AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರದ ಸರ್ಕಾರಿ ನೌಕರಸ್ಥನಿಗೆ ಅಕ್ರಮ ಸಂಬಂಧ: ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಪತ್ನಿ

ಸರ್ಕಾರಿ ನೌಕರಸ್ಥನಿಗೆ ಮದುವೆ ಮಾಡಿ ಕೊಟ್ಟಿದ್ದೇವೆ ಮಗಳು ಸುಖವಾಗಿರುತ್ತಾಳೆಂದು ಭಾವಿಸಿದ್ದ ಪ್ರಿಯಾಂಕಾ ತವರು ಮೆನೆಯವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಳಿಯನ ವರ್ತನೆಯಿಂದ ಅತ್ತೆ, ಮಾವ ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರಿ ನೌಕರನಾಗಿದ್ದರೂ ಅಳಿಯ ಮಾಡಬಾರದ ಕೆಲಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ವಿಜಯಪುರದ ಸರ್ಕಾರಿ ನೌಕರಸ್ಥನಿಗೆ ಅಕ್ರಮ ಸಂಬಂಧ: ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಪತ್ನಿ
ಸರ್ಕಾರಿ ನೌಕರ ಪ್ರವೀಣ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Sep 16, 2024 | 2:26 PM

Share

ವಿಜಯಪುರ, ಸೆಪ್ಟೆಂಬರ್​ 16: ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣದ ಪ್ರವೀಣ ಬೊಕ್ಕೆ ಎಂಬುವರು ವಿಜಯಪುರದ (Vijapur) ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವೀಣ ಬೊಕ್ಕೆ 2022ರ ಏಪ್ರಿಲ್​ 15 ರಂದು ಬೀದರ್ ಜಿಲ್ಲೆ ಹುಮನಾಬಾದ್ ಪಟ್ಟಣದ ಪ್ರಿಯಾಂಕಾ ಬೋಯಿ ಎಂಬ ಯುವತಿಯನ್ನು ಮದುವೆಯಾಗಿದ್ದಾರೆ.

ಮದವೆ ಸಮಯದಲ್ಲಿ ಪ್ರಿಯಾಂಕಾ ಪೋಷಕರು ಪ್ರವೀಣ ಬೊಕ್ಕೆಗೆ ವರದಕ್ಷಿಣ ರೂಪದಲ್ಲಿ 10 ಲಕ್ಷ ಹಣ ಮತ್ತು 110 ಗ್ರಾಂ ಚಿನ್ನ ನೀಡಿದ್ದಾರೆ. ಯುವತಿಯ ಪೋಷಕರು ಮದುವೆಗೆ 25 ರಿಂದ 30 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮದುವೆ ನಂತರ ಪ್ರವೀಣ ವಿಜಯಪುರ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು. ದಂಪತಿ ಇದೇ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದೆ.

ಮದುವೆಯಾದ ಕೆಲವು ತಿಂಗಳ ಬಳಿಕ ಪ್ರವೀಣ ಹಾಗೂ ಆತನ ಪೋಷಕರು ಹಣಕ್ಕಾಗಿ ಪ್ರಿಯಾಂಕಾಗೆ ಪೀಡಿಸುತ್ತಿದ್ದರಂತೆ. ಒಬ್ಬಳೇ ಮಗಳು ತವರಿನಿಂದ ಹಣ ತೆಗೆದುಕೊಂಡು ಬಾ ಎಂದು ಹಿಂಸೆ ನೀಡುತ್ತಿದ್ದರಂತೆ. ಇಂದಲ್ಲ, ನಾಳೆ ನನ್ನ ಸಂಸಾರ ಸರಿಯಾಗುತ್ತದೆ ಎಂದು ಪ್ರಿಯಾಂಕಾ ಸಹಿಸಿಕೊಂಡು ಹೋಗಿದ್ದಾಳೆ. ಆದರೆ, ಪ್ರವೀಣಗೆ ಅಕ್ರಮ ಸಂಬಂಧ ಇರುವುದು ಎರಡು ತಿಂಗಳ ಹಿಂದೆ ಪ್ರಿಯಾಂಕಾಗೆ ತಿಳಿದಿದೆ. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ.

