ಪವನ್ ಕಲ್ಯಾಣ್ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದೇ ಅಲ್ಲು ಅರ್ಜುನ್ ತಂದೆ
ಪವನ್ ಕಲ್ಯಾಣ್ ಅವರು ಇಂದು ರಾಜಕೀಯ ಹಾಗೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರನ್ನು ಮೊದಲು ಲಾಂಚ್ ಮಾಡಿದ್ದು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು. ಅಲ್ಲು ಅರವಿಂದ್ ಅವರಿಗೆ ಇಂದು (ಜನವರಿ 10) ಜನ್ಮದಿನ. ಈ ವೇಳೆ ಎಲ್ಲರೂ ಪವನ್ ಕಲ್ಯಾಣ್ ಅವರು ಚಿತ್ರರಂಗಕ್ಕೆ ಬಂದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಟಾಕ್ ಜೋರಾಗಿದೆ. ಇದು ಆಗಾಗ ಎದ್ದು ಕಾಣುತ್ತಲೇ ಇರುತ್ತದೆ. ಆದರೆ, ಇದನ್ನು ಇವರು ನೇರವಾಗಿ ಒಪ್ಪಿಕೊಂಡಿಲ್ಲ. ಪರೋಕ್ಷವಾಗಿ ಇಬ್ಬರೂ ಒಬ್ಬರನ್ನೊಬ್ಬರು ಟೀಕೆ ಮಾಡುತ್ತಾ ಇರುತ್ತಾರೆ. ವಿಶೇಷ ಎಂದರೆ ಪವನ್ ಕಲ್ಯಾಣ್ ಅವರನ್ನು ಲಾಂಚ್ ಮಾಡಿದ್ದು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಎನ್ನು ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ ಓದಿ.
ಅಲ್ಲು ಅರವಿಂದ್ ಅವರಿಗೆ ಇಂದು (ಜನವರಿ 10) ಜನ್ಮದಿನ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಗೀತಾ ಆರ್ಟ್ಸ್’ ಬ್ಯಾನರ್ ಮೂಲಕ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಯಶಸ್ವಿ ನಿರ್ಮಾಪಕ ಎನಿಸಿಕೊಂಡಿದ್ದಾರೆ. ಅಲ್ಲು ಅರವಿಂದ್ ಅವರು ಪವನ್ ಕಲ್ಯಾಣ್ನ ಲಾಂಚ್ ಮಾಡಿದ್ದರು.
ಪವನ್ ಕಲ್ಯಾಣ್ ನಟಿಸಿದ ಮೊದಲ ಸಿನಿಮಾ ‘ಅಕ್ಕಡು ಅಮ್ಮಾಯಿ, ಇಕ್ಕಡು ಅಬ್ಬಾಯಿ’. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಅಲ್ಲು ಅರವಿಂದ್ ಅವರು. ಇವರೇ ಪವನ್ ಕಲ್ಯಾಣ್ ಅವರನ್ನು ಲಾಂಚ್ ಮಾಡಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಮೂಲಕ ಪವನ್ ಕಲ್ಯಾಣ್ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಸಿಕ್ಕಂತೆ ಆಯಿತು. ಪವನ್ ಕಲ್ಯಾಣ್ ಅವರು ಒಂದು ದಿನಕ್ಕೆ 5 ಸಾವಿರ ರೂಪಾಯಿ ಕೊಟ್ಟಿದ್ದರು ಅಲ್ಲು ಅರವಿಂದ್. ಈ ವಿಚಾರದಲ್ಲಿ ಪವನ್ ಕಲ್ಯಾಣ್ ಅವರಿಗೆ ಖುಷಿ ಇದೆ. ಅಲ್ಲು ಅರವಿಂದ್ ಬಗ್ಗೆ ಪವನ್ ಕಲ್ಯಾಣ್ ಅವರಿಗೆ ವಿಶೇಷ ಗೌರವ ಇತ್ತು. ಆದರೆ, ಈಗ ಇವರ ಮಧ್ಯೆ ವೈಮನಸ್ಸು ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: ಎಲ್ಲದಕ್ಕೂ ಮೂಲ ಕಾರಣ ಚಿರಂಜೀವಿಯೇ: ಮೂಲ ಮರೆಯದ ಪವನ್ ಕಲ್ಯಾಣ್
1996ರಲ್ಲಿ ‘ಅಕ್ಕಡು ಅಮ್ಮಾಯಿ, ಇಕ್ಕಡು ಅಬ್ಬಾಯಿ’ ಚಿತ್ರ ರಿಲೀಸ್ ಆಯಿತು. ಈ ಮೂಲಕ ಪವನ್ ಕಲ್ಯಾಣ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷಗಳು ಕಳೆಯಲಿವೆ. ಪವನ್ ಕಲ್ಯಾಣ್ ಅವರು ಸದ್ಯ ರಾಜಕೀಯದಲ್ಲೂ ಬ್ಯುಸಿ ಇದ್ದಾರೆ. ಈ ಕಾರಣದಿಂದ ಅವರಿಗೆ ಸಿನಿಮಾ ಬಗ್ಗೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಅವರು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.