Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿಗೆ ಗುಡ್​ನ್ಯೂಸ್: ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ

Vijayapura Mangaluru Express Train: ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ನಡುವೆ ಸಂಪರ್ಕ ಕಲ್ಪಿಸುವ ವಿಜಯಪುರ-ಮಂಗಳೂರು ವಿಶೇಷ ರೈಲು ಸೇವೆಯನ್ನು ವರ್ಷಾಂತ್ಯದವರೆಗೂ ನೈಋತ್ಯ ರೈಲ್ವೆ ಇಲಾಖೆ ವಿಸ್ತರಣೆ ಮಾಡಿದೆ. ರೈಲಿನ ವೇಳಾಪಟ್ಟಿ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಮಾಡದೇ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ಪ್ರಯಾಣಿಕರಿಗೆ ಗುಡ್​ನ್ಯೂಸ್: ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Sep 25, 2023 | 7:23 AM

ಬೆಂಗಳೂರು, ಸೆ.25: ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ನಡುವೆ ಸಂಪರ್ಕ ಕಲ್ಪಿಸುವ ವಿಜಯಪುರ-ಮಂಗಳೂರು ವಿಶೇಷ ರೈಲು ಸೇವೆಯನ್ನು (Vijayapura Mangaluru Express Train) ವರ್ಷಾಂತ್ಯದವರೆಗೂ ವಿಸ್ತರಣೆ ಮಾಡಲಾಗಿದೆ. ರೈಲಿನ ವೇಳಾಪಟ್ಟಿ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಮಾಡದೇ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ (South Western Railway) ಪ್ರಕಟಣೆ ಹೊರಡಿಸಿದೆ. ಹೀಗಾಗಿ ಈಗಿರುವ ವೇಳಾಪಟ್ಟಿಯಲ್ಲಿ ಮುಂದಿನ ಆದೇಶದ ವರೆಗೂ ರೈಲು ಓಡಲಿದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆ ಈ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಸೆಪ್ಟೆಂಬರ್ 30, 2023 ರವರೆಗೆ ಪ್ರತಿದಿನ ಓಡಿಸುವಂತೆ ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗುತ್ತಿದೆ. ಇನ್ನು ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ಅನ್ನು ಅಕ್ಟೋಬರ್ 1 ರವರೆಗೆ ಪ್ರತಿದಿನ ಓಡಿಸುವಂತೆ ಈ ಮೊದಲೇ ತಿಳಿಸಲಾಗಿತ್ತು. ಅದನ್ನು ಅಕ್ಟೋಬರ್ 2 ರಿಂದ ಜನವರಿ 1, 2024 ರವರೆಗೆ ವಿಸ್ತರಿಸಲಾಗುತ್ತಿದೆ.

ಇದನ್ನೂ ಓದಿ: ಒಂಬತ್ತು ವಂದೇಭಾರತ್ ರೈಲುಗಳಿಗೆ ಚಾಲನೆ ನೀಡಿದ ಮೋದಿ; ಬೆಂಗಳೂರು ಹೈದರಾಬಾದ್ ರೈಲು ವೇಳಾಪಟ್ಟಿ, ದರ ಇತ್ಯಾದಿ ವಿವರ

ರೈಲುಗಳ ಸಂಖ್ಯೆ 22497/22498 ಶ್ರೀ ಗಂಗಾನಗರ ಮತ್ತು ತಿರುಚಿರಾಪಳ್ಳಿ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಹಮ್ಸಫರ್ ಸಾಪ್ತಾಹಿಕ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೇಸ್‌ ರೈಲುಗಳಿಗೆ ನಾಗೌರ್ ನಿಲ್ದಾಣದಲ್ಲಿ ಪ್ರಾಯೋಗಿಕ ಆಧಾರ ಮೇಲೆ ಹೆಚ್ಚುವರಿ ನಿಲುಗಡೆಯನ್ನು ಮುಂದಿನ ಆದೇಶ ಬರುವರೆಗೆ ನೀಡಲು ವಾಯುವ್ಯ ರೈಲ್ವೆಯೂ ಸೂಚಿಸಿದೆ.

ಸೆಪ್ಟೆಂಬರ್ 25 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 22497 ಶ್ರೀ ಗಂಗಾನಗರ -ತಿರುಚಿರಾಪಳ್ಳಿ ಹಮ್ಸಫರ್ ಸಾಪ್ತಾಹಿಕ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೇಸ್‌ ರೈಲಿಗೆ ನಾಗೌರ್ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ರೈಲು ನಾಗೌರ್‌ ನಿಲ್ದಾಣಕ್ಕೆ ರಾತ್ರಿ 9.03 ಗಂಟೆಗೆ ಆಗಮಿಸಿ 9.05 ಗಂಟೆಗೆ ಹೊರಡುತ್ತದೆ.

ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 22498 ತಿರುಚಿರಾಪಳ್ಳಿ- ಶ್ರೀ ಗಂಗಾನಗರ ಹಮ್ಸಫರ್ ಸಾಪ್ತಾಹಿಕ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೇಸ್‌ ರೈಲಿಗೆ ನಾಗೌರ್ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ರೈಲು ನಾಗೌರ್‌ ನಿಲ್ದಾಣಕ್ಕೆ ಬೆಳಗಿನ ಜಾವ 04.28ಕ್ಕೆ ಆಗಮಿಸಿ 04.30 ಗಂಟೆಗೆ ನಿರ್ಗಮಿಸಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:23 am, Mon, 25 September 23

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