ನೂರಾರು ಜೀವ ಉಳಿಸಿದ್ದ ವೈದ್ಯನಿಗೆ ಸಿಗಲಿಲ್ಲ ಚಿಕಿತ್ಸೆ; ಡಾಕ್ಟರ್ ದುರಂತ ಸಾವು

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡಿಗ್ಗಿ ಕೂಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಓರ್ವ ವೈದ್ಯ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಚಿಕಿತ್ಸೆಗಾಗಿ ತೆರಳುತ್ತಿದ್ದಾಗ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ. ತಮ್ಮ ಕೆಲಸದಿಂದ ಇಡೀ ಡಿಗ್ಗಿ ಗ್ರಾಮದಲ್ಲಿ ವೈದ್ಯ ಸಾಕಷ್ಟು ಪ್ರಶಂಸೆ ಗಳಿಸಿದ್ದರು.

ನೂರಾರು ಜೀವ ಉಳಿಸಿದ್ದ ವೈದ್ಯನಿಗೆ ಸಿಗಲಿಲ್ಲ ಚಿಕಿತ್ಸೆ; ಡಾಕ್ಟರ್ ದುರಂತ ಸಾವು
ಡಾ.ಲೆನ್ವರ್ ಲೋಬೋ
Image Credit source: tv9 kannada
Edited By:

Updated on: May 03, 2026 | 3:21 PM

ಕಾರವಾರ, ಮೇ 03: ನೂರಾರು ರೋಗಿಗಳ ಜೀವ ಉಳಿಸಿದ್ದ ವೈದ್ಯರೊಬ್ಬರು (doctor) ಕೊನೆಗಳಿಗೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ತಿವ್ರ ಎದೆ ನೋವಿನಿಂದ ಅಸುನೀಗಿರುವ (death) ಹೃದಯವಿದ್ರಾವಕ ಘಟನೆ ಕರ್ನಾಟಕ ಗೋವಾ ಗಡಿಯಲ್ಲಿರುವ ಡಿಗ್ಗಿ ಎಂಬ ಗ್ರಾಮದಲ್ಲಿ ನಡೆದಿದೆ. ಡಾ.ಲೆನ್ವರ್ ಲೋಬೋ ಮೃತ ವೈದ್ಯ. ಸದ್ಯ ಇಡೀ ಡಿಗ್ಗಿ ಗ್ರಾಮವೇ ಡಾ. ಲೋಬೋ ಮರಣ ಹಿನ್ನೆಲೆ ಕಂಬನಿ ಮಿಡಿದಿದೆ.

ನಡೆದಿದ್ದೇನು?

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡಿಗ್ಗಿ ಕೂಗ್ರಾಮ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಈ ಡಿಗ್ಗಿ ಗ್ರಾಮಕ್ಕೆ ಹೋಗಲು ಕೆಲವರು ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಕಳೆದ ಮೂರು ವರ್ಷಗಳಿಂದ ಡಾ.ಲೆನ್ವರ್ ಲೋಬೋ ಕೆಲಸ ಮಾಡುತ್ತಿದ್ದರು. ಶಿರಸಿಯ ಸ್ಕೋಡಾ ವೇಸ್ ಸಂಸ್ಥೆ ಕರಾರಿನ ಮೇಲೆ ಗ್ರಾಮದಲ್ಲಿ ಆಸ್ಪತ್ರೆ ನಡೆಸುತಿತ್ತು. ಚಿಕಿತ್ಸೆ ಪಡೆಯಲು ಗೋವಾ ರಾಜ್ಯದ ಕೂಗ್ರಾಮದಿಂದ ಜನರು ಬರುತ್ತಿದ್ದರು. ಡಾ.ಲೋಬೋ ಚಿಕಿತ್ಸೆಯಿಂದ ಅದೆಷ್ಟೋ ಜನರು ಗುಣಮುಖರಾಗಿದ್ದಾರೆ. ಅವರ ಕಾರ್ಯಕ್ಕೆ ಇಡೀ ಡಿಗ್ಗಿ ಗ್ರಾಮಕ್ಕೆ ಗ್ರಾಮವೇ ಶ್ಲಾಘಿಸುತ್ತಿತ್ತು. ಆದರೆ ದುರ್ವಿದಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: 13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ರಾತ್ರಿ ವೇಳೆ ವೈದ್ಯ ಲೋಬೋ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆದರೆ ಆಸ್ಪತ್ರೆಗೆ ಹೋಗಲು ವಾಹನ ಹಾಗೂ ಮೊಬೈಲ್ ನೆಟವರ್ಕ್ ಕೂಡ ಇರಲಿಲ್ಲ. ಹೀಗಾಗಿ ಬೆಳಗಿನ ಜಾವ ವಾಹನ ತರಿಸಿಕೊಂಡು ಜೋಯಿಡಾ ಕಡೆಗೆ ಹೊರಟ್ಟಿದ್ದರು. ಈ ವೇಳೆ ಎದೆನೋವು ಮತ್ತಷ್ಟು ಹೆಚ್ಚಳವಾಗಿ ಸೂಕ್ತ ಚಿಕಿತ್ಸೆ ಸಿಗದೇ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ವ್ಯಕ್ತಿ ಸಾವು

ಚಿತ್ರದುರ್ಗ ಜಿಲ್ಲೆಯ ಜಗಳೂರು ಮೂಲದ ವ್ಯಕ್ತಿ ಬಿಸಿಲಿನ ತಾಪಕ್ಕೆ ಕುಸಿದುಬಿದ್ದು ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಐಎಂ ಫಯಾಜ್(45) ಮೃತ ವ್ಯಕ್ತಿ. ಜಗಳೂರಿನ ನಿವೃತ್ತ ಶಿಕ್ಷಕ ಇಬ್ರಾಹಿಂ ಸಾಬ್ ಅವರ ಪುತ್ರ ಫಯಾಜ್. ಟಿವಿ9ಗೆ ಮೃತ ಐಎಂ ಫಯಾಜ್ ಕುಟುಂಬ ಸದಸ್ಯರಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ಫಯಾಜ್ ಕುಟುಂಬಸ್ಥರ ಜೊತೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿಯ ಗುಡಿಕಲ್​​ ದರ್ಗಾದ ಉರುಸ್​ಗೆ ತೆರಳಿದ್ದರು. ಉರುಸ್ ಮುಗಿಸಿಕೊಂಡು ವಾಪಸಾಗುವಾಗ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:18 pm, Sun, 3 May 26

Follow Us