ಮೇವಿನ ಕೊರತೆ ನಡುವೆ ಕುರಿಗಳಿಗೆ ಕಾಡು ನೊಣಗಳ ಕಾಟ; ಗುಳೆ ಹೊರಟ ಕುರಿಗಾಹಿಗಳು
ಕುರಿಗಾಹಿಗಳಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಹೌದು, ಮಳೆ ಬಾರದ ಹಿನ್ನಲೆ ಮೊದಲೇ ಮೇವಿನ ಕೊರತೆಯಿಂದ ಕುರಿಗಳಿಗೆ ಆಹಾರ ಸಿಗುತ್ತಿರಲಿಲ್ಲ. ಇದೀಗ ಕಾಡು ನೊಣಗಳ ಕಾಟ ಕೂಡ ಶುರುವಾಗಿದ್ದು, ಯಾದಗಿರಿ (Yadagiri) ಜಿಲ್ಲೆಯಿಂದ ಕುರಿಗಾಹಿಗಳು ಗುಳೆ ಹೊರಟಿದ್ದಾರೆ.
ಯಾದಗಿರಿ, ಆ.30: ಮೇವುಗಳ ಕೊರತೆಯ ನಡುವೆಯೇ ಕುರಿಗಳಿಗೆ ಕಾಡು ನೊಣಗಳ ಕಾಟ ಕೂಡ ಶುರುವಾಗಿದ್ದು, ಯಾದಗಿರಿ (Yadagiri) ಜಿಲ್ಲೆಯಿಂದ ಕುರಿಗಾಹಿಗಳು ಗುಳೆ ಹೊರಟಿದ್ದಾರೆ. ಹೌದು, ಕಾಡು ನೊಣಗಳ ಕಾಟ ವಿಪರೀತವಾಗಿದ್ದು, ಕುರಿಗಳು ಮೇಯುವಾಗ ಕಚ್ಚಿ ರಕ್ತ ಹೀರುತ್ತಿವೆ. ಇದರಿಂದ ಕುರಿಗಳು ಅನಾರೋಗ್ಯಕ್ಕೆ ತುತ್ತಾಗುವ ಆತಂಕವಿದ್ದು, ಮಾಂಸ ಬೆಳವಣಿಗೆಯಲ್ಲಿಯೂ ಕುಂಠಿತವಾಗುವ ಸಾಧ್ಯತೆಯಿದ್ದು, ಕುರಿಗಾಯಿಗಳು ಕಂಗಲಾಗಿದ್ದಾರೆ.
ಇನ್ನು ಕಾಡು ನೊಡಗಳು ಕಚ್ಚೋದ್ರಿಂದ ಉಣ್ಣೆ ಉತ್ಪಾದನೆ ಆಗುವುದು ಕಡಿಮೆಯಾಗುತ್ತದೆ. ಇದರಿಂದ ಕುರಿಗಳ ಉಣ್ಣೆ ಮಾರಾಟದ ಮೇಲೆಯೇ ಬದುಕು ನಡೆಸುತ್ತಿರುವ ಕುರಿಗಾಯಿಗಳಿಗೆ ತೊಂದರೆಯಾಗುತ್ತದೆ. ಇದೇ ಕಾರಣಕ್ಕೆ ಯಾದಗಿರಿ ಜಿಲ್ಲೆಯಿಂದ ಬಯಲು ಪ್ರದೇಶವಾಗಿರುವ ಕಲಬುರ್ಗಿ, ಬೀದರ್ ಕಡೆ ಹೊರಟ್ಟಿದ್ದಾರೆ. ಒಂದು ಕಡೆ ಮೇವಿನ ಕೊರತೆ ಇನ್ನೊಂದು ಕಡೆ ಕಾಡು ನೊಣಗಳ ಕಾಟಕ್ಕೆ ಕುರಿಗಾಯಿಗಳು ಅಕ್ಷರಶಃ ಬೇಸತ್ತಿದ್ದಾರೆ.
