AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಯಲ್ಲಿ ಕೊಲು, ಡಿಜೆ ಸಾಂಗ್​​​ಗೆ ಮಸ್ತ್​​ ಸ್ಟೆಪ್ಸ್: ನವರಾತ್ರಿ ಸಂಭ್ರಮದಲಿ ಯುವಕ ಯುವತಿಯರ ದಾಂಡಿಯಾ ನೃತ್ಯ

ಪ್ರತಿ ದಿನ ಪೂಜೆಯ ನಂತರ ಆರಂಭವಾಗುವ ದಾಂಡಿಯಾ ನೃತ್ಯದಲ್ಲಿ ಭಾಗವಹಿಸಲು ಕುಟುಂಬದ ಎಲ್ಲರೂ ಒಟ್ಟಿಗೆ ಆಗಮಿಸಿ ನೃತ್ಯದಲ್ಲಿ ಮೈಮರೆಯುತ್ತಾರೆ. ವಿದ್ಯುತ್ ದೀಪಾಲಂಕಾರ, ರಂಗು ರಂಗಿನ ಬಣ್ಣದ ಗುಜರಾತಿ ಸಂಪ್ರದಾಯಿಕ ಉಡುಪುಗಳನ್ನು ಧರಿಸಿದ ಲಲನೆಯರು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ಕೈಯಲ್ಲಿಯ ಕೋಲು ತಿರುಗಿಸಿ ಇನ್ನೊಬ್ಬರ ಕೋಲಿಗೆ ತಟ್ಟುತ್ತಾ ದಾಂಡಿಯಾ ನೃತ್ಯ ಮಾಡುವ ನಾರಿಯರ ನೃತ್ಯ ನೋಡುವುದೇ ಚಂದ.

ಕೈಯಲ್ಲಿ ಕೊಲು, ಡಿಜೆ ಸಾಂಗ್​​​ಗೆ ಮಸ್ತ್​​ ಸ್ಟೆಪ್ಸ್: ನವರಾತ್ರಿ ಸಂಭ್ರಮದಲಿ ಯುವಕ ಯುವತಿಯರ ದಾಂಡಿಯಾ ನೃತ್ಯ
ದಾಂಡಿಯಾ ನೃತ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on:Oct 22, 2023 | 10:11 PM

ಯಾದಗಿರಿ, ಅಕ್ಟೋಬರ್​​ 22: ನವರಾತ್ರಿ ಬಂತೆಂದರೆ ಸಾಕು ಯಾದಗಿರಿ ನಗರದ ಜನತೆಗೆ ಎಲ್ಲಿಲ್ಲದ ಸಂಭ್ರಮ. ಈ ಬಾರಿಯು ದಸರಾ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಅದರಲ್ಲೂ ಸ್ಥಳೀಯ ಗುಜರಾತಿ ಹಾಗೂ ವಿವಿಧ ಸಮುದಾಯದ ಜನತೆ 9 ದಿನಗಳ ನವರಾತ್ರಿ ಹಬ್ಬ ಸಂಭ್ರಮದಿಂದ ಕೂಡಿರುತ್ತೆ. ನವರಾತ್ರಿಯ ಒಂಬತ್ತು ರಾತ್ರಿಗಳು ದಾಂಡಿಯಾ ನೃತ್ಯ (Dandiya Jhalak) ಮಾಡುವ ಮೂಲಕ ಆಚರಿಸುತ್ತಾರೆ. ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆವರೆ ದಾಂಡಿಯಾ ನೃತ್ಯ ಮಾಡಲಾಗುತ್ತಿದೆ.

