AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Kannada News Live: ಕಾರ್ಮಿಕರ ವೇತನ ಹೆಚ್ಚಳ, ತೆಲಂಗಾಣದಲ್ಲಿ ಉಷ್ಣ ಅಲೆ ಮತ್ತು ಚೇತನ್ ಅಹಿಂಸಾ ಹೇಳಿಕೆ ವಿವಾದ! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ಕರ್ನಾಟಕ ಸರ್ಕಾರವು 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 60 ರಷ್ಟು ಹೆಚ್ಚಿಸಿದೆ. ಮತ್ತೊಂದೆಡೆ, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿಗೆ 16 ಜನರು ಬಲಿಯಾಗಿದ್ದು ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು, ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಸಮಾಧಿ ಜಾಗದ ಕುರಿತು ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸುದ್ದಿಗೋಷ್ಠಿಯಲ್ಲಿ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಈ ಹೊತ್ತಿನ ಟಾಪ್ 3 ಸುದ್ದಿಗಳು ಇಲ್ಲಿವೆ.

Tv9 Kannada News Live: ಕಾರ್ಮಿಕರ ವೇತನ ಹೆಚ್ಚಳ, ತೆಲಂಗಾಣದಲ್ಲಿ ಉಷ್ಣ ಅಲೆ ಮತ್ತು ಚೇತನ್ ಅಹಿಂಸಾ ಹೇಳಿಕೆ ವಿವಾದ! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು
ಈ ಹೊತ್ತಿನ ಟಾಪ್​​ ಸುದ್ದಿಗಳು
ಭಾವನಾ ಹೆಗಡೆ
|

Updated on:May 24, 2026 | 11:02 AM

Share

ಬೆಂಗಳೂರು, ಮೇ 24: ಕರ್ನಾಟಕದಲ್ಲಿ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು  (Minimum Wage) ಶೇ 60 ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಮತ್ತೊಂದೆಡೆ, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿಗೆ 16 ಜನರು ಬಲಿಯಾಗಿದ್ದು ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು, ಬೆಂಗಳೂರಿನಲ್ಲಿ ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಸಮಾಧಿ ಜಾಗದ ಕುರಿತು ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ್ದಾರೆ.

ರಾಜ್ಯದ ಲಕ್ಷಾಂತರ ಕಾರ್ಮಿಕರಿಗೆ ಬಂಪರ್ ಕೊಡುಗೆ

ಕರ್ನಾಟಕ ಸರ್ಕಾರವು 81 ವಲಯಗಳ ಅಸಂಘಟಿತ ಮತ್ತು ನಿರ್ದಿಷ್ಟ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಕಾರ್ಮಿಕ ಇಲಾಖೆಯು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೇ 22ರ ಶುಕ್ರವಾರವೇ ಈ ಅಧಿಕೃತ ಆದೇಶ ಹೊರಡಿಸಿದೆ. ಹೊಸ ನಿಯಮದಂತೆ ಇಡೀ ರಾಜ್ಯವನ್ನು 3 ವಲಯಗಳಾಗಿ ವಿಂಗಡಿಸಲಾಗಿದ್ದು, ಬೆಂಗಳೂರಿನಲ್ಲಿ ಉನ್ನತ ಕುಶಲ ಕಾರ್ಮಿಕರ ಮಾಸಿಕ ವೇತನ 31,114 ರೂ.ಗೆ ಏರಲಿದೆ. ಈ ಹೊಸ ಕನಿಷ್ಠ ವೇತನ ಸೌಲಭ್ಯವು ಇ-ಕಾಮರ್ಸ್, ಕೊರಿಯರ್ ಮತ್ತು ಖಾಸಗಿ ಶಾಲಾ ಸಿಬ್ಬಂದಿಗೂ ಅನ್ವಯವಾಗಲಿದ್ದು, ಈ ಹಿಂದೆ ಇದ್ದ 4 ಪ್ರತ್ಯೇಕ ವಲಯಗಳ ವರ್ಗೀಕರಣ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ.

ಇದನ್ನೂ ಓದಿ ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ 60ರಷ್ಟು ಹೆಚ್ಚಳ!

ತೆಲಂಗಾಣದಲ್ಲಿ ಭೀಕರ ಬಿಸಿಲಿನ ಬೇಗೆ

ದೇಶದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಮಿತಿಮೀರುತ್ತಿದ್ದು, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿ ಮತ್ತು ತೀವ್ರ ಬಿಸಿಲಿಗೆ ಕಳೆದ ಕೆಲವು ದಿನಗಳಲ್ಲಿ ಒಟ್ಟು 16 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಈ ಸಾವುಗಳು ವರದಿಯಾಗಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ತುರ್ತು ಪರಿಶೀಲನಾ ಸಭೆ ನಡೆಸಿದ ಬಳಿಕ ಜಯಶಂಕರ್ ಭೂಪಾಲಪಲ್ಲಿಯಲ್ಲಿ 4, ವಾರಂಗಲ್, ಕರೀಮನಗರ, ನಿಜಾಮಾಬಾದ್‌ನಲ್ಲಿ ತಲಾ 3 ಹಾಗೂ ಗದ್ವಾಲ್, ರಂಗಾರೆಡ್ಡಿ, ಸೂರ್ಯಪೇಟ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಸಿಎಂ ರೇವಂತ್ ರೆಡ್ಡಿ ಅವರ ನಿರ್ದೇಶನದಂತೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಇದನ್ನೂ ಓದಿ ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು

ಡಾ. ರಾಜ್‌ಕುಮಾರ್ ಸಮಾಧಿ ಜಾಗದ ವಿವಾದ: ತಮ್ಮ ಹೇಳಿಕೆಗೆ ನಟ ಚೇತನ್ ಅಹಿಂಸಾ ಬದ್ಧ

‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಹಿಂಸಾ ಅವರು ಡಾ. ರಾಜ್​ಕುಮಾರ್ ಸಮಾಧಿಗೆ ಸರ್ಕಾರ ಎಕರೆಗಟ್ಟಲೆ ಜಾಗ ನೀಡಿದ್ದನ್ನು ಪ್ರಶ್ನಿಸಿ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ರಾಜ್​ಕುಮಾರ್ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಚೇತನ್ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವೂ ರಾಜ್‌ಕುಮಾರ್ ಅಭಿಮಾನಿಗಳೇ, ಆದರೆ ಸರ್ಕಾರದ ಪಾಲಿಸಿಯಲ್ಲಿನ ಪಕ್ಷಪಾತದ ಬಗ್ಗೆ ನಾನು ಮೂರು ಸಾಲಿನ ಪೋಸ್ಟ್ ಮಾಡಿದ್ದೆ. ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಕರ್ನಾಟಕದ ಜನ ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ನಮಗೆ ಸಮಾನತೆಯ, ನ್ಯಾಯದ, ವೈಜ್ಞಾನಿಕತೆಯ ಸಮಾಜ ಬೇಕು” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಅಂತ ಜನ ಒಪ್ಪಿದ್ದಾರೆ: ಚೇತನ್ ಅಹಿಂಸಾ

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:00 am, Sun, 24 May 26

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದನ್ನು ಜನ ಒಪ್ಪಿದ್ದಾರೆ: ಚೇತನ್ ಅಹಿಂಸ
ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದನ್ನು ಜನ ಒಪ್ಪಿದ್ದಾರೆ: ಚೇತನ್ ಅಹಿಂಸ
ಸ್ತ್ರೀ ಜಾತಕದಲ್ಲಿ ಯಾವ ಗ್ರಹ ಬಲವಾಗಿದ್ರೆ ಅದೃಷ್ಟ ಗೊತ್ತಾ?
ಸ್ತ್ರೀ ಜಾತಕದಲ್ಲಿ ಯಾವ ಗ್ರಹ ಬಲವಾಗಿದ್ರೆ ಅದೃಷ್ಟ ಗೊತ್ತಾ?
ಇಂದು ಈ ರಾಶಿಯವರು ಹಿತಶತ್ರುಗಳಿಂದ ಜಾಗರೂಕರಾಗಿರಿ
ಇಂದು ಈ ರಾಶಿಯವರು ಹಿತಶತ್ರುಗಳಿಂದ ಜಾಗರೂಕರಾಗಿರಿ
ನನ್ನ ತಮ್ಮ ಹಾಗೂ ಶಿವಣ್ಣನ ನಂಬಿ ರೈತರು ಸ್ಟೇಡಿಯಂಗೆ ಜಮೀನು ಕೊಟ್ಟಿದ್ದಾರೆ
ನನ್ನ ತಮ್ಮ ಹಾಗೂ ಶಿವಣ್ಣನ ನಂಬಿ ರೈತರು ಸ್ಟೇಡಿಯಂಗೆ ಜಮೀನು ಕೊಟ್ಟಿದ್ದಾರೆ
ಭೂಪಾಲ್​ನಲ್ಲಿ ‘ಪೆದ್ದಿ ಹವಾ, ರಾಮ್ ಚರಣ್ ಜೊತೆ ಇನ್ಯಾರೆಲ್ಲ ಹಾಜರಿ
ಭೂಪಾಲ್​ನಲ್ಲಿ ‘ಪೆದ್ದಿ ಹವಾ, ರಾಮ್ ಚರಣ್ ಜೊತೆ ಇನ್ಯಾರೆಲ್ಲ ಹಾಜರಿ
ಮೋದಿ ಭೇಟಿಯಾದ ಮಾರ್ಕೊ ರುಬಿಯೋ: ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ
ಮೋದಿ ಭೇಟಿಯಾದ ಮಾರ್ಕೊ ರುಬಿಯೋ: ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ
ಎಐ ಬಳಸಿ ಬಿಕಿನಿ ವಿಡಿಯೋ: ರುಕ್ಮಿಣಿ ವಸಂತ್ ಹೇಳಿದ್ದೇನು?
ಎಐ ಬಳಸಿ ಬಿಕಿನಿ ವಿಡಿಯೋ: ರುಕ್ಮಿಣಿ ವಸಂತ್ ಹೇಳಿದ್ದೇನು?
ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್
ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್
ಡಾ ರಾಜ್​ಕುಮಾರ್ ಹಾಡಿದ ರಾಯರ ಹಾಡುಗಳ ನೆನೆದ ನಟಿ ತಾರಾ
ಡಾ ರಾಜ್​ಕುಮಾರ್ ಹಾಡಿದ ರಾಯರ ಹಾಡುಗಳ ನೆನೆದ ನಟಿ ತಾರಾ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