Breaking News Today Highlights: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಎಚ್ಚರಿಕೆ: 5 ದಿನ ಆರೆಂಜ್ ಅಲರ್ಟ್
Karnataka News Today Live Updates: ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕುನಾಲ್ ಶಾ ನೇಮಕ, 'ವೆಲ್ಕಮ್ ಟು ದಿ ಜಂಗಲ್' ಚಿತ್ರಕ್ಕೆ ಸೆನ್ಸಾರ್ ಶಾಕ್ ಹಾಗೂ ಕನ್ನಡಪರ ಸಂಘಟನೆಗಳ ರೈಲ್ವೆ ಪ್ರತಿಭಟನೆ ವಾಪಸ್ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳನ್ನು ಓದಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

ಮಡಿಕೇರಿ ನಗರದ ವಿದ್ಯಾನಗರದಲ್ಲಿರುವ ಕೋರ್ಟ್ ಸಂಕೀರ್ಣಕ್ಕೆ ‘ಸಹನಾ.ಟಿ’ ಎಂಬ ಹೆಸರಿನಲ್ಲಿ ಇ-ಮೇಲ್ ಮೂಲಕ ಆತ್ಮಾಹುತಿ ಬಾಂಬ್ ದಾಳಿಯ ಬೆದರಿಕೆ ಸಂದೇಶ ಬಂದಿದೆ. ದುರ್ಗಾ ಸ್ಟಾಲಿನ್ ಅವರಿಂದ ಪ್ರವಾದಿ ಮೊಹಮ್ಮದ್‌ಗೆ ಅವಮಾನವಾಗಿದೆ ಎಂದು ಉಲ್ಲೇಖಿಸಿರುವ ದುಷ್ಕರ್ಮಿಗಳು, ಮಧ್ಯಾಹ್ನ 2 ಗಂಟೆಗೆ ಇಬ್ಬರು ಐಸಿಸ್ ಉಗ್ರರಿಂದ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸಂದೇಶ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣವೇ ಹೊರಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಭೇಟಿ ನೀಡಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆಯೂ ಇದೇ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿತ್ತು.
ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
TV9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ವಾಪಸಾದ ಎಂಎಲ್ಸಿಗಳು
ಕರ್ನಾಟಕ ಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಎಂಎಲ್ಸಿಗಳು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.ಬಿಜೆಪಿ ಮತಗಟ್ಟೆ ಏಜೆಂಟ್ಗಳಾಗಿದ್ದ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರು ಹೈಕಮಾಂಡ್ ನಾಯಕರೊಂದಿಗೆ ಚರ್ಚಿ ಇದೀಗ ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿದ್ದಾರೆ.
-
ಜೂ.25ರಂದು ತುಂಗಭದ್ರಾ ಜಲಾಶಯದ 33 ಹೊಸ ಗೇಟ್ ಲೋಕಾರ್ಪಣೆ
ತುಂಗಭದ್ರಾ ಜಲಾಶಯದ ಕ್ರಷ್ಟ್ ಗೇಟ್ ವೈಫಲ್ಯದ ಬಳಿಕ, 51 ಕೋಟಿ ರೂ ವೆಚ್ಚದಲ್ಲಿ 33 ಹೊಸ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಅವು 55 ರಿಂದ 60 ವರ್ಷಗಳ ಬಾಳಿಕೆ ಬರಲಿವೆ. ಇನ್ನು ಹೊಸ ಗೇಟ್ ಜೂನ್ 25ರಂದು ಲೋಕಾಪರ್ಣೆಗೊಳ್ಳಲಿವೆ. ಕೇಂದ್ರ ಸಚಿವ ಸಿ.ಆರ್.ಪಾಟೀಲ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಈ ಕಾರ್ಯಕ್ರದಮ್ಲಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಸಹ ಭಾಗವಹಿಸಲಿದ್ದಾರೆ.