ಗಿರಿನಾಡು ಯಾದಗಿರಿ ನಗರದಲ್ಲಿ ನವರಾತ್ರಿ ಉತ್ಸವ ವಿಶಿಷ್ಟ ರೀತಿಯಲ್ಲಿ ಆಚರಣೆಯಾಗುತ್ತೆ. ಅದರಲ್ಲೂ ಯುವಕ ಯುವತಿಯರಿಗೆ ದಾಂಡಿಯಾ ನೃತ್ಯ ಎಂದರೆ ಸಂಭ್ರಮ. ಪ್ರತಿ ವರ್ಷದಂತೆ ಈ ವರ್ಷವೂ ಯಾದಗಿರಿ ನಗರದಲ್ಲಿ ವಿವಿಧ ಕಡೆಗಳಲ್ಲಿ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಸಂಜೆ 8 ಗಂಟೆ ಯಾಗುತ್ತಿದ್ದಂತೆ ದಾಂಡಿಯಾ ಡಾನ್ಸ್ ಶುರುವಾಗಿಬಿಡುತ್ತೆ. ಹೀಗೆ ಪ್ರಾರಂಭವಾದ ದಾಂಡಿಯಾ ನೃತ್ಯ, ಮಧ್ಯರಾತ್ರಿ 2 ಗಂಟೆಯವರೆಗೆ ನಡೆದೇ ಇರುತ್ತದೆ.

ನಗರದ ಶಾಸ್ತ್ರೀ ವೃತ್ತ, ಸ್ಟೇಷನ್ ರಸ್ತೆ, ಗಾಂಧಿ ನಗರ ತಾಂಡ, ಭವಾನಿ ಮಂದಿರದ ಬಳಿಯಲ್ಲಿ ಪ್ರಾರಂಭವಾಗುವ ನೃತ್ಯದಲ್ಲಿ 5 ರಿಂದ 50 ವರ್ಷ ವಯೋಮಾನದ ಹೆಣ್ಣು-ಗಂಡು ಬೇಧವಿಲ್ಲದೇ ಕುಣಿದು ಕುಪ್ಪಳಿಸ್ತಾರೆ. ಜನಪದ ಸೊಗಡಿನ ದಾಂಡಿಯಾ ನೃತ್ಯ ಮಾಡುವುದು ಮತ್ತು ನೋಡುವುದೇ ಎಲ್ಲರಿಗೂ ಒಂದು ಸೊಗಸು.

ಇದನ್ನೂ ಓದಿ: ವಿದ್ಯುತ್ ಕಣ್ಣಾ ಮುಚ್ಚಾಲೆ: ಅನಧಿಕೃತ ಲೋಡ್ ಶೆಡ್ಡಿಂಗ್​ನಿಂದ ಯಾದಗಿರಿ ಜಿಲ್ಲೆಯ ರೈತರು ಕಂಗಾಲು

ಜನಪದ ಸಂಪ್ರದಾಯಿಕ ಈ ನೃತ್ಯಕ್ಕೆ ಆಧುನಿಕ ಹೊಸ ಹಿಂದಿ ಹಾಡುಗಳ ಟಚ್ ನೀಡಿದ್ದರಿಂದ ಯುವಕ-ಯುವತಿಯರು ಸಕತ್ ಸ್ಟೆಪ್ ಹಾಕಿದರು. ಚಿಣ್ಣರು ಈ ದಾಂಡಿಯಾ ನೃತ್ಯದಲ್ಲಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ತಮ್ಮ ಕೈಯಲ್ಲಿರುವ ಕೋಲುಗಳ ಬಡಿತದಿಂದ ನಾದ ಹೊಮ್ಮಿಸಿದ್ದರು. ವರ್ಷಕ್ಕೆ ಒಂದೆ ಬಾರಿ ಬರುವ ದಸರ ಹಬ್ಬವನ್ನ ಸಂಭ್ರಮದಿಂದ ಆಚರಿಸುತ್ತೆವೆ ಅಂತಾರೆ ಯುವತಿಯರು.

ಯಾದಗಿರಿ ನಗರದ ಗುಜರಾತಿ ಸಮುದಾಯದವರು ಮತ್ತು ಹಿಂದು ಸೇವಾ ಸಮಿತಿ ಸಂಘದ ವತಿಯಿಂದ 1965 ರಿಂದ ಇಲ್ಲಿಯವರೆಗೂ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿದ್ದು, 9 ದಿನಗಳವರೆಗೆ ಮಾತೆ ದುರ್ಗಾದೇವಿಗೆ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಿಯ ಮೂರ್ತಿಯ ಬಳಿ ಗರ್ಬಾ ದೀಪವನ್ನು ಹಚ್ಚಲಾಗಿರುತ್ತದೆ.

