ಹಾವೇರಿಯಲ್ಲಿ ಮಿಸ್ಸಿಂಗ್ ಪ್ರಕರಣಗಳ ಸಂಖ್ಯೆ ಹೆಚ್ಚಳ; ಕಾಣೆಯಾಗಿರುವ 48 ಜನರಲ್ಲಿ ಯುವತಿಯರೇ ಹೆಚ್ಚು

ಜಿಲ್ಲೆಯಲ್ಲಿ ಬರೋಬ್ಬರಿ 48 ಮಿಸ್ಸಿಂಗ್ ಪ್ರಕರಣಗಳು ದಾಖಲಾಗಿವೆ. ದೇವಸ್ಥಾನಕ್ಕೆ ಹೋಗುವುದಾಗಿ, ಬಹಿರ್ದೆಸೆಗೆ ಹೋಗಿ ಬರೋದಾಗಿ, ಲಾಕ್​ಡೌನ್‌ನಿಂದ ಮನೆಯಲ್ಲಿ ಕುಳಿತು ಬೇಜಾರಾಗಿದೆ ಗೆಳತಿಯರ ಮನೆಗೆ ಹೋಗಿ ಬರುವೆ, ಹೀಗೆ ವಿವಿಧ ಕಾರಣಗಳನ್ನು ಹೇಳಿ ಯುವತಿಯರು ಹಾಗೂ ಮಹಿಳೆಯರು ಮನೆಯಿಂದ ಹೊರ ಹೋಗಿದ್ದು ವಾಪಸ್ ಬಂದೇ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಿಸ್ಸಿಂಗ್ ಪ್ರಕರಣಗಳ ಸಂಖ್ಯೆ ಹೆಚ್ಚಳ; ಕಾಣೆಯಾಗಿರುವ 48 ಜನರಲ್ಲಿ ಯುವತಿಯರೇ ಹೆಚ್ಚು
ಹಾವೇರಿ ಪೊಲೀಸ್ ಠಾಣೆ
Edited By:

Updated on: Jun 06, 2021 | 12:53 PM

ಹಾವೇರಿ: ಕೊರೊನಾ ಎರಡನೆ ಅಲೆ ಶುರುವಾದ ದಿನದಿಂದ ಹಾವೇರಿ ಜಿಲ್ಲೆಯಲ್ಲಿ ಮಿಸ್ಸಿಂಗ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು ಮತ್ತು ಯುವತಿಯರ ಮಿಸ್ಸಿಂಗ್ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಏಪ್ರೀಲ್ ನಿಂದ ಈವರೆಗೆ ಬರೋಬ್ಬರಿ 48 ಮಿಸ್ಸಿಂಗ್ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ದಾಖಲಾಗಿವೆ. ಅದರಲ್ಲಿ ಎಂಟು ಪುರುಷರ ಮಿಸ್ಸಿಂಗ್ ಪ್ರಕರಣ ದಾಖಲಾಗಿದ್ದು, ಉಳಿದೆಲ್ಲಾ ಮಿಸ್ಸಿಂಗ್ ಪ್ರಕರಣಗಳು ಮಹಿಳೆಯರು ಮತ್ತು ಯುವತಿಯರದ್ದೇ ಎನ್ನುವುದು ಸದ್ಯ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಮೇ 21ರಿಂದ ಜೂನ್ 7ರವರೆಗೆ ಜಿಲ್ಲಾಡಳಿತ ಲಾಕ್​ಡೌನ್ ಘೋಷಣೆ ಮಾಡಿದೆ. ಅದಕ್ಕಿಂತ ಮೊದಲು ವೀಕೆಂಡ್ ಕರ್ಪ್ಯೂ ಎಂದು ಕೊರೊನಾ ನಿಯಂತ್ರಣದ ಕ್ರಮಗಳು ಜಾರಿಯಲ್ಲಿದ್ದವು. ಮೇ 21ರಿಂದ ಲಾಕ್​ಡೌನ್ ಘೋಷಣೆ ಮಾಡಿದ ಮೇಲೆ ವಾರದಲ್ಲಿ ಮೂರು ದಿನಗಳು ಮಾತ್ರ ಜಿಲ್ಲಾಡಳಿತ ತರಕಾರಿ ಮತ್ತು ದಿನಸಿ ಅಂಗಡಿಗಳಿಗೆ ಅವಕಾಶ ನೀಡಿದೆ.

