TV9 Kannada News highlights: ಶಾಸಕರಿಗೆ ಅನುದಾನ ತಾರತಮ್ಯ : 2 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ತಾಕೀತು
Karnataka News Today Live Updates: ಬೆಂಗಳೂರಿನ ಭಾರಿ ಮಳೆ, ಹಾಲಿನ ದರ ಹಾಗೂ ಬಸ್ ದರ ಏರಿಕೆ ಕುರಿತ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟ ಸಭೆ ಮತ್ತು ಬ್ರಿಟಿಷ್ ಏರ್ವೇಸ್ ತುರ್ತು ಭೂಸ್ಪರ್ಶ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ ಇಲ್ಲಿದೆ.

Breaking News Today Live in Kannada: ಬೆಂಗಳೂರಿನ ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರಂ ಮತ್ತು ಶಾಂತಿನಗರ ಸೇರಿದಂತೆ ಹಲವೆಡೆ ಎಡೆಬಿಡದೆ ಭಾರಿ ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದೆ. ಇನ್ನೊಂದೆಡೆ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ನಂದಿನಿ ಹಾಲಿನ ದರ ಲೀಟರ್ಗೆ 8 ರಿಂದ 12 ರೂ. ಏರಿಕೆ ಹಾಗೂ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಪ್ರಮುಖ ಚರ್ಚೆ ಸಾಧ್ಯತೆಯಿದೆ. ಜೊತೆಗೆ, ಸೋಲಾರ್ ಅಳವಡಿಕೆಗೆ ಶೇ 50 ಸಬ್ಸಿಡಿ ಮತ್ತು ಏಷ್ಯನ್ ಗೇಮ್ಸ್ ವಿಜೇತರಿಗೆ ಬಹುಮಾನ ಘೋಷಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಮತ್ತೊಂದೆಡೆ, ಲಂಡನ್ನಿಂದ ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್ವೇಸ್ ವಿಮಾನ (BA295) ತಾಂತ್ರಿಕ ದೋಷದಿಂದಾಗಿ 9,000 ಅಡಿ ದಿಢೀರ್ ಕುಸಿದಿದ್ದು, ಪೈಲಟ್ಗಳ ಸಮಯಪ್ರಜ್ಞೆಯಿಂದ ಲಂಡನ್ನಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಹಾಲು, ಬಸ್ ಟಿಕೆಟ್ ದರ ಏರಿಕೆಗೆ ನೀತಿ ಸಂಹಿತೆ ಅಡ್ಡಿ
ನಂದಿನಿ ಹಾಲಿನ ಜೊತೆ ಬಸ್ ಟಿಕೆಟ್ ದರ ಏರಿಕೆ ಬಗ್ಗೆಯೂ ಇಂದಿನ ಸಚಿವ ಸಂಪುಟದಲ್ಲಿ ಪ್ರಸ್ತಾಪವಾಗಿದೆ. ಆದ್ರೆ, ಹಾಲು ಹಾಗೂ ಬಸ್ ಟಿಕೆಟ್ ದರ ಏರಿಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಹೀಗಾಗಿ ದರ ಏರಿಕೆ ಸಂಬಂಧ ಸಚಿವ ಸಂಪುಟ ಸಿಎಂ ಡಿಕೆ ಶಿವಕುಮಾರ್ ಅವರ ವಿವೇಚನೆಗೆ ಬಿಟ್ಟಿದೆ.
-
ಜನವರಿ ಮೊದಲ ವಾರದಲ್ಲೇ ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್
ಜನವರಿ ಮೊದಲ ವಾರದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ಸಾಧ್ಯತೆ ಇದೆ. ಈ ಸಂಬಂಧ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ಆಗಿದ್ದು, ಬಹುತೇಕ ಜನವರಿ ಮೊದಲ ವಾರದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕ್ ಪಂಚಾಯತ್ ಚುನಾವಣೆ ನಡೆಸಲು ಸಂಪುಟ ಒಲವು ತೋರಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕ್ ಪಂಚಾಯತ್ ಚುನಾವಣೆ ಬಳಿಕ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಹ ನಿರ್ಧಾರವಾಗಿದೆ.
-
-
KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಇಡಿ ವಶಕ್ಕೆ
ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪನನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಇಂದು (ಅ.06) ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದ ಮೇಲೆ ಇಡಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಇದೀಗ ಇಡಿ ಅಧಿಕಾರಿಗಳು, ಶಿವಶಂಕರಪ್ಪ ಸಾಹುಕಾರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
-
ನಂದಿನಿ ಹಾಲಿನ ದರ 8 ರೂ. ಏರಿಕೆಗೆ ಸಿಎಂ ಒಲವು
ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಇಂದಿನ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ನಂದಿನಿ ಹಾಲಿನ ದರ 8 ರೂ. ಏರಿಕೆಗೆ ಸಿಎಂ ಡಿಕೆ ಶಿವಕುಮಾರ್ ಒಲವು ತೋರಿದ್ದಾರೆ. ಇದಕ್ಕೆ ಕ್ಯಾಬಿನೆಟ್ ಸಹ ಸಹಮತಿ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರ ಸಿಎಂ ವಿವೇಚನೆಗೆ ಬಿಡಲಾಗಿದೆ.
-
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತಕ್ಕೀಡಾಗಿದೆ. ಸುಳ್ಯ ತಾಲೂಕಿನ ಕರಿಕ್ಕಳ – ನಿಂತಿಕಲ್ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದ್ದು, ಅಧೃಷ್ಟವಶಾತ್ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮುಂದೆ ಹೋಗುತ್ತಿದ್ದ ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಹೀಗಾಗಿ ಹಿಂದೆ ಇದ್ದ ಶಾಸಕಿ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಇನ್ನೋವಾ ಕಾರಿನ ಮುಂಭಾಗ ಜಖಂ ಆಗಿದೆ.
-
-
ಹಾಸ್ಟೆಲ್ನಲ್ಲಿ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಹಾಸ್ಟೆಲ್ನಲ್ಲಿ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ಅಂಬೇಡ್ಕರ್ ವಸತಿ ನಿಲಯದಲ್ಲಿ ನಡೆದಿದೆ. ಹಾಸ್ಟೆಲ್ನಲ್ಲಿ ರೊಟ್ಟಿ, ಅನ್ನ, ಸಾಂಬರ್ ಸೇವಿಸಿದ್ದ ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಕೂಡಲೇ ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳಪೆ ಆಹಾರ ಸಾಮಗ್ರಿ ಪೂರೈಕೆಯಿಂದ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-
ಸಂಜೆ 7.30ಕ್ಕೆ ದೆಹಲಿಗೆ ತೆರಳಲಿರುವ ಸಿಎಂ ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮತ್ತೆ ದೆಹಲಿಗೆ ತೆರಳಲಿದ್ದಾರೆ. ನಾಡಿದ್ದು (ಅಕ್ಟೋಬರ್ 08) 57ನೇ ಜಿಎಸ್ಟಿ ಕೌನ್ಸಿಲ್ ಸಭೆ ಇದೆ. ಹೀಗಾಗಿ ನಾಳೆ (ಅ.07) ದೆಹಲಿಯಲ್ಲಿ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಯಲಿದೆ. ಇದರಿಂದ ಡಿಕೆ ಶಿವಕುಮಾರ್ ಇಂದು (ಅ.06) ಸಂಜೆಯೇ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದೇ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಎಸ್ಐಆರ್ ಬಗ್ಗೆ ಚರ್ಚಿಸಲಿದ್ದಾರೆ.
