ಸಾಮೂಹಿಕವಾಗಿ ಆಂಜನೇಯ ದೇವಸ್ಥಾನಕ್ಕೆ ಪ್ರವೇಶ ಮಾಡಿದ ದಲಿತರು; ಈ ಬಗ್ಗೆ ಬಾಲ ಬಿಚ್ಚಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ಕೊಟ್ಟ ಶಾಸಕ ರಾಜುಗೌಡ
ಕಳೆದ ನಾಲ್ಕು ಐದು ದಿನಗಳ ಹಿಂದೆ ನೂರಾರು ಪೊಲೀಸರ ಭದ್ರತೆಯಲ್ಲಿ ಐದು ಮಂದಿ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ರು. ಹೂವಿನಹಳ್ಳಿ ಗ್ರಾಮದಿಂದ ನಡೆದುಕೊಂಡು ಬಂದು ಅಂಬಲಿಹಾಳ್ ಆಂಜನೇಯ ದರ್ಶನ ಪಡೆದಿದ್ರು. ಶಾಸಕ ರಾಜುಗೌಡ ಧೈರ್ಯ ಹೇಳಿದ ಬಳಿಕ ಸಾಮೂಹಿಕವಾಗಿ ದೇಗುಲ ಪ್ರವೇಶ ಮಾಡಿದ್ದಾರೆ.
ಯಾದಗಿರಿ: ಅಂಬಲಿಹಾಳ್ ಗ್ರಾಮದಲ್ಲಿ ಆಂಜನೇಯ ದೇವಸ್ಥಾನಕ್ಕೆ ದಲಿತರ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿ ಅಂದು ಐದು ಜನ ಇಂದು ಸಾಮೂಹಿಕವಾಗಿ ದಲಿತರು ದೇಗುಲ ಪ್ರವೇಶ ಮಾಡಿದ್ದಾರೆ. ಇಡೀ ದಲಿತ ಸಮೂದಾಯದ ಮಹಿಳೆಯರು ಪುರುಷರು ಸೇರಿ ನೂರಕ್ಕೂ ಅಧಿಕ ಜನರು ದೇಗುಲ ಪ್ರವೇಶ ಮಾಡಿದ್ದಾರೆ.
ಕಳೆದ ನಾಲ್ಕು ಐದು ದಿನಗಳ ಹಿಂದೆ ನೂರಾರು ಪೊಲೀಸರ ಭದ್ರತೆಯಲ್ಲಿ ಐದು ಮಂದಿ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ರು. ಹೂವಿನಹಳ್ಳಿ ಗ್ರಾಮದಿಂದ ನಡೆದುಕೊಂಡು ಬಂದು ಅಂಬಲಿಹಾಳ್ ಆಂಜನೇಯ ದರ್ಶನ ಪಡೆದಿದ್ರು. ಶಾಸಕ ರಾಜುಗೌಡ ಧೈರ್ಯ ಹೇಳಿದ ಬಳಿಕ ಸಾಮೂಹಿಕವಾಗಿ ದೇಗುಲ ಪ್ರವೇಶ ಮಾಡಿದ್ದಾರೆ. ಎರಡು ಗ್ರಾಮದಲ್ಲಿ ಶಾಂತಿ ಸಭೆ ಮಾಡಿ ಯಾದಗಿರಿ ಜಿಲ್ಲೆಯ ಸುರಪುರದ ಬಿಜೆಪಿ ಶಾಸಕ ರಾಜುಗೌಡ ಧೈರ್ಯ ಹೇಳಿದ್ದರು. ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಬ್ಲೂಟೂತ್ ಸರಬರಾಜು ಮಾಡ್ತಿದ್ದ ರುದ್ರಗೌಡ ಪಾಟೀಲ್ನ ಮತ್ತಿಬ್ಬರು ಆಪ್ತರು ಅರೆಸ್ಟ್
ಇನ್ನು ಯಾದಗಿರಿ ಜಿಲ್ಲೆ ಸುರಪುರದ ಹೂವಿನಳ್ಳಿಯಲ್ಲಿ ಶಾಸಕ ರಾಜುಗೌಡ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಹೂವಿನಹಳ್ಳಿ ಗ್ರಾಮದ ದಲಿತರು ಭಯಭೀತರಾಗಿದ್ದರು. ಮೇ 28 ರಂದು ಪೋಲಿಸರ ಭದ್ರತೆಯಲ್ಲಿ ದಲಿತರ ದೇವಸ್ಥಾನ ಪ್ರವೇಶ ನಡೆದ ಘಟನೆಯಿಂದ ಆಘಾತವಾಗಿದೆ. ಅಂಬಲಿಹಾಳ್ ಗ್ರಾಮಸ್ಥರ ಜೊತೆ ಸಭೆ ನಡೆಸಿ ಮನವೊಲಿಸುವ ಕಾರ್ಯ ಮಾಡಿದ್ದೇನೆ. ಅಂಬಲಿಹಾಳ್ ಮತ್ತು ಹೂವಿನಳ್ಳಿ ಗ್ರಾಮಸ್ಥರ ಜೊತೆ ಸಭೆ ನಡೆಸಿ ಧೈರ್ಯ ತುಂಬಿದ್ದೇನೆ. ಮುಂದೆ ಯಾರಾದ್ರು ಬಾಲ ಬಿಚ್ಚಿದ್ರೆ ಅವರು ಅನುಭವಿಸ್ತಾರೆ ಎಂದು ಪರೋಕ್ಷವಾಗಿ ಸವರ್ಣೀಯರನ್ನ ಶಾಸಕ ರಾಜುಗೌಡ ವಾರ್ನ್ ಮಾಡಿದ್ದಾರೆ. ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಂತವರನ್ನು ಕೃಷ್ಣಾಜನ್ಮ ಸ್ಥಳಕ್ಕೆ ಕಳಸಿಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಏನೇ ಇದ್ರು ಎರಡು ಊರು ಒಂದಾಗಿ, ಜಾತಿ, ಭೇದ ಭಾವವಿಲ್ಲದೇ ನಡೆಯಬೇಕು ಎಂದರು. ಇದನ್ನೂ ಓದಿ: ‘ರಾಷ್ಟ್ರಭಾಷೆ ಕುರಿತ ಚರ್ಚೆ ಪ್ರಧಾನಿ ಮಾತಿನೊಂದಿಗೆ ಮುಕ್ತಾಯವಾಗಿರುವುದು ಸಂತಸ ತಂದಿದೆ’: ಸುದೀಪ್
Published On - 5:31 pm, Wed, 1 June 22