ಹಾವೇರಿ: ಎತ್ತುಗಳ ಮೈತೊಳೆಯಲು ಹೋದ ಬಾಲಕರು ವಾಪಸ್ಸು ಬಂದಿದ್ದು ಹೆಣವಾಗಿ

ಒಂದೇ ವಯಸ್ಸಿನ ಇಬ್ಬರು ಮಕ್ಕಳು ಎತ್ತುಗಳಿಗೆ ಮೈತೊಳೆಯಲು ಕೆರೆಗೆ ಹೋಗಿದ್ದರು. ಮೈತೊಳೆಸಿ ಮಕ್ಕಳು ವಾಪಸ್ ಬರುತ್ತಾರೆ ಅಂತ ಮೃತರ ಸಂಬಂಧಿಕರು ಕಾದು ಕುಳಿತಿದ್ದರು. ಆದರೆ ಎತ್ತುಗಳ ಮೈತೊಳೆಯಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ವಿಷಯ ಅಭಿಷೇಕ್ ಮನೆಯವರಿಗೆ ಗೊತ್ತಾಯಿತು.

ಹಾವೇರಿ: ಎತ್ತುಗಳ ಮೈತೊಳೆಯಲು ಹೋದ ಬಾಲಕರು ವಾಪಸ್ಸು ಬಂದಿದ್ದು ಹೆಣವಾಗಿ
ಮೃತ ಬಾಲಕರು
TV9kannada Web Team

| Edited By: sandhya thejappa

Jul 01, 2021 | 11:46 AM

ಹಾವೇರಿ: ಶಾಲೆಗಳು ಇನ್ನೂ ಆರಂಭವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ಮಕ್ಕಳು ಮನೆಯವರೊಂದಿಗೆ ಕೃಷಿ ಕೆಲಸ, ಎತ್ತುಗಳಿಗೆ ನೀರು ಕುಡಿಸುವುದು, ಮೈತೊಳೆಯುವುದು ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗೆ ನಿನ್ನೆ (ಜೂನ್ 30) ಎತ್ತುಗಳ ಮೈತೊಳೆಯಲು ಕೆರೆಗೆ ಹೋಗಿದ್ದ ಹದಿನಾಲ್ಕು ವರ್ಷದ ಬಾಲಕರಿಬ್ಬರು ಹೆಣವಾಗಿ ಮನೆಗೆ ಮರಳಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸನಗೌಡ ಹಂಡೋರಿ ಎಂಬುವರ ಪುತ್ರ ಹದಿನಾಲ್ಕು ವರ್ಷದ ಅಭಿಷೇಕ್ ಹಂಡೋರಿ ಮತ್ತು ಅವರ ಸಂಬಂಧಿ ಹದಿನಾಲ್ಕು ವರ್ಷದ ಹರೀಶ್ ಬಾಳಿಕಾಯಿ ಸೇರಿಕೊಂಡು ನಿನ್ನೆ ಮಧ್ಯಾಹ್ನ ಎತ್ತುಗಳ ಮೈತೊಳೆಯಲು ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ಹೋಗಿದ್ದರು. ಆಗ ಆಕಸ್ಮಿಕವಾಗಿ ಇಬ್ಬರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಕೆರೆ ಆಳವಾಗಿ ಇದ್ದಿದ್ದರಿಂದ ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಒಂದೇ ವಯಸ್ಸಿನ ಇಬ್ಬರು ಮಕ್ಕಳು ಎತ್ತುಗಳಿಗೆ ಮೈತೊಳೆಯಲು ಕೆರೆಗೆ ಹೋಗಿದ್ದರು. ಮೈತೊಳೆಸಿ ಮಕ್ಕಳು ವಾಪಸ್ ಬರುತ್ತಾರೆ ಅಂತ ಮೃತರ ಸಂಬಂಧಿಕರು ಕಾದು ಕುಳಿತಿದ್ದರು. ಆದರೆ ಎತ್ತುಗಳ ಮೈತೊಳೆಯಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ವಿಷಯ ಅಭಿಷೇಕ್ ಮನೆಯವರಿಗೆ ಗೊತ್ತಾಯಿತು. ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕರ ಮೃತದೇಹಗಳನ್ನು ಕೆರೆಯಿಂದ ಹೊರಗೆ ತೆಗೆದಿದ್ದಾರೆ.

ಇಬ್ಬರು ಬಾಲಕರ ಮೃತದೇಹಗಳನ್ನು ಕಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಈ ಪ್ರಕರಣ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ

ದ್ವಿಚಕ್ರ ವಾಹನಕ್ಕೆ ನಾಯಿಯನ್ನು ಕಟ್ಟಿ ಎಳೆದುಕೊಂಡು ಹೋದ ಮಹಿಳೆಯರು; ತೀವ್ರವಾಗಿ ಗಾಯಗೊಂಡ ಶ್ವಾನ ಸಾವು

ಸೋಂಕಿತ ಮೃತರ ಮನೆಗಳಿಗೆ ಒಬ್ಬ ಸಚಿವರೂ ಭೇಟಿ ಕೊಟ್ಟಿಲ್ಲ; ಹೆಣದ ರಾಶಿಯ ಫೋಟೋಗಳು ನಮ್ಮ ಬಳಿ ಇವೆ: ಡಿಕೆ ಶಿವಕುಮಾರ್

(wo boys drowned and died in lake at haveri)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada