ಇಸ್ರೇಲ್ ಉದ್ಯಮಿ ಜೊತೆ ಸಂಬಂಧ, ಗೋವಾ ಗುಹೆಯಲ್ಲಿ ಹೆರಿಗೆ; ಗೋಕರ್ಣ ಗುಹೆಯಲ್ಲಿದ್ದ ರಷ್ಯಾದ ಮಹಿಳೆಯ ಕತೆಯಿದು

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಗೋಕರ್ಣ ಬಳಿಯ ರಾಮತೀರ್ಥ ಗುಹೆಯೊಳಗೆ ಮಕ್ಕಳ ಜೊತೆ ವಾಸಿಸುತ್ತಿದ್ದ ರಷ್ಯಾದ ಮಹಿಳೆ ಇಸ್ರೇಲಿ ಉದ್ಯಮಿಯ ಜೊತೆ ಲಿವ್ ಇನ್ ರಿಲೇಷನ್​​ಶಿಪ್​ನಲ್ಲಿದ್ದರು. ಆಕೆ ಗೋವಾದ ಗುಹೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು ಎಂಬ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಕರ್ನಾಟಕದ ಗೋಕರ್ಣದ ಗುಹೆಯಲ್ಲಿ ವಾಸಿಸುತ್ತಿದ್ದ ರಷ್ಯಾದ ಮಹಿಳೆ ನೈನಾ ಕುಟಿನಾ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಪತ್ತೆಯಾಗಿದ್ದರು. ಇದು ತೀವ್ರ ಅಚ್ಚರಿಗೆ ಕಾರಣವಾಗಿತ್ತು. ನೈಸರ್ಗಿಕ ಜೀವನ ನಡೆಸುವ ಸಲುವಾಗಿ ಗುಹೆಯಲ್ಲಿದ್ದೆವು ಎಂದು ಆಕೆ ಹೇಳಿಕೊಂಡಿದ್ದರು.

ಇಸ್ರೇಲ್ ಉದ್ಯಮಿ ಜೊತೆ ಸಂಬಂಧ, ಗೋವಾ ಗುಹೆಯಲ್ಲಿ ಹೆರಿಗೆ; ಗೋಕರ್ಣ ಗುಹೆಯಲ್ಲಿದ್ದ ರಷ್ಯಾದ ಮಹಿಳೆಯ ಕತೆಯಿದು
Nina Kutina

Updated on: Jul 16, 2025 | 3:28 PM

ಬೆಂಗಳೂರು, ಜುಲೈ 16: ಕಳೆದ ವಾರ ಕರ್ನಾಟಕದ ಉತ್ತರ ಕನ್ನಡದ ಗೋಕರ್ಣದ ಬಳಿಯ ರಾಮತೀರ್ಥ ಗುಹೆಯಲ್ಲಿ (Gokarna Cave) ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಪತ್ತೆಯಾದ ರಷ್ಯಾದ ಮಹಿಳೆ ನೈನಾ ಕುಟಿನಾ ಈ ಹಿಂದೆ ಗೋವಾದ ಗುಹೆಯಲ್ಲಿದ್ದಾಗ ತಾನು ಮಗಳಿಗೆ ಜನ್ಮ ನೀಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಇಸ್ರೇಲಿ ಉದ್ಯಮಿಯೊಬ್ಬರು ತಮ್ಮ ಮಕ್ಕಳ ತಂದೆ ಎಂದು ಆಕೆ ತಿಳಿಸಿದ್ದಾರೆ. ಆಕೆಯ ಹೇಳಿಕೆಯ ನಂತರ ಆ ಇಸ್ರೇಲಿ ವ್ಯಕ್ತಿಯನ್ನು ಸಂಪರ್ಕಿಸಲಾಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಗುಹೆಯಲ್ಲಿ ವಾಸವಾಗಿದ್ದ ನೈನಾ ಮತ್ತು ಅವರ 6 ಹಾಗೂ 4 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಜುಲೈ 9ರಂದು ಪೊಲೀಸ್ ಗಸ್ತು ತಿರುಗುವಿಕೆಯ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಳಿಯ ಗುಹೆಯಿಂದ ರಕ್ಷಿಸಲಾಗಿತ್ತು. ಇದಾದ ನಂತರ ಈ ಘಟನೆಗೆ ಹೊಸ ತಿರುವು ಸಿಕ್ಕತೊಡಗಿದೆ. ಅವರ ವೀಸಾ ಅವಧಿ 2017ರಲ್ಲಿ ಮುಗಿದಿದೆ, ಅವರನ್ನು ತುಮಕೂರಿನ ಕೇಂದ್ರವೊಂದರಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಹಾವುಗಳು ನಮ್ಮ ಸ್ನೇಹಿತರಾಗಿದ್ದವು; ಕುಮಟಾದ ಗುಹೆಯಲ್ಲಿದ್ದ ರಷ್ಯನ್ ಮಹಿಳೆ ಸಮರ್ಥನೆ

