ತೋಳ ಕಚ್ಚಿ ರೈತನ ಸಾವು, ವಿಜಯಪುರ ಜಿಲ್ಲೆಯ ರೈತರಲ್ಲಿ ಹೆಚ್ಚಿದ ಆತಂಕ!
ವಿಜಯಪುರ: ಕೃಷಿ ಕೆಲಸಕ್ಕೆಂದು ಹೋಗಿದ್ದ ರೈತನೋರ್ವ ತೋಳ ಕಚ್ಚಿ ಸಾವನ್ನಪ್ಪಿದ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದಿದೆ. ಹೌದು, ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮಸೂತಿ ಗ್ರಾಮದ ರೈತ 37 ವರ್ಷದ ಮಲ್ಲಪ್ಪ ಶಿವಪ್ಪ ಕೂಡಗಿ, ಎಂದಿನಂತೆ ಕೃಷಿ ಕೆಲಸಕ್ಕಾಗಿ ಹೊಲಕ್ಕೆ ಹೋಗಿದ್ದ. ಹೊಲದಲ್ಲಿ ಜಮೀನಿಗೆ ನೀರು ಹಾಯಿಸುತ್ತಿರುವ ಸಂದರ್ಭದಲ್ಲಿ ತೋಳವೊಂದು ರೈತನಿಗೆ ಕಚ್ಚಿದೆ. ತಕ್ಷಣವೆ ರೈತನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ ಘಟನೆ ಸಂಭವಿಸಿದ ಒಂದು ವಾರದ ನಂತರ […]
ವಿಜಯಪುರ: ಕೃಷಿ ಕೆಲಸಕ್ಕೆಂದು ಹೋಗಿದ್ದ ರೈತನೋರ್ವ ತೋಳ ಕಚ್ಚಿ ಸಾವನ್ನಪ್ಪಿದ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದಿದೆ.
ಹೌದು, ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮಸೂತಿ ಗ್ರಾಮದ ರೈತ 37 ವರ್ಷದ ಮಲ್ಲಪ್ಪ ಶಿವಪ್ಪ ಕೂಡಗಿ, ಎಂದಿನಂತೆ ಕೃಷಿ ಕೆಲಸಕ್ಕಾಗಿ ಹೊಲಕ್ಕೆ ಹೋಗಿದ್ದ. ಹೊಲದಲ್ಲಿ ಜಮೀನಿಗೆ ನೀರು ಹಾಯಿಸುತ್ತಿರುವ ಸಂದರ್ಭದಲ್ಲಿ ತೋಳವೊಂದು ರೈತನಿಗೆ ಕಚ್ಚಿದೆ. ತಕ್ಷಣವೆ ರೈತನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಆದ್ರೆ ಘಟನೆ ಸಂಭವಿಸಿದ ಒಂದು ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೇ ರೈತ ಮಲ್ಲಪ್ಪ ಆಸ್ಪತ್ಸೆಯಲ್ಲಿ ಕೊನೆಯುಸಿರೆಳದಿದ್ದಾನೆ. ಈ ಘಟನೆ ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದೆ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 4:00 pm, Sat, 13 June 20