ಮೊದಲ ಬಾರಿಗೆ ವಕ್ಫ್ ವಿರುದ್ಧ ಹೋರಾಟದ ಕಿಚ್ಚು ಹೊತ್ತಿಸಿದ್ದ ಗ್ರಾಮದಲ್ಲಿ ಸಂಭ್ರಮಾಚರಣೆ
Waqf Bill: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಹೊತ್ತಿದ ವಕ್ಫ್ ವಿರುದ್ಧದ ಬೆಂಕಿ ದೇಶಾದ್ಯಂತ ಹಬ್ಬಿತ್ತು. ವಕ್ಫ್ ಕಾಯ್ದೆ ತಿದ್ದುಪಡಿಗೆ ದೇಶಾದ್ಯಂತ ಆಗ್ರಹ ಕೇಳಿಬಂದಿತ್ತು. ದೇಶ್ಯಾದ್ಯಂತ ವ್ಯಾಪಕ ಆಗ್ರಹ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಸರ್ಕಾರ ವಕ್ಫ್ಗೆ ಕೆಲವು ತಿದ್ದುಪಡಿ ಮಾಡಿ, ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದಿದೆ. ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟಪತಿಗಳು ಸಹಿ ಹಾಕಿದ್ದು, ಕಾನೂನಾಗಿ ಮಾರ್ಪಟ್ಟಿದೆ. ಇದರಿಂದ ಹೊನವಾಡ ಗ್ರಾಮದ ರೈತರು ಸಂಭ್ರಮಿಸಿದ್ದಾರೆ.

ವಿಜಯಪುರ, ಏಪ್ರಿಲ್ 06: ಕಳೆದ ವರ್ಷ ರಾಜ್ಯದಲ್ಲಿ ವಕ್ಫ್ (Waqf) ವಿರುದ್ಧದ ಹೋರಾಟ ತೀವ್ರವಾಗಿತ್ತು. ಅದರಲ್ಲೂ ವಕ್ಪ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಮೊಟ್ಟಮೊದಲು ಹೋರಾಟ ಆರಂಭವಾಗಿದ್ದೇ ವಿಜಯಪುರ (Vijayapura) ಜಿಲ್ಲೆಯಲ್ಲಿ. ಜಿಲ್ಲೆಯ ತಿಕೋಟಾ (Tikota) ತಾಲೂಕಿನ ಹೊನವಾಡ ಗ್ರಾಮದ (Honawad) ರೈತರು ವಕ್ಫ್ ಬೋರ್ಡ್ ಗೆಜೆಟ್ನಲ್ಲಿ ತಮ್ಮ ಗ್ರಾಮದ 1200 ಎಕರೆ ಜಮೀನುಗಳ ಹೆಸರುಗಳಿವೆ. ಅವು, ವಕ್ಪ್ ಬೋರ್ಡ್ಗೆ ಸೇರುವ ಭಯ ವ್ಯಕ್ತಪಡಿಸಿದ್ದರು. ಇದೀಗ, ವಕ್ಫ್ ತಿದ್ದುಪಡಿ ಮಸೂದೆ ಕಾನೂನಾಗಿ ಮಾರ್ಪಟ್ಟ ಬೆನ್ನಲ್ಲೇ ಹೊನವಾಡ ಗ್ರಾಮದ ರೈತರು ಸಂಭ್ರಮಿಸಿದ್ದಾರೆ.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೂ ವಕ್ಫ್ ಕಾಯ್ದೆ ತಿದ್ದುಪಡಿ ಅನುಮೋದನೆಗೊಂಡು ಇದೀಗ ರಾಷ್ಟ್ರಪತಿಗಳ ಅಂಕಿವನ್ನೂ ಪಡೆದಿದೆ. ವಕ್ಫ್ ತಿದ್ದುಪಡಿ ಮಸೂದೆ ಕುರಿತು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಮಾತನಾಡುವ ವೇಳೆ ಇಡೀ ದೇಶದಲ್ಲೇ ವಕ್ಫ್ ಕಾಯ್ದೆ ವಿರುದ್ಧ ಮೊದಲಿಗೆ ಧ್ವನಿ ಎತ್ತಿದ್ದು ಕರ್ನಾಟಕದಲ್ಲಿ. ಅದರಲ್ಲೂ ವಿಜಯಪುರ ಜಿಲ್ಲೆ ಹೊನವಾಡ ಗ್ರಾಮದ ರೈತರು ಕಾಯ್ದೆ ಸಮಸ್ಯೆ ಕುರಿತು ಧ್ವನಿ ಎತ್ತಿದ್ದರು. ಈ ಹೋರಾಟವೇ ವಕ್ಪ್ ಕಾಯ್ದೆ ತಿದ್ಡುಪಡಿಗೆ ಪ್ರೇರಣೆಯಾಗಿದೆ ಎಂದು ಸಂಸತ್ತಿಗೆ ತಿಳಿಸಿದ್ದರು.
