ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು; ನಿಮ್ಮ ಪಾಪದ ಫಲ ನೀವೆ ಉಣ್ಣುವಿರಿ -ಕತಕನಹಳ್ಳಿಯ ಸದಾಶಿವ ಮಠದ ಭವಿಷ್ಯವಾಣಿ

ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು; ನಿಮ್ಮ ಪಾಪದ ಫಲ ನೀವೆ ಉಣ್ಣುವಿರಿ -ಕತಕನಹಳ್ಳಿಯ ಸದಾಶಿವ ಮಠದ ಭವಿಷ್ಯವಾಣಿ
ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು; ನಿಮ್ಮ ಪಾಪದ ಫಲ ನೀವೆ ಉಣ್ಣುವಿರಿ -ಕತಕನಹಳ್ಳಿಯ ಸದಾಶಿವ ಮಠದ ಭವಿಷ್ಯವಾಣಿ

ಶುಭಕೃತ ನಾಮ ಸಂವತ್ಸರ ಎಲ್ಲರಿಗೂ ಶುಭ ಮಾಡಲಿದೆ. ಶುಭಕೃತ ಸಂವಸ್ಥರದಲ್ಲಿ ನೀವು ಕೆಟ್ಟ ಕೆಲಸ ಮಾಡಿದರೆ ಅದರ ಅನುಭವ ನೀವೆ ಉಣ್ಣುವಿರಿ. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು. ಆಗ ವಿಶ್ವದ ಎಲ್ಲ ದೇಶಗಳು ಭಾತರದ ಮಾತು ಕೇಳುತ್ತವೆ. ಹೀಗೆ ಪ್ರಸಕ್ತ ವರ್ಷದ ಭವಿಷ್ಯವನ್ನು ಮಠದ ಸ್ವಾಮೀಜಿಗಳು ನುಡಿದಿದ್ದಾರೆ.

TV9kannada Web Team

| Edited By: Ayesha Banu

Apr 04, 2022 | 9:31 PM


ವಿಜಯಪುರ: ಯುಗಾದಿಯ ವರ್ಷ ತೊಡಕಿನ ಮಾರನೇ ದಿನ ಜಿಲ್ಲೆಯ ಮಠವೊಂದರಲ್ಲಿ ಭವಿಷ್ಯ ಹೇಳಲಾಗುತ್ತದೆ. ಮಠದ ಪೀಠಾಧಿಪತಿಗಳು ನುಡಿಯೋ ವರ್ಷದ ಭವಿಷ್ಯದ ಮಾತುಗಳು ಇಂದಿಗೂ ಸುಳ್ಳಾಗಿಲ್ಲಾ. ಕಳೆದ ನೂರಾರು ವರ್ಷಗಳಿಂದ ಹೇಳುವ ಭವಿಷ್ಯ ನಿಜವಾಗುತ್ತಾ ಬಂದಿವೆ. ಕಾರಣ ಜಿಲ್ಲೆಯ ಜನರಷ್ಟೇ ಅಲ್ಲ ಸುತ್ತಮುತ್ತಲ ಜಿಲ್ಲೆಗಳ ಜನರು, ಸುತ್ತಮುತ್ತಲ ರಾಜ್ಯಗಳ ಜನರು ಈ ಭವಿಷ್ಯವಾಣಿಯನ್ನು ಕೇಳಲು ಇಲ್ಲಿಗೆ ಆಗಮಿಸುತ್ತಾರೆ. ಮಠದ ಪೀಠಾಧಿಪತಿ ಶಿವಯ್ಯ ಸ್ವಾಮೀಜಿಯವರು ನುಡಿಯೋ ಭವಿಷ್ಯ ಕೇಳಿ ಮಠದ ಪ್ರಸಾದವನ್ನು ಸ್ವೀಕರಿಸಿ ವಾಪಸ್ ಹೊಗೋದು ವಾಡಿಕೆ.

