ನಾನು ಇಂಧನ ಸಚಿವನಾಗಿದ್ದಾಗ ಹೆಚ್ಚು ವಿದ್ಯುತ್ ಉತ್ಪಾದನೆ ಆಗಿತ್ತು, ಈಗ ಹೇಗಿದೆ? ಇತಿಹಾಸ ತೆಗೆದು ನೋಡಿ ಎಂದು ಟಾಂಗ್ ಕೊಟ್ಟ ಡಿ.ಕೆ. ಶಿವಕುಮಾರ್

ನಾನು ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲು ಬದ್ಧನಾಗಿದ್ದೇನೆ. ಯಾವ ತನಿಖೆ ಬೇಕಾದ್ರೂ ಮಾಡಲಿ, ಎಲ್ಲಾ ತನಿಖೆಗೂ ಸಿದ್ಧನಿದ್ದೇನೆ. ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇನೆ. ಇದರಲ್ಲಿ ಶೇ 0.1 ಏನಾದ್ರೂ ಹೆಚ್ಚಿ ಕಮ್ಮಿ ಮಾಡಿದ್ರೆ ಅದರಲ್ಲಿ ನಾನು ಹೊಣೆ ಹೊತ್ತುಕೊಳ್ಳಲು ಬದ್ಧನಾಗಿದ್ದೇನೆ.

ನಾನು ಇಂಧನ ಸಚಿವನಾಗಿದ್ದಾಗ ಹೆಚ್ಚು ವಿದ್ಯುತ್ ಉತ್ಪಾದನೆ ಆಗಿತ್ತು, ಈಗ ಹೇಗಿದೆ? ಇತಿಹಾಸ ತೆಗೆದು ನೋಡಿ ಎಂದು ಟಾಂಗ್ ಕೊಟ್ಟ ಡಿ.ಕೆ. ಶಿವಕುಮಾರ್
ಡಿಕೆ ಶಿವಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on:May 20, 2022 | 4:30 PM

ಉಡುಪಿ: ಕರ್ನಾಟಕ ರಾಜ್ಯದ ವಿದ್ಯುತ್ ಉತ್ಪಾದನೆ ಇತಿಹಾಸ ನಾನು ಜವಾಬ್ದಾರಿ ತೆಗೆದುಕೊಂಡಾಗ ಹೇಗಿತ್ತು ನೋಡಿ. ನಾನು ಜವಾಬ್ದಾರಿ ಬಿಟ್ಟಾಗ ಎನಿತ್ತು ಅನ್ನೋದು ರಾಜ್ಯದ ಜನತೆಗೆ ಗೊತ್ತು. ನಾನು ಇಂಧನ ಸಚಿವನಾಗಿದ್ದಾಗ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗಿದೆ. ಆಗ ಹೇಗಿತ್ತು ಇತಿಹಾಸ ತೆಗೆದು ನೋಡಿ ಎಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಾಗ್ದಾಳಿ ನಡೆಸಿದ್ದಾರೆ.

ನಾನು ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲು ಬದ್ಧನಾಗಿದ್ದೇನೆ. ಯಾವ ತನಿಖೆ ಬೇಕಾದ್ರೂ ಮಾಡಲಿ, ಎಲ್ಲಾ ತನಿಖೆಗೂ ಸಿದ್ಧನಿದ್ದೇನೆ. ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇನೆ. ಇದರಲ್ಲಿ ಶೇ 0.1 ಏನಾದ್ರೂ ಹೆಚ್ಚಿ ಕಮ್ಮಿ ಮಾಡಿದ್ರೆ ಅದರಲ್ಲಿ ನಾನು ಹೊಣೆ ಹೊತ್ತುಕೊಳ್ಳಲು ಬದ್ಧನಾಗಿದ್ದೇನೆ ಎಂದು ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಪ್ರಮೋದ್ ಮಧ್ಚರಾಜ್ ಪಕ್ಷ ಬಿಟ್ಟರೂ ಕಾರ್ಯಕರ್ತರು ಜಗ್ಗಲಿಲ್ಲ. ಉಡುಪಿ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ರಾಜ್ಯ ಕಾಂಗ್ರೆಸ್, ಕಾರ್ಯಕರ್ತರ ಜೊತೆಗಿದೆ. ಮುಂದೆ ಯಾರನ್ನು ಚುನಾವಣಾ ಕಣಕ್ಕೆ ಇಳಿಸಲಿದೆ ಎಂದು ಶೀಘ್ರದಲ್ಲೇ ಗೊತ್ತಾಗುತ್ತೆ. ನಾಯಕರು ಪ್ರಪೋಸಲ್ ನನಗೆ ನೀಡಲಿದ್ದಾರೆ. ನಾವೆಲ್ಲ ಕೂತು ಉಡುಪಿ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ‌ ನಿರ್ಧರಿಸಲಿದ್ದೇವೆ. ಪ್ರಮೋದ್ ಮಧ್ಚರಾಜ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಮುಂದಿನ ದಿನದಲ್ಲಿ ಪ್ರಮೋದ್ ಪಶ್ಚಾತಾಪ ಪಡುತ್ತಾರೆ. ಪ್ರಮೋದ್ ಹಾಗೂ ಅವರ ಕುಟುಂಬಕ್ಕೆ ಪಕ್ಷ ಎಲ್ಲವನ್ನ ಕೊಟ್ಟಿತ್ತು. ಪ್ರಮೋದ್ ನನ್ನ ಪಕ್ಕದಲ್ಲಿ ಕುಳಿತುಕೊಳ್ತಿದ್ರು ಈಗ ಕೆಳಗೆ ಕುಳಿತುಕೊಳ್ಳುವಂತಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ರು. ಇದನ್ನೂ ಓದಿ: ವಾಸ್ತುಶಾಸ್ತ್ರ-ವಾಸ್ತುಶಿಲ್ಪ ಆಧಾರದಲ್ಲಿ ದೇಗುಲಗಳ ಕುರುಹು ಪತ್ತೆಹಚ್ಚಬಹುದಾಗಿದೆ! ಹಾಗಾದರೆ ಮಸೀದಿಗಳಲ್ಲಿನ ಹಿಂದೂ ವಾಸ್ತುಶಾಸ್ತ್ರ ಏನನ್ನು ಸೂಚಿಸುತ್ತದೆ? -ಟಿವಿ 9​ ಚರ್ಚೆ

