AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು – ಇಲ್ಲಿದೆ ಸಂಪೂರ್ಣ ವಿವರ

8th Pay Commission: ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿಯಾಗಿ ಎನ್​ಸಿಜೆಸಿಎಂ 8ನೇ ವೇತನ ಆಯೋಗದ ಮುಂದೆ ಮೆಮೋರಂಡಂ ಸಲ್ಲಿಸಿದೆ. NCJCM ಮೂಲಕ ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಗಳಲ್ಲಿ ಕನಿಷ್ಠ ವೇತನವನ್ನು ₹18,000 ರಿಂದ ₹69,000 ಕ್ಕೆ ಏರಿಸುವುದು, ವಾರ್ಷಿಕ ಇನ್ಕ್ರಿಮೆಂಟ್ ಅನ್ನು 3% ರಿಂದ 6% ಕ್ಕೆ ಹೆಚ್ಚಿಸುವುದು, 3.833 ಫಿಟ್‌ಮೆಂಟ್ ಫ್ಯಾಕ್ಟರ್, ಪೇ ಲೆವೆಲ್‌ಗಳ ವಿಲೀನ, ಸ್ವಯಂಚಾಲಿತ ವೇತನ ಪರಿಷ್ಕರಣೆ ಮತ್ತು ನಿವೃತ್ತ ನೌಕರರಿಗೆ ಪಿಂಚಣಿ ಸಮಾನತೆ ಸೇರಿವೆ. ಈ ಬೇಡಿಕೆಗಳು ನೌಕರರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿವೆ.

8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು - ಇಲ್ಲಿದೆ ಸಂಪೂರ್ಣ ವಿವರ
8ನೇ ವೇತನ ಆಯೋಗImage Credit source: AI/Mediaforge/TV9
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Apr 28, 2026 | 6:59 AM

Share

ನವದೆಹಲಿ, ಏಪ್ರಿಲ್ 21: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ 8ನೇ ವೇತನ ಆಯೋಗಕ್ಕೆ ಬೇಡಿಕೆ ಇಡಲಾಗಿದೆ. ಈ ನಿಟ್ಟಿನಲ್ಲಿ ‘ರಾಷ್ಟ್ರೀಯ ಜಂಟಿ ಸಮಾಲೋಚನಾ ಸಮಿತಿ’ (NCJCM) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, 7 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಇತ್ತೀಚಿನ ಜ್ಞಾಪನಾ ಪತ್ರದಲ್ಲಿ, ಕೇವಲ ವೇತನ ಏರಿಕೆ ಮಾತ್ರವಲ್ಲದೆ ವೇತನ ಶ್ರೇಣಿಯ ಸ್ವರೂಪವನ್ನೇ ಬದಲಿಸುವಂತಹ ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ. ಎನ್​ಸಿಜೆಸಿಎಂ ಸಂಘಟನೆಯು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರನ್ನು ಪ್ರತಿನಿಧಿಸುತ್ತದೆ.

1. ಕನಿಷ್ಠ ವೇತನ 69,000 ರೂ.ಗೆ ಏರಿಕೆ

7ನೇ ವೇತನ ಆಯೋಗದಲ್ಲಿ ಕನಿಷ್ಠ ವೇತನ 18,000 ರೂ. ಇತ್ತು. ಆದರೆ ಈಗಿನ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಆಧರಿಸಿ, 8ನೇ ವೇತನ ಆಯೋಗದಲ್ಲಿ ಕನಿಷ್ಠ ಮೂಲ ವೇತನವನ್ನು 69,000 ರೂಪಾಯಿಗಳಿಗೆ ನಿಗದಿಪಡಿಸಬೇಕು ಎಂದು NCJCM ಒತ್ತಾಯಿಸಿದೆ.

2. ವಾರ್ಷಿಕ ವೇತನ ಏರಿಕೆ (Increment) ಶೇ. 6ಕ್ಕೆ ಹೆಚ್ಚಳ

ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ವಾರ್ಷಿಕವಾಗಿ ಶೇ. 3ರಷ್ಟು ವೇತನ ಏರಿಕೆ (Increment) ನೀಡಲಾಗುತ್ತಿದೆ. ಆದರೆ ನೌಕರರ ಸಂಘಟನೆಯು ಇದನ್ನು ಶೇ. 6ಕ್ಕೆ ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದೆ. ಇದರಿಂದ ನೌಕರರ ವೇತನದ ಬೆಳವಣಿಗೆ ವೇಗವಾಗಿ ನಡೆಯಲಿದೆ.

ಇದನ್ನೂ ಓದಿ: ಬರಲಿದೆ ಆಲ್ಕೋಹಾಲ್ ಆಧಾರಿತ ಸುಂಕ; ಇಲ್ಲಿವೆ ಕರ್ನಾಟಕದ ಪ್ರಸ್ತಾಪಿತ ಹೊಸ ಮದ್ಯ ನೀತಿ ಮುಖ್ಯಾಂಶಗಳು

3. ಪೌಷ್ಟಿಕಾಂಶ ಆಧಾರಿತ ವೇತನ ಲೆಕ್ಕಾಚಾರ (Nutrition Linked Calculation)