ಶುಭಕೃತ ನಾಮ ಸಂವತ್ಸರ ಎಲ್ಲರಿಗೂ ಶುಭ ಮಾಡಲಿದೆ. ಶುಭಕೃತ ಸಂವಸ್ಥರದಲ್ಲಿ ನೀವು ಕೆಟ್ಟ ಕೆಲಸ ಮಾಡಿದರೆ ಅದರ ಅನುಭವ ನೀವೆ ಉಣ್ಣುವಿರಿ. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು. ಆಗ ವಿಶ್ವದ ಎಲ್ಲ ದೇಶಗಳು ಭಾತರದ ಮಾತು ಕೇಳುತ್ತವೆ. ಈ ಹಿಂದೆ ಕೂಡ ವರ್ಷಭವಿಷ್ಯವನ್ನು ಮಠದ ಸ್ವಾಮೀಜಿಗಳು ನುಡಿದಿದ್ದಾರೆ ಮತ್ತೂ ಇಲ್ಲೀವರೆಗೆ ಯಾವುದೂ ಸುಳ್ಳಾಗಿಲ್ಲ. ವಿಜಯಪುರ ತಾಲೂಕಿನ ಕತಕನಹಳ್ಳಿ ಗ್ರಾಮದ ಶ್ರೀ ಗುರುಚಕ್ರವರ್ತಿ ಸದಾಶಿವ ಮಠದ ಪೀಠಾಧಿಪತಿ ಪ್ರತಿ ವರ್ಷ ಯುಗಾದಿಯಲ್ಲಿ ನಡೆಯುವ ಜಾತ್ರೆಯಲ್ಲಿ ಭವಿಷ್ಯ ನುಡಿಯುತ್ತಾರೆ. ಯುಗಾದಿಯ ವರ್ಷ ತೊಡಕಿನ ಮಾರನೇ ದಿನ ಭವಿಷ್ಯವಾಣಿಯನ್ನು ಇಲ್ಲಿ ಸ್ವಾಮೀಜಿ ಹೇಳುತ್ತಾರೆ.

ಪಾಪ ಪುಣ್ಯದ ಲೆಕ್ಕಾಚಾರ ಅವರವರಿಗೆ ಬಿಟ್ಟಿದ್ದು
ಈ ವರ್ಷ ಶುಭಕೃತನಾಮ ಸಂವತ್ಸವವಿದೆ ಎಲ್ಲರಿಗೂ ಶುಭವಾಗುತ್ತದೆ. ಪಾಪ ಪುಣ್ಯದ ಲೆಕ್ಕಾಚಾರ ಅವವರಿಗೆ ಬಿಟ್ಟಿದ್ದು ಎಂದಿದ್ದಾರೆ ಶ್ರೀ ಶಿವಯ್ಯ ಸ್ವಾಮೀಜಿ. ಭಾರತೀಯ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಉಳಿದಿದ್ದೆ ಹೆಣ್ಣುಮಕ್ಕಳಿಂದ, ಇವೆಲ್ಲವುಗಳನ್ನು ಹೆಣ್ಣುಮಕ್ಕಳು ಬಂಗಾರದ ಆಭರಣ ಕಾಪಾಡಿದಂತೆ ಕಾಪಾಡಬೇಕೆಂದು ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ. ಜಾತಿಯತೆಯ ವಿಚಾರವಾಗಿಯೂ ಭವಿಷ್ಯ ನುಡಿದಿದ್ದಾರೆ. ಜಾತಿಗೊಂಡು ಝೇಂಡಾ, ಝೇಂಡಾದಲ್ಲೊಂದು ಅಜೆಂಡಾ ಕೊನೆಗೆ ಹಾದಿಗೊಂದಾಗಿ ಬೀದಿಗೊಂದು ಆಗುತ್ತವೆ, ಅದಕ್ಕೆ ಯಾರೂ ಮೆಚ್ಚಬಾರದು ಎಂದು ಜಾತಿ ಮಾಡುವವರೆಲ್ಲಾ ಉಳಿಯಲ್ಲಾ ಎಂದಿದ್ದಾರೆ. ಜಾತಿ ಮನೆಯ ಹೊಸ್ತಿಲಿನಲ್ಲಿರಲಿ ಹೊಸ್ತಿಲಿನ ಹೊರಗೆ ಬಂದಾಗ ಎಲ್ಲರೂ ಒಂದಾಗಿರಬೇಕೆಂದು ಹೇಳಿದ್ದಾರೆ. ವಾತಾವರಣದಲ್ಲಿ ಬದಲಾಗಲಿದೆ, ಬಿಸಿಲು ಹೆಚ್ಚಾಗಲಿದೆ. ಈ ಬಾರಿ ಮೂರು ಪ್ರಕಾರದ ಮಳೆಯಾಗುತ್ತದೆ. ಒಂದು ಪ್ರಕಾರದ ಮಳೆ ಹರಕು ಮಳೆ, ಮುರುಕು ಹಪ್ಪಳದಂತೆ, ಮತ್ತೊಂದೆಡೆ ಟೊಳ್ಳು ಟುಸ್ಸು ಎಂಬಂತೆ ಇರುತ್ತದೆ. ಮಲೆನಾಡು ಹೋಗಿ ಬೆಳವಲ ನಾಡು, ಬೆಳವಲ ನಾಡು ಹೋಗಿ ಮಲೆನಾಡು ಆಗಲಿದೆ ಎಂದು ಬದಲಾವಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಹಣಕ್ಕೆ ಮತ ಹಾಕಬೇಡಿ, ಗುಣಕ್ಕೆ ಮತ ಹಾಕಿ
ಇನ್ನು ಎಲೆಕ್ಷನ್ ವಿಚಾರವಾಗಿಯೂ ಭವಿಷ್ಯದಲ್ಲಿ ಮಾತನಾಡಿದ ಸ್ವಾಮೀಜಿ, ಹಣಕ್ಕೆ ಮತ ಹಾಕಬೇಡಿ, ಗುಣಕ್ಕೆ ಮತ ಹಾಕಿ ಎಂದಿದ್ದಾರೆ. ರಾಜಕೀಯ ಭವಿಷ್ಯ ಬಹಳ ಗೊಂದಲವಿದೆ. ಕೈ ತಿದ್ದಿಕೋಬೇಕು ಎನ್ನುತ್ತದೆ, ಮುಂದಿನ ಜಾತ್ರೆಯಲ್ಲಿ ಅದರ ಭವಿಷ್ಯ ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇದೆ, ಇಷ್ಟೆಲ್ಲ ಜನಕ್ಕೂ ಸೌಲಭ್ಯ ಒದಗಿಸಿರುವ ಭಾರತ ಸರ್ಕಾರಕ್ಕೆ ನೀವೆಲ್ಲ ನೆನೆಸಬೇಕು. ಒಳ್ಳೆಯವರು, ಕೆಟ್ಟವರು ಯಾರು ಎಂದು ನೀವೆಲ್ಲ ಯೋಚಿಸಿ. ಕೊರೊನಾಗೆ ಎರಡು ಡೋಸ್ ಲಸಿಕೆ ಉಚಿತವಾಗಿ ನೀಡಲಾಗಿದೆ ಬೇರೆ ಬೇರೆ ದೇಶಗಳಗೂ ಲಸಿಕೆ ನೀಡಲಾಗಿದೆ. ಅಂಥವರನ್ನಾ ಮರೆಯಬಾರದು ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪರವಾಗಿ ಭವಿಷ್ಯವಾಣಿಯಲ್ಲಿ ಪ್ರಸ್ತಾಪ ಮಾಡಿದರು.

ಕಳೆದ ಐನೂರು ವರ್ಷಗಳ ಇತಿಹಾಸವಿರೋ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠಕ್ಕೆ ಅಪಾರ ಭಕ್ತ ವೃಂದವಿದೆ. ಇಂದು ಮಠದ ಪೀಠಾಧಿಪತಿಗಳು ನುಡಿಯೋ ಭವಿಷ್ಯವಾಣಿಯನ್ನು ಕೇಳಲು ದೂರದೂರುಗಳಿಂದ ಅನ್ಯ ಜಿಲ್ಲೆಗಳಿಂದ ಅನ್ಯ ರಾಜ್ಯಗಳಿಂದ ಜನರು ಆಗಮಿಸಿದ್ದರು. ಮಠದಲ್ಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳನ್ನು ಮುಗಿಸಿ ಬಾಜಾ ಭಜಂತ್ರಿ ಸಮೇತವಾಗಿ ಸ್ವಾಮೀಜಿಗಳು ಗ್ರಾಮದ ಬೇವಿನ ಕಟ್ಟೆಯ ಬಳಿಗೆ ಆಗಮಿಸುತ್ತಾರೆ. ಅಲ್ಲಿ ಕುಂಭ ಪೂಜೆಗಳನ್ನು ಮಾಡಿ ದೇವರಿಗೆ ನೈವೇದ್ಯ ಸಮರ್ಪಿಸಲಾಗುತ್ತೆ.

