TV9 Kannada News Live: ನಾಪತ್ತೆಯಾಗಿದ್ದ KRIDL AEE ಪರ್ವೀಜ್ ಭೋಪಾಲ್​ನಲ್ಲಿ ಪತ್ತೆ!

Karnataka News Today Live Updates: ಕದ್ದು ಆಸ್ತಿ ಮಾಡಿಲ್ಲ, ಯಾವುದೇ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ಸಚಿವ ಕುಮಾರಸ್ವಾಮಿ ಆರೋಪಕ್ಕೆ ಡಿಕೆ ಶಿವಕುಮಾರ್ ಖಡಕ್ ತಿರುಗೇಟು, ಬೆಂಗಳೂರಿನಲ್ಲಿ ಮುಂದುವರಿದ ಭಾರಿ ಮಳೆಯ ಆರ್ಭಟ ಹಾಗೂ ಜಮ್ಮು-ಕಾಶ್ಮೀರದ ಸಿಐಎಸ್‌ಎಫ್ ಕ್ಯಾಂಪ್‌ನಲ್ಲಿ ಯೋಧನಿಂದ ಗುಂಡಿನ ದಾಳಿ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಕ್ಷಣಕ್ಷಣದ ಲೈವ್ ಅಪ್‌ಡೇಟ್ಸ್ ಇಲ್ಲಿದೆ.

TV9 Kannada News Live: ನಾಪತ್ತೆಯಾಗಿದ್ದ KRIDL AEE ಪರ್ವೀಜ್ ಭೋಪಾಲ್​ನಲ್ಲಿ ಪತ್ತೆ!
ನಾಪತ್ತೆಯಾಗಿದ್ದ KRIDL AEE ಪರ್ವೀಜ್ ಭೋಪಾಲ್​ನಲ್ಲಿ ಪತ್ತೆ!

Updated on: Sep 30, 2026 | 10:44 AM

LIVE NEWS & UPDATES

  • 30 Sep 2026 10:44 AM (IST)

    ಅರಬ್ಬಿ ಸಮುದ್ರದಲ್ಲಿ ಮೆಗಾ ಡ್ರಗ್ ಆಪರೇಷನ್

    ಭಾರತೀಯ ಕರಾವಳಿ ಕಾವಲು ಪಡೆ (ಕೋಸ್ಟ್ ಗಾರ್ಡ್) ಹಾಗೂ ಗುಜರಾತ್ ಎಟಿಎಸ್ ನಡೆಸಿದ ಭರ್ಜರಿ ಜಂಟಿ ಕಾರ್ಯಾಚರಣೆಯಲ್ಲಿ ಲಕ್ಷದ್ವೀಪದ ಬಳಿ ಇರಾನ್ ಮೂಲದ ಬೋಟ್ ಒಂದನ್ನು ವಶಕ್ಕೆ ಪಡೆಯಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3,000 ಕೋಟಿ ರೂಪಾಯಿ ಮೌಲ್ಯದ 526 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಐವರು ಪಾಕಿಸ್ತಾನಿ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಈ ಮೆಗಾ ಆಪರೇಷನ್ ದೇಶದ ‘ನಶಾ ಮುಕ್ತ ಭಾರತ’ ಅಭಿಯಾನಕ್ಕೆ ದೊಡ್ಡ ಬಲ ತಂದಿದೆ. ಮತ್ತಷ್ಟು ಓದಿ

  • 30 Sep 2026 10:42 AM (IST)

    ನಕಲಿ ಔಷಧ ದಂಧೆ ಪ್ರಕರಣ: ಚೆನ್ನೈನಲ್ಲಿ ಮತ್ತೋರ್ವ ಪ್ರಮುಖ ಆರೋಪಿ ಬಾಲಸುಬ್ರಮಣಿಯನ್ ಬಂಧಿಸಿದ ಎಸ್ಐಟಿ!

    ಬೆಂಗಳೂರಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ನಕಲಿ ಔಷಧ ದಂಧೆ ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್ ಬಂಧನದ ಬೆನ್ನಲ್ಲೇ, ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಬಾಲಸುಬ್ರಮಣಿಯನ್‌ನನ್ನು ಚೆನ್ನೈನಲ್ಲಿ ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಶಾಂತ್ ತನಿಖೆ ವೇಳೆ ಸಿಕ್ಕ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ಪಡೆಯಲಾಗಿದೆ. ಮತ್ತಷ್ಟು ಓದಿ

  • 30 Sep 2026 10:39 AM (IST)

    ಎಫ್‌ಸಿಆರ್‌ಎ ವಿವಾದ: ಭಾರತ ಸರ್ಕಾರದ ಮೇಲೆ ಒತ್ತಡಕ್ಕೆ ವಿದೇಶಿ ಹಸ್ತಕ್ಷೇಪ ಕೋರಿದ ಮೇಘಾಲಯ ಕಾಂಗ್ರೆಸ್ ಸಂಸದ!

