AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟೆಕ್ಕಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ರಾದ್ದಾಂತ; ಬ್ಲ್ಯಾಕ್​ಮೈಲ್, ಆತ್ಮಹತ್ಯೆ ಬೆದರಿಕೆ, ಅಶ್ಲೀಲ ಚಿತ್ರಗಳ ಕರ್ಮಕಾಂಡ

Bangalore Techie's Corporate Card Scam: ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ₹27 ಲಕ್ಷ ಮೌಲ್ಯದ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ದುರ್ಬಳಕೆ ಮಾಡಿದ್ದಾರೆ. ಹಣ ವಾಪಸ್ ಕೇಳಿದಾಗ ಹಿರಿಯ ಅಧಿಕಾರಿಗಳಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಹಾಗೂ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ. ಕಂಪನಿಯು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಕಾರ್ಪೊರೇಟ್ ವಲಯದಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರು ಟೆಕ್ಕಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ರಾದ್ದಾಂತ; ಬ್ಲ್ಯಾಕ್​ಮೈಲ್, ಆತ್ಮಹತ್ಯೆ ಬೆದರಿಕೆ, ಅಶ್ಲೀಲ ಚಿತ್ರಗಳ ಕರ್ಮಕಾಂಡ
ಐಟಿ ಉದ್ಯೋಗಿಯ ಸಾಂದರ್ಭಿಕ ಚಿತ್ರImage Credit source: AI/Mediaforge/TV9
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 21, 2026 | 4:45 PM

Share

ಬೆಂಗಳೂರು, ಏಪ್ರಿಲ್ 21: ಐಟಿ ಉದ್ಯೋಗಿಯೊಬ್ಬರು ಕಂಪನಿಯ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ (Corporate credit card) ಅನ್ನು ದುರ್ಬಳಕೆ ಮಾಡಿ ಸಿಕ್ಕಿಬಿದ್ದರೂ ಹಿರಿಯ ಅಧಿಕಾರಿಗಳಿಗೆ ಆತ್ಮಹತ್ಯೆಯ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಎನ್​ಡಿಟಿವಿ ವರದಿಯೊಂದರ ಪ್ರಕಾರ ಆರೋಪಿ ಐಟಿ ಉದ್ಯೋಗಿಯು ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್​ನಿಂದ 27 ಲಕ್ಷ ರೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದನ್ನು ವಾಪಸ್ ಕೇಳಿದ ಕಾರಣಕ್ಕೆ ಹಿರಿಯ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವುದು ತಿಳಿದುಬಂದಿದೆ. ವರ್ತೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿತ ಉದ್ಯೋಗಿಗೆ ಕೆಲಸಕ್ಕೆ ಸಂಬಧಿಸಿದ ವೆಚ್ಚಗಳನ್ನು ಭರಿಸಲು 2 ಲಕ್ಷ ರೂ ವೆಚ್ಚ ಮಿತಿ ಇರುವ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ನೀಡಲಾಗಿರುತ್ತದೆ. 2023ರ ಅಕ್ಟೋಬರ್​ನಿಂದ 2024ರ ಜನವರಿವರೆಗೆ ನಾಲ್ಕು ತಿಂಗಳಲ್ಲಿ ಯಾವುದೇ ಅನುಮೋದನೆ ಇಲ್ಲದೆ ಈ ಕಾರ್ಡ್​ನಿಂದ 27,01,139 ರೂ ಟ್ರಾನ್ಸಾಕ್ಷನ್ ಆಗಿರುವುದು ಆಂತರಿಕ ಹಣಕಾಸು ಸಮೀಕ್ಷೆ ವೇಳೆ ಮ್ಯಾನೇಜ್ಮೆಂಟ್ ಗಮನಕ್ಕೆ ಬಂದಿದೆ.

ಇದನ್ನೂ ಓದಿ: ರಾಜ್‌ಕೋಟ್ ಸೈಬರ್ ವಂಚನೆ: 2,500 ಕೋಟಿ ರೂ ಹಗರಣ ಬಯಲು, ಪ್ರಮುಖ ಬ್ಯಾಂಕ್ ಅಧಿಕಾರಿಗಳ ಬಂಧನ

ಇದಾದ ಬಳಿಕ 2024ರ ಜನವರಿ 12ರಂದು ಈ ಅನಧಿಕೃತ ವಹಿವಾಟುಗಳ ಕುರಿತು ವಿವರಣೆ ಕೇಳಿ ಆ ಉದ್ಯೋಗಿಗೆ ಇಮೇಲ್ ಕಳುಹಿಸಲಾಗುತ್ತದೆ. ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾಗಿ ಆತ ಒಪ್ಪಿಕೊಳ್ಳುತ್ತಾನೆ.

ಚೀನಾ ಮತ್ತು ಪಾಕಿಸ್ತಾನದ ಅಪರಿಚಿತ ವ್ಯಕ್ತಿಗಳ ಬೆದರಿಕೆಗೆ ಹೆದರಿ ಈ ವಹಿವಾಟು ನಡೆಸಬೇಕಾಯಿತು ಎಂದು ಕಾರಣ ನೀಡಿದ ಈ ಉದ್ಯೋಗಿಯು, ಆ ಹಣವನ್ನು ಕಂತುಗಳಲ್ಲಿ ತೀರಿಸುವುದಾಗಿ ಪ್ರಸ್ತಾಪ ಮಾಡುತ್ತಾನೆ. ಅದರಂತೆ, ಫೆಬ್ರುವರಿ ಎರಡನೇ ವಾರದಲ್ಲಿ 10 ಲಕ್ಷ ರೂ ನೀಡುವುದು, ಉಳಿದವನ್ನು ಕ್ರಮೇಣವಾಗಿ ತೀರಿಸುವುದಾಗಿ ಆತ ಜನವರಿ 29ರಂದು ಹೇಳಿರುತ್ತಾನೆ. ಅದಕ್ಕೆ ಕಂಪನಿಯೂ ಒಪ್ಪಿರುತ್ತದೆ.

ಭರವಸೆ ಕೊಟ್ಟಂತೆ ಉದ್ಯೋಗಿಯು ಕಂಪನಿಗೆ ಹಣ ಮರಳಿಸುವುದಿಲ್ಲ. ಕಂಪನಿಯೂ ಕೂಡ ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆಹರಿಸಲು ಯತ್ನಿಸುತ್ತದೆ. ಆದರೆ, 2024ರ ಫೆಬ್ರುವರಿ 9ರಂದು ಉದ್ಯೋಗಿಯು ತನ್ನ ಹಿರಿಯ ಅಧಿಕಾರಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿದ್ದಾನೆ. ಅಷ್ಟೇ ಅಲ್ಲ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಹಾಕುತ್ತಾನೆ.

ಇದನ್ನೂ ಓದಿ: ಆಪಲ್ ಸಾಮ್ರಾಜ್ಯದಲ್ಲಿ ಹೊಸ ಯುಗ: ಟಿಮ್ ಕುಕ್ ನಿರ್ಗಮನ, ಜಾನ್ ಟೆರ್ನಸ್ ನೂತನ ಸಾರಥಿ

ಈ ಹಂತದಲ್ಲಿ ಎಚ್ಚೆತ್ತುಕೊಂಡ ಕಂಪನಿಯು ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸುತ್ತದೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