ಮನೆ ಮದುವೆ ಕಾರ್ಯಕ್ರಮಕ್ಕೆ ಕುಮಾರಸ್ವಾಮಿಯನ್ನ ಕರೆದಿಲ್ಲ: ರಾಜಣ್ಣಗೆ ಬಾಲಕೃಷ್ಣ ಪಕ್ಷ ನಿಷ್ಠೆ ಪಾಠ

ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಲಿ ಸಚಿವ ಬಾಲಕೃಷ್ಣ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಕುಮಾರಸ್ವಾಮಿಯೊಂದಿಗಿನ ಮಾತುಕತೆ ವಿಚಾರವಾಗಿ ರಾಜಣ್ಣ, ಬಾಲಕೃಷ್ಣ ಆರೋಪ ಪ್ರತ್ಯಾರೋಪಕ್ಕಿಳಿದಿದ್ದು, ರಾಜಣ್ಣಗೆ ಬಾಲಕೃಷ್ಣ ಅವರು ಸವಾಲಿನ ಜೊತೆಗೆ ಪಕ್ಷ ನಿಷ್ಠೆಯ ಪಾಠ ಮಾಡಿದ್ದಾರೆ.

ಮನೆ ಮದುವೆ ಕಾರ್ಯಕ್ರಮಕ್ಕೆ ಕುಮಾರಸ್ವಾಮಿಯನ್ನ ಕರೆದಿಲ್ಲ: ರಾಜಣ್ಣಗೆ ಬಾಲಕೃಷ್ಣ ಪಕ್ಷ ನಿಷ್ಠೆ ಪಾಠ
Balaksrina And Kn Rajanna
Edited By:

Updated on: Nov 24, 2026 | 6:30 PM

ರಾಮನಗರ, ನವೆಂಬರ್ 23: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗಿನ ಭೇಟಿ ಮತ್ತು ಮಾತುಕತೆಗಳ ವಿಚಾರವಾಗಿ ಕಾಂಗ್ರೆಸ್ ನಾಯಕರಾದ ರಾಜಣ್ಣ ಮತ್ತು ಬಾಲಕೃಷ್ಣ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕುಮಾರಸ್ವಾಮಿ ಜೊತೆ ಮಾತನಾಡಿಲ್ಲ ಎಂದು ಮನೆ ದೇವರ ಮೇಲೆ ಪ್ರಮಾಣ ಮಾಡುವಂತೆ ಬಾಲಕೃಷ್ಣ ಸವಾಲು ಹಾಕಿದ್ದು, ಅದಕ್ಕೆ ರಾಜಣ್ಣ ಕೂಡ ಮನೆ ದೇವರ ಮೇಲೆ ಆಣೆ ಮಾಡುವ ಸವಾಲು ಹಾಕಿದ್ದರು. ಅಲ್ಲದೇ ಬಾಲಕೃಷ್ಣಗೆ ಬಾಲ ಎಂದು ವ್ಯಂಗ್ಯವಾಡಿದ್ದರು. ಇದರಿಂದ ಕೆರಳಿದ ಬಾಲಕೃಷ್ಣ, ನಾನು ಪ್ರಾಮಾಣಿಕವಾಗಿ ಇದ್ದೇನೇ, ನನ್ನ ಬಗ್ಗೆ ಮಾತನಾಡಬಹದು. ಅವರು ಬದಲಾವಣೆ ಮಾಡಿಕೊಂಡು ಪ್ರಾಮಾಣಿಕವಾಗಿ ಇದ್ದೇನೆ ಎಂದು ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದರೇ ಅದಕ್ಕಿಂತ ಖುಷಿಯಾದ ವಿಚಾರ ಇಲ್ಲ. ಎರಡು ಕಡೆ ಮಾತನಾಡುವುದು ಸೂಕ್ತವಲ್ಲ. ನಾವು ಈಗಾಗಲೇ ಜೆಡಿಎಸ್ ನಿಂದ ಆಚೆ ಬಂದಿದ್ದೇವೆ. ಕುಮಾರಸ್ವಾಮಿ ಅವರಿಗೆ ರಾಜಣ್ಣಗಿಂತ ನಾವು ಆತ್ಮೀಯರು. ಕುಮಾರಸ್ವಾಮಿ ಬಳಿ ರಾಜಕೀಯ ವಿಚಾರ ಚರ್ಚೆ ಮಾಡಲು ಹೋಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಜಣ್ಣಗೆ ಪಕ್ಷ ನಿಷ್ಠೆ ಪಾಠ ಮಾಡಿದ ಬಾಲಕೃಷ್ಣ

ರಾಮನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಾಲಕೃಷ್ಣ, ನನ್ನ ಮನೆಯ ಮದುವೆ ಕಾರ್ಯಕ್ರಮಕ್ಕೂ ಕುಮಾರಸ್ವಾಮಿಯವರನ್ನು ಕರೆದಿಲ್ಲ. ಒಂದು ಪಕ್ಷ ಅಂತಾ ಗುರುತಿಸಿಕೊಂಡ ಮೇಲೆ ಪಕ್ಷದಲ್ಲಿ ಇರಬೇಕು. ಆದೇನೂ ಅಂದ್ರಲ್ಲ ಅದನ್ನು ನಾಳೆನೇ ಆಚೆ ಬಿಡಲು ಹೇಳಿ. ಇದೆಲ್ಲ ಬ್ಲ್ಯಾಕ್ ಮೇಲ್ ರಾಜಕಾರಣ. ಇರುವ ವಿಚಾರವನ್ನ ನೇರವಾಗಿ ಮಾತನಾಡಬೇಕು. ಕುಮಾರಸ್ವಾಮಿ ಅವರ ಮನೆಗೆ ಅವರ ಮಗ ಯಾಕೆ ಹೋಗಿದ್ರು. ನಾನು ಕುಮಾರಸ್ವಾಮಿ ಮನೆಗೆ ಹೋಗುತ್ತೇನಾ? ಅವರ ಮಗನನ್ನ ಯಾಕೆ ಕುಮಾರಸ್ವಾಮಿ ‌ಮನೆಗೆ ಕಳುಹಿಸಬೇಕು? ಎಂದು ಪ್ರಶ್ನಿಸಿದರು.

Loading...

ಇದನ್ನೂ ನೋಡಿ: ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲ್ಲ ಎಂದಿರುವುದರಿಂದ ಕಾಂಗ್ರೆಸ್, ಅಹಿಂದಕ್ಕೆ ಮಾರಕ: ಕೆಎನ್ ರಾಜಣ್ಣ

ಒಂದೇ ಕಡೆ ಇರಬೇಕು. ಇಲ್ಲ ಬಿಟ್ಟು ಹೋಗಬೇಕು. ಪಕ್ಷ ಸಂಘಟನೆ ಮಾಡಲಿ. ಅಹಿಂದ ಸಂಘಟನೆ ಅದೆಲ್ಲ ಏನು ಮಾಡಲು ಆಗಲ್ಲ. ಅಹಿಂದ ಸೇರಿದಂತೆ ಎಲ್ಲವೂ ಮುಖ್ಯ. ನಾನು ನೇರವಾಗಿ ಮಾತನಾಡುತ್ತೇನೆ ಅದಕ್ಕೆ ನನ್ನ ಮೇಲೆ ಕೋಪ. ನಾನು ರಾಜಣ್ಣ ಬಹಳ ಆತ್ಮೀಯರೇ. ಆದರೆ ಪಕ್ಷ ವಿರೋಧ ಚಟುವಟಿಕೆ ಬಗ್ಗೆ ನೇರವಾಗಿ ಮಾತನಾಡುತ್ತೇವೆ. ಕೆಲವರು ಗುಸು ಗುಸು ಎಂದು ಮಾತನಾಡುತ್ತಾರೆ ಎಂದು ನಯವಾಗಿಯೇ ರಾಜಣ್ಣಗೆ ಪಕ್ಷ ನಿಷ್ಠೆ ಪಾಠ ಮಾಡಿದರು.

ರಾಜಣ್ಣನ ಸಾಧನೆ ಏನು?

ಅವರ ಇಲಾಖೆಯಲ್ಲಿ ಅವರು ಮಾಡಿದ ಸಾಧನೆ ಏನು ಎಂದು ಹೇಳಬೇಕು. ನಾನು ಮಂತ್ರಿಯಾಗಿ ಇನ್ನು ಮೂರು ತಿಂಗಳು ಆಗಿರೋದು. ನಮ್ಮ ಇಲಾಖೆ ಸಾಧನೆ ಬಗ್ಗೆ ರಾಜಣ್ಣರನ್ನ ಕರೆಸಿ ಕೂರಿಸಿಕೊಂಡು ಹೇಳುತ್ತೇನೆ. ಎರಡುವರೆ ವರ್ಷ ಮಂತ್ರಿಯಾಗಿ ಅವರ ಸಾಧನೆ ‌ಏನು ಎಂಬುದು ಹೇಳಲಿ ಎಂದು ಸವಾಲು ಹಾಕಿದ ಬಾಲಕೃಷ್ಣ, ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಆಮೇಲೆ ನನ್ನ ಇಲಾಖೆ ಬಗ್ಗೆ ಮಾತನಾಡಲಿ. ನನ್ನ ಇಲಾಖೆ ಸಾಧನೆ ಬಗ್ಗೆ ಅವರ ಕೈಯಲ್ಲೇ ಬಿಡುಗಡೆ ಮಾಡಿಸುತ್ತೇನೆ ಎಂದರು.

ಒಟ್ಟಿನಲ್ಲಿ ಕಾಂಗ್ರೆಸ್​​ನ ಇಬ್ಬರು ನಾಯಕರು ಬಹಿರಂಗವಾಗಿಯೇ ಮಾತಿನ ಸಮರಕ್ಕೆ ಇಳಿದಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೇ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Loading...
Unable to load recommendations.
Follow Us