ದೇಶದಲ್ಲೇ ಮೊಟ್ಟ ಮೊದಲು ವಕ್ಫ್ ವಿರುದ್ಧ ಹೋರಾಟಕ್ಕೆ ಕಾರಣೀಕರ್ತರಾದ ಹೊನವಾಡ ಗ್ರಾಮದ ರೈತರಿಗೆ ಜಿಲ್ಲಾ ಬಿಜೆಪಿ ಘಟಕದಿಂದ ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪಾ ಅಂಗಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ್, ಮುಖಂಡ ವಿಜುಗೌಡ ಪಾಟೀಲ್ ಹಾಗೂ ಇತರರು ಹೊನವಾಡ ಗ್ರಾಮಕ್ಕೆ ತೆರಳಿ ಅಲ್ಲಿನ ರೈತರಿಗೆ ಶಾಲು ಹೊದಿಸಿ ಹಾರ ಹಾಕಿ ಗೌರವಿಸಿದರು. ಪಟಾಕಿ ಸಿಡಿಸಿ ಸಂತಸಪಟ್ಟರು. ವಕ್ಫ್ ಕಾಯ್ದೆ ತಿದ್ದುಪಡಿಗೆ ಹೊನವಾಡ ಗ್ರಾಮದ ರೈತರ ಹೋರಾಟವೇ ಕಾರಣವೆಂದು ಬಿಜೆಪಿ ಮುಖಂಡರು ಹೇಳಿದರು.
ವಕ್ಫ್ ವಿರುದ್ಧ ಹೊನವಾಡ ಗ್ರಾಮದ ಹೋರಾಟ
2024 ರ ಅಕ್ಟೋಬರ್ ಮದ್ಯ ಭಾಗದಲ್ಲಿ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 1200 ಎಕರೆ ಜಮೀನು ವಕ್ಫ್ ಬೋರ್ಡ್ನ ಗೆಜೆಟ್ನಲ್ಲಿದೆ. 1200 ಎಕರೆ ಜಮೀನು ವಕ್ಫ್ ಬೋರ್ಡಿಗೆ ಹೋಗುತ್ತದೆ ಎಂದು ಹೊನವಾಡ ಗ್ರಾಮದ ನೂರಾರು ರೈತರು ಭಯಗೊಂಡಿದ್ದರು. ನಮ್ಮ ಜಮೀನು ವಕ್ಫ್ಗೆ ಸೇರಬಾರದು ಎಂದು ಜಿಲ್ಲಾಧಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದ್ದರು. ಬಳಿಕ ಜಂಟೀ ಸಂಸದೀಯ ಸಮಿತಿ ಸದಸ್ಯ ತೇಜಸ್ವಿ ಸೂರ್ಯ ಅವರಿಗೂ ಭೇಟಿಯಾಗಿ ತಮ್ಮ ಸಮಸ್ಯೆ ಪರಿಹರಿಸಬೇಕೆಂದು ಮನವಿ ಸಲ್ಲಿಕೆ ಮಾಡಿದ್ದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ದಾಖಲಾತಿಗಳ ಸಮೇತ ಹೇಳಿಕೆ ನೀಡಿ ಹೊನವಾಡ ಗ್ರಾಮದ 1200 ಎಕರೆ ಜಮೀನಿಗೂ ವಕ್ಪ್ ಬೋರ್ಡಿಗೂ ಸಂಬಂಧವಿಲ್ಲ. ಸ್ಮಶಾನದ ಭೂಮಿಯ ವಿಚಾರ ನ್ಯಾಯಾಲಯದಲ್ಲಿದೆ. ರೈತರು ಭಯಗೊಳ್ಳಬಾರದು, ಯಾವುದೇ ಸಮಸ್ಯೆಯಿಲ್ಲ ಎಂದಿದ್ದರು.
