AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆರೇಸ್ ಮೇಲೆ ನೆಟ್ಟಿದ್ದ ಮಾವಿನ ಗಿಡದಿಂದ ಭರ್ಜರಿ ಆದಾಯ; ಕೆ.ಜಿಗೆ ಲಕ್ಷಕ್ಕೂ ಅಧಿಕ ಬೆಲೆ

ಪ್ರಯೋಗಾರ್ಥವಾಗಿ ವಿದೇಶಿ ತಳಿಯನ್ನು ಪಕ್ಕದ ಕೇರಳದಿಂದ ತಂದು ಬೆಳೆಸಿದ ಮಾವಿನ ಗಿಡ ಈಗ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದೆ. ಕೃಷಿಯಿಂದಲೇ ಬದುಕು ಕಟ್ಟಿಕೊಂಡ ಈ ಕೃಷಿಕ ಹಲವು ಬಗೆಯ ಕೃಷಿ ಮಾಡುವ ಮೂಲಕ ಗುರುತಿಸಿಕೊಂಡವರು. ತಮ್ಮ ಮನೆಯ ಟೆರೇಸ್ ಮೇಲೆ ಕೃಷಿ ಮಾಡುವ ಇವರು, ಜಪಾನಿ ತಳಿಯಿಂದ ಸದ್ಯ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಹಾಗಾದ್ರೆ ಏನಿದು ತಳಿ? ಈ ಚಿನ್ನದ ಮಾವಿನ ಹಣ್ಣು ಯಾವುದು ಅಂತೀರಾ ? ಈ ಸ್ಟೋರಿ ಓದಿ.

ಟೆರೇಸ್ ಮೇಲೆ ನೆಟ್ಟಿದ್ದ ಮಾವಿನ ಗಿಡದಿಂದ ಭರ್ಜರಿ ಆದಾಯ; ಕೆ.ಜಿಗೆ ಲಕ್ಷಕ್ಕೂ ಅಧಿಕ ಬೆಲೆ
ಟೆರೇಸ್ ಮೇಲೆ ನೆಟ್ಟಿದ್ದ ಮಾವಿನ ಗಿಡದಿಂದ ಭರ್ಜರಿ ಆದಾಯ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on:May 16, 2024 | 10:10 PM

Share

ಉಡುಪಿ, ಮೇ.16: ಇದು ಉಡುಪಿ ಜಿಲ್ಲೆಯ ಕೃಷಿಕರ ಸಾಧನೆ ಎಂದರೆ ತಪ್ಪಾಗಲಾರದು. ಪಕ್ಕದ ಕೇರಳ ರಾಜ್ಯದಿಂದ ಪ್ರಯೋಗಾರ್ಥವಾಗಿ ವಿದೇಶಿ ತಳಿಯ ಮಾವಿನ ಗಿಡವನ್ನ ತಂದಿದ್ದ ಉಡುಪಿ(Udupi)ಯ ಶಂಕರಪುರ ನಿವಾಸಿ ಜೋಸೆಫ್ ಲೋಬೋ ಅವರು, ತಮ್ಮ ಮಹಡಿಯ ಮೇಲೆ ಈ ಗಿಡವನ್ನು ನೆಟ್ಟಿದ್ದರು. ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡ, ಈ ಬಾರಿ ಫಸಲನ್ನು ನೀಡಿದ್ದು, ಭರ್ಜರಿ ಆದಾಯ ನೀಡಿದೆ. ಜೋಸೆಫ್ ಲೋಬೋ ಅವರು ನೆಟ್ಟಿದ್ದ ಜಪಾನಿ ಮಾವಿನಹಣ್ಣಿನ ತಳಿಯಾದ ಮಿಯಾಯೋಕಿ. ಈ ಮಿಯಾಜಾಕಿ(Miyazaki Mango) ತಳಿ ಮಾವಿನಹಣ್ಣಿಗೆ ಪ್ರತಿ ಕಿಲೋಗೆ 2 ಲಕ್ಷ 70 ಸಾವಿರ ಬೆಲೆ ಇದೆ. ಕೇವಲ ಒಂದು ಹಣ್ಣಿನ ಬೆಲೆ 10,000 ಎಂದರೆ ನೀವು ನಂಬಲೇಬೇಕು.