ಇದನ್ನೂ ಓದಿ
ತಾನೇ ಸಲಹೆ ಕೊಟ್ಟು ಒಡಹುಟ್ಟಿದ ಅಕ್ಕನಿಗೆ ಮೋಸ ಮಾಡಿದ ತಮ್ಮ
ನೈಸರ್ಗಿಕ ಜೀವನ ಎಂಜಾಯ್ ಮಾಡುತ್ತಿದ್ದೆವು; ರಷ್ಯನ್ ಮಹಿಳೆ ಸಮರ್ಥನೆ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ಭಾರತದ ಈ ವಿಚಾರಗಳು ರಷ್ಯಾದ ಮಹಿಳೆಗೆ ಇಷ್ಟವಂತೆ

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ (FRRO) ಅಧಿಕಾರಿಯೊಬ್ಬರು ಈ ಬಗ್ಗೆ ತಿಳಿಸಿದ್ದು, ಅವರ ಮಕ್ಕಳ ತಂದೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ. ಅವರು ಇಸ್ರೇಲ್‌ನಿಂದ ಬಂದವರು ಮತ್ತು ಪ್ರಸ್ತುತ ಭಾರತದಲ್ಲಿ ವ್ಯಾಪಾರ ವೀಸಾದಲ್ಲಿದ್ದಾರೆ ಎಂದಿದ್ದಾರೆ. 40ರ ಹರೆಯದ ಇಸ್ರೇಲಿ ವ್ಯಕ್ತಿ ಬಹಳ ಹಿಂದೆಯೇ ನೈನಾ ಅವರನ್ನು ಭೇಟಿಯಾಗಿದ್ದರು. ಅದಾದ ನಂತರ ಇಬ್ಬರ ಮಧ್ಯೆ ಪ್ರೀತಿ ಉಂಟಾಗಿತ್ತು. ಅವರೇ ನೈನಾ ಜೊತೆಗಿದ್ದ ಮಕ್ಕಳ ತಂದೆ. ಅವರು ಬಟ್ಟೆ ಬ್ಯುಸಿನೆಸ್ ಮಾಡುತ್ತಿದ್ದಾರೆ. ನಾವು ಅವರನ್ನು ಭೇಟಿಯಾಗಿದ್ದೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೈನಾ ಸುದ್ದಿ ಸಂಸ್ಥೆ ANIಗೆ ನೀಡಿರುವ ಮಾಹಿತಿಯಲ್ಲಿ ತಮ್ಮ ಮೊದಲ ಮಗ ಬಹಳ ಹಿಂದೆಯೇ ಮೃತಪಟ್ಟಿದ್ದ. ಆತನ ಅಸ್ತಿಯನ್ನು ನಾನು ತೆಗೆದುಕೊಂಡು ಬಂದಿದ್ದೇನೆ. ನಾನು ಆಧ್ಯಾತ್ಮಿಕತೆಗಾಗಿ ಗೋಕರ್ಣಕ್ಕೆ ಬಂದಿಲ್ಲ, ಪ್ರಕೃತಿ ಉತ್ತಮ ಆರೋಗ್ಯವನ್ನು ನೀಡುತ್ತದೆ ಎಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೇವೆ” ಎಂದು ಹೇಳಿದ್ದರು.

ಇದನ್ನೂ ಓದಿ: ಕುಮಟಾ ಬಳಿಯ ಗುಹೆಯೊಳಗೆ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ

ನೈನಾಗೆ ಆರಂಭದಲ್ಲಿ ತನ್ನ ಹೆಣ್ಣುಮಕ್ಕಳ ತಂದೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಇಷ್ಟವಿರಲಿಲ್ಲ. ಆದರೆ, ನಂತರ ಅವರು ಕೌನ್ಸಿಲಿಂಗ್ ವೇಳೆ ತಮ್ಮ ಭಾವನೆಗಳನ್ನು ತೆರೆದು, ತಾನು ವ್ಯಕ್ತಿಯೊಬ್ಬನ ಜೊತೆ ಸಂಬಂಧ ಹೊಂದಿರುವುದಾಗಿ ಹೇಳಿದ್ದು, ಆ ವ್ಯಕ್ತಿಯ ವಿವರಗಳನ್ನು ಬಹಿರಂಗಪಡಿಸಿದರು. “ನೈನಾ ಅವರಿಗೆ ರಷ್ಯಾದಲ್ಲಿ ಮತ್ತೊಂದು ಮಗುವಿದೆ. ನಾವು ಚೆನ್ನೈನಲ್ಲಿರುವ ರಷ್ಯಾದ ಕಾನ್ಸುಲ್ ಜನರಲ್‌ಗೆ ಮಾಹಿತಿ ನೀಡಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ, ರಷ್ಯಾದ ಮಹಿಳೆ ನೈನಾ ಬಗ್ಗೆ ದಿನಕ್ಕೊಂದು ಹೊಸ ಮಾಹಿತಿಗಳು ಹೊರಬೀಳುತ್ತಿವೆ.

ಕರ್ನಾಟಕದ  ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