ಫೋಟೋಗಳನ್ನ ನೋಡಿ‌ ಬೇಸರವಾಯಿತು ಆದಷ್ಟು ಬೇಗ ಪಶ್ಚಾತಾಪ ಪಡುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಬಹಳಷ್ಟು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ. ಬಹಳಷ್ಟು ಬಿಜೆಪಿ ಕಾರ್ಯಕರ್ತರು ಸದಸತ್ವ ತೆಗೆದುಕೊಂಡಿದ್ದಾರೆ. ಮುಂದೆ ವಿಶೇಷ ಮೆಂಬರ್ ಶಿಪ್ ಡ್ರೈವ್ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಮ್ಯಾ ಟ್ವೀಟ್ ಬಗ್ಗೆ ಡಿಕೆಶಿ ಹೇಳಿದ್ದೇನು? ಇನ್ನು ರಮ್ಯಾ ಡಿಕೆಶಿ ವಿರುದ್ದ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಡಿಕೆಶಿ, ರಮ್ಯಾ ಕುರಿತು ಸಾಫ್ಟ್ ಕಾರ್ನರ್ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದ ಹೆಣ್ಮಕ್ಕಳು ಆಕ್ಟಿವ್ ಆಗಿದ್ರೆ ಸಂತೋಷ. ಲೋಕಸಭಾ ಸದಸ್ಯೆಯಾಗಿ ಮಾಡಿದ್ವಿ. ಎರಡು ಬಾರಿ ಟಿಕೆಟ್ ಕೂಡ ಕೊಟ್ಟಿದ್ದೇವೆ, ರಮ್ಯಾ ಅವರಿಗೆ ಒಳ್ಳೆದಾಗಲಿ ಎಂದರು.

ಕರಾವಳಿಗೆ ಪ್ರತ್ಯೇಕ ಮ್ಯಾನಿಫೆಸ್ಟೋ ಕೊಡ್ತಿದ್ದೇವೆ. ಉದ್ಯೋಗ ಸೃಷ್ಟಿಗೆ ಕಾರ್ಯಕ್ರಮ‌ ರೂಪಿಸ್ತಾಯಿದ್ದೇವೆ. ಜನರು ವಲಸೆ ಹೋಗುವುದನ್ನ ತಡಿಬೇಕು. ಕರಾವಳಿಯ ಯುವಕರು ಕೆಲಸ ಕೊಡುವವರು ಹೊರತು‌ ಬೇರೆಯವರ ಕೆಳಗೆ ಕೆಲಸ ಮಾಡುವವರಲ್ಲ. ಹೀಗಾಗಿ ಉದ್ಯೋಗ ಸೃಷ್ಟಿ ಮಾಡಲು ಪ್ರತ್ಯೇಕ ಪ್ರಣಾಳಿಕೆ ಕರಾವಳಿಯಿಂದ ಕಾರವಾರದವರೆಗೂ ಬಿಡುಗಡೆ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಕಾಲೇಜಿನಲ್ಲಿ ಮಹಿಳಾ ಸಿಬ್ಬಂದಿಗಳ ಫೋನ್ ನಂಬರ್ ಲೀಕ್ ಆರೋಪ; ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ತಹಶೀಲ್ದಾರ್

ಸಚಿವ ಎಸ್ಟಿ ಸೋಮಶೇಖರ್ ಆಪರೇಶನ್ ಕಮಲ‌ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಸೋಮಶೇಖರ್ ಉತ್ಸಾಹದಿಂದ ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗಿದ್ದಾರೆ. ಅವರು ಪಕ್ಷದ ವಿಚಾರ ಹೇಳಿಕೊಂಡ್ರೆ ನನಗೆ ಸಂಬಂಧ ಇಲ್ಲ. ಜಿಟಿ ದೇವೇಗೌಡ ಹಿಂದೆ ಏನು ಮಾತಾಡಿದ್ರು ಮುಂದೆ ಏನು ಮಾತಾಡ್ತಾರೆ ಕಾದು ನೋಡೋಣ. ಜಿಟಿ ದೇವೇಗೌಡ ಕುಟುಂಬದಲ್ಲಿ ಅನ್ಯಾಯ ಆಗಿದೆ. ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ರಾಜಕಾರಣ ಸದ್ಯಕ್ಕೆ ಬೇಡ ಎಂದರು.

Published On - 4:26 pm, Fri, 20 May 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