ಪೂಜಾ ವಿಧಿವಿಧಾನಗಳು ಮುಗಿದ ನಂತರ ಸ್ವಾಮೀಜಿಗಳು ಭವಿಷ್ಯ ಹೇಳುವುದು ಆರಂಭವಾಯ್ತು. ಸ್ವಾಮೀಜಿಗಳು ಭವಿಷ್ಯವಾಣಿ ನುಡಿಯಲು ಆರಂಭಿಸುತ್ತಿದ್ದಂತೆ ನೆರೆದ ಸಾವಿರಾರು ಜನರು ಮೌನವಾಗಿ ಭವಿಷ್ಯವಾಣಿ ಆಲಿಸಲು ಮುಂದಾದರು. ಭವಿಷ್ಯವಾಣಿಯನ್ನು ಹೇಳಿದ ಬಲಿಕ ಪದ್ದತಿಯಂತೆ ಮೊದಲು ಐವರು ಜಂಗಮರಿಗೆ ಊಟವನ್ನು ಸ್ವಾಮೀಜಿಗಳು ಸಮರ್ಪನೆ ಮಾಡಿದರು . ಬಳಿಕ ಸರದಿಯಲ್ಲಿ ಕುಳಿತ ಮಹಿಳೆಯರಿಗೆ ಊಟವನ್ನು ಬಿಡಿಸದರು . ಆಲ್ಲಿಯವರೆಗೆ ಗ್ರಾಮದಲ್ಲಿ ಯಾರೋಬ್ಬರೂ ಊಟ ಮಾಡಿರಲ್ಲಾ. ಸ್ವಾಮೀಜಿ ಭವಿಷ್ಯ ನುಡಿದು ಊಟವನ್ನು ಬಡಿಸಿದ ಬಳಿಕವೇ ಗ್ರಾಮದ ಜನರು ಊಟ ಮಾಡುತ್ತಾರೆ.

ಇನ್ನು ಈ ಹಿಂದಿನ ಎಲ್ಲಾ ವರ್ಷಗಳಲ್ಲಿಯೂ ಸ್ವಾಮೀಜಿಗಳು ನುಡಿದ ಭವಿಷ್ಯ ನಿಜವಾಗಿದೆ. ಯಾವುದೇ ಮಾತು ಇಲ್ಲಿ ಸುಳ್ಳಾಗಿಲ್ಲಾ. ಇದೊಂದು ಪವಾಡ ಮಠವೆಂದು ಹೇಳುತ್ತಾರೆ ಮಠದ ಭಕ್ತರು. ಮಳೆ ಬೆಳೆ, ನೈಸರ್ಗಿಕ ವಿಕೋಪ, ರಾಜಕೀಯ, ರೋಗ ಭಯ, ಅಂತಾರಾಷ್ಟ್ರೀಯ ಸಮಸ್ಯೆ, ಯುದ್ದ ಭೀತಿ ಸೇರಿದಂತೆ ಇತರೆ ವಿಚಾರಗಳ ಕುರಿತ ನುಡಿದ ಭವಿಷ್ಯ ಹುಸಿಯಾಗಿಲ್ಲ ಎಂದಿದ್ದಾರೆ.

ಯುಗಾದಿಯ ವರ್ಷ ತೊಡಕಿನ ಮಾರನೇ ದಿನ ಕತಕನಹಳ್ಳಿ ಗ್ರಾಮದ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದ ಪೀಠಾಧಿಪತಿಯವರು ನುಡಿಯೋ ಭವಿಷ್ಯ ಕೇಳಲು ಆಗಮಿಸೋ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ. ನೆರೆದ ಸಾವಿರಾರು ಜನರಿಗೆ ಈ ಬಾರಿ ಪೂರಿ ಬಾಸುಂದಿ, ಸಾಗು, ಅನ್ನ ಸಾಂಬಾರ್ ನೀಡಲಾಯಿತು. ಜಿಲ್ಲೆಯ ವಿವಿಧ ಭಾಗಗಳ ಜನರು, ಅನ್ಯ ಜಿಲ್ಲೆ ಹಾಗೂ ಅನ್ಯ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಮಠದಲ್ಲಿ ಪ್ರಸಾದ ಸೇವಿಸಿ ಪುನೀತರಾದರು. ಒಟ್ಟಾರೆ ಭವಿಷ್ಯ ಹೇಳುವ ಜಾತ್ರೆಯೆಂದೇ ಕತಕನಹಳ್ಳಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದ ಜಾತ್ರೆಯನ್ನು ಕರೆಯಲಾಗುತ್ತದೆ. ಇಲ್ಲಿ ನುಡಿದ ಭವಿಷ್ಯ ಸುಳ್ಳಾಗಿಲ್ಲಾ ಎಂಬುದೂ ಸಹ ವಿಶೇಷ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇದನ್ನೂ ಓದಿ: ಜನ ಅಧಿಕಾರ ಕೊಡದಿದ್ದರೂ ಚಿಂತೆಯಿಲ್ಲ, ಕಾಂಗ್ರೆಸ್ ಸೆಕ್ಯುಲರಿಸಂ ಪರಿಪಾಲನೆ ಮಾಡುತ್ತದೆ: ಲಕ್ಷ್ಮಣ್, ಕಾಂಗ್ರೆಸ್ ವಕ್ತಾರ

Smriti Irani: ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿಗೋಷ್ಠಿ


Follow us on

Related Stories

Most Read Stories

Click on your DTH Provider to Add TV9 Kannada