-
KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮನೆ ಮೇಲೆ ಇಡಿ ದಾಳಿ
ಕೆಪಿಎಸ್ಸಿ ಪಶುವೈದ್ಯ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿದ್ದು, ಇದರ ಮಧ್ಯೆ ಇದೀಗ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಮೇಲೆ ಮತ್ತೆ ಇಂದು (ಅಕ್ಟೋಬರ್ 06) ಇಡಿ ದಾಳಿ ಮಾಡಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದ ಮೇಲೆ ಎರಡನೇ ಬಾರಿಗೆ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಹಾಗೇ KPSC ಸದಸ್ಯೆ ಗೀತಾ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.
-
ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು
ದಸರಾ ರಜಾ ಮಜಾ ಮಾಡಲು ಹೋಗಿ ಮೂವರು ಬಾಲಕರು ದುರಂತ ಸಾವು ಕಂಡಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿ ನಡೆದಿದೆ. ಲಿಖಿತ್ (12)ಭುವನ್(12),ತರುಣ್(12) ಮೃತ ಬಾಲಕರು. ದಸರಾ ರಜೆ ಹಿನ್ನೆಲೆಯಲ್ಲಿ ಈಜಾಡಲು ಹೋಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳೀಯರು ಕೆರೆಯಿಂದ ಮೃತ ದೇಹಗಳನ್ನು ಹೊರತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
-
ಬಿಜೆಪಿ ಅಭ್ಯರ್ಥಿ ಸಂಕನೂರು ಗೆಲುವು ನಿಶ್ಚಿತ: ಬಿ.ವೈ. ವಿಜಯೇಂದ್ರ
ಧಾರವಾಡದ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಕನೂರು ಅವರು ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
-
ಕೋಲಾರ ಎನ್ಡಿಎ ಭಿನ್ನಾಭಿಪ್ರಾಯ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ!
ಕೋಲಾರ ಎನ್ಡಿಎ ಸಮನ್ವಯ ಸಮಿತಿ ಗಲಾಟೆ ಕುರಿತು ಸ್ಪಂದಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸ್ಥಳೀಯ ಮಟ್ಟದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಎಂದಿದ್ದಾರೆ. ಮೈತ್ರಿ ಹಾಗೂ ಕ್ಷೇತ್ರ ಹೊಂದಾಣಿಕೆ ನಿರ್ಧಾರಗಳು ದೆಹಲಿ ಮಟ್ಟದಲ್ಲಿ ತೀರ್ಮಾನವಾಗಲಿದ್ದು, ತಮ್ಮ ಪಕ್ಷದಿಂದ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
ಪುಣೆಯಲ್ಲಿ ಗಿನ್ನೆಸ್ ದಾಖಲೆ: 5,000ಕ್ಕೂ ಹೆಚ್ಚು ಕಲಾವಿದರಿಂದ ಬೃಹತ್ ‘ಢೋಲ್-ತಾಶಾ’ ಪ್ರದರ್ಶನ!
ಮಹಾರಾಷ್ಟ್ರದ ಪುಣೆಯಲ್ಲಿ 151 ತಂಡಗಳ 5,000ಕ್ಕೂ ಹೆಚ್ಚು ವಾದಕರು ಏಕಕಾಲದಲ್ಲಿ ‘ಢೋಲ್-ತಾಶಾ’ ನುಡಿಸಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜರಿಗೆ ಗೌರವ ಸಲ್ಲಿಸಲು ಆಯೋಜಿಸಿದ್ದ ಈ ಪ್ರದರ್ಶನವು ಮಹಾರಾಷ್ಟ್ರದ ಸಾಂಸ್ಕೃತಿಕ ವೈಭವ ಹಾಗೂ ಶೌರ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದೆ. ಮತ್ತಷ್ಟು ಓದಿ
-
ಬೀದರ್ನಲ್ಲಿ ಬೀದಿ ನಾಯಿ ಅಟ್ಟಹಾಸ: ಅಣ್ಣ-ತಮ್ಮನಿಗೆ ಗಂಭೀರ ಗಾಯ!
