ಪೊಲೀಸರ ಕೊರಳ ಪಟ್ಟಿ ಹಿಡಿದು ರಂಪಾಟ: ಜೀಪ್​​​​​​​ನಿಂದ ಇಳಿಯದ PSI ಸಸ್ಪೆಂಡ್, 8 ಜನ ಸಿಬ್ಬಂದಿ ಎತ್ತಂಗಡಿ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮಾಜಿ ರೌಡಿ ಶೀಟರ್ 'ಮಚ್ಚುಮಂಜ' ಎಂಬಾತ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರೂ ಆರು ಜನ ಪೊಲೀಸರು ಅಸಹಾಯಕರಾಗಿ ನಿಂತು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹೆಂಡತಿಯ ವಿಚ್ಛೇದನಕ್ಕೆ ಪೊಲೀಸರೇ ಕಾರಣ ಎಂಬ ಸಿಟ್ಟಿನಲ್ಲಿ ಈ ರೌಡಿ ಸಾರ್ವಜನಿಕವಾಗಿ ಆಟಾಟೋಪ ನಡೆಸಿದ್ದು, ಪೊಲೀಸರ ಈ ಅಸಹಾಯಕ ನಡೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಪಿಎಸ್​​​​​ಐ ಸಸ್ಪೆಂಡ್ ಆಗಿದ್ದಾರೆ.

ಪೊಲೀಸರ ಕೊರಳ ಪಟ್ಟಿ  ಹಿಡಿದು ರಂಪಾಟ: ಜೀಪ್​​​​​​​ನಿಂದ ಇಳಿಯದ PSI ಸಸ್ಪೆಂಡ್, 8 ಜನ ಸಿಬ್ಬಂದಿ ಎತ್ತಂಗಡಿ
Haliyala Psi
Edited By:

Updated on: Jun 17, 2026 | 8:05 PM

ಕಾರವಾರ, (ಜೂನ್ 17): ಜಿಲ್ಲೆಯ ಹಳಿಯಾಳದಲ್ಲಿ (haliyala) ಮಾಜಿ ರೌಡಿ ಶೀಟರ್ ‘ಮಚ್ಚುಮಂಜ’ ಎಂಬಾತ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಸಹ ಜೀಪ್​​​​​​​ನಲ್ಲೇ ಕುಳಿತು ನೋಡುತ್ತಿದ್ದ ಪಿಎಸ್​​​​ಐ ಸಸ್ಪೆಂಡ್ ಆಗಿದ್ದಾರೆ. ಸಾರ್ವಜನಿಕರ ಎದುರೇ ತಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಬೈಯುತ್ತಿದ್ದರೂ ಜೀಪಿನಿಂದ ಇಳಿಯದೇ ನೋಡುತ್ತ ಕುಳಿತ್ತಿದ್ದ ಹಳಿಯಾಳ PSI ಬಸವರಾಜ್ ಮಬನೂರ ಅವರನ್ನ ಅಮಾನತು ಮಾಡಿ ಉತ್ತರ ಕನ್ನಡ (Uttara Kannada) ಎಸ್ಪಿ ದೀಪನ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಹಳಿಯಾಳ ಪೊಲೀಸ್ ಠಾಣೆಯ 8 ಜನ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿದ್ದಾರೆ.

ಮುಖ್ಯಾಂಶಗಳು

  • ಉತ್ತರ ಕನ್ನಡದಲ್ಲಿ ಪೊಲೀಸರ ಮೇಲೆ ಮಾಜಿ ರೌಡಿ ದುರ್ವತನೆ ಪ್ರಕರಣ.
  •  ಹಳಿಯಾಳ PSI ಬಸವರಾಜ್ ಮಬನೂರ ಅಮಾನತು.
  • ಠಾಣೆಯ 8 ಜನ ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ.
  • ಉತ್ತರ ಕನ್ನಡ ಎಸ್ಪಿ ದೀಪನ್ ಆದೇಶ.
  • ಮಾಜಿ ರೌಡಿ ಸಿಬ್ಬಂದಿಗೆ ನಿಂದಿಸಿದ್ರು ಜೀಪ್ ನಿಂದ ಇಳಿಯದೇ ದುವರ್ತನೆ ತೋರಿದ್ದ PSI

ಜೀಪ್​​ನಿಂದ ಇಳಯದೇ ಪಿಎಸ್​​ಐ ದುವರ್ತನೆ

ನಡು ರಸ್ತೆಯಲ್ಲೇ ಮಾಜಿ ರೌಡಿ ಶೀಟರ್ ಮಚ್ ಮಂಜ ಎಣ್ಣೆ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ. ಗಲಾಟೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು. ಪೊಲೀಸರನ್ನು ಕಂಡು ಮತ್ತಷ್ಟು ಫುಲ್ ಗರಂ ಆಗಿದ್ದ ಮಂಜಾ, ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದ. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರು PSI ಬಸವರಾಜ್ ಸುಮ್ಮನೆ ಜೀಪಿನಲ್ಲೇ ಕುಳಿತ್ತಿದ್ದರು. ಈ ವಿಡಿಯೋ ಫುಲ್ ವೈರಲ್ ಅಗಿದ ಬೆನ್ನಲ್ಲೇ ಪಿಎಸ್​​ಐ ಬಸವರಾಜ್ ಮಬನೂರ ಅವರನ್ನ ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದನೆ

ಹಳಿಯಾಳ ನಗರದ ಮೌರ್ಯ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಭಾನುವಾರ ಕುಡಿದ ಅಮಲಿನಲ್ಲಿ ಮಾಜಿ  ರೌಡಿ ಶೀಟರ್ ‘ಮಚ್ಚುಮಂಜ’ ಎಂಬಾತ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರೂ ಆರು ಜನ ಪೊಲೀಸರು ಅಸಹಾಯಕರಾಗಿ ನಿಂತು ನೋಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹೆಂಡತಿಯ ವಿಚ್ಛೇದನಕ್ಕೆ ಪೊಲೀಸರೇ ಕಾರಣ ಎಂಬ ಸಿಟ್ಟಿನಲ್ಲಿ ಈ ರೌಡಿ ಸಾರ್ವಜನಿಕವಾಗಿ ಆಟಾಟೋಪ ನಡೆಸಿದ್ದು, ಪೊಲೀಸರ ಈ ಅಸಹಾಯಕ ನಡೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಿಎಂ ಆಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಪೊಲೀಸ್ ಇಲಾಖೆಗೆ ಸೂಚನೆಗಳನ್ನ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ರೌಡಿಸಂ ನಿಯಂತ್ರಣಕ್ಕೆ ಸ್ಕ್ವಾಡ್ ರಚಿಸುವಂತೆ ಹೇಳಿದ್ದರು. ಅದರಂತೆ ಇದೀಗ ರಾಜ್ಯಾದಾದ್ಯಂತ ರೌಡಿಸಂ ನಿಯಂತ್ರಣಕ್ಕೆ ಗೃಹ ಇಲಾಖೆ ಹೊಸ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮಾಜಿ ರೌಡಿಶೀಟರ್ ಮಂಜುನ ಹುಚ್ಚಾಟ ವಿಡಿಯೋ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us