ಸಾರಿಗೆ ಬಸ್​ಗಳ ಸಂಚಾರವಂತೂ ಸಂಪೂರ್ಣ ಬಂದ್ ಆಗಿದೆ. ಆದರೂ ಏಪ್ರೀಲ್ ಒಂದರಿಂದ ಈವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 48 ಮಿಸ್ಸಿಂಗ್ ಪ್ರಕರಣಗಳು ದಾಖಲಾಗಿವೆ. ದೇವಸ್ಥಾನಕ್ಕೆ ಹೋಗುವುದಾಗಿ, ಬಹಿರ್ದೆಸೆಗೆ ಹೋಗಿ ಬರೋದಾಗಿ, ಲಾಕ್​ಡೌನ್‌ನಿಂದ ಮನೆಯಲ್ಲಿ ಕುಳಿತು ಬೇಜಾರಾಗಿದೆ ಗೆಳತಿಯರ ಮನೆಗೆ ಹೋಗಿ ಬರುವೆ, ಹೀಗೆ ವಿವಿಧ ಕಾರಣಗಳನ್ನು ಹೇಳಿ ಯುವತಿಯರು ಹಾಗೂ ಮಹಿಳೆಯರು ಮನೆಯಿಂದ ಹೊರ ಹೋಗಿದ್ದು ವಾಪಸ್ ಬಂದೇ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದ್ದಾರೆ.

ಜಿಲ್ಲೆಯಲ್ಲಿರಯುವ ಮಹಿಳಾ ಪೊಲೀಸ್ ಠಾಣೆ ಸೇರಿದಂತೆ ಹತ್ತೊಂಬತ್ತು ಪೊಲೀಸ್ ಠಾಣೆಗಳು ಸೇರಿ ಒಟ್ಟು 48 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಹತ್ತು ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಇಬ್ಬರು ಪುರುಷರ‌ ಮಿಸ್ಸಿಂಗ್ ಪ್ರಕರಣ ಹಾಗೂ ಎಂಟು ಮಹಿಳೆಯರ ಮಿಸ್ಸಿಂಗ್ ಪ್ರಕರಣ ಪತ್ತೆ ಆಗಿವೆ. ಕೆಲವು ಪ್ರಕರಣಗಳಲ್ಲಿ ಕೌಟುಂಬಿಕ ಕಾರಣ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ವಿವಾಹಿತ ಮಹಿಳೆಯರು ಹಾಗೂ ಯುವತಿಯರು ಮನೆ ಬಿಟ್ಟು ಹೋಗಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಪ್ರೀತಿ ಪ್ರೇಮದ ಬಲೆಗೆ ಬಿದ್ದ ಮಿಸ್ಸಿಂಗ್​ ಪ್ರಕರಣಗಳು ಹೆಚ್ಚಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಇಷ್ಟೊಂದು ಪ್ರಕರಣಗಳು ದಾಖಲಾಗಿದ್ದರೂ, ಪೊಲೀಸರಿಗೆ ಕೊರೊನಾ ಲಾಕ್​ಡೌನ್ ಬಿಡುವಿಲ್ಲದ ಕೆಲಸ ಇರುವುದರಿಂದ ಮಿಸ್ಸಿಂಗ್ ಪ್ರಕರಣಗಳ ಪತ್ತೆ ಮಾಡುವ ಕಾರ್ಯ ವಿಳಂಬವಾಗಿದೆ. ಹಾಗಂತ ಪೊಲೀಸರು ಸುಮ್ಮನೆ ಕುಳಿತಿಲ್ಲ. ಮಿಸ್ಸಿಂಗ್ ಕೇಸ್ ದಾಖಲಾಗುತ್ತಿದ್ದಂತೆ ಕುಟುಂಬದವರ ಮಾಹಿತಿ ಆಧರಿಸಿ ಪತ್ತೆ ಕಾರ್ಯಕ್ಕೆ ಇಳಿದಿದ್ದಾರೆ. ಆದರೆ ಬಹುತೇಕ ಪೊಲೀಸರು ಹಗಲು ರಾತ್ರಿ ಎನ್ನದೆ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಮಿಸ್ಸಿಂಗ್ ಕೇಸ್​ಗಳ ಪತ್ತೆ ಕಾರ್ಯ ಸಾಧ್ಯವಾಗಿಲ್ಲ. ಇನ್ನು ಪೋಷಕರು ಸಹ ತಮ್ಮ ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸಬೇಕಿದೆ. ವಿವಾಹಿತ ಮಹಿಳೆಯರ ಬಗ್ಗೆ ಅವರ ಮನೆಯವರೂ ಸಹ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಆಗ ಮಾತ್ರ ಮಿಸ್ಸಿಂಗ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಪ್ರಚಾರಕ್ಕಾಗಿ ಮಾಡಿದ ಪ್ರಯತ್ನವಿದು: 5ಜಿ ಬಗ್ಗೆ ಪ್ರಶ್ನಿಸಿ ಕೇಸ್ ಹಾಕಿದ್ದಕ್ಕೆ ನಟಿ ಜೂಹಿ ಚಾವ್ಲಾಗೆ ದೆಹಲಿ ಹೈಕೋರ್ಟ್​ ತರಾಟೆ, 20 ಲಕ್ಷ ದಂಡ

ಬೆಳಗ್ಗೆ ಡಾನ್ಸ್ ಕ್ಲಾಸ್, ಸಂಜೆಯಾಗುತ್ತಿದ್ದಂತೆ ದರೋಡೆ; ಸಿಸಿಬಿ ಪೊಲೀಸರಿಂದ ಐವರ ಬಂಧನ

TV9 Web

TV9 Kannada

Read More
Loading...
Unable to load recommendations.
Follow Us