ಉತ್ತರ ಕನ್ನಡ, ಜನವರಿ 14: ಅಯೋಧ್ಯೆ (Ayodhya) ಯ ಭವ್ಯ ದೇವಸ್ಥಾನದಲ್ಲಿ ಇನ್ನೇನು ಕೆಲವೆ ದಿನಗಳಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪಣೆ ಆಗಲಿದೆ. ಅದರ ಬೆನ್ನಲ್ಲೆ ರಾಜ್ಯದೆಲ್ಲೆಡೆ ರಾಮನ ಕುರುಹುಗಳು ಕಾಣಸಿಗುತ್ತಿವೆ. ಶಾಪ ವಿಮೊಚನೆಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ರಾಮ ಧ್ಯಾನ ಮಾಡಿದ್ದ ಎಂಬ ಕುರುಹು ಪತ್ತೆ ಆಗಿದೆ. ಜಿಲ್ಲೆಯ ಗೋಕರ್ಣಕ್ಕೆ ರಾವಣ ಬಂದಿದ್ದ ಎಂಬ ಇತಿಹಾಸ ಇದೆ. ಆದರೆ ಅದೇ ಭೂಮಿಗೆ ರಾಮನೂ ಕೂಡ ಬಂದು ಧ್ಯಾನ ಮಾಡಿದ್ದ ಎಂಬುವುದಕ್ಕೆ ಪತ್ತೆಯಾದ ಕುರುಹುಗಳೆ ಸಾಕ್ಷಿ.
ಬ್ರಾಹ್ಮಣ ಸಮಾಜದ ರಾವಣನ ವಧೆ ಮಾಡಿದ್ದ ರಾಮನಿಗೆ ಬ್ರಾಹ್ಮಣ ಹತ್ಯೆ ದೋಷ ಕಾಡುತ್ತಿರುತ್ತದೆ. ಪಾಪ ವಿಮೋಚನೆಗೆ ಗೋಕರ್ಣದ ಕಡಲತೀರದಲ್ಲಿ ಧ್ಯಾನ ಮಾಡುವಂತೆ ವಸಿಷ್ಟ ಗುರುಗಳು ಸಲಹೆ ಕೊಡುತ್ತಾರೆ.
ಗುರುಗಳ ಮಾತಿನಂತೆ ಲಕ್ಷ್ಮಣ ಮತ್ತು ಸೀತೆಯರ ಜೊತೆಗೆ ಗೋಕರ್ಣ ಕಾಡಂಚಿನಲ್ಲಿ ಬಂದು ತಪ್ಪಸ್ಸು ಮಾಡಿದ್ದ. ಅಂದು ತಪಸ್ಸು ಮಾಡಿದ ಸ್ಥಳದಲ್ಲಿ ಆಂಜನೇಯ ಸಹಿತ ರಾಮ ಲಕ್ಷ್ಮಣ ಮತ್ತು ಸೀತೆ ಇರುವ ಸುಂದರವಾದ ದೇವಾಲಯ ಇದೆ.
ಇದನ್ನೂ ಓದಿ: ಬಾಗಲಕೋಟೆ; ರಾಮಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ 16 ಲಕ್ಷಕ್ಕೂ ಹೆಚ್ಚು ಬಾರಿ ರಾಮನಾಮ ಬರೆದ ವೃದ್ಧೆ
ರಾಮ ಇಲ್ಲಿ ಬಂದು ಧ್ಯಾನ ಮಾಡುವ ಮುನ್ನ ಸ್ನಾನ ಮಾಡಲು, ತನ್ನ ಬಾಣವನ್ನು ಭೂಮಿಗೆ ಹೊಡೆದು ಭೂಮಿಯಿಂದ ನೀರು ಬರುವಂತೆ ಮಾಡುತ್ತಾನೆ. ಅಂದು ರಾಮ ಹೊಡೆದ ಬಾಣಿನಿಂದ ಸೃಷ್ಟಿ ಆಗಿದ್ದ ಜಲಧಾರೆ ಇಂದಿಗೂ ಜೀವಂತ ಆಗಿದೆ. ವರ್ಷದ 12 ತಿಂಗಳು ನೀರು ಬರ್ತಾ ಇರುತ್ತೆ ಇನ್ನೂ ಇಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರ ಆಗುತ್ತೆ ಎಂಬ ನಂಬಿಕೆಯೂ ಇದೆ.
ಇದನ್ನೂ ಓದಿ: ಕೋಟೆನಾಡಿನಲ್ಲಿ ಶ್ರೀರಾಮನ ಹೆಜ್ಜೆ ಗುರುತು; ಇಲ್ಲಿದೆ ರಾಮನೇ ಪ್ರತಿಷ್ಠಾಪನೆ ಮಾಡಿದ ಶಿವಲಿಂಗ
ರಾವಣನನ ವಧೆಯಿಂದ ರಾಮನಿಗೆ ತಟ್ಟಿದ ಬ್ರಾಹ್ಮಣ ಹತ್ಯೆ ಶಾಪದಿಂದ ಮುಕ್ತಿ ಆಗಲು. ರಾವಣ ಬಂದು ಎಡವಟ್ಟುವ ಮಾಡಿಕೊಂಡಿದ್ದ ಗೊಕರ್ಣ ಸ್ಥಳಕ್ಕೆ ಬಂದಿದ್ದ ಎಂಬುವುದನ್ನ ಇಲ್ಲಿನ ಕುರುಹುಗಳು ಹೆಳುತ್ತವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.