ನಿಡಗುಂದಿ: ಬಸ್ ನಿಲ್ದಾಣದಲ್ಲಿಯೇ ಮಗು ಜನನ
ವಿಜಯಪುರ: ಬಸ್ಗಾಗಿ ಕಾಯುತ್ತಿದ್ದ ಗರ್ಭಿಣಿಗೆ ಬಸ್ ನಿಲ್ದಾಣದಲ್ಲಿಯೇ ಹೆರಿಗೆಯಾಗಿರುವ ಘಟನೆ ನಿಡಗುಂದಿಯಲ್ಲಿ ನಡೆದಿದೆ. ಬಸವನಬಾಗೇವಾಡಿಯ ಮಹಾದೇವಿ ಹಣಮಂತ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಮಹಾದೇವಿ ತೆರಳಬೇಕಾಗಿತ್ತು. ಹೀಗಾಗಿ ಸುಮಾರು 1 ಗಂಟೆಯಿಂದ ನಿಡಗುಂದಿಯ ನಿಲ್ದಾಣದಲ್ಲಿ ಬಸ್ಗಾಗಿ ಮಹಾದೇವಿ ಕಾಯುತ್ತಿದ್ದರು. ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರ ಸಹಾಯದಿಂದ ಬಸ್ ನಿಲ್ದಾಣದಲ್ಲಿಯೇ ಮಗುವಿಗೆ ಮಹಾದೇವಿ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಹೆರಿಗೆ ಬಳಿಕ ನಿಡಗುಂದಿ ಸಮುದಾಯ […]
ವಿಜಯಪುರ: ಬಸ್ಗಾಗಿ ಕಾಯುತ್ತಿದ್ದ ಗರ್ಭಿಣಿಗೆ ಬಸ್ ನಿಲ್ದಾಣದಲ್ಲಿಯೇ ಹೆರಿಗೆಯಾಗಿರುವ ಘಟನೆ ನಿಡಗುಂದಿಯಲ್ಲಿ ನಡೆದಿದೆ. ಬಸವನಬಾಗೇವಾಡಿಯ ಮಹಾದೇವಿ ಹಣಮಂತ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಹೆರಿಗೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಮಹಾದೇವಿ ತೆರಳಬೇಕಾಗಿತ್ತು. ಹೀಗಾಗಿ ಸುಮಾರು 1 ಗಂಟೆಯಿಂದ ನಿಡಗುಂದಿಯ ನಿಲ್ದಾಣದಲ್ಲಿ ಬಸ್ಗಾಗಿ ಮಹಾದೇವಿ ಕಾಯುತ್ತಿದ್ದರು. ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಸ್ಥಳೀಯರ ಸಹಾಯದಿಂದ ಬಸ್ ನಿಲ್ದಾಣದಲ್ಲಿಯೇ ಮಗುವಿಗೆ ಮಹಾದೇವಿ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಹೆರಿಗೆ ಬಳಿಕ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಯಿ-ಮಗುವನ್ನು ಸೇರಿಸಲಾಗಿದೆ.
Published On - 2:45 pm, Wed, 1 January 20