ಜಗಳದ ಬಳಿಕ ಪ್ರಿಯಾಂಕಾಳನ್ನು ಪತಿ ಪ್ರವೀಣ ಮತ್ತು ಆತನ ಪೋಷಕರು ಮನೆಯಿಂದ ಆಚೆ ಹಾಕಿದ್ದಾರೆ. ನಂತರ, ಪ್ರಿಯಾಂಕಾ ತವರು ಮನೆ ಸೇರಿದ್ದಾಳೆ. ಮಗಳ ಜೀವನ ಕಂಡು ಪ್ರಿಯಾಂಕಾ ಪೋಷಕರು ಚಿಂತಾಕ್ರಾಂತರಾಗಿದ್ದಾರೆ. ಪ್ರವೀಣ ಮಗಳ ಜೀವನ ಹಾಳು ಮಾಡಿಬಿಟ್ಟನಲ್ಲ ಎಂದು ಮಮ್ಮಲ ಮರಗುತ್ತಿದ್ದಾರೆ.

ಇದನ್ನೂ ಓದಿ: ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಕಳ್ಳರು: ವೈದ್ಯೆಯೊಂದಿಗೆ ಮಾತನಾಡುತ್ತ ಚಿನ್ನದ ಸರ ಕದ್ದು ಪರಾರಿ

ಈ ಬಗ್ಗೆ ಪ್ರಿಯಾಂಕಾ ತವರು ಮನೆಯವರು ಅಳಿಯನ ಮನೆಗೆ ಹೋಗಿ ನ್ಯಾಯ ಕೇಳಿದ್ದಾರೆ. “ನಮ್ಮ ಮಗಳಿಗೆ ಮೋಸ ಮಾಡಬೇಡ” ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾರೆ. ಆದರೂ, ಪ್ರವೀಣ ಮನಸ್ಸು ಬದಲಾಗಿಲ್ಲ. ಕೊನೆಗೆ ದಾರಿ ಕಾಣದೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಹಾಗೂ ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರವೀಣ ಮೇಲೆ ಪ್ರಿಯಾಂಕಾ ದೂರು ದಾಖಲಿಸಿದ್ದಾರೆ.

ಅಳಿಯ ಪ್ರವೀಣ, ಆತನ ತಾಯಿ ಕಲಾವತಿ, ಮಾವ ಶಿವರಾಜ, ಮೈದುನ ಪ್ರಶಾಂತ, ನಾದಿನಿ ವಾಣಿಶ್ರೀ ಮತ್ತು ಈಕೆಯ ಪತಿ ಗಿರೀಶ ಕುಡಿಕೊಂಡು ನಮ್ಮ ಮಗಳಿಗೆ ಹಿಂಸೆ ನೀಡಿದ್ದಾರೆ. ನ್ಯಾಯಕ್ಕಾಗಿ ನಾವು ದೂರು ದಾಖಲು ಮಾಡಿದರೂ ಆತನನ್ನು ಸೇವೆಯಿಂದ ಅಮಾನತ್ತು ಮಾಡಿಲ್ಲ. ಪ್ರವೀಣ ವಿರುದ್ಧ ದೂರು ನೀಡಿ ಎರಡು ತಿಂಗಳು ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆತನಿಗೆ ಇಲಾಖೆಯ ಆಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಪೊಲೀಸರು ಸಹ ನಮ್ಮ ಮಗಳ ಪ್ರಕರಣದಲ್ಲಿ ಯಾವುದೇ ತನಿಖೆ ಮಾಡದೆ ಉದಾಸೀನ ಮಾಡಿದ್ದಾರೆ. ನಮಗೆ ನ್ಯಾಯಬೇಕೆಂದು ಪ್ರಿಯಾಂಕಾ ತಾಯಿ ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:23 pm, Mon, 16 September 24

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