    ಎಫ್‌‌ಸಿಆರ್‌ಎ ತಿದ್ದುಪಡಿ ಮಸೂದೆ 2026ರ ವಿವಾದ ತೀವ್ರಗೊಂಡಿದ್ದು, ಮೇಘಾಲಯದ ಕಾಂಗ್ರೆಸ್ ಸಂಸದ ಸಲೆಂಗ್ ಸಂಗ್ಮಾ ಅವರು ಈ ಮಸೂದೆಯನ್ನು ಹಿಂಪಡೆಯಲು ಭಾರತ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅಮೆರಿಕ ಸೇರಿದಂತೆ ವಿದೇಶಿ ರಾಷ್ಟ್ರಗಳ ಹಸ್ತಕ್ಷೇಪವನ್ನು ಕೋರಿದ್ದಾರೆ. ದೇಶದ ಆಂತರಿಕ ವಿಚಾರದಲ್ಲಿ ವಿದೇಶಿ ನೆರವು ಕೋರಿರುವುದು ಸಾರ್ವಭೌಮತ್ವದ ಕುರಿತು ದೊಡ್ಡ ಮಟ್ಟದ ಚರ್ಚೆ ಹಾಗೂ ಕಳವಳಕ್ಕೆ ಕಾರಣವಾಗಿದೆ. ಮತ್ತಷ್ಟು ಓದಿ

  • 30 Sep 2026 10:37 AM (IST)

    ಗದಗ KRIDL AEE ನಾಪತ್ತೆ ಪ್ರಕರಣ: 1200 ಕಿ.ಮೀ ದೂರದ ಭೂಪಾಲ್‌ನಲ್ಲಿ ಪ್ರತ್ಯಕ್ಷರಾದ ಪರ್ವೀಜ್

    ಗದಗ ಕೆಆರ್‌ಐಡಿಎಲ್ (KRIDL) ಎಇಇ ಪರ್ವೀಜ್ ಧಾರವಾಡ ನಾಪತ್ತೆಯಾಗಿ 18 ದಿನಗಳಾಗಿದ್ದು, ಇದೀಗ ಅವರು ಮಧ್ಯಪ್ರದೇಶದ ಭೂಪಾಲ್ ರೈಲ್ವೇ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮೊಬೈಲ್ ಫೋನ್ ಆಫ್ ಮಾಡಿಕೊಂಡು ಆಂಧ್ರಪ್ರದೇಶದ ವಿಜಯವಾಡದಿಂದ ಸುಮಾರು 1,200 ಕಿಲೋಮೀಟರ್ ಪ್ರಯಾಣಿಸಿ ಭೂಪಾಲ್‌ಗೆ ತಲುಪಿರುವ ಅವರ ಪ್ರತಿ ಹೆಜ್ಜೆಯ ಮೇಲೆಯೂ ಗದಗ ಪೊಲೀಸರು ಹದ್ದಿನ ಕಣ್ಣಿಟ್ಟು ನಿರಂತರ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

  • 30 Sep 2026 10:28 AM (IST)

    ಜಮ್ಮು-ಕಾಶ್ಮೀರ: ಭದ್ರತಾ ಪಡೆಗಳ ಎನ್‌ಕೌಂಟರ್‌‌ಗೆ ಟಾಪ್ ಲಷ್ಕರ್ ಉಗ್ರ ಫೌಜಿ ಮೂಸಾ ಬಲಿ

    ಜಮ್ಮು-ಕಾಶ್ಮೀರದ ಬುದ್ಗಾಮ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಪ್ರಮುಖ ಕಮಾಂಡರ್ ಫೌಜಿ ಮೂಸಾನನ್ನು ಹೊಡೆದುರುಳಿಸಲಾಗಿದೆ. ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಈತನ ಹತ್ಯೆಯು ಕಣಿವೆ ರಾಜ್ಯದಲ್ಲಿದ್ದ ಎಲ್‌ಇಟಿ ಉಗ್ರ ಸಂಘಟನೆಗೆ ಬಿದ್ದ ದೊಡ್ಡ ಹೊಡೆತವಾಗಿದೆ.

  • 30 Sep 2026 08:59 AM (IST)

    ಚಿಕ್ಕಮಗಳೂರು: 25ಕ್ಕೂ ಹೆಚ್ಚು ಜನರಿಗೆ ಕೋಟಿ ಕೋಟಿ ವಂಚಿಸಿದ ನಕಲಿ ಲೇಡಿ ಪಿಎಸ್ಐ ಬಂಧನ

    ತಾನು ಬೆಂಗಳೂರಿನ ಪಿಎಸ್ಐ ಎಂದು ನಂಬಿಸಿ 25ಕ್ಕೂ ಹೆಚ್ಚು ಜನರಿಗೆ ಕೋಟ್ಯಾಂತರ ರೂಪಾಯಿ ಹಣ, ಚಿನ್ನ ಹಾಗೂ ಐಷಾರಾಮಿ ಕಾರು ವಂಚಿಸಿದ್ದ ನಿವೇದಿತಾ ಗೌಡಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ವಂಚಿಸಿದ ಹಣವನ್ನು ತನ್ನ ಪ್ರಿಯಕರ ದೇವುಗೆ ನೀಡಿರುವುದಾಗಿ ಆಕೆ ತಿಳಿಸಿದ್ದು, ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

Breaking News Today Live Updates in Kannada: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆಸ್ತಿ ಆರೋಪಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಕಾನೂನು ಚೌಕಟ್ಟಿನಲ್ಲೇ ಆಸ್ತಿ ಮಾಡಿದ್ದು, ಯಾವುದೇ ಬೆದರಿಕೆಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲು ಸವಾಲು ಹಾಕಿದ್ದಾರೆ. ಶಾಂತಿನಗರ, ಮೆಜೆಸ್ಟಿಕ್, ಮಲ್ಲೇಶ್ವರಂ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು ರಸ್ತೆಗಳು ಜಲಾವೃತಗೊಂಡಿವೆ. ಮುಂದಿನ ಕೆಲವು ಗಂಟೆಗಳಲ್ಲಿ 30-40 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಕಥುವಾ ಜಿಲ್ಲೆಯ ಬಸೋಲಿಯಲ್ಲಿ ಯೋಧ ಅವಧೇಶ್ ಕುಮಾರ್ ಜಗಳದ ಬಳಿಕ ತನ್ನ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದಾನೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Published On - 8:58 am, Wed, 30 September 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us