ಗ್ರಾಂ.ಪಂ. ಸದಸ್ಯರಿಗೆ ಗೌರವ ಧನ ಹೆಚ್ಚಿಸದ ಕಾರಣ ತನಗೆ ಹೆಚ್ಚುವರಿ ಸಂಬಳ ಬೇಡವೆಂದ MLC ಸುನೀಲ್ ಗೌಡ!
ವಿಜಯಪುರ ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಕ್ಷೇತ್ರದ ಪರಿಷತ್ ಸದಸ್ಯ ಸುನೀಲ್ಗೌಡ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಧನ ಹೆಚ್ಚಿಸಲು ಸರ್ಕಾರ ಗಮನ ನೀಡದ ಕಾರಣ ತಮ್ಮ ಹೆಚ್ಚುವರಿ ಸಂಬಳ ನಿರಾಕರಿಸಿದ್ದಾರೆ.
ವಿಜಯಪುರ: ರಾಜ್ಯದ ಶಾಸಕರಿಗೆ, ಸಚಿವರಿಗೆ ಸಂಬಳ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿ MLC ಸುನೀಲ್ ಗೌಡ ಹೆಚ್ಚುವರಿ ಸಂಬಳ ನಿರಾಕರಿಸಿದ್ದಾರೆ. ಗ್ರಾಂ. ಪಂ. ಸದಸ್ಯರಿಗೆ ಗೌರವ ಧನ ಹೆಚ್ಚಿಸದ ಕಾರಣ ತಮ್ಮ ಹೆಚ್ಚುವರಿ ಸಂಬಳವನ್ನು ನಿರಾಕರಿಸಿದ್ದಾರೆ. ಗ್ರಾಂ. ಪಂ. ಸದಸ್ಯರಿಗೆ ಗೌರವ ಧನ ಹೆಚ್ಚಿಸಲು ಕಳೆದ 4 ವರ್ಷಗಳಿಂದ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಗ್ರಾಂ. ಪಂ. ಸದಸ್ಯರ ಗೌರವ ಧನವನ್ನ ಹೆಚ್ಚಿಸುವವರೆಗೂ ಸರ್ಕರದ ಹೆಚ್ಚುವರಿ ಸಂಬಳವನ್ನ ತೆಗೆದುಕೊಳ್ಳಲ್ಲ ಎಂದು ವಿಜಯಪುರದಲ್ಲಿ MLC ಸುನೀಲ್ಗೌಡ ಪಾಟೀಲ್ ಖಡಕ್ ಆಗಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ.
ವಿಜಯಪುರ ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಕ್ಷೇತ್ರದ ಪರಿಷತ್ ಸದಸ್ಯ ಸುನೀಲ್ಗೌಡ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಧನ ಹೆಚ್ಚಿಸಲು ಸರ್ಕಾರ ಗಮನ ನೀಡದ ಕಾರಣ ತಮ್ಮ ಹೆಚ್ಚುವರಿ ಸಂಬಳ ನಿರಾಕರಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಳ ಮಾಡಲಾಗಿತ್ತು. ನಂತರ ಗ್ರಾಪಂ ಸದಸ್ಯರಿಗೆ ಹಾಗೂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗೌರವ ಧನ ಹೆಚ್ಚಳ ಕುರಿತು ಸರ್ಕಾರಕ್ಕೆ ಪ್ರಶ್ನೆ ಮಾಡಲಾಗಿದೆ. ಸರ್ಕಾರ ಆರ್ಥಿಕ ಇಲಾಖೆ ಅನುಮೋದನೆ ಇಲ್ಲವೆಂದು ನೆಪ ಹೇಳುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಕುರಿತು ಸದನದಲ್ಲಿ ಪ್ರಶ್ನೆ ಕೇಳಿದರೂ ಸರ್ಕಾರ ಗಮನ ಹರಿಸಿಲ್ಲ.
ಗ್ರಾಪಂ ಅಧ್ಯಕ್ಷರಿಗೆ ಮಾಸಿಕ ಐದು ಸಾವಿರ, ಉಪಾಧ್ಯಕ್ಷರಿಗೆ ಮಾಸಿಕ ನಾಲ್ಕು ಸಾವಿರ, ಸದಸ್ಯರಿಗೆ ಮಾಸಿಕ 3000 ರೂಪಾಯಿ ನಿಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಸರ್ಕಾರ ಈ ವಿಚಾರದಲ್ಲಿ ಸೂಕ್ತವಾಗಿ ಸ್ಪಂದನೆ ನೀಡುತ್ತಿಲ್ಲ. ಗ್ರಾಮ ಪಂಚಾಯತಿ ಸದಸ್ಯರಿಗೆ ಮಾಸಿಕ ಹತ್ತು ಸಾವಿರ ರೂಪಾಯಿ ನೀಡೋದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಗ್ರಾಪಂ ಸದಸ್ಯರಿಗೆ ಸುಳ್ಳು ಭರವಸೆ ನೀಡಿದ್ದಾರೆ ಎಂದು ಸುನೀಲ್ಗೌಡ ಪಾಟೀಲ್ ಆರೋಪ ಮಾಡಿದ್ದಾರೆ.
ಅಲ್ಲದೆ ಕೇರಳ ಮಾದರಿಯಲ್ಲಿ ಗ್ರಾಪಂ ಆಧ್ಯಕ್ಷರಿಗೆ ವಾಹನ ಸೌಲಭ್ಯದ ಭರವಸೆ ನೀಡಿದ್ದರು. ಆದರೆ ಗೌರವ ಧನ ನೀಡುವಲ್ಲಿಯೇ ಸರ್ಕಾರ ಮುಂದೆ ಬರುತ್ತಿಲ್ಲ ಎಂದು ಪರಿಷತ್ ಸದಸ್ಯ ಸುನೀಲಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಳವಾಗೋವರೆಗೂ ಹೆಚ್ಚುವರಿ ಸಂಬಳ ತೆಗೆದುಕೊಳ್ಳಲ್ಲಾ ಎಂದು ವಿಜಯಪುರ ನಗರದಲ್ಲಿ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಬೆನ್ನಲ್ಲೇ ಒಂದು ಮಹತ್ವದ ಕ್ರಮ ಕೈಗೊಂಡ ಗೂಗಲ್; ಏನದು?
Published On - 1:20 pm, Mon, 28 February 22