ಪ್ರತಿ ದಿನ ಪೂಜೆಯ ನಂತರ ಆರಂಭವಾಗುವ ದಾಂಡಿಯಾ ನೃತ್ಯದಲ್ಲಿ ಭಾಗವಹಿಸಲು ಕುಟುಂಬದ ಎಲ್ಲರೂ ಒಟ್ಟಿಗೆ ಆಗಮಿಸಿ ನೃತ್ಯದಲ್ಲಿ ಮೈಮರೆಯುತ್ತಾರೆ. ವಿದ್ಯುತ್ ದೀಪಾಲಂಕಾರ, ರಂಗು ರಂಗಿನ ಬಣ್ಣದ ಗುಜರಾತಿ ಸಂಪ್ರದಾಯಿಕ ಉಡುಪುಗಳನ್ನು ಧರಿಸಿದ ಲಲನೆಯರು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ಕೈಯಲ್ಲಿಯ ಕೋಲು ತಿರುಗಿಸಿ ಇನ್ನೊಬ್ಬರ ಕೋಲಿಗೆ ತಟ್ಟುತ್ತಾ ದಾಂಡಿಯಾ ನೃತ್ಯ ಮಾಡುವ ನಾರಿಯರ ನೃತ್ಯ ನೋಡುವುದೇ ಚಂದ.

ಇದನ್ನೂ ಓದಿ: ಯಾದಗಿರಿ: ಪ್ರಚೋದನಕಾರಿ ಭಾಷಣ, ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಶ್ರೀ ವಿರುದ್ಧ ದೂರು ದಾಖಲು

ತಾವೇನು ಕಡಿಮೆ ಇಲ್ಲ ಎಂದು ಚಿಣ್ಣರು ಕೂಡಾ ದೊಡ್ಡವರ ಜೊತೆ ಹೆಜ್ಜೆ ಹಾಕುತ್ತಾರೆ. ಇನ್ನು ನಗರದ ಗಾಂಧಿ ನಗರ ತಾಂಡದ ಬಂಜಾರ ಸಮೂದಾಯದ ಯುವಕ ಯುವತಿಯರಂತೂ ಸಕತ್ ಆಗಿ ದಾಂಡಿಯಾ ನೃತ್ಯವನ್ನ ಮಾಡುತ್ತಾರೆ. ಬಂಜಾರ ಸಮುದಾಯದ ಯುವಕ ಯುವತಿಯರ ನೃತ್ಯ ನೋಡಲು ಇಡೀ ಯಾದಗಿರಿ ನಗರದ ಯುವಕರು ಬಂದಿರುತ್ತಾರೆ. ಸಂಜೆಯಿಂದ ಮದ್ಯ ರಾತ್ರಿ ವರೆಗೆ ದಾಂಡಿಯಾ ನೃತ್ಯವನ್ನ ನಡೆಸಲಾಗುತ್ತೆ.

ಆಧುನಿಕತೆ ಭರಾಟೆಯಲ್ಲಿ ಪುರಾತನ ಜನಪದ ಕಲೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ವಿಶಿಷ್ಟ ದಾಂಡಿಯಾ ನೃತ್ಯ ಇಂದಿಗೂ ಇಲ್ಲಿಯ ಜನತೆಯಲ್ಲಿ ಹಾಸು ಹೊಕ್ಕಾಗಿದೆ. ನೂರಾರು ಜನ ಒಟ್ಟಿಗೆ ನರ್ತನಮಾಡುವ ದೃಶ್ಯ ಅವಿಸ್ಮರಣೀಯ. ಪ್ರತಿ ವರ್ಷ ಈ ದಾಂಡಿಯಾ ನೃತ್ಯ ಹೀಗೆ ಮುಂದುವರಿಯಲ್ಲಿ ಎನ್ನುವುದು ನಮ್ಮ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:10 pm, Sun, 22 October 23