ಅಮೆರಿಕದಿಂದ ಬಂದು ಕೃಷಿಯಲ್ಲಿ ಕಮಾಲ್ ಮಾಡಿದ ಮೈಕ್ರೋಸಾಫ್ಟ್ ಕಂಪನಿ ಡೈರೆಕ್ಟರ್

ಅಮೆರಿಕದಿಂದ ಬಂದು ಕೃಷಿಯಲ್ಲಿ ಕಮಾಲ್ ಮಾಡಿದ ಮೈಕ್ರೋಸಾಫ್ಟ್ ಕಂಪನಿ ಡೈರೆಕ್ಟರ್

ವಿಜಯಪುರ: ಸಾವಿರ ಅಡಿ ಬೋರ್ ಕೊರೆಸಿದ್ರೂ ನೀರು ಸಿಗ್ತಿಲ್ಲ. ಬಾವಿಗಳೂ ಬತ್ತಿ ಹೋಗಿವೆ. ಬೆಳೆ ಬೆಳೆಯೋಕೆ ಹನಿ ನೀರೂ ಇಲ್ಲ ಅನ್ನೋರೇ ಹೆಚ್ಚು. ಆದ್ರೆ ಇವ್ರು ಮಾತ್ರ ಅಮೆರಿಕಾದಿಂದ ಬಂದು ಕೃಷಿಯಲ್ಲಿ ಕಮಾಲ್ ಮಾಡ್ತಿದ್ದಾರೆ. ಹೊಲದ ತುಂಬೆಲ್ಲಾ ಹಸಿರು ನಳನಳಿಸ್ತಿದೆ. ನೀರು ಜಲಪಾತದಂತೆ ಧುಮ್ಮಿಕ್ತಿದೆ. ಹಾಗಂತ ಇದು ಎರಡೇ ದಿನದಲ್ಲಿ ಸಿಕ್ಕ ಯಶಸ್ಸಲ್ಲ. ಬರದ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಿರೋರ ಸಾಹಸದ ಕಥೆ ಇದು.

ಸಾಲು ಸಾಲು 12 ಕೊಳವೆ ಬಾವಿ:
ಜಿಲ್ಲೆಯಲ್ಲಿ ವಾಟರ್ ಹಾರ್ವೆಸ್ಟಿಂಗ್​ನಲ್ಲಿ ಯಶಸ್ಸು ಕಂಡ ಮೈಕ್ರೋಸಾಫ್ಟ್ ಕಂಪನಿ ನಿರ್ದೇಶಕನ ಕಥೆ ಇದು. ತಾಳಿಕೋಟೆ ತಾಲೂಕಿನ ಕಣ್ಣೂರು ಗ್ರಾಮದ ವಿಜಯಕುಮಾರ ಅಸ್ಕಿ ಅಮೆರಿಕದಲ್ಲಿ ಕೆಲಸ ಮಾಡ್ತಿದ್ರು. ಆದ್ರೆ ತನ್ನೂರಲ್ಲಿ ನೀರಿನ ಸದ್ಬಳಕೆ ಹಾಗೂ ಜಲಸಂರಕ್ಷಣೆ ಜಾಗೃತಿ ಮೂಡಿಸಲು 21 ವರ್ಷ ಮಾಡಿದ್ದ ಕೆಲ್ಸ ಬಿಟ್ಟು ಬಂದಿದ್ರು. ಅದ್ರಂತೆ ಜಲತಜ್ಞರ ಸಲಹೆಯಂತೆ ಸಾಲು ಸಾಲಾಗಿ 12 ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಹಾಗೇ ಮಳೆ ನೀರಿನ ಕೊಯ್ಲು ಮೂಲಕ ನೀರನ್ನ ಸದ್ಬಳಕೆ ಮಾಡಿಕೊಂಡು ಬೆಳೆ ಬೆಳೀತಿದ್ದಾರೆ.

ಮಳೆಯ ನೀರು ಮರುಪೂರಣ:
ಇನ್ನು ಇದಕ್ಕೂ ಮುನ್ನ ವಿಜಯಕುಮಾರ ಅಸ್ಕಿ ಅವರ 21 ಎಕರೆ ಜಮೀನಿನಲ್ಲಿ ನೀರಿನ ಅಭಾವವಿತ್ತಂತೆ. ಆದ್ರೆ ಯಾವಾಗ ಮಳೆ ನೀರನ್ನು ಹಿಡಿದಿಟ್ಟುಕೊಂಡು ಕೊಳವೆ ಬಾವಿ ಮರುಪೂರಣ ಮಾಡಿದರೋ ಆಗ ಇಡೀ ಚಿತ್ರಣವೇ ಬದಲಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಬರ್ತಿದೆ. ಅಲ್ದೇ ಕೊಳವೆ ಬಾವಿಗೆ ಮಳೆಯ ನೀರನ್ನು ಮರುಪೂರಣ ಮಾಡುವುದರ ಮೂಲಕ ನೀರನ್ನು ರಕ್ಷಿಸಿಡುತ್ತಿದ್ದಾರೆ. ಹೈಫೈ ಲೈಫ್. ಲಕ್ಷ ಲಕ್ಷ ಸ್ಯಾಲರಿ ಬಿಟ್ಟು ಬಂದವ್ರು ಇವತ್ತು ಹಳ್ಳಿಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೊಸ ಹೊಸ ವಿಧಾನಗಳ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

Click on your DTH Provider to Add TV9 Kannada