ಮೊದಲು ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಬೇಕು, 10 ನಿಮಿಷ ಧ್ಯಾನ ಇದಕ್ಕೆ ಪರಿಹಾರವಲ್ಲ: ಮನೋವೈದ್ಯ ಡಾ‌ ಪಿ ವಿ ಭಂಡಾರಿ

ಮಕ್ಕಳಲ್ಲಿ ಮೊಬೈಲ್ ಎಡಿಕ್ಷನ್ ಜಾಸ್ತಿಯಾಗಿದ್ದು, ಏಕಾಗ್ರತೆ ಕಡಿಮೆಯಾಗಿದೆ. ಮಕ್ಕಳ ಮನಸ್ಸಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದು, ಇದಕ್ಕೆ ಪರಿಹಾರ 10 ನಿಮಿಷ ಧ್ಯಾನ ಅಲ್ಲ ಎಂದು ಖ್ಯಾತ ಮನೋವೈದ್ಯ ಡಾ‌.ಪಿ.ವಿ.ಭಂಡಾರಿ ಅಭಿಪ್ರಾಯಪಟ್ಟರು.

ಮೊದಲು ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಬೇಕು, 10 ನಿಮಿಷ ಧ್ಯಾನ ಇದಕ್ಕೆ ಪರಿಹಾರವಲ್ಲ: ಮನೋವೈದ್ಯ ಡಾ‌ ಪಿ ವಿ ಭಂಡಾರಿ
ಖ್ಯಾತ ಮನೋವೈದ್ಯ ಡಾ‌.ಪಿ.ವಿ.ಭಂಡಾರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 05, 2022 | 5:47 PM

ಉಡುಪಿ: ಮಕ್ಕಳಲ್ಲಿ ಮೊಬೈಲ್ ಎಡಿಕ್ಷನ್ ಜಾಸ್ತಿಯಾಗಿದ್ದು, ಏಕಾಗ್ರತೆ ಕಡಿಮೆಯಾಗಿದೆ. ಮಕ್ಕಳ ಮನಸ್ಸಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದು, ಇದಕ್ಕೆ ಪರಿಹಾರ 10 ನಿಮಿಷ ಧ್ಯಾನ ಅಲ್ಲ ಎಂದು ಮನೋವೈದ್ಯ ಡಾ‌.ಪಿ.ವಿ.ಭಂಡಾರಿ ಅಭಿಪ್ರಾಯಪಟ್ಟರು. ನಗರದಲ್ಲಿ ಮಾತನಾಡಿ ಅವರು, ಇದಕ್ಕೆ ಪರಿಹಾರ, ಶಾಲೆಗಳಲ್ಲಿ ಕೌನ್ಸಿಲರ್ ಅಗತ್ಯತೆ ಇದೆ. ಮಕ್ಕಳ ಸಮಸ್ಯೆಗಳ ಬಗ್ಗೆ ಅರಿವು ಬರಬೇಕು. ಮಕ್ಕಳಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಶಿಕ್ಷಕರಿಗೂ ಅರಿವಿಗೆ ಬರಬೇಕು. ಮಕ್ಕಳಲ್ಲಿ ಇತರೆ ಸಮಸ್ಯೆಗಳು ಏನಾಗುತ್ತಿದೆ ಅದಕ್ಕಾಗಿ ಗ್ಯಾಜೆಟ್ ರಿಸ್ಟ್ರಿಕ್ಷನ್ ಆಗಬೇಕು. ಇದು ಬಿಟ್ಟು ಕೇವಲ 10 ನಿಮಿಷ ಧ್ಯಾನ ಮಾಡುವುದು ಪರಿಹಾರ ಅಲ್ಲ. ಎಲ್ಲದಕ್ಕೂ ಕ್ವಿಕ್ ಫಿಕ್ಸ್ ಐಡಿಯಾಸ್​ನ್ನು ಸರಕಾರ ಮಾಡುತ್ತಿರುವುದು ತಪ್ಪು. ಧ್ಯಾನದ ವಿಚಾರದಲ್ಲಿ ನನ್ನದು ಯಾವುದೇ ವಿರೋಧ ಇಲ್ಲ. ಮಕ್ಕಳಿಗೆ ನೆರವಾಗುವುದಿದ್ದರೆ ಯಾವುದನ್ನು ಬೇಕಾದರೂ ಮಾಡಲಿ. ಜೊತೆಗೆ ಮಾಡುವುದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮಾಡಲಿ ಎಂದು ಹೇಳಿದರು.

