ವಕ್ಫ್​ ವಿವಾದ ಬೆನ್ನಲ್ಲೇ ರೈತರ ಪಹಣಿ ಸಿಗದಂತೆ ಸರ್ವರ್ ಡೌನ್: ಸರ್ಕಾರದ ವಿರುದ್ಧ ಯತ್ನಾಳ್​ ಆರೋಪ

ವಿಜಯಪುರದಲ್ಲಿ ರೈತರಿಗೆ ವಕ್ಫ್​​ ಬೋರ್ಡ್​​ ನೋಟಿಸ್​ ಖಂಡಿಸಿ ಮಾಡುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ವಕ್ಫ್​ ಕಾಯ್ದೆ ತೊಲಗಿಸಲು ಈ ಹೋರಾಟ. ರೈತರ ಪಹಣಿ ಸಿಗದಂತೆ ಸರ್ವರ್ ಡೌನ್ ಮಾಡಿದ್ದಾರೆ. ಸರ್ಕಾರವೇ ಡೌನ್ ಆಗಲಿದೆ ಎಂದು ಕಿಡಿಕಾರಿದ್ದಾರೆ.

ವಕ್ಫ್​ ವಿವಾದ ಬೆನ್ನಲ್ಲೇ ರೈತರ ಪಹಣಿ ಸಿಗದಂತೆ ಸರ್ವರ್ ಡೌನ್: ಸರ್ಕಾರದ ವಿರುದ್ಧ ಯತ್ನಾಳ್​ ಆರೋಪ
ವಕ್ಫ್​ ವಿವಾದ ಬೆನ್ನಲ್ಲೇ ರೈತರ ಪಹಣಿ ಸಿಗದಂತೆ ಸರ್ವರ್ ಡೌನ್: ಸರ್ಕಾರದ ವಿರುದ್ಧ ಯತ್ನಾಳ್​ ಆರೋಪ
Edited By:

Updated on: Nov 04, 2024 | 4:31 PM

ವಿಜಯಪುರ, ನವೆಂಬರ್​ 04: ರೈತರ ಪಹಣಿ ಸಿಗದಂತೆ ಸರ್ವರ್ ಡೌನ್ ಮಾಡಿದ್ದಾರೆ. ಸರ್ಕಾರವೇ ಡೌನ್ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basanagouda Patil) ಹೇಳಿದ್ದಾರೆ. ನಗರದಲ್ಲಿ ರೈತರಿಗೆ ವಕ್ಫ್​​ ಬೋರ್ಡ್​​ ನೋಟಿಸ್​ ಖಂಡಿಸಿ ಪ್ರತಿಭಟನೆ ವೇಳೆ​ ಭಾಷಣ ಮಾಡಿದ ಅವರು, ಎಲ್ಲರೂ ಗಟ್ಟಿ ಆದರೆ ರೈತರ, ಮಠಗಳ‌ ಜಮೀನು ಉಳಿಯುತ್ತೆ. ಎಷ್ಟು ಅಂತಾ ಮನೆಯಲ್ಲಿ ಕುಳಿತುಕೊಳ್ಳುವುದು. ಮುಂದೆ ಧರ್ಮ‌ಯುದ್ಧ ಆಗೋದೇ ಎಂದಿದ್ದಾರೆ.

ಮುಸ್ಲಿಂ ಮೌಲ್ವಿಗಳಿಂದ ಪ್ರಧಾನಿ ಮೋದಿಗೆ ಎಚ್ಚರಿಕೆ

ವಕ್ಫ್​ ಕಾಯ್ದೆ ತೊಲಗಿಸಲು ಈ ಹೋರಾಟ ಮಾಡಲಾಗುತ್ತಿದೆ. ವಕ್ಫ್​​ ವಿರುದ್ಧ ಹೋರಾಟ ಶುರುವಾಗಿದ್ದೇ ವಿಜಯಪುರದ ಪವಿತ್ರ ಭೂಮಿಯಿಂದ. ಕರಾಳ ಶಾಸನದ ಅನುಭವ ಆಗುತ್ತಿದೆ. ವಕ್ಫ್​ ವಿರುದ್ಧ ದೊಡ್ಡ ಮಟ್ಟದ ಹೋರಾಟದ ಅಗತ್ಯವಿದೆ. ನಿನ್ನೆ ದೆಹಲಿಯಲ್ಲಿ ಮುಸ್ಲಿಂ ಮೌಲ್ವಿಗಳು ಸಭೆ ನಡೆಸಿ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ. ಮೋದಿ ತರುವ ಕಾಯ್ದೆ ಬೆಂಬಲಿಸದಂತೆ ನಿತೀಶ್​​ ಕುಮಾರ್, ಚಂದ್ರಬಾಬು ನಾಯ್ಡುಗೂ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೀದರ್, ಧಾರವಾಡ ಜಿಲ್ಲೆಯಲ್ಲಿ ಗ್ರಾಮಗಳು ವಕ್ಫ್​ ಪಾಲು: ಜನ ಕಂಗಾಲು