ಇದನ್ನೂ ಓದಿ:ನೈಜ ನಿಯಂತ್ರಣ ರೇಖೆ ಬಳಿ ಕುರಿ ಮೇಯಿಸುವುದಕ್ಕೆ ಅಡ್ಡಿಪಡಿಸಿದ ಚೀನಾ ಸೇನೆಯನ್ನು ಹಿಮ್ಮೆಟ್ಟಿದ ಭಾರತದ ಕುರಿಗಾಹಿಗಳು
ಶಾಲೆಗೆ ಗೈರಾಗಿ ಕುರಿ ಕಾಯುತ್ತಿದ್ದ ಬಾಲಕನನ್ನ ಕರೆದುಕೊಂಡು ಶಾಲೆಗೆ ಬಿಟ್ಟ ಅಧಿಕಾರಿಗಳು
ಬಾಗಲಕೋಟೆ: ಇಳಕಲ್, ಹುನಗುಂದ ತಾಲೂಕಿನ ವಿವಿಧೆಡೆ ರಾಜ್ಯ ಮಕ್ಕಳ ಆಯೋಗದ ಸದಸ್ಯರ ಮಿಂಚಿನ ಸಂಚಾರ ಮಾಡಿದ್ದು, ವಿವಿಧ ಶಾಲೆ, ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಅದರಂತೆ ಇಳಕಲ್ ನಗರದಿಂದ ಕಂದಗಲ್ಲಗೆ ಹೋಗುವ ವೇಳೆ ಇಳಕಲ್ ಹೊರವಲಯದಲ್ಲಿ ಶಾಲಾ ಬಾಲಕನೊಬ್ಬ ಶಾಲೆಗೆ ಗೈರಾಗಿ ಕುರಿ ಕಾಯುತ್ತಿದ್ದ. ಕುರಿ ಕಾಯುತ್ತಿದ್ದ ಬಾಲಕನ ಕಂಡು ವಾಹನ ನಿಲ್ಲಿಸಿದ ಮಕ್ಕಳ ಆಯೋಗದ ಸದಸ್ಯರು, ಆಯೋಗದ ಅಧ್ಯಕ್ಷ ಶಶಿಧರ ಕೋಸಂಬಿ ಹಾಗೂ ಸದಸ್ಯರು ಶಾಲೆಗೆ ಯಾಕೆ ಹೋಗ್ತಿಲ್ಲ ಎಂದು ವಿಚಾರಿಸಿದಾಗ ‘ಒಂದು ತಿಂಗಳಿಂದ ಶಾಲೆ ಬಿಟ್ಟು ಕುರಿಕಾಯುವ ವಿಚಾರ ತಿಳಿದು ಬಂದಿದೆ.
ಬಾಲಕನ ಕರೆದುಕೊಂಡು ಇಳಕಲ್ ನಗರದ ಶಾಲೆಗೆ ಬಿಟ್ಟು ಶಿಕ್ಷಕರಿಗೆ ಕಾಳಜಿ ವಹಿಸಲು ಹಾಗೂ ಪಾಲಕರಿಗೆ ತಿಳಿ ಹೇಳಿದ್ದಾರೆ. ಇದೇ ವೇಳೆ ಶಾಲೆಯ ಹಾಜರಾತಿ ಚೆಕ್ ಮಾಡಿದಾಗ ಗೈರು ಇದ್ದ ಬಾಲಕರಿಗೂ ಹಾಜರಿ ಹಾಕಿದ್ದು ಬೆಳಕಿಗೆ ಬಂದಿದೆ. ವಿಚಾರಿಸಿದಾಗ ಟ್ಯೂಶನ್ಗೆ ಹೋಗಿರುವ ವಿಚಾರ ಪ್ರಸ್ತಾಪ ಮಾಡಿದ್ದಾರೆ. ತಕ್ಷಣವೇ ಆಯೋಗದ ಸದಸ್ಯರು ಪ್ರಗತಿ ಪ್ರಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ಕೊಠಡಿಯೊಂದರಲ್ಲಿ ಒಬ್ಬರು ಖಾಸಗಿ ಟ್ಯೂಶನ್ ಹೇಳ್ತಿರೋದು ಪತ್ತೆಯಾಗಿದೆ. ಈ ಹಿನ್ನಲೆ ಹಾಜರಿ ಹಾಕಿದ್ದ ಶಾಲಾ ಶಿಕ್ಷಕರಿಗೆ ನೋಟಿಸ್ ನೀಡುವಂತೆ ಇಲಾಖೆ ಅಧಿಕಾರಿಗಳ ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Fri, 30 August 24