ತೋರಿಕೆಗಾಗಿ ಮಾಡುವುದನ್ನು ನಾನು ವಿರೋಧಿಸುತ್ತೇನೆ:

ವೈಜ್ಞಾನಿಕವಾಗಿ ಇದರಿಂದ ಪ್ರಯೋಜನ ಇದೆ ಎನ್ನುವುದನ್ನು ತಜ್ಞರು ದೃಢಪಡಿಸಲಿ. ಇದೇ ವಿಚಾರವಾಗಿ ನಮ್ಮ ದೇಶ ವಿದೇಶದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಆದರೆ ಗ್ಯಾಜೆಟ್ ರಿಸ್ಟ್ರಿಕ್ಷನ್ ಸ್ಕೂಲ್ ಕೌನ್ಸಿಲಿಂಗ್ ಬಗ್ಗೆ ಯಾರು ಮಾತನಾಡುತ್ತಿಲ್ಲ. ಎಲ್ಲಾ ಶಾಲೆಗಳಲ್ಲಿ ಕೌನ್ಸಿಲರ್ಸ್ ಇರಬೇಕು ಎನ್ನುವ ರೂಲ್ಸ್ ಇದೆ. ಇದು ಅನುಷ್ಠಾನಕ್ಕೆ ಬಂದಿದೆ ಎನ್ನುವುದನ್ನು ಶಿಕ್ಷಣ ಸಚಿವರು ಹೋಗಿ ನೋಡಲಿ. ಶಾಲೆಯ ಶಿಕ್ಷಕರಿಗೆ ಕೌನ್ಸಲಿಂಗ್ ವಿಚಾರವಾಗಿ ಕೌನ್ಸಲರ್​ಗಳಿಂದ ಹೆಚ್ಚಿನ ಮಾಹಿತಿ ನೀಡುವಂತಾಗಲಿ. ಇದರ ಜೊತೆಗೆ ವೈಜ್ಞಾನಿಕ ತಳಹದಿ ಇದೆ ಅಂತಾದರೆ ಧ್ಯಾನವನ್ನು ಕೂಡ ಮಾಡಲಿ. ಆದರೆ ಕೇವಲ ತೋರಿಕೆಗಾಗಿ ಮಾಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಡಾ‌.ಪಿ.ವಿ.ಭಂಡಾರಿ ಹೇಳಿದರು.

ಇದು ಆನ್ಲೈನ್ ಶಿಕ್ಷಣದ ಸೈಡ್ ಎಫೆಕ್ಟ್

ಯಾವುದೇ ಕೆಲಸ ಮಾಡಲು ವೈಜ್ಞಾನಿಕ ಪುರಾವೆ ಅಗತ್ಯತೆ. ವೈಜ್ಞಾನಿಕ ಪುರಾವೆ ಇಲ್ಲದೆ ಮಾಡುವುದು ಸರಿಯಲ್ಲ. ಈ ರೀತಿಯಲ್ಲಿ ನಿರ್ಣಯಗಳನ್ನು ಮಾಡುವ ಮೂಲಕ ಜನರಿಗೆ ತೋರಿಸಕೊಳ್ಳುವುದು ತಪ್ಪು. ಮನೋವೈದ್ಯನಾಗಿ ಮಕ್ಕಳ ಮನಸ್ಥಿತಿ ಹೇಗಿ ಆಗಲು ಕಾರಣ ಏನು ಎಂದು ತಿಳಿದುಕೊಳ್ಳಬೇಕು. ಇದು ಆನ್ಲೈನ್ ಶಿಕ್ಷಣದ ಸೈಡ್ ಎಫೆಕ್ಟ್ ಈ ಬಗ್ಗೆ ನಾನು ಮೊದಲೇ ತಿಳಿಸಿದ್ದೆ. ಆ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಅಗತ್ಯ ಇತ್ತು. ಆದರೆ ಅದರ ಸೈಡ್ ಎಫೆಕ್ಟ್ ಇದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:42 pm, Sat, 5 November 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