ಬೀದರ್ನ ನಾವದಗೇರಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಶರತ್ (6) ಹಾಗೂ ಸಾಯಿನಾಥ್ (12) ಎಂಬ ಅಣ್ಣ-ತಮ್ಮನ ಮೇಲೆ ಬೀದಿ ನಾಯಿ ಭೀಕರವಾಗಿ ದಾಳಿ ನಡೆಸಿದೆ. ಗಾಯಾಳು ಬಾಲಕರಿಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಾಯಿಗಳ ಹಾವಳಿ ತಡೆಯದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಸಿಎಂ ಭೇಟಿ ಬಳಿಕ ‘ಮೋದಿ ಭೇಟಿಯಾದಂತೆಯೇ ವೈಬ್ಸ್ ಸಿಕ್ಕಿದೆ!’ ಎಂದ ಪೂವಮ್ಮ
ಸಿಎಂ ಭೇಟಿ ಬಳಿಕ ಮಾತನಾಡಿದ ಅಥ್ಲೀಟ್ ಪೂವಮ್ಮ, “ಸಿಎಂ ಅವರಿಂದ ಉತ್ತಮ ಭರವಸೆ ಸಿಕ್ಕಿದೆ. ಪ್ರಧಾನಿ ಮೋದಿಯವರನ್ನು ಭೇಟಿಯಾದಾಗ ಇದ್ದಂತಹ ವೈಬ್ಸ್ ಇಲ್ಲೂ ಸಿಕ್ಕಿದೆ” ಎಂದಿದ್ದಾರೆ. ಬಹುಮಾನ ಮೊತ್ತ ಹೆಚ್ಚಳ ಹಾಗೂ ಉದ್ಯೋಗ ಮೀಸಲಾತಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
-
ಟೀಮ್ ಇಂಡಿಯಾ ನಾಯಕತ್ವಕ್ಕೆ ಹರ್ಮನ್ಪ್ರೀತ್ ಕೌರ್ ದಿಢೀರ್ ರಾಜೀನಾಮೆ!
ಭಾರತ ಮಹಿಳಾ ಕ್ರಿಕೆಟ್ನ ಯಶಸ್ವಿ ನಾಯಕಿ ಹರ್ಮನ್ಪ್ರೀತ್ ಕೌರ್ ತಮ್ಮ ಕ್ರಿಕೆಟ್ ನಾಯಕತ್ವದ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಭಾರತದ ಕೀರ್ತಿ ಪತಾಕೆ ಎತ್ತಿಹಿಡಿದಿದ್ದ ಅವರ ಸುದೀರ್ಘ ಹಾಗೂ ಸ್ಮರಣೀಯ ನಾಯಕತ್ವದ ಅಧ್ಯಾಯ ಇದರೊಂದಿಗೆ ಮುಕ್ತಾಯಗೊಂಡಿದೆ. ಮತ್ತಷ್ಟು ಓದಿ
-
ವಿಮಾನ ಪತನಕ್ಕೆ ಸಂಚು: ಫ್ಲೈದುಬೈ ದಾಳಿ ಪ್ರಕರಣಕ್ಕೆ ಗಾಜಾ ಪ್ರತೀಕಾರದ ತಿರುವು!
ಟೆಲ್ ಅವೀವ್ನಲ್ಲಿ ವಿಮಾನ ಅಪಘಾತಗೊಳಿಸಲು ಸಂಚು ರೂಪಿಸಿ, ಕ್ಯಾಪ್ಟನ್ ಮೇಲೆ ದಾಳಿ ನಡೆಸಿದ್ದ ಫ್ಲೈದುಬೈ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿಯನ್ನು ಬಂಧಿಸಲಾಗಿದೆ. ಗಾಜಾ ಪ್ರತೀಕಾರಕ್ಕಾಗಿ ‘ಹುತಾತ್ಮ’ನಾಗುವ ಉದ್ದೇಶದಿಂದ ಈ ಭಯೋತ್ಪಾದಕ ದಾಳಿಗೆ ಯೋಜಿಸಿದ್ದಾಗಿ ವಿಚಾರಣೆ ವೇಳೆ ಬಹಿರಂಗವಾಗಿದೆ. ಯುಎಇ ಹಾಗೂ ಇಸ್ರೇಲ್ ತನಿಖೆ ಚುರುಕುಗೊಳಿಸಿವೆ. ಮತ್ತಷ್ಟು ಓದಿ
-
ಮೈಸೂರು ಅರಮನೆಗೆ ನಟಿ ಕಾಜಲ್ ಅಗರ್ವಾಲ್ ಭೇಟಿ!