-
-
ಉತ್ತರ ಕನ್ನಡ ಜಿಲ್ಲೆಯಲ್ಲಿ 5 ದಿನಗಳ ಕಾಲ ಆರೆಂಜ್ ಅಲರ್ಟ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 27ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಕಾರ್ಯಾಚರಣೆ ಕಚೇರಿ ಆರಂಭ ಮಾಡಲಾಗಿದ್ದು, ಮಳೆಯ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ. ಅಬ್ಬರದ ಮಳೆಯ ಜೊತೆಗೆ ವೇಗವಾಗಿ ಗಾಳಿ ಬೀಸಲಿದೆ. ಇದರಿಂದ ಕೆರೆ, ನದಿ ಹಾಗೂ ಸಮುದ್ರ ತೀರಕ್ಕೆ ಹೋಗದಂತೆ ಸೂಚಿಸಿದ್ದಾರೆ.
-
30 ನಿಮಿಷ ನಮ್ಮ ಮೆಟ್ರೋನಲ್ಲೇ ಸಿಲುಕಿದ್ದ ಪ್ರಯಾಣಿಕರು
ನೇರಳೆ ಮಾರ್ಗದ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೆಲ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಬ್ಬನ್ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಪ್ರಯಾಣಿಕರು 30 ನಿಮಿಷಗಳ ಕಾಲ ರೈಲಿನೊಳಗೆ ಸಿಲುಕಿ ಪರದಾಡಿದ್ದು, ಬಳಿಕ ಲೋಕೋಪೈಲಟ್ ರೈಲಿನ ಬಾಗಿಲುಗಳನ್ನ ತೆರೆದಿದ್ದಾರೆ. ಮತ್ತಷ್ಟು ಓದಿ
-
ಕೆಂಪಯ್ಯನಹುಂಡಿ ಗ್ರಾಮಕ್ಕೆ ಸಚಿವ ಯತೀಂದ್ರ ಭೇಟಿ
ಸಚಿವ ಯತೀಂದ್ರ ಸಿದ್ದರಾಮಯ್ಯನವರು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಗೆ ಭೇಟಿ ನೀಡಿದ್ದು, ಮೂವರು ಆತ್ಮಹತ್ಯೆ ಮಾಡಿಕೊಂಡಿರುವವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜೊತೆಗೆ ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ನೀಡಿದ್ದು, ಇನ್ನಷ್ಟು ಹೆಚ್ಚಿನ ಪರಿಹಾರವನ್ನು ಸರ್ಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದರು. ಇನ್ನು ಆತ್ಮಹತ್ಯೆಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ಆಗುತ್ತೆ ಎಂದರು.
-
-
ನೇರಳೆ ಮಾರ್ಗದ ನಮ್ಮ ಮೆಟ್ರೋನಲ್ಲಿ ತಾಂತ್ರಿಕ ದೋಷ
ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ಮಂಗಳವಾರ ಸಂಜೆ ಭಾರಿ ವ್ಯತ್ಯಯ ಉಂಟಾಗಿದೆ. ನೇರಳೆ ಮಾರ್ಗದ (Purple Line) ಪ್ರಮುಖ ನಿಲ್ದಾಣವಾದ ಕಬ್ಬನ್ ಪಾರ್ಕ್‌ನಲ್ಲಿ (Cubbon Park Metro Station) ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.
-
ಕಾವೇರಿ ನೀರಿಗಾಗಿ ಮತ್ತೆ ಖ್ಯಾತೆ ತೆಗೆದ ತಮಿಳುನಾಡು
ಕರ್ನಾಟಕದಲ್ಲಿ ಮುಂಗಾರು ಕೈಕೊಟ್ಟಿದ್ದು, ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಇದರಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ಮಂಡ್ಯ,ಬೆಂಗಳೂರು ಭಾಗದ ಜನರ ಜೀವನಾಡಿಯಾಗಿರುವ ಕಾವೇರಿಯಲ್ಲೂ ಸಹ ನೀರಿಲ್ಲ. ಇನ್ನೊಂದೆಡೆ ತಮಿಳುನಾಡು ಮತ್ತೆ ಕಾವೇರಿ ನೀರಿಗೆ ಖ್ಯಾತೆ ತೆಗೆದಿದ್ದು, ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪಟ್ಟು ಹಿಡಿದಿದೆ.
