ಯಾದಗಿರಿ: ಮೃತಪಟ್ಟ 25 ವರ್ಷದ ಬಳಿಕ ಪುನಃ ಆತನ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟಕ್ಕೆ ಯತ್ನ

ಆತ ಮೃತಪಟ್ಟು 25 ವರ್ಷಗಳೇ ಕಳೆದಿವೆ. 25 ವರ್ಷದ ಬಳಿಕ ಅದೇ ಹೆಸರಿನ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ, ಮೃತಪಟ್ಟ ವ್ಯಕ್ತಿಯ ಹೆಸರಿನ ಆಸ್ತಿಯನ್ನ ವರ್ಗಾವಣೆ ಮಾಡಲಾಗಿದೆ. ನಕಲಿ ವ್ಯಕ್ತಿ ನಕಲಿ‌ ದಾಖಲೆಗಳನ್ನು ಸೃಷ್ಟಿ ಮಾಡಿ ಆಸ್ತಿಯನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡಲಾಗಿದೆ. ಆದ್ರೆ, ಇತ್ತ ಮೃತ ವ್ಯಕ್ತಿಯ ಕುಟುಂಬಸ್ಥರು ಆಸ್ತಿ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಾ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಾರೂ ಎಲ್ಲಿ ಅಂತಿರಾ? ಈ ಸ್ಟೋರಿ ನೋಡಿ.

ಯಾದಗಿರಿ: ಮೃತಪಟ್ಟ 25 ವರ್ಷದ ಬಳಿಕ ಪುನಃ ಆತನ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟಕ್ಕೆ ಯತ್ನ
ಯಾದಗಿರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟಕ್ಕೆ ಯತ್ನ
Follow us
ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 22, 2023 | 7:33 AM

ಯಾದಗಿರಿ, ಅ.22: ಸತ್ತವರನ್ನು ಜೀವಂತ ಮಾಡಿ ಆತನ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಲಾಗಿದ್ದು, ಮುಟೇಷನ್(ರೂಪಾಂತರ) ವೇಳೆ ಕಳ್ಳಾಟ ಬಯಲಾಗಿದೆ. ಹೌದು, ಯಾದಗಿರಿ ಜಿಲ್ಲೆಯ ಗುರುಮಠಕಲ್‌(Gurmitkal) ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ 25 ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಮತ್ತೊರ್ವ ವ್ಯಕ್ತಿಯನ್ನು ಹುಟ್ಟು ಹಾಕಿ, ಆತನ ಆಸ್ತಿ ಕಬಳಿಸಲು ಭೂಪನೊಬ್ಬ ಯತ್ನಿಸಿ, ಸಿಕ್ಕಿ ಹಾಕಿಕೊಂಡಿದ್ದಾನೆ. ಚಿಂತನಹಳ್ಳಿ ಗ್ರಾಮದ ನಿವಾಸಿ ನರಸಪ್ಪ ಎಂಬಾತ ಕಳೆದ 25 ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ. ಮೃತ ನರಸಪ್ಪನ ಹೆಸರಿಗೆ ಸುಮಾರು 3 ಎಕರೆ 28 ಗುಂಟೆ ಜಮೀನು ಇದೆ. ಆದ್ರೆ, ನರಸಪ್ಪ ಮೃತಪಟ್ಟು 25 ವರ್ಷಗಳಾಗಿದರೂ ಆತನ ಕುಟುಂಬಸ್ಥರು ಆಸ್ತಿ ವರ್ಗಾವಣೆ ಮಾಡಿಸಿಕೊಂಡಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಇದೆ ಗ್ರಾಮದ ಗಂಗಪ್ಪ ಎಂಬಾತ ನಕಲಿ ವ್ಯಕ್ತಿಯನ್ನ ಸೃಷ್ಟಿಸಿ ಆಸ್ತಿ ವರ್ಗಾವಣೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದ.

ಅದರಂತೆ ಯಾದಗಿರಿಯ ಹೆಡಗಿಮುದ್ರಾ ಗ್ರಾಮದ ನಿವಾಸಿ ನರಸಪ್ಪ ಎಂಬ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಗಂಗಪ್ಪ ನಕಲಿ ದಾಖಲೆಗಳನ್ನ ಸೃಷ್ಠಿ ಮಾಡಿ ಇದೆ ಗ್ರಾಮದ ಸುಭಾಷ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಹೆಡಗಿಮುದ್ರ ಗ್ರಾಮದ ನರಸಪ್ಪನೇ ಜಮೀನಿನ ಮಾಲೀಕ ಎಂದು ಸುಭಾಷ್​ ಎಂಬುವವರಿಗೆ ನಂಬಿಸಿದ್ದಾನೆ. ಬಳಿಕ ಸುಮಾರು ಮೂರು ಲಕ್ಷ ಹಣವನ್ನು ಪಡೆದು ಸುಭಾಷ್​ಗೆ ಮಾರಾಟ ಮಾಡಿದ್ದಾನೆ. ಆದ್ರೆ ಇಷ್ಟೆಲ್ಲ ನಡೆದರೂ ಮೃತ ನರಸಪ್ಪನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ:ಚಿಕ್ಕಮಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ; ಮೂವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್​ ಕೇಸ್

