ಲಾಭ ತಂದ ಪ್ರಾಣಿ ಬಲಿ ನಿಷೇಧ: ಮೈಲಾರಲಿಂಗ ಜಾತ್ರೆಗೆ ಬಂದ ಕುರಿ ಜಪ್ತಿ

ಯಾದಗಿರಿ: ಪ್ರಾಣಿ ಬಲಿ ನಿಷೇದ ಕಾಯ್ದೆ ಹಾಗೂ ಕಟ್ಟುನಿಟ್ಟಿನ ಕ್ರಮದಿಂದ ಮೈಲಾರಲಿಗೇಶ್ವರ ಜಾತ್ರೆಯಿಂದ ಜಿಲ್ಲಾಡಳಿತಕ್ಕೆ ಭರ್ಜರಿ ಲಾಭವಾಗಿದೆ. ಭಕ್ತರು ಮೈಲಾರಲಿಂಗನ ಪಲ್ಲಕಿ ಮೇಲೆ ಎಸೆಯಲು ತಂದ ಕುರಿಮರಿಗಳಿಂದ ದೇಗುಲ ಆದಾಯ ದುಪ್ಪಟಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕುರಿಮರಿಗಳಿಂದ ಲಾಭ ಹೆಚ್ಚಾಗಿದೆ. ಅಷ್ಟೇ ಅಲ್ಲ ರೈತರಿಗೂ ಇದರಿಂದ ಉಪಯೋಗವಾಗಿದೆ. ಪ್ರಾಣಿ ಬಲಿ ನಿಷೇಧದಿಂದ ಜಿಲ್ಲಾಡಳಿತಕ್ಕೆ ಭರ್ಜರಿ ಲಾಭ! ಯೆಸ್‌, ಪ್ರತಿ ವರ್ಷ ಸಂಕ್ರಮಣದ ಟೈಂನಲ್ಲಿ ಯಾದಗಿರಿ ಜಿಲ್ಲೆಯ ಮೈಲಾಪೂರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಭಕ್ತರು […]

ಲಾಭ ತಂದ ಪ್ರಾಣಿ ಬಲಿ ನಿಷೇಧ: ಮೈಲಾರಲಿಂಗ ಜಾತ್ರೆಗೆ ಬಂದ ಕುರಿ ಜಪ್ತಿ
Follow us
ಸಾಧು ಶ್ರೀನಾಥ್​
|

Updated on: Jan 21, 2020 | 3:56 PM

ಯಾದಗಿರಿ: ಪ್ರಾಣಿ ಬಲಿ ನಿಷೇದ ಕಾಯ್ದೆ ಹಾಗೂ ಕಟ್ಟುನಿಟ್ಟಿನ ಕ್ರಮದಿಂದ ಮೈಲಾರಲಿಗೇಶ್ವರ ಜಾತ್ರೆಯಿಂದ ಜಿಲ್ಲಾಡಳಿತಕ್ಕೆ ಭರ್ಜರಿ ಲಾಭವಾಗಿದೆ. ಭಕ್ತರು ಮೈಲಾರಲಿಂಗನ ಪಲ್ಲಕಿ ಮೇಲೆ ಎಸೆಯಲು ತಂದ ಕುರಿಮರಿಗಳಿಂದ ದೇಗುಲ ಆದಾಯ ದುಪ್ಪಟಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕುರಿಮರಿಗಳಿಂದ ಲಾಭ ಹೆಚ್ಚಾಗಿದೆ. ಅಷ್ಟೇ ಅಲ್ಲ ರೈತರಿಗೂ ಇದರಿಂದ ಉಪಯೋಗವಾಗಿದೆ.