ನೌಕರರ ಕನಿಷ್ಠ ವೇತನವನ್ನು ಕೇವಲ ಅಂದಾಜಿನ ಮೇಲೆ ನಿರ್ಧರಿಸಬಾರದು. ‘ಅಯಕ್ರೋಯ್ಡ್ ಫಾರ್ಮುಲಾ’ (Aykroyd Formula) ಅನ್ವಯ, ಒಬ್ಬ ನೌಕರನ ಕುಟುಂಬಕ್ಕೆ ಅಗತ್ಯವಿರುವ ಪೌಷ್ಟಿಕ ಆಹಾರ, ಬಟ್ಟೆ, ಮನೆ ಬಾಡಿಗೆ ಮತ್ತು ಇತರೆ ಅಗತ್ಯಗಳನ್ನು ಇಂದಿನ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಲೆಕ್ಕ ಹಾಕಿ, ಕನಿಷ್ಠ ವೇತನವನ್ನು 69,000 ರೂ. ಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

4. ಫಿಟ್‌ಮೆಂಟ್ ಫ್ಯಾಕ್ಟರ್ 3.833

ವೇತನವನ್ನು ಮಲ್ಟಿಪ್ಲೈ ಮಾಡಲು ಬಳಸುವ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 3.833 ಕ್ಕೆ ನಿಗದಿಪಡಿಸಬೇಕು. ಇದು ಜಾರಿಯಾದಲ್ಲಿ ಮೂಲ ವೇತನದಲ್ಲಿ ಭಾರಿ ಜಿಗಿತ ಕಂಡುಬರಲಿದೆ.

5. ಪೇ ಲೆವೆಲ್‌ಗಳ ವಿಲೀನ (Merging of Pay Levels)

7ನೇ ವೇತನ ಆಯೋಗದಲ್ಲಿರುವ ಕೆಲವು ಕೆಳಹಂತದ ಪೇ ಲೆವೆಲ್‌ಗಳನ್ನು (Pay Levels 1, 2, and 3) ವಿಲೀನಗೊಳಿಸಲು ಪ್ರಸ್ತಾಪಿಸಲಾಗಿದೆ. 4 ಮತ್ತು 5ನೇ ಲೆವೆಲ್ ಅನ್ನು ಲೆವೆಲ್ 5ಕ್ಕೆ ವಿಲೀನಗೊಳಿಸಬೇಕು. 9 ಮತ್ತು 10 ಅನ್ನು 10ಕ್ಕೆ ಸೇರಿಸಬೇಕು. ಲೆವೆಲ್ 5ರ ಉದ್ಯೋಗಿಗಳ ಪೇ ಲೆವೆಲ್ ಅನ್ನು 6ಕ್ಕೆ ಅಪ್​​ಗ್ರೇಡ್ ಮಾಡಬೇಕು ಎನ್ನುವ ಒತ್ತಾಯ ಇದೆ.

6. 10 ವರ್ಷಗಳ ಕಾಯುವಿಕೆ ಬೇಡ (Periodical Revision)

ಮುಂದಿನ ವೇತನ ಪರಿಷ್ಕರಣೆಗಾಗಿ ಮತ್ತೆ 10 ವರ್ಷ ಕಾಯುವ ಅಗತ್ಯವಿರಬಾರದು. ತುಟ್ಟಿಭತ್ಯೆ (DA) ಶೇ. 50 ದಾಟಿದಾಗ ಅಥವಾ ಕಾಲಕಾಲಕ್ಕೆ ಮಾರುಕಟ್ಟೆ ಏರಿಳಿತಕ್ಕೆ ಅನುಗುಣವಾಗಿ ವೇತನವನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸುವ ವ್ಯವಸ್ಥೆ ಬರಬೇಕು.

7. ನಿವೃತ್ತರಿಗೂ ಸಮಾನ ವೇತನ ಪರಿಷ್ಕರಣೆ (Pension Parity)

ಸೇವೆಯಲ್ಲಿರುವ ನೌಕರರ ವೇತನ ಎಷ್ಟು ಹೆಚ್ಚಾಗುತ್ತದೆಯೋ, ಅದೇ ಅನುಪಾತದಲ್ಲಿ ನಿವೃತ್ತ ನೌಕರರ ಪಿಂಚಣಿಯೂ ಸಹ ಪರಿಷ್ಕರಣೆಯಾಗಬೇಕು ಎಂಬ ‘ಒಂದು ಶ್ರೇಣಿ ಒಂದು ಪಿಂಚಣಿ’ ಮಾದರಿಯ ಬೇಡಿಕೆಯನ್ನು ಬಲವಾಗಿ ಮಂಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟೆಕ್ಕಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ರಾದ್ದಾಂತ; ಬ್ಲ್ಯಾಕ್​ಮೈಲ್, ಆತ್ಮಹತ್ಯೆ ಬೆದರಿಕೆ, ಅಶ್ಲೀಲ ಚಿತ್ರಗಳ ಕರ್ಮಕಾಂಡ

ಈ ಅಂಶಗಳು ಜಾರಿಯಾದಲ್ಲಿ ಕೇಂದ್ರ ಸರ್ಕಾರಿ ನೌಕರರ ಆರ್ಥಿಕ ಸ್ಥಿತಿಯಲ್ಲಿ ಅಭೂತಪೂರ್ವ ಬದಲಾವಣೆ ಉಂಟಾಗಲಿದೆ. ಸದ್ಯಕ್ಕೆ ಈ ಎಲ್ಲಾ ಅಂಶಗಳು ಸಂಘಟನೆಯ ಬೇಡಿಕೆಗಳಾಗಿದ್ದು, ಸರ್ಕಾರದ ಅಧಿಕೃತ ಪ್ರತಿಕ್ರಿಯೆಗಾಗಿ ನೌಕರರು ಕಾಯುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Tue, 21 April 26

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