ದಸರಾ ಸಂಭ್ರಮದ ನಡುವೆ ನಟಿ ಕಾಜಲ್ ಅಗರ್ವಾಲ್ ಮೈಸೂರು ಅರಮನೆಗೆ ಭೇಟಿ ನೀಡಿ ವೈಭವವನ್ನು ಕಣ್ಣುಂಬಿಕೊಂಡರು. ಅರಮನೆ ಮಂಡಳಿಯಿಂದ ಸನ್ಮಾನ ಸ್ವೀಕರಿಸಿದ ನಟಿಯನ್ನು ನೋಡಲು ಅಭಿಮಾನಿಗಳು ಹಾಗೂ ಪ್ರವಾಸಿಗರು ಮುಗಿಬಿದ್ದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ವೀಡಿಯೋ ನೋಡಿ
-
ಮಾರತಹಳ್ಳಿ ಪಾಸ್ಪೋರ್ಟ್ ಸೇವಾ ಕೇಂದ್ರ ವೈಟ್ಫೀಲ್ಡ್ಗೆ ಸ್ಥಳಾಂತರ
ಬೆಂಗಳೂರಿನ ದೇವರಬೀಸನಹಳ್ಳಿಯಲ್ಲಿದ್ದ (ಮಾರತಹಳ್ಳಿ) ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ವೈಟ್ಫೀಲ್ಡ್ನ ಜಿಎಂ ಟೆಕ್ ಪಾರ್ಕ್ಗೆ ಸ್ಥಳಾಂತರಿಸಲಾಗಿದೆ. ಅಕ್ಟೋಬರ್ 5 ಮತ್ತು ಆ ನಂತರ ಅಪಾಯಿಂಟ್ಮೆಂಟ್ ಹೊಂದಿರುವ ಅರ್ಜಿದಾರರು ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಬಳಿಯಿರುವ ನೂತನ ಕಚೇರಿಗೆ ಭೇಟಿ ನೀಡುವಂತೆ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತಿಳಿಸಿದೆ. ಮತ್ತಷ್ಟು ಓದಿ
-
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ!
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿ’ ಮೈತ್ರಿಕೂಟದ ಸಂಸದರು ಮಂಗಳವಾರ ಸಂಸತ್ ಭವನದಿಂದ ಚುನಾವಣಾ ಆಯೋಗದ ಕೇಂದ್ರ ಕಚೇರಿ ‘ನಿರ್ವಚನ ಸದನ’ದವರೆಗೆ ಬೃಹತ್ ಪಾದಯಾತ್ರೆ ನಡೆಸಿದರು. ಚುನಾವಣಾ ಆಯೋಗವು “ವಂಚನಾ ಆಯೋಗ”ವಾಗಿ ಮಾರ್ಪಟ್ಟಿದೆ ಎಂದು ಗಂಭೀರವಾಗಿ ಆರೋಪಿಸಿರುವ ವಿಪಕ್ಷ ನಾಯಕರು, ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಿಇಸಿ ವಿರುದ್ಧ ಮಹಾಭಿಯೋಗ ನಿರ್ಣಯ ತರಲು ಸಂಪೂರ್ಣ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಮತ್ತಷ್ಟು ಓದಿ
-
ಸಾಲ ಮಾಡಿ ಐಫೋನ್ ಕೊಳ್ಳುವವರಿಗೆ ನಟ ವಿಜಯ್ ದೇವರಕೊಂಡ ಮಹತ್ವದ ಸಲಹೆ!