ಸಿಎಂ ಸಿದ್ದರಾಮಯ್ಯ ಭೇಟಿಗೆ ಹೋದಾಗ ಜಮೀರ್ ಜತೆ ವಾಗ್ವಾದ ಆಯ್ತು. ನಾನು ಜೋರು ‌ಮಾಡಿದೆ. ಖಬರಸ್ಥಾನಗೆ ಹಸಿರು ಬಣ್ಣ ಹಾಕಬೇಕು. ಅದು‌ ಸೈತಾನ್​ಗೆ ಕಾಣಿಸಬೇಕೆಂದು ಜಮೀರ್ ಹೇಳುತ್ತಾರೆ. ಖಾವಿ ಹಾಕಿದವರು ನಾವೇ ಸೈತಾನಗಳಾ? ಆ ಮೂಲಕ ಜನ್ನತ್ ಕುರಿತ ಮುಸ್ಲಿಂ ಮುಖಂಡರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ನಮಗೆ ದೇಶ ಧರ್ಮ‌ ದೊಡ್ಡದು, ನಂತರ ನಮ್ಮ‌ ಪಾರ್ಟಿ. ದೇಶ ಉಳಿದರೆ ಎಲ್ಲ‌ ಉಳಿದಂತೆ. ದೇಶಕ್ಕಿಂತ ಖುರಾನ್ ದೊಡ್ಡದು ಅಂತಾರೆ ಮುಸ್ಲಿಮರು, ಆದರೆ ಸಂವಿಧಾನ ದೊಡ್ಡದು. ವಕ್ಫ್​ ಬೋರ್ಡ್​ ಹೋಗೋವರೆಗೂ ಹೋರಾಟ ನಿಲ್ಲದು. ಅಹೋರಾತ್ರಿ ಹೋರಾಟ ಮಾಡುತ್ತೇವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಇದೂ ಸಹ ಚರ್ಚೆಗೆ ಗ್ರಾಸವಾಗಲಿದೆ. ಮುಂದೆ ರಾಜ್ಯದಲ್ಲಿ ನಮ್ಮದೇ ಕಾಂಬಿನೇಷನ್ ನಾಯಕತ್ವ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್​ ಹೆಸರು: ಉಗ್ರ ಹೋರಾಟ ಎಚ್ಚರಿಕೆ ನೀಡಿದ ಸ್ವಾಮೀಜಿ

ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿಲ್ಲ. ಕನ್ಹೇರಿ ಸ್ವಾಮಿಜಿ ಮುಂಚೂಣಿ‌ ವಹಿಸಿಕೊಂಡಿದ್ದರೆ‌ ಇತರೆ ಸ್ವಾಮೀಜಿಗಳು ಕೊಂಕು‌ ಹೇಳುತ್ತಿದ್ದಾರೆ. ಮಠಗಳಿಗೆ ದಾನ‌ ನೀಡುವರು ಹಿಂದೂಗಳು ಮುಸ್ಲಿಂರಲ್ಲ. ಮುಸ್ಲಿಂರು ಸ್ವಾಮೀಜಿಗಳಿಗೆ ನಮಸ್ಕಾರ ಮಾಡಲ್ಲ. ಕೆಲ ಸ್ವಾಮೀಜಿಗಳು ಜ್ಯಾತ್ಯಾತೀತ ಎನ್ನುತ್ತಾರೆ. ಪಾರ್ಟಿಷನ್ ಆಪ್ ಪಾಕಿಸ್ತಾನ ಎಂಬ ಪುಸ್ತಕ ಅಂಬೇಡ್ಕರ್ ಬರೆದಿದ್ದರು ಈಗ ಹೊರ ಬಂದಿದ್ದಾರೆ. ಭಾರತ‌ ಪಾಕಿಸ್ತಾನ ವಿಭಜನೆ ಬೇಡಾ ಎಂದಿದ್ದರು. ವಿಭಜನೆ ಮಾಡಿದರೆ ಪಾಕಿಸ್ತಾನದ ಹಿಂದೂಗಳನ್ನು ಇಲ್ಲಿಗೆ ಇಲ್ಲಿರುವ ಮುಸ್ಲಿಂಮರನ್ನು ಪಾಕಿಸ್ತಾನಕ್ಕೆ ರವಾನೆ ಮಾಡಬೇಕೆಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Loading...
Unable to load recommendations.
Follow Us