ಜೂನ್ ತಿಂಗಳ 9.19 ಟಿಎಂಸಿ ನೀರು ಹರಿಸಬೇಕಿತ್ತು. ಆದ್ರೆ, ಈವರೆಗೆ ಕೇವಲ 2.6 ಟಿಎಂಸಿ ನೀರು ಮಾತ್ರ ಹರಿಸಲಾಗಿದ್ದು, ಇದರೊಂದಿಗೆ ನಾಲ್ಕು ಟಿಎಂಸಿ ನೀರು ಕಡಿಮೆ ಹರಿಸಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವ ಕರ್ನಾಟಕದ ವಾದ ಒಪ್ಪಲು ಸಾಧ್ಯವಿಲ್ಲ. ಫೆಬ್ರವರಿಯಿಂದ ಮೇ ವರೆಗೂ ಹೆಚ್ಚಿನ ನೀರು ಕರ್ನಾಟಕ ಬಳಕೆ ಮಾಡಿದೆ. ಹೀಗಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎಂದು ತಮಿಳುನಾಡು ವಾದ ಮಾಡಿದೆ. ಮತ್ತಷ್ಟು ಓದಿ
-
ದಾವಣಗೆರೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ
ದಾವಣಗೆರೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನವಾಗಿದೆ. ಪಾಕಿಸ್ತಾನ ಉಗ್ರ ಸಂಘಟನೆಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಯುಪಿ ಮೂಲದ ಸುಯೇಲ್ (20) ಎನ್ನುವಾತನನ್ನು ಕೇಂದ್ರ ಗುಪ್ತಚರ ಇಲಾಖೆ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಬಂಧಿಸಿದೆ. ಹರಿಹರದ ಪಕ್ಕದಲ್ಲಿರುವ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆ ಬಂದಿದ್ದ ಸುಯೇಲ್, ಇನ್ಟಾಗ್ರಾಂ ನಲ್ಲಿ ಪಾಕಿಸ್ತಾನದ ಉಗ್ರರ ಜೊತೆ ನಿರಂತರವಾಗಿ ಸಂಪರ್ಕ ದಲ್ಲಿ ಇದ್ದ ಎನ್ನಲಾಗಿದೆ.
-
ಡಾಲಿ ಧನಂಜಯ್ ‘ಮದರ್ ಪ್ರಾಮಿಸ್’ ರಿಲೀಸ್ ಡೇಟ್ ಫಿಕ್ಸ್
ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ‘ಮದರ್ ಪ್ರಾಮಿಸ್’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ಈಗಾಗಲೇ ‘ವೇನಿ ವೀಡಿ ವೀಚಿ’ ಮತ್ತು ‘ನೀನೇ ಬೇಕು ಅಮ್ಮ’ ಹಾಡುಗಳು ಹಾಗೂ ಧನಂಜಯ್ ಅವರ ವಿಭಿನ್ನ ಲುಕ್‌ನ ಪೋಸ್ಟರ್‌ಗಳು ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿವೆ.
-
ಹೈಕೋರ್ಟ್ ಪೀಠಕ್ಕೆ ರಾಘವೇಂದ್ರ ಮನವಿ
ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ಸಂಸದ ಬಿ.ವೈ. ರಾಘವೇಂದ್ರ ಅವರು ಬೆಂಗಳೂರಿನ ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪೀಠ ಸ್ಥಾಪನೆ ಕುರಿತು ಸರ್ಕಾರಕ್ಕೆ ತುರ್ತು ಸಲಹೆ ನೀಡುವಂತೆ ಕೋರಿದ ಈ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಉಪಸ್ಥಿತರಿದ್ದರು.