ಹೊನವಾಡ ಗ್ರಾಮದಲ್ಲಿ ಹೊತ್ತಿದ ವಕ್ಫ್ ವಿರುದ್ಧದ ಬೆಂಕಿ ದೇಶಾದ್ಯಂತ ಹಬ್ಬಿತ್ತು. ವಕ್ಫ್ ಕಾಯ್ದೆ ತಿದ್ದುಪಡಿಗೆ ದೇಶಾದ್ಯಂತ ಆಗ್ರಹ ಕೇಳಿಬಂದಿತ್ತು. ಬಳಿಕ, ಸಂಸತ್ತಿನ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸದಸ್ಯರು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ, ರೈತರ ಮನವಿ ಸ್ವೀಕರಿಸಿದರು. ನಂತರ, ಜೆಪಿಸಿ ವಕ್ಫ್ ಮಸೂದೆಯಲ್ಲಿ ತಿದ್ದುಪಡಿ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಇದೀಗ, ವಕ್ಫ ಮಸೂದೆ ತಿದ್ದುಪಡಿಯಾಗಿ ಕಾನೂನಾಗಿ ಜಾರಿಯಾಗಿದೆ. ಇದೀಗ ಇಡೀ ವಕ್ಫ್ ಮಸೂದೆ ತಿದ್ದುಪಡಿಯಾಗಿ, ಕಾನೂನಾಗಿ ಜಾರಿಯಾದ ಕಾರಣ ಹೊನವಾಡ ಗ್ರಮಾದ ರೈತರು ಸಂಭ್ರಮಾಚರಿಸಿದ್ದಾರೆ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೊನವಾಡ ಗ್ರಾಮದ ರೈತರು, ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ವಕ್ಫ್ ಬೋರ್ಡ್ ಸಂಬಂಧಿಸಿದ ಜಮೀನು ಆಸ್ತಿ ಇಂದೀಕರಣ ಮಾಡಲು ಸೂಚನೆ ನೀಡಿದ್ದೇ ರೈತರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ, ವಕ್ಫ್ ಗೆಜೆಟ್ನಲ್ಲಿ ನಮ್ಮ ಜಮೀನುಗಳ ಸರ್ವೇ ನಂಬರ್ ಇದ್ದ ಕಾರಣ ನಾವು ಭಯಗೊಂಡು ಹೋರಾಟ ಮಾಡಿದ್ದೇವು. ಈಗಾ ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ವಕ್ಪ್ ಕಾಯ್ದೆಯೇ ತಿದ್ದುಪಡಿಯಾದ ಕಾರಣ ರೈತರಿಗೆ ಖುಷಿಯಾಗಿದೆ ಎಂದು ಹೋರಾಟ ಮಾಡಿದ ಹೇಳಿದ್ದಾರೆ.
ಇದನ್ನೂ ಓದಿ: Waqf Bill: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಮುಂದಾದ ಕಾಂಗ್ರೆಸ್
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಯಾಗಿದ್ದು ಮಾತ್ರ ವಿಜಯಪುರ ಜಿಲ್ಲೆಯಲ್ಲಿ ಸಡಗರ ಸಂಭ್ರಮಕ್ಕೆ ಕಾರಣವಾಗಿದೆ. ಇಡೀ ಹೋರಾಟಕ್ಕೆ ಮೂಲ ಕಾರಣವಾಗಿದ್ದ ಹೊನವಾಡ ಗ್ರಾಮದ ರೈತರು ಸಹ ಕಾಯ್ದೆ ತಿದ್ಡುಪಡಿಯಾಗಿದ್ದಕ್ಕೆ ಸಂತಸ ಪಟ್ಟಿದ್ದಾರೆ. ನಮ್ಮ ಹೋರಾಟ ವಕ್ಫ ಕಾಯ್ದೆ ಬದಲಾವಣೆಗೆ ಕಾರಣವಾಗಿದ್ದಕ್ಕೆ ಸಂಭ್ರಮಿಸಿದರು.