ಕೋವಿಡ್ ವಾರಿಯರ್ಸ್ಗೂ ಸೋಂಕು ಅಟ್ಯಾಕ್ ಆಯ್ತು! ಎಲ್ಲಿ?
ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ನಾಗಲೋಟ ನಿಲ್ತಾನೇ ಇಲ್ಲ. ಮಹಾರಾಷ್ಟ್ರದ ನಂಜು ಇಂಚಿಂಚೂ ಬಿಡದೆ ಕಾಡ್ತಿದೆ. ಅದ್ರಲ್ಲೂ ಕಂಟೇನ್ಮೆಂಟ್ ಏರಿಯಾದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಇದ್ರಿಂದ ಕೊರೊನಾ ವಾರಿಯರ್ಸ್ಗೂ ಮಹಾಮಾರಿ ವಕ್ಕರಿಸಿದೆ. ಕೊರೊನಾ ಹಾವಳಿ ಮೊದಲು ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಹಳ್ಳಿಗಳು ಸೇಫ್ ಅಂತಾ ಹಲವರು ಅನ್ಕೊಂಡಿದ್ರು. ಆದ್ರೆ ಮಹಾರಾಷ್ಟ್ರದಿಂದ ಬಂದವರಿಂದ ಇದೀಗ ಪ್ರತಿ ಹಳ್ಳಿ ಹಳ್ಳಿಗೂ, ಗಲ್ಲಿ ಗಲ್ಲಿಗೂ ಕೊರೊನಾ ಲಗ್ಗೆ ಇಟ್ಟಿದೆ. ಅದ್ರಲ್ಲೂ ಕೊರೊನಾ ವಾರಿಯರ್ಸ್ಗೆ ಸೋಂಕು ಕಾಣಿಸಿಕೊಂಡಿದ್ದು, ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. […]
ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ನಾಗಲೋಟ ನಿಲ್ತಾನೇ ಇಲ್ಲ. ಮಹಾರಾಷ್ಟ್ರದ ನಂಜು ಇಂಚಿಂಚೂ ಬಿಡದೆ ಕಾಡ್ತಿದೆ. ಅದ್ರಲ್ಲೂ ಕಂಟೇನ್ಮೆಂಟ್ ಏರಿಯಾದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಇದ್ರಿಂದ ಕೊರೊನಾ ವಾರಿಯರ್ಸ್ಗೂ ಮಹಾಮಾರಿ ವಕ್ಕರಿಸಿದೆ.
ಕೊರೊನಾ ಹಾವಳಿ ಮೊದಲು ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಹಳ್ಳಿಗಳು ಸೇಫ್ ಅಂತಾ ಹಲವರು ಅನ್ಕೊಂಡಿದ್ರು. ಆದ್ರೆ ಮಹಾರಾಷ್ಟ್ರದಿಂದ ಬಂದವರಿಂದ ಇದೀಗ ಪ್ರತಿ ಹಳ್ಳಿ ಹಳ್ಳಿಗೂ, ಗಲ್ಲಿ ಗಲ್ಲಿಗೂ ಕೊರೊನಾ ಲಗ್ಗೆ ಇಟ್ಟಿದೆ. ಅದ್ರಲ್ಲೂ ಕೊರೊನಾ ವಾರಿಯರ್ಸ್ಗೆ ಸೋಂಕು ಕಾಣಿಸಿಕೊಂಡಿದ್ದು, ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ವಿಜಯಪುರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೊರೊನಾ..! ಹೌದು, ಮಹಾರಾಷ್ಟ್ರದಿಂದ ಬಂದವರಿಂದ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕೊರೊನಾ ರಣಕೇಕೆ ಶುರು ಮಾಡಿದೆ. ಇಲ್ಲಿಯವರೆಗೆ 187 ಮಂದಿಗೆ ಕೊರೊನಾ ವಕ್ಕರಿಸಿದೆ. ಅದ್ರಲ್ಲೂ ಕಂಟೇನ್ಮೆಂಟ್ ಏರಿಯಾದಲ್ಲಿ ಜಾಗೃತಿ ಮೂಡಿಸ್ತಿದ್ದ 60 ವರ್ಷ ಮೇಲ್ಪಟ್ಟ ಇಬ್ಬರು ಆಶಾ ಕಾರ್ಯಕರ್ತೆಯರಿಗೆ ಹಾಗೂ ಓರ್ವ ಅಂಗನವಾಡಿ ಕಾರ್ಯಕರ್ತೆಗೂ ಕೊರೊನಾ ಬಂದಿದೆ.
ಸದ್ಯ ಕೊರೊನಾ ಸೋಂಕಿತ ವಾರಿಯರ್ಸ್ಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇವ್ರ ಆರೋಗ್ಯ ಸ್ಥಿರವಾಗಿದ್ದು, ಕೊರೊನಾ ವಾರಿಯರ್ಸ್ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ತಿಳಿಸಿದ್ದಾರೆ.
ಒಟ್ನಲ್ಲಿ ವಿಜಯಪುರ ಜಿಲ್ಲೆಯಲ್ಲೀಗ ಮಹಾರಾಷ್ಟ್ರದ ಕೊರೊನಾ ನಂಜಿನ ಭಯ ಎಲ್ಲೆಡೆ ಮನೆ ಮಾಡಿದೆ. ಇದೀಗ ಕಂಟೇನ್ಮೆಂಟ್ ಏರಿಯಾದಲ್ಲಿ ಮತ್ತೆ ಸೋಂಕು ಪತ್ತೆಯಾಗಿದ್ದು ಜನರ ಚಿಂತೆಗೆ ಕಾರಣವಾಗಿದೆ. ಇದ್ರ ಜೊತೆಗೆ ಕೊರೊನಾ ವಾರಿಯರ್ಸ್ಗೆ ಸೋಂಕು ತಗುಲಿದ್ದು ಆತಂಕವನ್ನುಂಟು ಮಾಡಿದೆ.
Published On - 11:57 am, Sun, 7 June 20