-
ಅಂಕೇಗೌಡರ ಪುಸ್ತಕ ಭಂಡಾರಕ್ಕೆ ಸಿಎಂ ಕೊಡುಗೆ
ಮಂಡ್ಯದ ಪಾಂಡವಪುರದಲ್ಲಿರುವ ಪದ್ಮಶ್ರೀ ಅಂಕೇಗೌಡರ ‘ಜ್ಞಾನ ಪ್ರತಿಷ್ಠಾನ’ದ 20 ಲಕ್ಷಕ್ಕೂ ಹೆಚ್ಚು ಅಪರೂಪದ ಪುಸ್ತಕಗಳ ಸಂರಕ್ಷಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ನೆರವು ನೀಡಿದ್ದಾರೆ. ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕಾಗಿ ತಕ್ಷಣವೇ 2 ಎಕರೆ ಜಮೀನು ಹಾಗೂ 5 ಕೋಟಿ ರೂ. ಅನುದಾನ ಮಂಜೂರು ಮಾಡಲು ಆದೇಶಿಸಿದ್ದಾರೆ. ಮತ್ತಷ್ಟು ಓದಿ
-
ಬಾಲಿವುಡ್ ವಿರುದ್ಧ ತೆಲುಗು ಚಿತ್ರರಂಗದ ನಿರ್ದೇಶಕ ಗಂಭೀರ ಆರೋಪ
ಬಾಲಿವುಡ್ ಅನ್ನು ಮೀರಿಸಿ ಭಾರತದ ಅತ್ಯಂತ ಲಾಭದಾಯಕ ಚಿತ್ರೋದ್ಯಮವಾಗಿ ಬೆಳೆದಿರುವ ತೆಲುಗು ಚಿತ್ರರಂಗವನ್ನು (ಟಾಲಿವುಡ್) ತುಳಿಯಲು ಬಾಲಿವುಡ್‌ನ ಕೆಲವರು ಯತ್ನಿಸುತ್ತಿದ್ದಾರೆ ಎಂದು ತೆಲುಗು ಸಿನಿಮಾ ನಿರ್ದೇಶಕರೊಬ್ಬರು ಬಹಿರಂಗವಾಗಿ ಆರೋಪಿಸಿದ್ದಾರೆ. ಟಾಲಿವುಡ್‌ನ ಈ ಅಭೂತಪೂರ್ವ ಬೆಳವಣಿಗೆಯನ್ನು ಸಹಿಸದೆ ಇಂತಹ ಕುತಂತ್ರಗಳು ನಡೆಯುತ್ತಿವೆ ಎಂಬ ಚರ್ಚೆ ಈಗ ಸಿನಿವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮತ್ತಷ್ಟು ಓದಿ
-
ದೆಹಲಿಯಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ
ವಿಧಾನಪರಿಷತ್ ಚುನಾವಣೆ ಅಡ್ಡ ಮತದಾನದ ಬೆನ್ನಲ್ಲೇ, ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರವಿಕುಮಾರ್ ಹಾಗೂ ನವೀನ್ ಕುಮಾರ್ ಸಾಥ್ ನೀಡಿದ್ದರು.
-
ಬಿಎಂಟಿಸಿ ಪ್ರಯಾಣಿಕರಿಗೆ ದರ ಏರಿಕೆ ಬರೆ: ಇಂದಿನಿಂದ ವಿಸ್ತಾರ ಮಾಸಿಕ ಬಸ್ ಪಾಸ್ ದುಬಾರಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತನ್ನ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಸುದೀರ್ಘ ಪ್ರಯಾಣದ ‘ವಿಸ್ತಾರ ಮಾಸಿಕ ಬಸ್ ಪಾಸ್’ ದರವನ್ನು ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಜಾರಿಗೆ ಬರುವಂತೆ 1,500 ರೂಪಾಯಿ ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಬಿಎಂಟಿಸಿ ಎಸಿ ಬಸ್‌ಗಳ (ವಜ್ರ) ಮಾಸಿಕ ಪಾಸ್ ದರವನ್ನು ಸಹ 2,500 ರೂಪಾಯಿಗೆ ಏರಿಕೆ ಮಾಡಲು ಸಾರಿಗೆ ಸಂಸ್ಥೆ ಭರದ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಮತ್ತಷ್ಟು ಓದಿ
-
ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಹಾಗೂ ಮತ್ಸದ್ಯೋದ್ಯಮ ಇಲಾಖೆಯ ರಾಜ್ಯ ಸಚಿವ (MoS) ಜಾರ್ಜ್ ಕುರಿಯನ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ಆರು ವರ್ಷಗಳ ರಾಜ್ಯಸಭಾ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಗೆ ಮರು ನಾಮನಿರ್ದೇಶನ ಮಾಡದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ದೀರ್ಘಕಾಲದ ಬಿಜೆಪಿ ನಾಯಕ ಹಾಗೂ ವಕೀಲರಾಗಿರುವ ಇವರು, ಕಳೆದ ವರ್ಷ ಜೂನ್ 9ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮತ್ತಷ್ಟು ಓದಿ
-
ಮೇಲುಕೋಟೆ ದೇಗುಲದ ಹುಂಡಿ ಕಳ್ಳತನ: ಅರ್ಚಕ ಸೇರಿ 6 ಮಂದಿ ಅಮಾನತು
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪ್ರಸಿದ್ಧ ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಾಲಯದ ಹುಂಡಿ ಕಳ್ಳತನ ಮತ್ತು ಕರ್ತವ್ಯಲೋಪ ಆರೋಪದಡಿ ಅರ್ಚಕ ನಾರಾಯಣಭಟ್ಟ, ಪಾರುಪತ್ತೆದಾರ ಶ್ರೀಧರ್ ಸೇರಿದಂತೆ 6 ಮಂದಿ ಸಿಬ್ಬಂದಿಯನ್ನು ಇಒ ಶೀಲಾ ಅಮಾನತುಗೊಳಿಸಿದ್ದಾರೆ. ಜನವರಿಯಲ್ಲಿ ಬೆಳಕಿಗೆ ಬಂದಿದ್ದ ಈ ಪ್ರಕರಣದಲ್ಲಿ ಸಿಸಿಟಿವಿ ಹಾಗೂ ರಹಸ್ಯ ಕ್ಯಾಮೆರಾಗಳನ್ನು ಹಾಳುಗೆಡವಿ ಹುಂಡಿಯ ಚಿನ್ನ, ಬೆಳ್ಳಿ ಮತ್ತು ನಗದು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಸದ್ಯ ಆರೋಪ ಸಾಬೀತಾದ ಕಾರಣ ಇವರನ್ನು ಅಮಾನತುಗೊಳಿಸಿ, ಹೊಸ ಅರ್ಚಕರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
-
ವಿಧಾನಪರಿಷತ್ ಚುನಾವಣೆ: ದೆಹಲಿಗೆ ಆರ್ ಅಶೋಕ್ ದೌಡು
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ (Cross Voting) ಕೋಲಾಹಲದ ಬೆನ್ನಲ್ಲೇ, ಬಿ.ವೈ. ವಿಜಯೇಂದ್ರ ಅವರ ಹಾದಿಯಲ್ಲೇ ವಿಪಕ್ಷ ನಾಯಕ ಆರ್. ಅಶೋಕ್ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ನಾಯಕ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಅಡ್ಡ ಮತದಾನದ ಕುರಿತು ವರದಿ ಸಲ್ಲಿಸಲಿದ್ದಾರೆ.
-
ಜನೌಷಧಿ ಕೇಂದ್ರಗಳಲ್ಲಿ ಬ್ರಾಂಡೆಡ್ ಮದ್ದು: 133 ಮಳಿಗೆಗಳಿಗೆ ನೋಟಿಸ್!
ರಾಜ್ಯದ ಜನೌಷಧಿ ಕೇಂದ್ರಗಳಲ್ಲಿ ನಿಯಮ ಬಾಹಿರವಾಗಿ ಬ್ರಾಂಡೆಡ್ ಔಷಧಗಳನ್ನು ಮಾರಾಟ ಮಾಡುತ್ತಿರುವುದನ್ನು ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. ಕೇವಲ ಎರಡು ದಿನಗಳಲ್ಲಿ ರಾಜ್ಯಾದ್ಯಂತ 172 ಔಷಧ ಮಳಿಗೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ 133 ಜನೌಷಧ ಕೇಂದ್ರಗಳಿಗೆ ಇಲಾಖೆಯು ಶೋಕಾಸ್ ನೋಟಿಸ್ (SCN) ಜಾರಿಗೊಳಿಸಿ ವರದಿ ಸಲ್ಲಿಸಿದೆ.
-
ತುಮಕೂರಿನಲ್ಲಿ ಇಂದಿರಾ ಕ್ಯಾಂಟಿನ್ ಬಂದ್!
ತುಮಕೂರು ನಗರದ 6 ಇಂದಿರಾ ಕ್ಯಾಂಟಿನ್‌ಗಳು ಕಳೆದ 8 ದಿನಗಳಿಂದ ಏಕಾಏಕಿ ಬಂದ್ ಆಗಿದ್ದು, ಬಡವರ ಹಸಿವು ನೀಗಿಸುತ್ತಿದ್ದ ಊಟ ಸರಬರಾಜು ಸ್ಥಗಿತಗೊಂಡಿದೆ. ಮುಂಬೈ ಮೂಲದ ಗುತ್ತಿಗೆದಾರ ಕಂಪನಿ ‘ಚೆಫ್ಟಕ್ ಕಾರ್ಟ್ ಅಂಡ್ ಹಾಸ್ಪಿಟಾಲಿಟಿ’ ಜಿಲ್ಲಾಡಳಿತದಿಂದ ಬರಬೇಕಾದ ಬಿಲ್ ಬಾಕಿ ಹಾಗೂ ಕಾರ್ಮಿಕರ ಒಂದು ವರ್ಷದ ಸಂಬಳ ನೀಡದ ಕಾರಣಕ್ಕೆ ಸೇವೆ ನಿಲ್ಲಿಸಿದೆ ಎನ್ನಲಾಗಿದೆ.
-
ಸಂಪುಟ ಪುನಾರಚನೆ: ದೆಹಲಿಯಲ್ಲಿ ರಾಜ್ಯ ನಾಯಕರ ಲಾಬಿ
ರಾಜ್ಯ ಸಚಿವ ಸಂಪುಟ ಪುನಾರಚನೆ ಕಸರತ್ತು ಚುರುಕುಗೊಂಡಿದ್ದು, ಹಿರಿಯ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಈಗಾಗಲೇ ಹೆಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಸಂತೋಷ್ ಲಾಡ್ ಹಾಗೂ ಯಶವಂತ ರಾಯಗೌಡ ಪಾಟೀಲ್ ಹೈಕಮಾಂಡ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೂ ಸಮಯ ಕೋರಲಾಗಿದೆ. ಆದರೆ, ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದರಿಂದ ಸಂಪುಟ ಕಸರತ್ತು ಕೊಂಚ ವಿಳಂಬವಾಗುವ ಸಾಧ್ಯತೆಯಿದೆ.
-
ಡಿ.ಕೆ.ಶಿವಕುಮಾರ್‌ಗಾಗಿ ಚಂಡಿಕಾ ಮಹಾಯಾಗ
ಡಿ.ಕೆ.ಶಿವಕುಮಾರ್ ಅವರಿಗೆ ಶಕ್ತಿ ನೀಡಲು ಮತ್ತು ಸಿದ್ದರಾಮಯ್ಯ ಅವರ ಆರೋಗ್ಯಕ್ಕಾಗಿ ಮೈಸೂರಿನಲ್ಲಿ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಬೃಹತ್ ಚಂಡಿಕಾ ಮಹಾಯಾಗ ಹಾಗೂ ದುರ್ಗಾ ಸಪ್ತಶತಿ ಪಾರಾಯಣ ನಡೆಯಿತು. ನಂಜರಾಜ ಬಹದ್ದೂರು ಕಲ್ಯಾಣ ಮಂಟಪದಲ್ಲಿ ನಡೆದ ಈ ವಿಶೇಷ ಪೂಜೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದು, ಬರಗಾಲ ನಿವಾರಣೆ ಹಾಗೂ ಲೋಕಕಲ್ಯಾಣಕ್ಕಾಗಿಯೂ ಪ್ರಾರ್ಥಿಸಲಾಯಿತು.
Published On - Jun 23,2026 8:35 AM