ಸಮಾಜದಲ್ಲಿ ಅಂತಸ್ತು ತೋರಿಸಿಕೊಳ್ಳಲು ಸಾಲ ಮಾಡಿ ಬೆಲೆಬಾಳುವ ಐಫೋನ್ ಕೊಳ್ಳುವ ಜನರ ಮನಸ್ಥಿತಿಯನ್ನು ನಟ ವಿಜಯ್ ದೇವರಕೊಂಡ ಟೀಕಿಸಿದ್ದಾರೆ. ಪ್ರದರ್ಶನಕ್ಕಿಂತ ಜೀವನದ ಅಗತ್ಯತೆ ಮುಖ್ಯ ಎಂದಿರುವ ಅವರು, ತಮ್ಮ ಬಳಿ ಇಂದಿಗೂ ಹಳೆಯ ಫೋನೇ ಇದೆಯೆಂದು ತಿಳಿಸಿ ಸಾಮಾನ್ಯ ಜ್ಞಾನದಿಂದ ಬದುಕಲು ಸಲಹೆ ನೀಡಿದ್ದಾರೆ. ಮತ್ತಷ್ಟು ಓದಿ
-
ಯುಪಿಐ ನೂತನ ಶುಲ್ಕ ನಿಯಮ: ಗ್ರಾಹಕರಿಗಿಲ್ಲ ಎಂಡಿಆರ್ ಬಿಸಿ!
ಅಕ್ಟೋಬರ್ 15ರಿಂದ 2,000 ರೂ. ಮೇಲ್ಪಟ್ಟ ರೈಲ್ವೆ, ಟೆಲಿಕಾಂ ಸೇರಿದಂತೆ ಕೆಲವು ನಿರ್ದಿಷ್ಟ ಯುಪಿಐ ವಹಿವಾಟುಗಳಿಗೆ ಶೇ. 0.4 ರ ಬದಲು ಗರಿಷ್ಠ 5 ರೂ. ಫ್ಲ್ಯಾಟ್ ಶುಲ್ಕ ಜಾರಿಯಾಗಲಿದೆ. ಸಣ್ಣ ವರ್ತಕರಿಗೆ ರಕ್ಷಣೆಯಿದ್ದು, ಸಾಮಾನ್ಯ ಗ್ರಾಹಕರಿಗೆ ಯಾವುದೇ ಶುಲ್ಕವಿರುವುದಿಲ್ಲ. ಹೊರೆ ಏನಿದ್ದರೂ ವ್ಯಾಪಾರಿಗಳಿಗೆ ಮಾತ್ರ. ಮತ್ತಷ್ಟು ಓದಿ
-
ಏಷ್ಯನ್ ಗೇಮ್ಸ್ ವಿಜೇತರಿಗೆ ನಗದು ಬಹುಮಾನ ಹೆಚ್ಚಳ
ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರ ನಗದು ಬಹುಮಾನ ಹೆಚ್ಚಿಸಿದೆ. ಚಿನ್ನ ಗೆದ್ದ ಕ್ರೀಡಾಪಟುಗಳಿಗೆ 1 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 75 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 50 ಲಕ್ಷ ರೂ. ಬಹುಮಾನವನ್ನು ಸರ್ಕಾರ ಇಂದೇ ಅಧಿಕೃತವಾಗಿ ಘೋಷಿಸಲಿದೆ.
-
ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಹಣ ವಸೂಲಿ: ಆರ್ಟಿಐ ಕಾರ್ಯಕರ್ತನ ಬಂಧನ!
ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರ್ಟಿಐ ಕಾರ್ಯಕರ್ತ ಮುರಳಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮುರಳಿ ಲೋಕಾಯುಕ್ತ ಇಲಾಖೆಯ ನಕಲಿ ಲೆಟರ್ಹೆಡ್ ತಯಾರಿಸಿ, ಸರ್ಕಾರಿ ಅಧಿಕಾರಿಗಳಿಗೆ ಕಳುಹಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಅಲ್ಲದೆ ಆತನ ಬಳಿ ನಕಲಿ ಅರಣ್ಯಾಧಿಕಾರಿ ಐಡಿ ಕಾರ್ಡ್ ಸಹ ಪತ್ತೆಯಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.
-
ಪಿಎಸ್ಐ ಅಕ್ರಮ ಪ್ರಕರಣ: ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್ ವಜಾ!
ಪಿಎಸ್ಐ ಹಾಗೂ ಎಫ್ಡಿಎ, ಎಸ್ಡಿಎ ನೇಮಕಾತಿ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ಗೆ ಸುಪ್ರೀಂ ಕೋರ್ಟ್ನಲ್ಲಿ ಮುಖಭಂಗವಾಗಿದೆ. ಆತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಮಾಧಾನಕರ ಕಾರಣಗಳಿಲ್ಲವೆಂದು ನ್ಯಾಯಾಲಯ ವಜಾಗೊಳಿಸಿದೆ. ಪರೀಕ್ಷಾರ್ಥಿಗಳಿಗೆ ಬ್ಲೂಟೂತ್ ಸಾಧನಗಳನ್ನು ನೀಡಿ ಅಕ್ರಮ ಎಸಗಿದ್ದ ಆರೋಪದ ಮೇಲೆ ಆರ್.ಡಿ. ಪಾಟೀಲ್ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ಆತನ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಸಹ ಅಲ್ಲಿಯೂ ಜಾಮೀನು ಸಿಗದೆ ಹಿನ್ನಡೆಯಾಗಿದೆ.
-
KPSC ಅಕ್ರಮ: ED ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಿದ CID!
KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ತನಿಖೆಯಲ್ಲಿ ED ಹಾಗೂ CID ನಡುವೆ ವಾರ್ ಶುರುವಾಗಿದೆ. ಜ್ಞಾನೇಂದ್ರ ನಿವಾಸದ ದಾಳಿ ವೇಳೆ ವಶಪಡಿಸಿಕೊಂಡ ಸಿಸಿಟಿವಿ ದೃಶ್ಯ ಸೇರಿ ಪ್ರಮುಖ ದಾಖಲೆಗಳನ್ನು ನೀಡುವಂತೆ ಕೋರ್ಟ್ ಆದೇಶಿಸಿದ್ದರೂ ED ಕ್ಯಾರೇ ಎಂದಿಲ್ಲ. ಈ ಹಿನ್ನೆಲೆಯಲ್ಲಿ CID ಮತ್ತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
-
ಬೆಂಗಳೂರಿನಲ್ಲಿ ಭಾರಿ ಮಳೆ: ಚಲಿಸುತ್ತಿದ್ದ ಬಸ್ ಮೇಲೆ ಬಿದ್ದ ಮರ!
ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಬೈಯ್ಯಪ್ಪನಹಳ್ಳಿ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಪೊಲೀಸರು ಮರ ತೆರವುಗೊಳಿಸಿ ಬಸ್ ಹೊರತೆಗೆದಿದ್ದಾರೆ.
-
ಬೀದಿನಾಯಿಗಳ ಹಾವಳಿಗೆ ಮುಕ್ತಿ ಹಾಡಲು ದಾವಣಗೆರೆ ಪಾಲಿಕೆ ಮುಂದು
ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ಹಾಗೂ ಮಕ್ಕಳ ಮೇಲಿನ ದಾಳಿಯಿಂದ ಜನರು ಭೀತಿಗೊಂಡಿದ್ದಾರೆ. ಈ ಸಮಸ್ಯೆಗೆ ಕಡಿವಾಣ ಹಾಕಲು ಸ್ಥಳೀಯರು ಆಗ್ರಹಿಸಿದ್ದು, ಮಹಾನಗರ ಪಾಲಿಕೆಯು ₹95 ಲಕ್ಷ ವೆಚ್ಚದಲ್ಲಿ ಶ್ವಾನಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ವಿಶೇಷ ಯೋಜನೆ ರೂಪಿಸಿದೆ.
-
ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖ ಯೋಜನೆಗಳು ಮತ್ತು ದೇಶದ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
-
ಪ್ರದೋಷ್ ವಿಚಾರಣೆ ಇಂದು ಮುಂದುವರಿಕೆ
ನಟ ದರ್ಶನ್ & ಗ್ಯಾಂಗ್ನಿಂದ ನಡೆದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ವಿಚಾರಣೆ ಬೆಂಗಳೂರಿನ 59ನೇ ಸಿಸಿಎಚ್ ಕೋರ್ಟ್ನಲ್ಲಿ ಇಂದು ಮುಂದುವರಿಯಲಿದೆ. ನಿನ್ನೆ ತಮ್ಮ ಬಂಧನದವರೆಗಿನ ಘಟನೆಗಳ ಬಗ್ಗೆ ಹೇಳಿಕೆ ದಾಖಲಿಸಿರುವ ಮಾಫಿ ಸಾಕ್ಷಿ ಪ್ರದೋಷ್ ರಾವ್ ವಿಚಾರಣೆ ಇಂದು ನಡೆಯಲಿದೆ.
-
ಏಷ್ಯನ್ ಗೇಮ್ಸ್ ವಿಜೇತರಿಗೆ ಇಂದು ರಾಜ್ಯ ಸರ್ಕಾರದಿಂದ ನಗದು ಬಹುಮಾನ ಪ್ರಕಟ
ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಇಂದು ನಗದು ಬಹುಮಾನ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಹುಮಾನ ಮೊತ್ತವನ್ನು ಪ್ರಕಟಿಸುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
-
ಚನ್ನಪಟ್ಟಣ ಆಸ್ಪತ್ರೆಗೆ ಸಚಿವ ಯು.ಟಿ.ಖಾದರ್ ದಿಢೀರ್ ಭೇಟಿ: ವೈದ್ಯರಿಗೆ ತರಾಟೆ!
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಐಸಿಯು, ಶೌಚಾಲಯ ಹಾಗೂ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. “ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ರೋಗಿಗಳಿಗೆ ಹೊರಗಿನಿಂದ ಔಷಧಿ ಬರೆದುಕೊಡುವುದೇಕೆ?” ಎಂದು ಸಚಿವರು ಸ್ಥಳದಲ್ಲಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
-
ಮಳೆಯ ನಡುವೆಯೂ ನಟ ಧ್ರುವ ಸರ್ಜಾ ಹುಟ್ಟುಹಬ್ಬ ಸಂಭ್ರಮ
ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಬೆಂಗಳೂರಿನ ಕೆ.ಆರ್.ರಸ್ತೆಯ ಅವರ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೂ ಕೇಕ್ ಕತ್ತರಿಸಿ ಸಂಭ್ರಮಿಸಿದ ಧ್ರುವ, ಮಳೆಯ ಕಾರಣ ಬೆಳಿಗ್ಗೆ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
-
ನೈಜೀರಿಯಾದಲ್ಲಿ ಸೇನಾ ವಿಮಾನ ಪತನ: 32 ಮಂದಿ ಸಾವು
ನೈಜೀರಿಯಾದ ಒಂಡೋ ರಾಜ್ಯದ ಇಗ್ಬೊಕೊಡಾ ಬಳಿ ಸೇನಾ ವಿಮಾನ ಪತನಗೊಂಡು 25 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಸೇರಿ 32 ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ತನಿಖೆಗೆ ಆದೇಶಿಸಿರುವ ಅಧ್ಯಕ್ಷ ಬೋಲಾ ಟಿನುಬು, ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ. ಮತ್ತಷ್ಟು ಓದಿ
Published On - Oct 06,2026 7:38 AM




