Tv9 Kannada News Live: GBA ಚುನಾವಣೆಗೆ ಜೆಡಿಎಸ್​​ ಪ್ರತ್ಯೇಕ ಸ್ಪರ್ಧೆ, ಪಾಕ್​​ನಲ್ಲಿ ಬಾಂಬ್ ಸ್ಫೋಟಕ್ಕೆ 23 ಮಂದಿ ಬಲಿ; ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು

ಜಿಬಿಎ ಚುನಾವಣೆಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ ಕುರಿತು ಹೆಚ್.ಡಿ. ಕುಮಾರಸ್ವಾಮಿ ಇಂದು ಸಭೆ ನಡೆಸಲಿದ್ದಾರೆ. ಹೂವಿನಹಡಗಲಿಯಲ್ಲಿ ಪೊಲೀಸರೇ ರಸ್ತೆ ಗುಂಡಿ ಮುಚ್ಚಿದ್ದು, ಬಸ್‌ನಲ್ಲಿ ಪ್ರಯಾಣಿಕ ಮರೆತು ಹೋಗಿದ್ದ ಬ್ಯಾಗ್ ಮರಳಿಸಿ ಬೀದರ್​​ನ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 23 ಮಂದಿ ಮೃತಪಟ್ಟ ಘಟನೆ ನಡೆದಿದೆ. ಈ ಹೊತ್ತಿನ ಪ್ರಮುಖ ಸುದ್ದಿಗಳ ರೌಂಡಪ್​​ ಇಲ್ಲಿದೆ.

Tv9 Kannada News Live: GBA ಚುನಾವಣೆಗೆ ಜೆಡಿಎಸ್​​ ಪ್ರತ್ಯೇಕ ಸ್ಪರ್ಧೆ, ಪಾಕ್​​ನಲ್ಲಿ ಬಾಂಬ್ ಸ್ಫೋಟಕ್ಕೆ 23 ಮಂದಿ ಬಲಿ; ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು
ಈ ಹೊತ್ತಿನ ಟಾಪ್​​ ಸುದ್ದಿ

Updated on: May 24, 2026 | 2:00 PM

ಬೆಂಗಳೂರು, ಮೇ 24: ಬಿಜೆಪಿ ಜೊತೆಗಿನ ಮೈತ್ರಿ ನಡುವೆಯೂ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಪ್ರತ್ಯೇಕವಾಗಿ ಸ್ಫರ್ಧಿಸಲು ಜೆಡಿಎಸ್​​ ಪ್ಲ್ಯಾನ್​​ ಮಾಡಿದೆ. ಇದರ ನಡುವೆ ಕೇಂದ್ರ ಸಚಿವ ಮತ್ತು ಜೆಡಿಎಸ್​​ ನಾಯಕ ಹೆಚ್​​.ಡಿ. ಕುಮಾರಸ್ವಾಮಿ ಜಿಬಿಎ ಜಿಬಿಎ ಚುನಾವಣೆ ಸಂಬಂಧ ಇಂದು (ಮೇ 24) ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ JDS ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬೆಂಗಳೂರು ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಧ್ಯಕ್ಷರು, ಪದಾಧಿಕಾರಿಗಳು, ಪಾಲಿಕೆ ಮಾಜಿ ಸದಸ್ಯರು ಭಾಗಿಯಾಗಲಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಆಯ್ಕೆ ಹಾಗೂ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ.

ರಸ್ತೆ ಗುಂಡಿಗಳನ್ನು ಮುಚ್ಚಿದ ಪೊಲೀಸರು

ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ತಾಲೂಕಿನ ಇಟಗಿ ಮೂಲಕ ಹಾದು ಹೋಗುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಗುಂಡಿಗಳಿಂದಲೇ ತುಂಬಿದ್ದು, ಮೇಲಿಂದ ಮೇಲೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ವಿಷಯವನ್ನು PWD ಗಮನಕ್ಕೆ ತಂದರೂ ಪ್ರಯೋಜನವಾಗದ ಕಾರಣ ಸ್ಥಳೀಯರ ಸಹಾಯದಿಂದ ರಸ್ತೆ ಗುಂಡಿಗಳನ್ನು ಪೊಲೀಸರೇ ಮುಚ್ಚಿರುವ ಪ್ರಸಂಗ ನಡೆದಿದೆ. ಇಟಗಿ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮುಖ್ಯಾಂಶಗಳು

TV9 Kannada Headlines At 1PM (24-05-2026)

ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ

ಬಸ್‌ನಲ್ಲಿ ಪ್ರಯಾಣಿಕ ಮರೆತು ಹೋಗಿದ್ದ ಬ್ಯಾಗ್ ಮರಳಿಸಿ ಬೀದರ್​​ನ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬಸವಕಲ್ಯಾಣದಿಂದ ನಲಂಡಿ ಗ್ರಾಮಕ್ಕೆ ಹೋಗುವಾಗ ಚಾವನ್ ಹಿಪ್ಪರ್ಗಾ ಗ್ರಾಮದ ಮಸೀದ್ ಅಲ್ಲಾವುದ್ದೀನ್ ಶೇಕ್ ಎಂಬವರು ಬಸ್​​ನಲ್ಲಿಯೇ ನಗದು ಮತ್ತು ಲಕ್ಷಾಂತರ ಮೌಲ್ಯದ ಆಭರಣಗಳಿದ್ದ ಬ್ಯಾಗ್ ಮರೆತು ತೆರಳಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಗ್ರಾಮದಲ್ಲಿ ಪ್ರಯಾಣಿಕನನ್ನು ಹುಡುಕಿರುವ ಸಾರಿಗೆ ಸಿಬ್ಬಂದಿ ಭಜರಂಗ ಮತ್ತು ನಿರ್ವಾಹಕ ವೀರಪ್ಪ ಕಾಳೆ ಬ್ಯಾಗ್​​ನ ಹಿಂತಿರುಗಿಸಿದ್ದಾರೆ. ಸಾರಿಗೆ ಸಿಬ್ಬಂದಿಯ ಈ ಮಾನವೀಯ ಕಾರ್ಯ ಕಂಡು ಗ್ರಾಮಸ್ಥರು ಹೂವಿನ ಹಾರ ಹಾಕಿ ಅವರನ್ನು ಸನ್ಮಾನಿಸಿದ್ದಾರೆ.

ಇದನ್ನೂ ಓದಿ: ಕಾರ್ಮಿಕರ ವೇತನ ಹೆಚ್ಚಳ, ತೆಲಂಗಾಣದಲ್ಲಿ ಉಷ್ಣ ಅಲೆ ಮತ್ತು ಚೇತನ್ ಅಹಿಂಸಾ ಹೇಳಿಕೆ ವಿವಾದ! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ಬಾಂಬ್ ಸ್ಫೋಟಕ್ಕೆ 23 ಮಂದಿ ಬಲಿ

ಪಾಕಿಸ್ತಾನದ ಕ್ವೆಟ್ಟಾ ನಗರದ ರೈಲ್ವೆ ಟ್ರ್ಯಾಕ್​ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ 23 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ 47 ಜನರಿಗೆ ಗಂಭೀರ ಗಾಯಗಳಾಗಿದ್ದರೆ, ಬ್ಲಾಸ್ಟ್​​ ತೀವ್ರತೆಗೆ ರೈಲ್ವೆ ಹಳಿ ಬಳಿಯಿದ್ದ 10 ವಾಹನಗಳು ಸುಟ್ಟು ಭಸ್ಮವಾಗಿವೆ. ಘಟನೆ ಬೆನ್ನಲ್ಲೇ ಪಾಕ್​ನ ಕ್ವೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us