ಇನ್ನು ಬೆಟ್ಟದ ಮದ್ಯೆ ಜಮೀನು ಇರುವ ಕಾರಣಕ್ಕೆ ನರಸಪ್ಪನ ಕುಟುಂಬಸ್ಥರು ಉಳುಮೆ ಕೂಡ ಮಾಡದೆ ಪಾಳು ಬಿಟ್ಟಿದ್ದಾರೆ. ಯಾವಾಗ ನಕಲಿ ವ್ಯಕ್ತಿ ಸೃಷ್ಟಿ ಮಾಡಿ ಜಮೀನು ಮಾರಾಟ ಹಾಗೂ ರಿಜಿಸ್ಟರ್ ಮಾಡಿ ಬಳಿಕ ಮುಟೇಷನ್ ವೇಳೆ‌ ಅಧಿಕಾರಿಗಳು ಗ್ರಾಮಕ್ಕೆ ಬಂದ‌ ಮೇಲೆ ಗಂಗಪ್ಪನ ಕಳ್ಳಾಟ ಗೊತ್ತಾಗಿದೆ. ಇನ್ನು ಈ ಆಸ್ತಿ ಮೃತ ನರಸಪ್ಪನಿಗೆ 1955 ರಲ್ಲಿ ಸರ್ಕಾರದಿಂದ ಗ್ರ್ಯಾಂಟ್ ಆಗಿರುವ ಜಮೀನಾಗಿದೆ. ಆದ್ರೆ, ನರಸಪ್ಪ ಸತ್ತ ಮೇಲೆ ಈ ಆಸ್ತಿ ಹಿಂದೆ ಕಳ್ಳರು ಬಿದ್ದಿದ್ದಾರೆ.

ಇನ್ನು ಐನಾತಿ ಗಂಗಪ್ಪನ ಕಳ್ಳಾಟ ಬಯಲಾಗ್ತಿದ್ದಂತೆ ನರಸಪ್ಪನ ಕುಟುಂಬಸ್ಥರು ಹೌಹಾರಿದ್ದಾರೆ. ಪೊಲೀಸ್ ಠಾಣೆ, ಕಚೇರಿ ಅಲೆದಾಡುತ್ತಿದ್ದಾರೆ. ನಕಲಿ ವ್ಯಕ್ತಿಯನ್ನ ಸೃಷ್ಟಿಸಲು ಮಹಾ ಪ್ಲಾನ್ ರೂಪಿಸಿದ ಕಿಲಾಡಿ ಗಂಗಪ್ಪ ಸಿಕ್ಕಿ ಬಿದ್ದಿದೆ ರೋಚಕ ತಿರುವು ಕೊಟ್ಟಿದೆ. ಗ್ರಾಮದಲ್ಲಿ ಯಾರಿಗೂ ಅನುಮಾನ ಬಾರದ ಹಾಗೇ ಹೆಡಗಿ‌ಮುದ್ರಾ ಗ್ರಾಮದ ನಕಲಿ ನರಸಪ್ಪ ಎಂಬಾತನನ್ನ ಸೃಷ್ಠಿ ಮಾಡಿ ಗ್ರಾಮದ ಸುಭಾಷ್​ಗೆ 2 ಲಕ್ಷದ 80 ಸಾವಿರಕ್ಕೆ ಆಸ್ತಿ ಮಾರಾಟದ ದಾಖಲೆಗಳನ್ನ ಸಿದ್ದಪಡಿಸಿದ್ದರು. ಈ ಬ್ರೋಕರ್ ಗಂಗಪ್ಪ ಒಂದೇ ಕುಟುಂಬಕ್ಕೇ ಈ ರೀತಿ ವಂಚನೆ ಮಾಡಿಲ್ಲ. ಹತ್ತಾರು ಜನರ ಆಸ್ತಿಯನ್ನು ಅನ್ಯರಿಗೆ ಪರಭಾರೆ ಮಾಡಿಸಿದ್ದಾನೆ ಎಂಬ ಆರೋಪವು ಕೇಳಿ ಬರುತ್ತಿದೆ.

ಇದನ್ನೂ ಓದಿ:ಯಾದಗಿರಿ: ನಕಲಿ ದಾಖಲೆ ಸೃಷ್ಟಿಸಿ 18ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿ ಪರಭಾರೆ, ನೋಟಿಸ್ ಜಾರಿ

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೃತ ನರಸಪ್ಪನ ಮೊಮ್ಮಗ ಚಂದ್ರಶೇಖರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಯಾದಗಿರಿ ನಗರ ಠಾಣೆಯಲ್ಲಿ ನರಸಪ್ಪನ‌ ಮೊಮ್ಮಗ ಚಂದ್ರಶೇಖರ್ ಆಸ್ತಿ ಕಬಳಿಕೆಗೆ ಯತ್ನಿಸಿದ ಗಂಗಪ್ಪ, ಸುಭಾಷ್, ನರಸಪ್ಪ ಹಾಗೂ ಗ್ಯಾಂಗ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಬ್ರೋಕರ್ ಗಂಗಪ್ಪ ಹಾಗೂ ಗ್ಯಾಂಗ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನು ಗ್ರಾಮದ ಜನರು ಸಹ ಮೃತ‌ ನರಸಪ್ಪನ ಕುಟುಂಬಸ್ಥರ ಜೊತೆಗೆ ನಿಂತಿದ್ದಾರೆ. ಅನ್ಯಾಯಕ್ಕೆ ಒಳಗಾಗಿ ನ್ಯಾಯಕ್ಕಾಗಿ ಅಲೆಯುತ್ತಿರುವ ನರಸಪ್ಪನ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬ್ರೋಕರ್ ಗಂಗಪ್ಪನ ಕಳ್ಳಾಟಕ್ಕೆ ಮೃತ ನರಸಪ್ಪನ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ, ಆರೋಪಿ ಗಂಗಪ್ಪನ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