ಬಿರುಬಿಸಿಲಿನ ಮಧ್ಯೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರೋ 9 ವರ್ಷದ ಬಾಲಕಿ
ಲೋಕಸಭಾ ಚುನವಾಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗ ಕೊಟ್ಯಾಂತರ ರುಪಾಯಿ ಖರ್ಚು ಮಾಡಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಆದ್ರೆ, ಒಂಬತ್ತು ವರ್ಷದ ಬಾಲಕಿಯೊಬ್ಬಳು ಉಚಿತವಾಗಿ ಹಳ್ಳಿ ಹಳ್ಳಿ ಸುತ್ತಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ
ಉತ್ತರ ಕನ್ನಡ, ಏ.13: ಪ್ರಜಾ ಪ್ರಭುತ್ವದ ದೊಡ್ಡ ಹಬ್ಬ ಲೋಕಸಭೆಯ ಮತದಾನಕ್ಕೆ(Voting) ಮಹೂರ್ತ ಫಿಕ್ಸ್ ಆಗಿದೆ. ರಾಜಕೀಯ ಪಕ್ಷಗಳು ಗೆಲುವು ಸಾಧಿಸಲು ತನ್ನದೆ ಆದ ರೀತಿಯಲ್ಲಿ ಹರಸಾಹಸ ಪಡುತ್ತಿವೆ. ಇನ್ನೊಂದು ಕಡೆ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡು ಪ್ರಜಾಪ್ರಭುತ್ವದ ಬೆಲೆ ಹೆಚ್ಚಿಸಬೇಕೆಂಬ ಸದುದ್ದೇಶದಿಂದ ಜಾಹಿರಾತು, ಬಿದಿ ನಾಟಕ, ಶಾರ್ಟ್ ಫಿಲ್ಮ್ ಹೀಗೆ ಬೇರೆ ಬೇರೆ ರೀತಿ ಮೂಲಕ ಜನರಲ್ಲಿ ಅರಿವು ಮೂಡಿಸಲು ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಿ ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ. ಆದ್ರೆ, ಒಂಬತ್ತು ವರ್ಷದ ಬಾಲಕಿಯೊಬ್ಬಳು ಎಲ್ಲರಿಗೂ ಮಾದರಿ ಆಗಿದ್ದಾಳೆ. ಹೌದು, ಮಂಗಳೂರು(Mangalore) ಜಿಲ್ಲೆಯ ಬಂಟ್ವಾಳದ ನಾಲ್ಕನೆ ತರಗತಿಯ ಸನ್ನಿಧಿ ಎಂಬ ಬಾಲಕಿ, ತನ್ನ ರಜಾ ದಿನಗಳಲ್ಲಿ ಕರಾವಳಿ ಭಾಗದ ಹಳ್ಳಿ ಹಳ್ಳಿಗಳಿಗೆ ತರೆಳಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾಳೆ.
ಪಂಚ ಭಾಷೆಗಳಲ್ಲಿ ನಿರ್ಗಳವಾಗಿ ಮಾತನಾಡಬಲ್ಲ ಬಾಲಕಿ
ಒಟ್ಟು ಐದು ಭಾಷೆಗಳನ್ನು ನಿರ್ಗಳವಾಗಿ ಮಾತನಾಡಬಲ್ಲ ಇವರು, ಮಂಗಳೂರು, ಕಾರವಾರ, ಕೇರಳ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿನ ಜಾತ್ರೆ, ಸಂತೆ ಹಾಗೂ ದೊಡ್ಡ ದೊಡ್ಡ ಮಾರುಕಟ್ಟೆಗೆ ತೆರಳಿ ಮತದಾನದ ಬಗ್ಗೆ ಹಾಡು ಹಾಗೂ ಡೈಲಾಗ್ ಹೊಡೆಯುವುದರ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ.
ಇದನ್ನೂ ಓದಿ:ಚೆನ್ನೈ: ಸಮುದ್ರದಾಳದಲ್ಲಿ ಸ್ಕೂಬಾ ಡೈವರ್ಗಳಿಂದ ಮತದಾನದ ಬಗ್ಗೆ ವಿಶಿಷ್ಟ ಜಾಗೃತಿ ಅಭಿಯಾನ
ಈ ಬಾಲಕಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರೇರಣೆ ಆಗಿದ್ದು, ಅವರ ತಂದೆ-ತಾಯಿ. ಹೌದು, ಇಷ್ಟು ಚಿಕ್ಕ ವಯಸ್ಸಿನಲ್ಲಿ ರಜಾ ದಿನಗಳನ್ನು ಆಟ ಆಡುತ್ತಾ ಕಳೆಯುವುದನ್ನ ಬಿಟ್ಟು, ರಣ ಬಿಸಲಿನಲ್ಲಿ ಹಳ್ಳಿ ಹಳ್ಳಿ ಸುತ್ತಿ, ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿರುವ ಈಕೆಯ ಜೊತೆ ತಂದೆ-ತಾಯಿ ಕೂಡ ಸುತ್ತಾಡುತ್ತಾ ಇವಳಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಇದೆ ರೀತಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದಕ್ಕೆ ಚುನಾವಣಾ ಆಯೋಗ ಪ್ರಶಂಸಿಸಿ, ಕಾರ್ಯ ಮುಂದುವರೆಸುವಂತೆ ಮನವಿ ಮಾಡಿತ್ತು.
ಒಟ್ಟಾರೆಯಾಗಿ ಕಲೆ ಎಂಬುವುದು ದೇವರ ಕೊಡುಗೆ ಇಂದ್ದಂತೆ. ಕಲೆಯನ್ನ ಒಳ್ಳೆಯ ವಿಚಾರಕ್ಕೆ ನಿಸ್ವಾರ್ಥದಿಂದ ಬಳಸುವವರು ಬಹಳ ವಿರಳ ಇಂತಹ ಸಂದರ್ಭದಲ್ಲಿ ದೇಶದ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿ ಮಾಡಲು. ಒಂಬತ್ತು ವರ್ಷದ ಸನ್ನಿಧಿ ಮಾಡುತ್ತಿರುವ ಪ್ರಯತ್ನ ನಿಜಕ್ಕೂ ಪ್ರಂಶಸನೀಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