AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದ ಸುಧಾಕರ್, ಶಾಸಕ ವಿಶ್ವನಾಥ್ ಸಂಧಾನ: ಇಬ್ಬರಿಗೆ ಕೊಟ್ಟ ಖಡಕ್ ಸೂಚನೆಗಳೇನು?

ಕರ್ನಾಟಕ ಬಿಜೆಪಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಮಧ್ಯ ಪ್ರವೇಶಿಸಿದ್ದು, ನಾಯಕರ ನಡುವಿನ ಒಳಜಗಳಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ನಾಯಕರ ನಡವಳಿಕೆ ಬದಲಿಸಿಕೊಳ್ಳಲು ಖಡಕ್ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಹಿರಿಯ ನಾಯಕರು ಸೇರಿಕೊಂಡು ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಹಾಗು ಯಲಹಂಕ ಶಾಸಕ ಎಸ್​​​ಆರ್ ವಿಶ್ವನಾಥ್ ನಡುವೆ ಸಂಧಾನ ಮಾಡಿದ್ದಾರೆ. ಈ ವೇಳೆ ಇಬ್ಬರಿಗೂ ಕೆಲ ಖಡಕ್ ಸೂಚನೆಗಳನ್ನು ಸಹ ನೀಡಿದ್ದಾರೆ.

ಸಂಸದ ಸುಧಾಕರ್, ಶಾಸಕ ವಿಶ್ವನಾಥ್ ಸಂಧಾನ: ಇಬ್ಬರಿಗೆ ಕೊಟ್ಟ ಖಡಕ್ ಸೂಚನೆಗಳೇನು?
Sudhakar And Vishwanath
ಕಿರಣ್​ ಹನಿಯಡ್ಕ
| Edited By: |

Updated on: Jul 06, 2026 | 5:31 PM

Share

ಮುಖ್ಯಾಂಶಗಳು

  • ಸಂಸದ ಸುಧಾಕರ್, ಶಾಸಕ ವಿಶ್ವನಾಥ್ ನಡುವೆ ಜಟಾಪಟಿಗೆ ಬ್ರೇಕ್
  • ಸಂಸದ ಸುಧಾಕರ್​, ಶಾಸಕ ವಿಶ್ವನಾಥ್ ನಡುವಿನ ಸಂಧನ ಸಭೆ ಯಶಸ್ವಿ
  • ಇಬ್ಬರಿಗೂ ಖಡಕ್ ಸೂಚನೆಗಳನ್ನ ನೀಡಿದ ಅಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಬೆಂಗಳೂರು, (ಜುಲೈ 06): ಕರ್ನಾಟಕ ಬಿಜೆಪಿಯಲ್ಲಿನ (Karnataka BJP) ಇತ್ತೀಚಿನ ವಿದ್ಯಮಾನಗಳ ಬಗ್ಗೆ ಆರ್​​​ಎಸ್​​​ಎಸ್ (RSS)​​ ಅಸಮಾಧಾನ ಹೊರಹಾಕಿದೆ. ಮೊನ್ನೇ ನಡೆದ ಬಿಜೆಪಿ ನಾಯಕರೊಂದಿಗೆ ಸಭೆಯಲ್ಲಿ ಆರ್​​ಎಸ್​​ಎಸ್ ಕೆಲ ವಿಚಾರಳನ್ನು ಪ್ರಸ್ತಾಪಿಸಿ ಕಿಡಿಕಾರಿದೆ. ನಾಯಕರ ನಡವಳಿಕೆ ಬದಲಿಸಿಕೊಳ್ಳಲು ಸಂಘದ ಪ್ರಮುಖರು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕರು ಸೇರಿಕೊಂಡು ಸಂಸದ ಡಾ ಕೆ ಸುಧಾಕರ್ (D K Sudhakar) ಹಾಗೂ ಶಾಸಕ ಎಸ್​​ಆರ್​ ವಿಶ್ವನಾಥ್ (SR VIshwanath) ಬಹಿರಂಗ ಕಿತ್ತಾಟಕ್ಕೆ ಬ್ರೇಕ್ ಹಾಕಿದ್ದಾರೆ. ಆರ್​ಎಸ್​ಎಸ್​ ಸೂಚನೆ ಮೇರೆಗೆ ಸುಧಾಕರ್ ಮತ್ತು ವಿಶ್ವನಾಥ್ ನಡುವೆ ಸಂಧಾನ ಸಭೆ ಮಾಡಿದ್ದು, ಇಬ್ಬರಿಗೆ ಕೆಲ ಖಡಕ್ ಸೂಚನೆಗಳನ್ನು ನೀಡಲಾಗಿದೆ.

