ಯಾದಗಿರಿ: ಗ್ರಾಹಕರಿಗೆ ಮೋಸ ಮಾಡುತ್ತಿದ್ದ ನಾಲ್ಕು ರೇಷನ್ ಅಂಗಡಿಗಳ ಲೈಸನ್ಸ್ ರದ್ದು
ಗ್ರಾಹರಿಗೆ ಸರಿಯಾಗಿ ಪಡಿತರ ವಿತರಣೆ ಮಾಡದೆ ಮೋಸ ಮಾಡುತ್ತಿದ್ದ ಯಾದಗಿರಿ ಜಿಲ್ಲೆಯ ನಾಲ್ಕು ನ್ಯಾಯಬೆಲೆ ಅಂಗಡಿಗಳ ಲೈಸನ್ಸ್ ಅನ್ನು ಆಹಾರ ಇಲಾಖೆ ಉಪ ನಿರ್ದೇಶಕ ಭೀಮಾರಾಯ ರದ್ದು ಮಾಡಿದ್ದಾರೆ. ಈ ನಾಲ್ಕು ಅಂಗಡಿಗಳ ಪರವಾನಿಗೆಯನ್ನ ಕೇವಲ ಒಂದೇ ವಾರದಲ್ಲಿ ರದ್ದು ಮಾಡಿದ್ದು ವಿಶೇಷವಾಗಿದೆ.

ಯಾದಗಿರಿ, ಸೆ.23: ಗ್ರಾಹರಿಗೆ ಸರಿಯಾಗಿ ಪಡಿತರ ವಿತರಣೆ ಮಾಡದೆ ಮೋಸ ಮಾಡುತ್ತಿದ್ದ ಯಾದಗಿರಿ (Yadgir) ಜಿಲ್ಲೆಯ ನಾಲ್ಕು ನ್ಯಾಯಬೆಲೆ ಅಂಗಡಿಗಳ ಲೈಸನ್ಸ್ ಅನ್ನು ಆಹಾರ ಇಲಾಖೆ ಉಪ ನಿರ್ದೇಶಕ ಭೀಮಾರಾಯ ರದ್ದು ಮಾಡಿದ್ದಾರೆ. ಈ ನಾಲ್ಕು ಅಂಗಡಿಗಳ ಪರವಾನಿಗೆಯನ್ನ ಕೇವಲ ಒಂದೇ ವಾರದಲ್ಲಿ ರದ್ದು ಮಾಡಿದ್ದು ವಿಶೇಷವಾಗಿದೆ.
ಯಾದಗಿರಿ ಜಿಲ್ಲೆಯಾದ್ಯಂತ ಸುಮಾರು 401 ನ್ಯಾಯಬೆಲೆ ಅಂಗಡಿಗಳಿವೆ. ಇದೆ ನ್ಯಾಯಬೆಲೆ ಅಂಗಡಿಗಳಿಂದ ಗ್ರಾಹರಿಕೆ ಪಡಿತರ ವಿತರಣೆ ಮಾಡಲಾಗುತ್ತದೆ. ಆದರೆ ಗ್ರಾಹರಿಗೆ ಸರಿಯಾಗಿ ಸೇವೆ ನೀಡದೆ ಮೋಸದ ಕೆಲಸ ಮಾಡಿದ ನಾಲ್ಕು ನ್ಯಾಯಬೆಲೆ ಅಂಗಡಿಗಳ ಲೈಸನ್ಸ್ ಈಗ ರದ್ದಾಗಿದೆ. ಯಾದಗಿರಿ ತಾಲೂಕಿನ ಪಗಲಾಪುರ, ಅಚ್ಚೊಲಾ, ಕೊಯಿಲೂರ್ ಹಾಗೂ ಹಳಗೇರ ಗ್ರಾಮದ ನ್ಯಾಯಬೆಲೆ ಅಂಗಡಿಗಳ ಪರವಾನಿಗೆಯನ್ನ ಆಹಾರ ಇಲಾಖೆ ಉಪ ನಿರ್ದೇಶಕ ಭೀಮಾರಾಯ ರದ್ದು ಮಾಡಿದ್ದಾರೆ. ಈ ನಾಲ್ಕು ಅಂಗಡಿಗಳ ಪರವಾನಿಗೆಯನ್ನ ಕೇವಲ ಒಂದೇ ವಾರದಲ್ಲಿ ರದ್ದು ಮಾಡಿದ್ದು ವಿಶೇಷವಾಗಿದೆ.
ಈ ನಾಲ್ಕು ಅಂಗಡಿಗಳ ಡೀಲರ್‌ಗಳು ಗ್ರಾಹಕರಿಗೆ ಮೋಸ ಮಾಡುತ್ತಿದ್ದರು. ಪ್ರತಿ ತಿಂಗಳು ಅಂಗಡಿಯ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಪಡಿತರ ಅಕ್ಕಿ, ಜೊಳವನ್ನ ಕೊಡದೆ ಮೋಸ ಮಾಡುತ್ತಿದ್ದರು. ಪಡಿತರ ಕಾರ್ಡ್‌ದಾರರಿಂದ ಹೆಬ್ಬೆಟ್ಟು ಗುರುತು ಪಡೆದು ಅಕ್ಕಿಯನ್ನ ನೀಡದೆ ಈ ತಿಂಗಳು ಬಂದಿಲ್ಲ ಅಂತ ಹೇಳಿ ಗೋಡೌನ್ನಲ್ಲಿ ಸ್ಟಾಕ್ ಇಟ್ಟುಕೊಂಡು ಮೋಸ ಮಾಡುವ ದೂರುಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ತುಮಕೂರು: ಅಕ್ಷರ ದಾಸೋಹ ಯೋಜನೆಯ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ, ಗ್ರಾಮಸ್ಥರಿಂದ ಕಳ್ಳಿಯರ ತರಾಟೆ
ಇನ್ನು, ಕೊಯಿಲೂರು ಗ್ರಾಮದ ಅಂಗಡಿಯ ಡೀಲರ್ ಕಳೆದ ಕೆಲ ತಿಂಗಳುಗಳಿಂದ ಪ್ರತಿಯೊಬ್ಬ ಗ್ರಾಹಕನಿಂದ ಒಂದು ಕೆಜಿ ಅಕ್ಕಿಯನ್ನ ಕಡಿತಗೊಳಿಸುವ ಕೆಲಸ ಮಾಡುತ್ತಿದ್ದ ಅಂತ ದೂರುಗಳು ಬಂದಿದ್ದವು. ಇದೆ ಕಾರಣಕ್ಕೆ ಕಾರಣ ಕೇಳಿ ನೋಟೀಸ್ ನೀಡಿದ್ದರೂ ಉತ್ತರ ನೀಡಿರಲಿಲ್ಲ. ಇದೆ ಕಾರಣಕ್ಕೆ ಲೈಸನ್ಸ್ ರದ್ದು ಮಾಡಲಾಗಿದೆ.
ನ್ಯಾಯ ಬೆಲೆ ಅಂಗಡಿ ಡೀಲರ್‌ಗಳು ಕಳೆದ ಮೂರು ನಾಲ್ಕು ತಿಂಗಳಿಂದ ಪಡಿತರ ಕಾರ್ಡ್‌ದಾರರಿಗೆ ಸಮರ್ಪಕವಾಗಿ ಆಹಾರ ಧ್ಯಾನ ಹಂಚುತ್ತಿಲ್ಲ. ಬೆರಳಚ್ಚು ತೆಗೆದುಕೊಂಡು ಆಹಾರ ಧಾನ್ಯ ಬಂದಿಲ್ಲ ಎಂದು ಕಾರ್ಡ್‌ದಾರರಿಗೆ ಹೇಳಿ ಕಳಿಸಿದ್ದಾರೆ. ತಿಂಗಳ ಪೂರ್ತಿ ಹಂಚದೇ ಒಂದೆರಡು ದಿನ ಮಾತ್ರ ವಿತರಣೆ ಮಾಡಿದ್ದಾರೆ. ಇದರಿಂದ ಕಾರ್ಡ್‌ದಾರರಿಗೆ ಡೀಲರ್‌ಗಳು ಅನ್ಯಾಯ ಮಾಡಿದ್ದಾರೆ. ಇದೆ ಕಾರಣ ಡೀಲರ್ ವಿರುದ್ಧ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಮಾಡಿದ್ದರು. ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಪಡಿತರ ಅಂಗಡಿಯಲ್ಲಿ ಜಾಗೃತಿ ಸಮಿತಿ ಸದಸ್ಯರ ಪಟ್ಟಿ, ದಾಸ್ತಾನು ಫಲಕ, ನಾಮಫಲಕ, ಆಹಾರ ಧಾನ್ಯ ದರಪಟ್ಟಿ, ಪ್ರಾಧಿಕಾರ ಮಂಜೂರಾತಿ ಮಾಹಿತಿ ಪ್ರದರ್ಶನ ಮಾಡದಿರುವುದು ಕಂಡುಬಂದಿದೆ. ಅಲ್ಲದೆ ನ್ಯಾಯಬೆಲೆ ಅಂಗಡಿಯಲ್ಲಿ ಯಾವುದೇ ತರಹದ ನೆಲೆಹಾಸಿಗೆ ಹಾಕದೆ ಆಹಾರ ಧ್ಯಾನ ವಿತರಣೆ ಮಾಡುವುದು ಮತ್ತು ಸ್ವಚ್ಛತೆ ಕಾಪಾಡದೇ ಇರುವುದು ಕಂಡು ಬಂದಿದೆ.
ಅದರಲ್ಲೂ ತಾಂಡಾಗಳಲ್ಲಿ ಆಹಾರ ಧ್ಯಾನ ಸರಿಯಾಗಿ ವಿತರಣೆ ಆಗುವುದಿಲ್ಲ ಎನ್ನುವ ಆರೋಪಗಳಿವೆ. 20 ಕೆಜಿ ಅಕ್ಕಿ ಕೊಡಬೇಕಾದಲ್ಲಿ 15 ಕೆಜಿ ಕೊಡುವುದು, ಮುಂಚಿತವಾಗಿ ಬಯೋಮೆಟ್ರಿಕ್ ತೆಗೆದುಕೊಳ್ಳುವುದು ಮಾಡುವುದು ನಡೆಯುತ್ತಿದೆ. ಸಹಕಾರ ಸಂಘ, ಎಸ್ಸಿ, ಎಸ್‌ಟಿ, ಮಹಿಳಾ ಕೇಂದ್ರಿತಾ ಸೇರಿದಂತೆ ಇನ್ನಿತರ ನ್ಯಾಯಬೆಲೆ ಅಂಗಡಿಗಳಿವೆ.
ಆದರೆ ಹಲವು ವರ್ಷಗಳಿಂದ ಡೀಲರ್‌ಗಳು ಬೇರೂರಿದ್ದರಿಂದ ಅವರಿಗೆ ಇದರಲ್ಲಿ ಹಿಡಿತ ಸಿಕ್ಕಿದೆ. ಹೀಗಾಗಿ ಯಾರೇ ಬಂದರೂ ನಮ್ಮನ್ನು ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇಂತಹ ಡೀಲರ್ಗಳ ಪರವಾನಗಿ ರದ್ದು ಮಾಡುವ ಮೂಲಕ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇನ್ನು ಜಿಲ್ಲೆಯ ನಾಲ್ಕೈದು ಅಂಗಡಿಗಳ ವಿರುದ್ದ ಕೂಡ ಆರೋಪ ಕೇಳಿ ಬಂದಿದ್ದರಿಂದ ಅಧಿಕಾರಿಗಳು ದಾಳಿ ಮಾಡಿ ತನಿಖೆ ನಡೆಸುತ್ತಾರೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 pm, Sat, 23 September 23