ಜಪಾನಿ ತಳಿ

ನೋಡಲು ಮಲ್ಲಿಕಾ ಮಾವಿನ ಹಣ್ಣಿನ ತಳಿಯಂತೆ ಕಾಣುವ ಈ ಜಪಾನಿ ತಳಿ, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಕಳೆದ ವರ್ಷ ಹವಾಮಾನ ವೈಪರಿತ್ಯದಿಂದ ಜೋಸೆಫ್ ಅವರ ಮಾವಿನ ಗಿಡ ಯಾವುದೇ ಫಸಲನ್ನು ಕೂಡ ನೀಡಿರಲಿಲ್ಲ. ಈ ಬಾರಿ ಸಣ್ಣ ಮಟ್ಟದ ಫಸಲು ಬಂದಿದ್ದು, ಈಗಾಗಲೇ ಆ ಹಣ್ಣುಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಿ ಲಾಭ ಪಡೆದುಕೊಂಡಿದ್ದಾರೆ. ಇನ್ನು ಲೋಬೋ ಅವರ ಟೆರೇಸ್ ಗಾರ್ಡನ್‌ನಲ್ಲಿ ಬಿಳಿ ಜಾವಾ ಪ್ಲಮ್, ಬ್ರೆಜಿಲಿಯನ್ ಚೆರ್ರಿಗಳು, ತೈವಾನ್ ಕಿತ್ತಳೆ ಜೊತೆಗೆ ವಿಶ್ವಪ್ರಸಿದ್ಧ ಶಂಕರಪುರ ಮಲ್ಲಿಗೆಯನ್ನ ಕೂಡ ಬೆಳೆಯುತ್ತಾರೆ.

ಇದನ್ನೂ ಓದಿ:Miyazaki Mango: ಧಾರವಾಡ ಮಾವು ಮೇಳ, ಮಿಯಾಜಾಕಿ ಮಾವಿನ ಹಣ್ಣೊಂದರ ಬೆಲೆ ಬರೋಬ್ಬರಿ 10 ಸಾವಿರ ರೂ!

ಕೃಷಿಯ ಜೊತೆಗೆ ವಿವಿಧ ಗಿಡಗಳನ್ನು ಕಸಿಮಾಡಿ ಮಾರಾಟವನ್ನು ಕೂಡ ಮಾಡುತ್ತಿರುವ ಲೋಬೋ, ಕರ್ನಾಟಕದಲ್ಲೂ ಕೂಡ ಜಪಾನಿ ತಳಿಯ ಮಾವಿನಹಣ್ಣಿಗೆ ಮಾರುಕಟ್ಟೆ ಸಿಗಬೇಕು ಎಂದು ಆಶಿಸುತ್ತಾರೆ. ಒಟ್ಟಾರೆಯಾಗಿ ಮೌಲ್ಯವರ್ಧಿತ ಕೃಷಿ ಮಾಡುವುದರಿಂದ ಕೃಷಿಕನ ಶ್ರಮಕ್ಕೆ ಬೆಲೆ ಸಿಗುತ್ತದೆ ಎನ್ನುವುದು ಕೂಡ ಸತ್ಯ. ಇವೆಲ್ಲದರ ಜೊತೆಗೆ ವಾತಾವರಣವೂ ಕೂಡ ಕೃಷಿಕನಿಗೆ ಸಹಕಾರಿಯಾದರೆ, ಕೃಷಿಕ ಅನ್ನದ ಜೊತೆ ಚಿನ್ನವನ್ನು ಬೆಳೆಯುವ ಅವಕಾಶವಿದೆ ಎನ್ನುವುದಕ್ಕೆ ಲೋಬೋ ಅವರೇ ಸಾಕ್ಷಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Thu, 16 May 24