ಯಾದಗಿರಿ ರಸ್ತೆ ಅಪಘಾತ: ಬೈಕ್​ನಲ್ಲಿ ತೆರಳುತ್ತಿದ್ದ ತಾಯಿ, ಮಗ ಸಾವು

ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ಯಾದಗಿರಿ ಹೊರವಲಯದ ಹೊಸಹಳ್ಳಿ ಕ್ರಾಸ್​ ಬಳಿ ನಡೆದಿದೆ

ಯಾದಗಿರಿ ರಸ್ತೆ ಅಪಘಾತ: ಬೈಕ್​ನಲ್ಲಿ ತೆರಳುತ್ತಿದ್ದ ತಾಯಿ, ಮಗ ಸಾವು
ಮೃತ ತಾಯಿ ಮಗ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 10, 2022 | 6:08 PM

ಯಾದಗಿರಿ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ಯಾದಗಿರಿ (Yadgiri) ಹೊರವಲಯದ ಹೊಸಹಳ್ಳಿ ಕ್ರಾಸ್​ ಬಳಿ ನಡೆದಿದೆ. ಯಾದಗಿರಿ ನಗರದ ಸಹಾರ ಕಾಲೋನಿ ನಿವಾಸಿಗಳಾದ ತಾಯಿ ಕಮಲಮ್ಮ(46), ಪುತ್ರ ಬಾಪುಗೌಡ(28) ಮೃತ ದುರ್ದೈವಿಗಳು. ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 100 ಜನ ಮನೆಗೆ ನುಗ್ಗಿ ಯುವತಿಯ ಕಿಡ್ನಾಪ್; ತೆಲಂಗಾಣದಲ್ಲೊಂದು ಆಘಾತಕಾರಿ ಘಟನೆ

ಕಾರ್ಕಳ ಬಳಿ ಭೀಕರ ರಸ್ತೆ ಅಪಘಾತ, ಎರಡು ವರ್ಷದ ಮಗು ಸೇರಿ ಸ್ಥಳದಲ್ಲೇ ಮೂವರ ಸಾವು

 ಉಡುಪಿ: ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನೆಲ್ಲಿಕಾರು ಗ್ರಾಮದಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ 2 ವರ್ಷದ ಒಂದು ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗವಾಗಿ ಬರುತ್ತ್ತಿದ್ದ ಖಾಸಗಿ ಬಸ್ಸೊಂದಕ್ಕೆ ಕಾರು ಗುದ್ದಿದ ಪರಿಣಾಮ ಕಾರಲ್ಲಿ ಪ್ರಯಾಣಿಸುತ್ತಿದ್ದ ನಾಗರಾಜು (40), ಪ್ರತ್ಯುಷಾ (32) ಪುಟ್ಟ ಮಗು ಬಲಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕಾರ್ಕಳ ಪೊಲೀಸರು ಪ್ರಕರಣವವನ್ನು ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Sat, 10 December 22