ಪ್ರಾಣಿ ಬಲಿ ನಿಷೇಧದಿಂದ ಜಿಲ್ಲಾಡಳಿತಕ್ಕೆ ಭರ್ಜರಿ ಲಾಭ! ಯೆಸ್‌, ಪ್ರತಿ ವರ್ಷ ಸಂಕ್ರಮಣದ ಟೈಂನಲ್ಲಿ ಯಾದಗಿರಿ ಜಿಲ್ಲೆಯ ಮೈಲಾಪೂರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಭಕ್ತರು ತಮ್ಮ ಹರಕೆಯನ್ನ ತೀರಿಸಲು ಮೈಲಾರಲಿಂಗನ ಪಲ್ಲಕ್ಕಿ ಮೇಲೆ ಕುರಿಮರಿಗಳನ್ನ ಎಸೆಯಲು ನೂರಾರು ಕುರಿಮರಿಗಳನ್ನ ತರುತ್ತಾರೆ. ಆದ್ರೆ ಇಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತ ದೇಗುಲಕ್ಕೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ಗಳನ್ನ ನಿರ್ಮಿಸಿ ಕುರಿಮರಿಗಳ ವಶ ಪಡೆದುಕೊಂಡಿದೆ. ಹೀಗೆ ವಶಕ್ಕೆ ಪಡೆದ ಕುರಿಮರಿಗಳನ್ನು ಪ್ರತಿ ವರ್ಷ ಹರಾಜಿನ ರೂಪದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಬೇರೆನೆ ಪ್ಲ್ಯಾನ್ ಮಾಡಿರುವ ಜಿಲ್ಲಾಡಳಿತ ಟೆಂಡರ್ ಕರೆದು ಆದಾಯ ಹೆಚ್ಚಿಸಿಕೊಂಡಿದೆ.

ಅಧಿಕಾರಿಗಳು ಆರು ಕಡೆ ಚೆಕ್ ಪೋಸ್ಟ್ ಗಳನ್ನ ನಿರ್ಮಿಸಿ ಕುರಿಮರಿಗಳನ್ನ ವಶ ಪಡೆದುಕೊಂಡು ಟೆಂಡರ್ ಪಡೆದವರಿಗೆ ನೀಡಿದ್ದಾರೆ. ಈ ಬಾರಿ ಪಲ್ಲಕ್ಕಿ ಮೇಲೆ ಎಸೆಯಲು ತಂದಿದ್ದ 900 ಕುರಿಮರಿಗಳನ್ನ ಜಿಲ್ಲಾಡಳಿತ ವಶಪಡಿಸಿಕೊಂಡಿದೆ. ಈ 900 ಕುರಿಮರಿಗಳಿಂದ ಜಿಲ್ಲಾಡಳಿತಕ್ಕೆ ಸುಮಾರು 13 ಲಕ್ಷ ಲಾಭವಾಗಿದೆ. ಇನ್ನು ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿ 3 ಲಕ್ಷ ಹೆಚ್ಚುವರಿ ಲಾಭವಾಗಿದೆ. ಈ ಬಾರಿ ಟೆಂಡರ್ ಕರೆದಿದ್ದರಿಂದ ಜಿಲ್ಲಾಡಳಿತಕ್ಕೆ ಹೆಚ್ಚಿನ ಲಾಭ ಬಂದಿದೆ. ಹೀಗೆ ಬಂದ ಹಣವನ್ನ ದೇಗುಲದ ಟ್ರಸ್ಟ್​ಗೆ ವಹಿಸಲಾಗುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಾಣಿಹತ್ಯೆ ನಿಷೇಧ ಇದ್ದರೂ ದೇವರ ಪಲ್ಲಕ್ಕಿ ಮೇಲೆ ಜೀವಂತ ಕುರಿಮರಿ ಹಾರಿಸಲು ಭಕ್ತರು ಕುರಿಮರಿಗಳನ್ನ ತಂದಿದ್ರು. ಹೀಗೆ ತಂದಿರುವ ಕುರಿಮರಿಗಳನ್ನು ವಶಕ್ಕೆ ಪಡೆದು ಟೆಂಡರ್ ಮೂಲಕ ರೈತರಿಗೆ ಜಿಲ್ಲಾಡಳಿತ ನೀಡಿದೆ.

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು