ಉತ್ತರ ಕನ್ನಡ: ಕಾಡಾನೆ ಹಿಂಡು ಪ್ರತ್ಯಕ್ಷ; ತೋಟಕ್ಕೆ ನುಗ್ಗಿ ಅಡಿಕೆ ಗಿಡಗಳಿಗೆ ಹಾನಿ ಮಾಡಿರುವ ಗಜ ಪಡೆ

ಕಾತೂರ ಭಾಗದಿಂದ ಬಿಸಲಕೊಪ್ಪ ಗ್ರಾಮಕ್ಕೆ ಆನೆಗಳು ಬಂದಿವೆ. ಸದ್ಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಜ ಪಡೆ ಕಾಡಿಗೆ ಬಿಡಲು ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಆನೆಗಳ ಹಿಂಡು ಕಾಣಿಸಿಕೊಂಡಿರುವ ಹಿನ್ನೆಲೆ ತೋಟಗಳಿಗೆ ತೆರಳದಂತೆ ಸಾರ್ವಜನಿಕರಲ್ಲಿ ಬನವಾಸಿ ಆರ್‌ಎಪ್‌ಓ ಉಷಾ ಕಬ್ಬೇರ್ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ: ಕಾಡಾನೆ ಹಿಂಡು ಪ್ರತ್ಯಕ್ಷ; ತೋಟಕ್ಕೆ ನುಗ್ಗಿ ಅಡಿಕೆ ಗಿಡಗಳಿಗೆ ಹಾನಿ ಮಾಡಿರುವ ಗಜ ಪಡೆ
ತೋಟಕ್ಕೆ ನುಗ್ಗಿ ಅಡಕೆ ಗಿಡಗಳಿಗೆ ಹಾನಿ ಮಾಡಿರುವ ಗಜ ಪಡೆ
Follow us
TV9 Web
| Updated By: preethi shettigar

Updated on:Mar 26, 2022 | 11:19 AM

ಉತ್ತರ ಕನ್ನಡ: ಅಡಿಕೆ ತೋಟ, ಗದ್ದೆಗೆ ಆನೆ ಹಿಂಡು ಲಗ್ಗೆಯಿಟ್ಟಿದ್ದು, ಬೆಳೆಗಳನ್ನು ನಾಶ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸಲಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಆನೆಗಳ ಹಿಂಡು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಒಂದು ಗಂಡು ಆನೆ (Elephant), ಎರಡು ಹೆಣ್ಣು ಆನೆ, ಒಂದು ಮರಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಅಡಿಕೆ ತೋಟಕ್ಕೆ ನುಗ್ಗಿ ಹತ್ತಾರು ಮರಗಳಿಗೆ (Trees) ಹಾನಿ ಮಾಡಿದ ಬಳಿಕ ಆನೆಗಳು ಹೊಲ, ಗದ್ದೆಗಳಲ್ಲಿ ಓಡಾಡಿ ಬೆಳೆಗಳನ್ನು ನಾಶ (Crop loss) ಮಾಡಿವೆ.

ಕಾತೂರ ಭಾಗದಿಂದ ಬಿಸಲಕೊಪ್ಪ ಗ್ರಾಮಕ್ಕೆ ಆನೆಗಳು ಬಂದಿವೆ. ಸದ್ಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಜ ಪಡೆ ಕಾಡಿಗೆ ಬಿಡಲು ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಆನೆಗಳ ಹಿಂಡು ಕಾಣಿಸಿಕೊಂಡಿರುವ ಹಿನ್ನೆಲೆ ತೋಟಗಳಿಗೆ ತೆರಳದಂತೆ ಸಾರ್ವಜನಿಕರಲ್ಲಿ ಬನವಾಸಿ ಆರ್‌ಎಪ್‌ಓ ಉಷಾ ಕಬ್ಬೇರ್ ಮನವಿ ಮಾಡಿದ್ದಾರೆ.

ಹೊಳೆಆಲೂರ ಗ್ರಾಮದ ಬಳಿ ಪುಟ್ಟ ಮೊಸಳೆ‌ ಪ್ರತ್ಯಕ್ಷ; ಕಂಗಾಲಾದ ಗ್ರಾಮಸ್ಥರು

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಬಳಿ ನದಿ ದಡದಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದೆ. ಮಲಪ್ರಭಾ ನದಿಯ ತೀರದ ಬಳಿ ನೋಡಿ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಸದ್ಯ ಮರಿ ಮೊಸಳೆಯನ್ನು ಗ್ರಾಮದ ಯುವಕರು ಹಿಡಿದಿದ್ದಾರೆ. ಈ ಹಿಂದೆ ದೊಡ್ಡ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿತ್ತು. ಈಗ ಮರಿ‌ ಮೊಸಳೆ ಪ್ರತ್ಯಕ್ಷದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮಲಪ್ರಭಾ ನದಿಯಲ್ಲಿ ಇನ್ನೂ ಸಾಕಷ್ಟು ಮೊಸಳೆ ಇರುವ ಭಯ ಇದೆ. ಮೊಸಳೆ ಹಿಡಿದುಕೊಂಡು ಹೋಗುವಂತೆ ಗ್ರಾಮಸ್ಥರು ಸದ್ಯ ಒತ್ತಾಯಿಸಿದ್ದಾರೆ.

ಹಾಸನ: ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಮನೆ ಮುಂದಿದ್ದ ಗಿಡಗಳನ್ನು ಕಾಡಾನೆ ತಿನ್ನುತ್ತಿರುವ ವಿಡಿಯೋ ವೈರಲ್

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಡಿಮೆ ಆಗದ ಕಾಡಾನೆ ಆತಂಕ ಹೆಚ್ಚಾಗಿದೆ. ಪ್ರತಿನಿತ್ಯ ಆಹಾರ ಅರಸಿ ಮನೆ ಬಾಗಿಲಿಗೆ ಕಾಡಾನೆಗಳು ಬರುತ್ತಿವೆ. ಮನೆಗೆ ಬಂದ ಕಾಡಾನೆಗೆ ಬಾಳೆಹಣ್ಣು ನೀಡುತ್ತಿರೋ ವೀಡಿಯೋ ಸದ್ಯ ವೈರಲ್ ಆಗಿದೆ. ತಿನ್ನಲು ಕೊಟ್ಟ ಬಾಳೆಹಣ್ಣನ್ನು ಸಾಕಾನೆಯಂತೆಯೇ ನಾಜೂಕಾಗಿ ಸೇವಿಸಿದ ಸಲಗದ ದೃಶ್ಯ ವೈರಲ್​ ಆಗಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಮನಗರ:‌ 24 ಗಂಟೆಗಳ ಒಳಗೆ ಆರು ಹಾವುಗಳ ರಕ್ಷಣೆ

24 ಗಂಟೆಗಳ ಒಳಗೆ ಉರಗ ತಜ್ಞ ಕಿರಣ್ ಆರು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಐದು ನಾಗರಹಾವು, ಒಂದು ಆಭರಣದ ಹಾವು ರಕ್ಷಣೆ ಮಾಡಿದ್ದಾರೆ. ಭೀಮನಕುಪ್ಪೆ, ವಿನಾಯಕನಗರ, ರಾಮೋಹಳ್ಳಿ, ಭೈರೋಹಳ್ಳಿ, ಕೋಲೂರು, ಬೆಟ್ಟನಪಾಳ್ಯ ಗ್ರಾಮಗಳಲ್ಲಿ ರಕ್ಷಣೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ  ಲೇಔಟ್, ಸರ್ನರಿ, ಮನೆ, ರೂಮ್​ಗಳಿಗೆ ಬಂದು ಹಾವುಗಳು ರಕ್ಷಣೆ ಪಡೆದಿದ್ದವು. ಬಿಸಿಲ ಜಳಕ್ಕೆ ಮನೆಗಳತ್ತ ನಾಗರಹಾವುಗಳು ಆಗಮಿಸುತ್ತಿವೆ. ನೆನ್ನೆ ಮಧ್ಯಾಹ್ನದಿಂದ ಇಲ್ಲಿಯವರೆಗೂ ಆರು ಹಾವುಗಳನ್ನು ರಕ್ಷಣೆ ಮಾಡಲಾಗಿದೆ.

ಮಂಡ್ಯ: ಭಾರಿ ಮಳೆಗೆ ಹಾಗೂ ಬಿರುಗಾಳಿಗೆ ನೆಲಕಚ್ಚಿದ ಬಾಳೆತೋಟ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಲ್ಲಾಪುರದಲ್ಲಿ ಭಾರಿ ಮಳೆಗೆ ಹಾಗೂ ಬಿರುಗಾಳಿಗೆ ಬಾಳೆತೋಟ ನೆಲಕಚ್ಚಿದೆ. ರೈತ ಶಿವಸ್ವಾಮಿ ಎಂಬುವವರಿಗೆ ಸೇರಿದ ಬಾಳೆ ತೋಟ ನಾಶವಾಗಿದೆ. ಕಟಾವಿಗೆ ಬಂದಿದ್ದ 2 ಸಾವಿರ ಬಾಳೆ ಗಿಡ ನಾಶವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ರೀತಿ ಗಾಳೆ ಮಳೆಯಿಂದ ನಷ್ಟವಾಗಿತ್ತು. ಈ ವರ್ಷವು ಬಾಳೆ ನೆಲಕಚ್ಚಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೀಗಾಗಿ ಸರ್ಕಾರ ಸೂಕ್ತ ಪರಿಹಾರ ಕೊಡುವಂತೆ ರೈತ ಶಿವಸ್ವಾಮಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅಡಿಕೆ ನಿಷೇಧ ಮಾಡದಂತೆ ಕೇಂದ್ರಕ್ಕೆ ಮನವಿ; ಅಡಿಕೆ ಬೆಳೆಗಾರರಿಗೆ ಸಮಾಧಾನಕರ ಸುದ್ದಿ ಕೊಟ್ಟ ಆರಗ ಜ್ಞಾನೇಂದ್ರ

ಹಾಸನದಲ್ಲಿ ಮುಂದುವರಿದ ಕಾಡಾನೆಗಳ ಉಪಟಳ; ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸಂಚಾರ ನಡೆಸಿದ ಒಂಟಿ ಸಲಗನ ವಿಡಿಯೋ ವೈರಲ್

Published On - 10:20 am, Sat, 26 March 22