AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ: ಆತನನ್ನು ಬಿಟ್ಟಿರಲಾರೆಂದು ಯುವಕನ ಮನೆ ಮುಂದೆ ಯುವತಿ ಧರಣಿ

ಪ್ರೀತಿ ಪ್ರೇಮದ ಹೆಸರಿನಲ್ಲಿ ಒಂದು ವರ್ಷದಿಂದ ಜೊತೆಗಿದ್ದ ಯುವಕ ವಿವಾಹವಾಗು ಎಂದಾಗ ಟೈಮ್​ಪಾಸ್​ ಲವ್ ಎಂದು ಕೈಕೊಟ್ಟಿರುವಂತಹ ಘಟನೆ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ನಡೆದಿದೆ.

ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ: ಆತನನ್ನು ಬಿಟ್ಟಿರಲಾರೆಂದು ಯುವಕನ ಮನೆ ಮುಂದೆ ಯುವತಿ ಧರಣಿ
ಪ್ರೀತಿಸಿ ಕೈಕೊಟ್ಟ ಯುವಕ, ಯುವತಿ ಗಿರಿಜಾ
ಗಂಗಾಧರ​ ಬ. ಸಾಬೋಜಿ
|

Updated on:May 16, 2023 | 10:05 PM

Share

ಕಾರವಾರ: ಪ್ರೀತಿ ಪ್ರೇಮದ (love) ಹೆಸರಿನಲ್ಲಿ ಒಂದು ವರ್ಷದಿಂದ ಜೊತೆಗಿದ್ದ ಯುವಕ (lover) ವಿವಾಹವಾಗು ಎಂದಾಗ ಟೈಮ್​ಪಾಸ್​ ಲವ್ ಎಂದು ಕೈಕೊಟ್ಟಿರುವಂತಹ ಘಟನೆ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ನಡೆದಿದೆ. ಹಿರೇಕೆರೂರು ತಾಲೂಕಿನ ಕಾಂಡೇಬಾಗೂರ್ ಗ್ರಾಮದ ಗಿರಿಜಾ ಪರಮೇಶ್ ಲಮಾಣಿ (19) ಎಂಬಾಕೆ ಮೋಸಗೊಳಗಾದ ಯುವತಿ. ಪ್ರಸಾದ್ ಪ್ರಕಾಶ್ ಕಲಾಲ್ ಬದಂಕರ್ (22) ಮೋಸ ಮಾಡಿದ ಯುವಕ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ತರಬೇತಿಗೆ ತೆರಳಿದ್ದಾಗ ಪರಿಚಯವಾಗಿದ್ದು, ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಅಷ್ಟೇ ಅಲ್ಲದೇ ಜತೆಯಲ್ಲೇ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಲ್ಲಿ ಒಂದೇ ರೂಂನಲ್ಲಿದ್ದರು. ಸದ್ಯ ಇವರಿಬ್ಬರ ಪ್ರೇಮ ಮದುವೆಯ ವಿಚಾರಕ್ಕೆ ಬಂದಾಗ ಟೈಮ್‌ಪಾಸ್ ಅಂತಾ ಯುವಕ ದೂರವಾಗಿದ್ದಾನೆ.

ಪ್ರೀತಿಸಿದ ಯುವಕನನ್ನು ಬಿಟ್ಟು ಇರಲಾರೆ. ಪ್ರಸಾದ್ ಜತೆ ಮದುವೆ ಮಾಡಿಸಿಕೊಡಿ ಎಂದು ಮುಂಡಗೋಡ ತಾಲೂಕಿನ ಮೈನಳ್ಳಿಗೆ ಬಂದಿದ್ದಾಳೆ. ಆತನನ್ನು ಹುಡುಕಿಕೊಂಡು ಮುಂಡಗೋಡ ಪೊಲೀಸ್ ಠಾಣೆಗೆ ತೆರಳಿದ್ದ ಗಿರಿಜಾಗೆ ಪೊಲೀಸರು ಬುದ್ಧಿವಾದ ಹೇಳಿ ವಾಪಸ್ ಕಳುಹಿಸಿದ್ದಾರೆ. ಪೊಲೀಸರಿಂದ‌ ಯಾವುದೇ ನ್ಯಾಯ ದೊರೆಯದಿದ್ದಾಗ ಯುವಕನ ಮನೆಯ ಮುಂದೆಯೇ ಯುವತಿ ಧರಣಿ ಮಾಡಿದ್ದಾಳೆ.

ಇದನ್ನೂ ಓದಿ: ಹಾರುತ್ತಿದ್ದ ವಿಮಾನದಲ್ಲಿ ಧೂಮಪಾನ ಮಾಡಿದ ಪ್ರಯಾಣಿಕ: ಕೆಂಪೇಗೌಡ ಏರ್ಪೋಟ್ ಪೊಲೀಸರಿಂದ ಬಂಧನ

ಪ್ರಸಾದ್ ನಿವಾಸದ ಎದುರು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿರುವ ಗಿರಿಜಾಗೆ ಸ್ಥಳೀಯರು ಉಪಹಾರ, ಊಟ, ಮಲಗಲು ಜಾಗ ನೀಡಿದ್ದಾರೆ.

ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಗಂಡನಿಂದ ದೂರು

ಮಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ 20 ವರ್ಷದ ವಿವಾಹಿತ ಮಹಿಳೆಗೆ ಉದ್ಯಮಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು  ಆರೋಪ ಕೇಳಿಬಂದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಘಟನೆ ನಡೆದಿದೆ. ಮಹಾವೀರ ಟೆಕ್ಸ್ ಟೈಲ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಪ್ರಭಾಕರ ಹೆಗ್ಡೆ ವಿರುದ್ಧ ಮೈಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಾಯಿ ಜಮೀನಿಗೆ ಬಂತೆಂದು ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದಾಯಾದಿಗಳು!

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಆಕೆಯ ಗಂಡನಿಂದ ದೂರು ನೀಡಲಾಗಿದೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾರೆ. ಉದ್ಯಮಿ ತನ್ನ ಕಾರಿನಲ್ಲಿ ಕಿರುಕುಳ ನೀಡುವಾಗ ಯುವತಿ ಕಿರುಚಾಡಿ ಕಾರಿನಿಂದ ಹೊರಬಂದಿದ್ದಾರೆ.

ಬೈಕ್​ನಲ್ಲಿ ಬಂದ ಯುವಕರಿಂದ ಮಹಿಳೆಯ ರಕ್ಷಣೆ ಮಾಡಲಾಗಿದೆ. ತನ್ನ ಸೂಪರ್ ಮಾರ್ಕೇಟ್​ನ ಬಿಲ್ಲಿಂಗ್ ತೋರಿಸೋದಾಗಿ ಕಾರಿನಲ್ಲಿ ಕರೆದೊಯ್ದು ಕಿಡ್ನಾಪ್ ಆರೋಪ ಸಹ ಮಹಿಳೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:55 pm, Tue, 16 May 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್