ಲೆಫ್ಟ್ ರೈಟ್ ತೆಗೆದುಕೊಂಡ ಆರ್​​ಎಸ್​​​ಎಸ್​​​

ಬಿಜೆಪಿಯಲ್ಲಿ ಅಡ್ಡ ಮತ ಪ್ರಕರಣ ಬಳಿಕ ಸಾಕಷ್ಟು ಆಂತರಿಕ ಬೆಳವಣಿಗೆಗಳು ನಡೆಯುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ನಡೆದ ಆರ್‌ ಎಸ್ ಎಸ್ ಬೈಠಕ್‌ನಲ್ಲಿ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಇತ್ತೀಚಿನ ಕೆಲ ಮುಜುಗರದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೇಸರಿ ನಾಯಕರಿಗೆ ಸಂಘ ಲೆಫ್ಟ್‌ ರೈಟ್ ತೆಗೆದಕೊಂಡಿದೆ. ಹೊಂದಾಣಿಕೆ ಸಮಸ್ಯೆ ಇನ್ನೂ ಪಕ್ಷದಲ್ಲಿ ಎದ್ದು ಕಾಣುತ್ತಿದೆ. ಇದನ್ನು ಸರಿಪಡಿಸಿಕೊಳ್ಳುವಂತೆ ಒಗ್ಗಟ್ಟಿನ ಶಕ್ತಿ ಬಗ್ಗೆಯೂ ಬೋಧನೆ ಮಾಡಲಾಗಿದೆ. ಹೀಗಾಗಿ ಬಿಜೆಪಿಯ ಹಿರಿಯ ನಾಯಕರಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಸಮ್ಮುಖದಲ್ಲಿ ಸುಧಾಕರ್ ಹಾಗೂ ವಿಶ್ವನಾಥ್ ನಡುವೆ ಸಂಧಾನ ಸಭೆ ನಡೆದಿದ್ದು, ಸಭೆ ಸಕ್ಸಸ್ ಕಂಡಿದೆ. ಹಿರಿಯ ನಾಯಕರಿಗೆ ಸಲಹೆ ಸೂಚನೆಗಳಿಗೆ ಬೆಲೆ ಕೊಡುವುದಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: RSS ತರಾಟೆ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ: ಸುಧಾಕರ್-SR ವಿಶ್ವನಾಥ್ ಸಂಧಾನ ಸಕ್ಸಸ್

ನನ್ನನ್ನು ಕಾರ್ಯಕ್ರಮಗಳಿಗೆ ಕರೆಯುತ್ತಿರಲಿಲ್ಲ ಎಂದಿದ್ದ ಸುಧಾಕರ್ ಹೇಳಿಕೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ವಿಶ್ವನಾಥ್,  ಮಾಹಿತಿ ಇಲ್ಲದೆ ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡೋದು ಸರಿಯಲ್ಲ. ಇನ್ನು ಮುಂದೆ ನಾನು ಎಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತೇನೆ. ಎಂಪಿ ಚುನಾವಣೆಯಲ್ಲಿ ಸುಧಾಕರ್​ ಸ್ಪರ್ಧಿಸಿದರೆ ಯಲಹಂಕದಿಂದ ಒಂದು ಒಂದು ಲಕ್ಷ ಮತಗಳ ಲೀಡ್​ ಕೊಡಿಸುತ್ತೇನೆ ಎಂದಿದ್ದಾರೆ.

ಸಭೆಯಲ್ಲಿ ನೀಡಿದ ಖಡಕ್ ಸೂಚನೆಗಳೇನು?

ಇನ್ನು ಭಾನುವಾರ (ಜುಲೈ 05) ನಡೆದ ಸಧಾನ ಸಭೆಯಲ್ಲಿ ಸಂಸದ ಸುಧಾಕರ್, ಶಾಸಕ ವಿಶ್ವನಾಥ್ ಗೆ ಹಿರಿಯ ನಾಯಕರು ಏನೆಲ್ಲಾ ಸೂಚನೆಗಳನ್ನು ನೀಡಲಾಗಿದೆ ಎನ್ನುವುದನ್ನು ನೋಡವುದಾದರೆ, ಹಳೆಯದ್ದನ್ನು ಮರೆತು ಒಟ್ಟಾಗಿ ಹೋಗಬೇಕು, ಕಾರ್ಯಕ್ರಮಗಳ ಫ್ಲೆಕ್ಸ್​ಗಳಲ್ಲಿ ಪರಸ್ಪರರ ಫೋಟೋ ಹಾಕಿಕೊಳ್ಳಬೇಕು. ಹಾಗೇ ಕಾರ್ಯಕ್ರಮಗಳಿಗೆ ಪರಸ್ಪರರ ಆಹ್ವಾನಿಸಬೇಕು ಎಂದು ಇಬ್ಬರಿಗೂ ಸಲಹೆ ನೀಡಲಾಗಿದೆ.

ಸಂಸದರು ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಂಡೇ ಕೆಲಸ ಮಾಡಬೇಕು, ಶಾಸಕರೇ ಹೆಚ್ಚು ಕ್ಷೇತ್ರದಲ್ಲಿ ಜನಸಂಪರ್ಕ ಹೊಂದಿರುತ್ತಾರೆ . ಶೀಘ್ರದಲ್ಲೇ ವಿಶ್ವನಾಥ್ ಮನೆಗೆ ಸುಧಾಕರ್ ಭೇಟಿ ನೀಡಬೇಕು, ಶೀಘ್ರದಲ್ಲೇ ವಿಶ್ವನಾಥ್ ಮನೆಗೆ ಸುಧಾಕರ್ ಭೇಟಿ ನೀಡಬೇಕು, ಸುಧಾಕರ್ ಮನೆಗೆ ವಿಶ್ವನಾಥ್ ಭೇಟಿ ನೀಡಬೇಕೆಂದು ಎಂದು ನಿರ್ದೇಶನ ನೀಡಲಾಗಿದೆ. ಇದಕ್ಕೆ ವಿಶ್ವನಾಥ್ ಹಾಗೂ ಸುಧಕರ್ ಸಹ ಒಪ್ಪಿಕೊಂಡಿದ್ದಾರೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸರಿಯಾಗುತ್ತೆ? ಈ ಇಬ್ಬರು ನಾಯಕರ ಕಾರ್ಯಕರ್ತರು, ಮುಖಂಡರು ಹೇಗೆ ಇರುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು