AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲಾಕರ್ ಭಟ್ ಮಾತ್ರವಲ್ಲ, ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ

ಕಲರ್​​ಫುಲ್​ ರೀಲ್ಸ್​ ಮಾಡಿಕೊಂಡು ಸಂಸಾರದಿಂದ ದೂರವಾಗಿ ನೌಟಂಕಿ ಆಡುತ್ತಿದ್ದ ಕಲಾಕರ್​ ಸುಚಿತ್ರಾ ಕಥೆಗಳೇ ಬೆಚ್ಚಿ ಬೀಳಿಸುವಂತಿವೆ. ಗಂಡ, ಮಕ್ಕಳಿಗಿಂತ ಜ್ಯೋತಿಷಿ ಕಮಲಾಕರ್​ನೇ ಹೆಚ್ಚು ಅಂತಿದ್ದವಳಿಗೆ ಒಬ್ಬಿಬ್ಬರ ಸಹವಾಸ ಇರಲಿಲ್ವಂತೆ. ಸುಚಿತ್ರಾ ಮೊಬೈಲ್​ ಇಣಕಿದ ಪೊಲೀಸರಿಗೆ ಆಕೆಯ ಸಂಪರ್ಕ ಕ್ರಾಂತಿಯೇ ಅನಾವರಣ ಆಗಿವೆ. ಹೌದು.. ಕಲಬುರಗಿಯ ಜಮೀನ್ದಾರನ ಜೊತೆ ಸುಚಿತ್ರಾ ಲವ್ ರಿಲೇಷನ್ ಬಟಾಬಯಲಾಗಿದೆ.

ಕಮಲಾಕರ್ ಭಟ್ ಮಾತ್ರವಲ್ಲ, ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ
Suchitra, Bhat, Sharanabasappa
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Feb 08, 2026 | 6:52 PM

Share

ಕಾರವಾರ, (ಫೆಬ್ರವರಿ 06): ಸಿದ್ದಾಪುರ ವಸಂತ್ ನಾಯ್ಕ್​ ಕೊಲೆ ಪ್ರಕರಣದಲ್ಲಿ (Siddapur murder Case) ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಪ್ರೇಯಸಿ ಸುಚಿತ್ರಾ ಜೈಲು ಸೇರಿದ್ದು, ಇದರ ಬೆನ್ನಲ್ಲೇ ಸುಚಿತ್ರಾ ಮತ್ತು ಜ್ಯೋತಿಷಿಯ ಅನೈತಿಕ ಸಂಬಂಧದ ಬಗ್ಗೆ ಒಂದಾಂದಾಗಿ ಸಾಕ್ಷಿಗಳು ಹೊರಬರುತ್ತಿವೆ. ಇಬ್ಬರು ಮಾತನಾಡಿದ್ದಾರೆ ಎನ್ನಲಾದ ರಾಸಲೀಲೆ ಆಡಿಯೋ ರಿಲೀಸ್ ಆಗಿರುವುದು ಒಂದೇಡೆ ಆಗಿದ್ರೆ, ಇನ್ನೊಂದೆಡೆ ಸುಚಿತ್ರಾಳ ಇನ್ಸ್ಠಾ ಬಯೋ ಅನುಮಾನ ಹೆಚ್ಚಿಸಿದೆ. ಇದರ ನಡುವೆ ಇದೀಗ ಸುಚಿತ್ರಾಳ ಮೊಬೈಲ್​ ರಹಸ್ಯ ಗುಟ್ಟು ರಟ್ಟಾಗಿದ್ದು, ಸುಚಿತ್ರಾ ಹಲವರ ಜೊತೆ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಪೂರಕವೆಂಬಂತೆ ಕಮಲಾಕರ್ ಭಟ್ ಮಾತ್ರವಲ್ಲ ಕಲಬುರಗಿ ಜಿಲ್ಲೆಯ ಜಮೀನ್ದಾರನ ಜೊತೆ ಸುಚಿತ್ರಾ ಲವ್ ರಿಲೇಷನಲ್ಲಿದ್ದಿರುವುದು ಬಟಾಬಯಲಾಗಿದೆ. ಕಲಬುರಗಿ ಜಿಲ್ಲೆಯ ಜಮೀನ್ದಾರ್ ಶರಣಬಸಪ್ಪ ಎಂಬಾತನ ಜೊತೆ 3 ವರ್ಷದಿಂದ ಸುಚಿತ್ರಾ ಲವ್ ರಿಲೇಷನ್ ಹೊಂದಿದ್ದು, ಇಬ್ಬರ ಖಾಸಗಿ ಕ್ಷಣದ ಫೋಟೋ ಟಿವಿ9ಗೆ ಲಭ್ಯವಾಗಿವೆ.

ಕಲಬುರಗಿ ಜಮೀನ್ದಾರ್ ಜತೆ ಸುಚಿತ್ರಾ ಲವ್ವಿಡವ್ವಿ

ಕಲಬುರಗಿ ಜಿಲ್ಲೆಯ ಜಮೀನ್ದಾರ್ ಶರಣಬಸಪ್ಪ ಎನ್ನುವರ ಜೊತೆ ಸುಚಿತ್ರಾ ಲವ್ ರಿಲೇಷನಲ್ಲಿ ಇದ್ದು, ಶರಣಬಸಪ್ಪನ ಹಣದಿಂದ ಅಪ್ಪು ಮೆಲೋಡಿಸ್ ಗುಲಬರ್ಗಾ ಆರ್ಕೆಸ್ಟ್ರಾ ನಡೆಸುತ್ತಿದ್ದಳು. ಇನ್ನು ಸುಚಿತ್ರಾ, ಆಗಾಗ ಕಲಬುರಗಿಗೆ ತೆರಳಿ ಶರಣಬಸಪ್ಪನ ಜೊತೆ ಓಡಾಡಿದ್ದಾಳೆ. ಅಲ್ಲದೇ ಸುಚಿತ್ರಾ, ತನ್ನ ಪತಿ ಮಹೇಶ್ ಇಲ್ಲದ ಸಂದರ್ಭದಲ್ಲಿ ಶರಣಬಸಪ್ಪನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಈಗ ಇವರಿಬ್ಬರ ಖಾಸಗಿ ಕ್ಷಣದ ಫೋಟೋ ಟಿವಿ9ಗೆ ಲಭ್ಯವಾಗಿವೆ.

ಇದನ್ನೂ ಓದಿ: ಸುಚಿತ್ರಾಳ ಮೊಬೈಲ್ ರಹಸ್ಯ ಬಯಲು, ಈಕೆ ಸಂಪರ್ಕದಲ್ಲಿದ್ದವರಿಗೆ ಎಸ್ಪಿ ಮಹತ್ವದ ಕರೆ

ಅಪ್ಪು ಮೆಲೋಡಿಸ್ ಗುಲಬರ್ಗಾ ಆರ್ಕೆಸ್ಟ್ರಾ ನಡೆಸುತ್ತಿರುವುದಲ್ಲದೇ ಶರಣಬಸಪ್ಪ ನೀಡಿದ ಹಣವನ್ನು ಸಿದ್ದಾಪುರದಲ್ಲಿ ಬಡ್ಡಿಗೆ ಬಿಡುತ್ತಿದ್ದಳು. ಈ ವಿಚಾರ ಜ್ಯೋತಿಷಿ ಕಮಲಾಕರ್ ಭಟ್​ಗೆ ತಿಳಿದು ಮನಸ್ತಾಪವಾಗಿತ್ತು. ಹೀಗಾಗಿ ಕೊನೆಗೆ ಸುಚಿತ್ರಾ, ಜಮೀನ್ದಾರ ಶರಣಬಸಪ್ಪನನ್ನು ಬಿಟ್ಟು ಕಮಲಾಕರ್ ಭಟ್ ಜೊತೆ ಸೇರಿಕೊಂಡಿದ್ದಳು. ಇನ್ನು ಸುಚಿತ್ರಾ ಹಣದ ದಾಹ ಅರಿತ ಕಮಲಾಕರ್ ಭಟ್, ಆಕೆಗೆ ಕಾರು , ಬೈಕ್ ಗಳನ್ನ ಉಡುಗರೆಯಾಗಿ ನೀಡಿದ್ದ. ಹೀಗೆ ಪತ್ನಿ ಸುಚಿತ್ರಾಳ ಲವ್ವಿಡವ್ವಿ ಆಟಗಳಿಂದ ಪತಿ ಮಹೇಶ್ ಬೇಸತ್ತು ಜಗಳವಾಡಿದ್ದ.ಕೊನೆಗೆ ಆರು ತಿಂಗಳಿಂದ ದೂರವಿದ್ದ. ಹೀಗೆ ಸುಚಿತ್ರಾಳ ನೌಟಂಕಿ ಆಟಗಳು ಒಂದೊಂದೇ ಬಯಲಿಗೆ ಬರುತ್ತಿವೆ.

ಇನ್ನು ಸುಚಿತ್ರಾಳ ಬಗ್ಗೆ ತನಖೆ ನಡೆಸಿರುವ ಪೊಲೀಸರಿಗೆ ಹಲವು ವಿಚಾರಗಳು ಗೊತ್ತಾಗಿದ್ದು, ಇನ್ನೂ ಏನೆಲ್ಲಾ ಬಯಲಿಗೆ ಬರುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Sun, 8 February 26