿಡುಗಡೆ ಮಾಡುವುದನ್ನು ವಿರೋಧ ಪಕ್ಷಗಳು ಆಕ್ಷೇಪಿಸಿದ್ದವು. ಚುನಾವಣೆಗೆ ಪೂರ್ವಭಾವಿಯಾಗಿ ಆಡಳಿತ ಪಕ್ಷ ಹೀಗೆ ಪ್ರಚಾರ ಮಾಡುತ್ತಿದೆ ಎಂದೂ ಆರೋಪ ಎದುರಾಗಿತ್ತು. ಚುನಾವಣಾ ಆಯೋಗದವರೆಗೂ ದೂರು ಹೋಗಿ, ಅಂತೂಇಂತೂ ಸಿನಿಮಾ ಮೇ 24 ರಂದು ತೆರೆಕಂಡಿತ್ತು. ದೇಶದೆಲ್ಲೆಡೆ ಚುನಾವಣೆ ನಡೆದ ಒಂದು ದಿನದ ಬಳಿಕ ಸಿನಿಮಾ ಜನರ ಮುಂದಿತ್ತು.

ಇದೀಗ, ತಲೈವಿ ಸಿನಿಮಾ ಬಿಡುಗಡೆ ದಿನಾಂಕವನ್ನು ಏಪ್ರಿಲ್ 23 ಎಂದು ಘೋಷಿಸಲಾಗಿದೆ. ಚುನಾವಣಾ ಸಮಯದಲ್ಲಿ ಈ ಸಿನಿಮಾ ಬಿಡುಗಡೆಗೆ ಅಥವಾ ಪ್ರಚಾರ ಮಾಡುತ್ತಿರುವುದರ ಮುಂದೆ ಯಾವ ರೀತಿಯ ಪ್ರತಿಕ್ರಿಯೆ, ಪರಿಣಾಮಗಳು ಎದುರಾಗಬಹುದು ಎಂದು ಸಿನಿರಸಿಕರಿಗೆ ಹಾಗೂ ರಾಜಕೀಯ ಆಸಕ್ತರಿಗೆ ಪ್ರಶ್ನೆ ಎದುರಾಗಿದೆ.

ತಲೈವಿ ಸಿನಿಮಾ ಟ್ರೈಲರ್ ಸುಮಾರು 25 ಲಕ್ಷ ವೀಕ್ಷಣೆ, ThalaiviTrailer ಹಾಗೂ kangana ಟ್ವಿಟರ್ ಟ್ರೆಂಡಿಂಗ್ ಇನ್ನು ಸಿನಿಮಾದ ಟ್ರೈಲರ್ ತೆರೆಕಂಡ ಸ್ವಲ್ಪವೇ ಅವಧಿಯಲ್ಲಿ ಭರ್ಜರಿ 25 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ThalaiviTrailer ಮತ್ತು Kangana ಹ್ಯಾಷ್​ಟ್ಯಾಗ್​ಗಳು ಟ್ವಿಟರ್ ಟ್ರೆಂಡಿಂಗ್​ನಲ್ಲಿದೆ. ಸಿನಿಮಾಕ್ಕಾಗಿ ಕಂಗನಾ ಸುಮಾರು 20 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಬಹಳಷ್ಟು ಶ್ರಮವಹಿಸಿದ್ದರು ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಮಾಡಿದೆ. ವಿಂಟೇಜ್ ಫೀಲ್​ನಲ್ಲಿ ಜಯಲಲಿತಾ ಬದುಕಿನ ಬಣ್ಣ, ಟ್ರೈಲರ್​ನಲ್ಲಿ ರಿಚ್ ಆಗಿ ಕಾಣುತ್ತಿದೆ.

ಬಯೋಪಿಕ್​ಗಳಿಗೆ ತಮ್ಮದೇ ಆದ ವಿಭಿನ್ನ ಇತಿಹಾಸವಿದೆ. ಬಾಲಿವುಡ್ ಅಂಗಳದಲ್ಲಿ ಕೆಲವು ವರ್ಷಗಳ ಈಚೆಗೆ ಸಾಲು ಸಾಲು ಬಯೋಪಿಕ್​ಗಳು ತೆರೆಕಂಡಿದ್ದವು. ಮಹೇಂದ್ರ ಸಿಂಗ್ ಧೋನಿ, ಸಂಜಯ್ ದತ್ ಸಹಿತ ಕೆಲವು ಚಿತ್ರಗಳು ಅಭಿಮಾನಿಗಳಿಂದ ಪ್ರಶಂಸೆಯನ್ನೂ ಪಡೆದುಕೊಂಡಿದ್ದವು. ಆದರೆ, ಮೋದಿ ಸಿನಿಮಾ ನಿರೀಕ್ಷಿತ ಗೆಲುವು ಪಡೆದಿರಲಿಲ್ಲ. ಇದೀಗ ಮತ್ತೊಂದು ಪೊಲಿಟಿಕಲ್, ಸಿನಿಮಾ ಹಿನ್ನೆಲೆಯ ತಲೈವಿ ಸಿನಿಮಾ ಏನು ರಿಸಲ್ಟ್ ಕೊಡುತ್ತದೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: Thalaivi Trailer: ಯಾರಿಗೂ ಹೆದರದ ಕಂಗನಾಗೆ ವೇದಿಕೆ ಮೇಲೆ ಕಣ್ಣೀರು ಹಾಕಿಸಿದ ‘ತಲೈವಿ’ ನಿರ್ದೇಶಕ ವಿಜಯ್​! ವಿಡಿಯೋ ವೈರಲ್​

Sasikala ವ್ಯಕ್ತಿ-ವ್ಯಕ್ತಿತ್ವ | ಮುಖ್ಯಮಂತ್ರಿ ಗಾದಿ ಸನಿಹದಲ್ಲಿದ್ದಾಗ ಸೆರೆಮನೆಗೆ ಬಂದ ಶಶಿಕಲಾ ಸವೆಸಿದ ಹಾದಿ ಕಲ್ಲುಮುಳ್ಳಿನದು

Published On - 5:21 pm, Tue, 23 March 21

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