AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’: ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

Game Changer: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಇಂದು (ಜನವರಿ 10) ತೆರೆಗೆ ಬಂದಿದೆ. ಸಿನಿಮಾ ನೋಡಿದ ಮಂದಿ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಸಿನಿಮಾ ನೋಡಿದ ಹಲವರು ಅಭಿಪ್ರಾಯವನ್ನು ಟ್ವಿಟ್ಟರ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಸಿನಿಮಾದ ಟ್ವೀಟರ್ ವಿಮರ್ಶೆ ಇಲ್ಲಿದೆ ನೋಡಿ. ಸಿನಿಮಾ ನೋಡುವ ಮುಂಚೆ ಈ ಟ್ವಿಟ್ಟರ್ ವಿಮರ್ಶೆ ಓದಿ.

ಹೇಗಿದೆ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’: ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
ಗೇಮ್ ಚೇಂಜರ್
ಮಂಜುನಾಥ ಸಿ.
|

Updated on: Jan 10, 2025 | 10:48 AM

Share

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಇಂದು ಬಿಡುಗಡೆ ಆಗಿದೆ. ‘ಆರ್​ಆರ್​ಆರ್’ ಸಿನಿಮಾದ ಬಳಿಕ ಬಿಡುಡಗೆ ಆಗುತ್ತಿರುವ ರಾಮ್ ಚರಣ್ ಅವರ ಸೋಲೊ ಹೀರೋ ಸಿನಿಮಾ ಇದು. ಅಲ್ಲದೆ ಸಿನಿಮಾ ನಿರ್ದೇಶನ ಮಾಡಿರುವುದು ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ರಾಜಕೀಯ ಮತ್ತು ಭ್ರಷ್ಟಾಚಾರದ ಕತೆಯನ್ನು ಒಳಗೊಂಡಿದ್ದು, ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಾಯಕಿ. ಸಿನಿಮಾದ ಅರ್ಲಿ ಮಾರ್ನಿಂಗ್ ಶೋ ಹಲವೆಡೆ ಪ್ರದರ್ಶನಗೊಂಡಿದ್ದು, ಬೆಳ್ಳಂಬೆಳಿಗ್ಗೆ ಸಿನಿಮಾ ನೋಡಿದ ಮಂದಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಮಿಶ್ರ ಪ್ರತಿಕ್ರಿಯೆಗಳೇ ವ್ಯಕ್ತವಾಗಿದೆ. ಸಿನಿಮಾ ನೋಡಿದ ಕಾರ್ತಿಕ್ ಎಂಬುವರು, ‘ಸಿನಿಮಾ ಚೆನ್ನಾಗಿದೆ. ಒಳ್ಳೆಯ ಮಾಸ್ ಮಸಾಲಾ ಇದೆ. ಸಂದೇಶವೂ ಇದೆ. ಮನೊರಂಜನೆ, ಹಾಸ್ಯ, ಭಾವುಕತೆ ಎಲ್ಲವೂ ಈ ಸಿನಿಮಾದಲ್ಲಿ ಇದೆ. ಮಾತ್ರವಲ್ಲದೆ ಟೆಕ್ನಿಕಲಿ ಈ ಸಿನಿಮಾ ಬಹಳ ಸ್ಟ್ರಾಂಗ್ ಆಗಿದೆ’ ಎಂದಿದ್ದಾರೆ.

ಆಸ್ಟ್ರೇಲಿಯಾನಲ್ಲಿ ‘ಗೇಮ್ ಚೇಂಜರ್’ ಸಿನಿಮಾ ನೋಡಿದ ಅಭಿಮಾನಿಯೊಬ್ಬ ವಿಮರ್ಶೆ ಹಂಚಿಕೊಂಡಿದ್ದು, ‘ರಾಮ್ ಚರಣ್ ಎಂಟ್ರಿ ಅದ್ಭುತವಾಗಿದೆ. ‘ಮಚ್ಚ ಮಚ್ಚ’ ಹಾಡು ಸಖತ್ ಆಗಿದೆ. ಹಾಡುಗಳನ್ನು ಚಿತ್ರೀಕರಿಸಿರುವ ರೀತಿ ಮತ್ತು ಚಿತ್ರೀಕರಣ ಮಾಡಿರುವ ಸ್ಥಳ ಮತ್ತು ಸೆಟ್​ಗಳು ಸೂಪರ್ ಆಗಿವೆ. ಸಿನಿಮಾದ ಲವ್ ಸ್ಟೋರಿಯೂ ಸೂಪರ್ ಆಗಿದೆ. ಕಿಯಾರಾ ಮತ್ತು ರಾಮ್ ಚರಣ್ ನಡುವೆ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ಎಲಿವೇಷನ್ ದೃಶ್ಯಗಳು ಸಹ ಬೊಂಬಾಟ್ ಆಗಿವೆ’ ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬ ವೀಕ್ಷಕ ಟ್ವಿಟ್ಟರ್​ನಲ್ಲಿ ಪೂರ್ಣ ವಿಮರ್ಶೆಯನ್ನೇ ಬರೆದಿದ್ದು, ‘ಗೇಮ್ ಚೇಂಜರ್’ ಸಾಧಾರಣವಾದ ಸಿನಿಮಾ ಎಂದಿದ್ದಾರೆ. ಫೈಟ್, ಹಾಡುಗಳು ಅಲ್ಲಲ್ಲಿ ಕೆಲ ಸೀನ್​ಗಳು ಚೆನ್ನಾಗಿವೆ ಎಂದಿರುವ ಅವೇಂಜರ್ ಹೆಸರಿನ ಟ್ವಿಟ್ಟರ್ ಬಳಕೆದಾರ ಕಿಯಾರಾ-ರಾಮ್ ಚರಣ್ ಅವರ ಲವ್ ದೃಶ್ಯಗಳು ಸಿನಿಮಾದ ವೇಗವನ್ನು ಕುಂಠಿತಗೊಳಿಸಿವೆ ಎಂದಿದ್ದಾರೆ. ಅಲ್ಲದೆ ವಿಲನ್​ ಆರ್ಭಟ, ವರ್ತನೆ ಕತೆಗೆ ಸರಿ ಹೊಂದುವುದಿಲ್ಲ ಎಂದಿದ್ದಾರೆ. ಆದರೆ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಶಂಕರ್ ತಮ್ಮ ಈ ಹಿಂದಿನ ಸಿನಿಮಾಗಳಂತೆ ಬೊಂಬಾಟ್ ಆಗಿ ಎಂಡ್ ಮಾಡಿದ್ದಾರೆ ಎಂದಿದ್ದಾರೆ.

ಸೂರ್ಯತೇಜ ಬೊರ್ರಾ ಎಂಬ ಟ್ವಿಟ್ಟರ್ ಬಳಕೆದಾರ, ‘ಗೇಮ್ ಚೇಂಜರ್’ ಸಿನಿಮಾ ಬಹಳ ಕೆಟ್ಟದಾಗಿದೆ. ಸಿನಿಮಾ ನೋಡುವುದು ಶುದ್ಧ ಸಮಯದ ವ್ಯರ್ಥ, ಸಿನಿಮಾ ನೋಡಿದರೆ ಸಮಯ ನಷ್ಟವಾಗುತ್ತದೆ. ಯಾರೂ ಈ ಸಿನಿಮಾ ನೋಡಬೇಡಿ. ಬಹಳ ಕ್ರಿಂಜ್ ಆಗಿರುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂದಿದ್ದಾರೆ. ಈ ಟ್ವಿಟ್ಟರ್ ವಿಮರ್ಶೆಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