AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCTV ಕ್ಯಾಮರಾಗಳು ಆಫ್! ಯಾದಗಿರಿಯಲ್ಲಿ ಕಳ್ಳಕಾಕರರ ಹಾವಳಿ ಹೆಚ್ಚಾಯ್ತು

ಗುತ್ತಿಗೆ ಪಡೆದ ಕಂಪನಿ ಕ್ಯಾಮರಾಗಳನ್ನ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದೆ ಕಾರಣಕ್ಕೆ ಎಲ್ಲಾ ಕ್ಯಾಮರಾಗಳು ಈಗ ಬಂದ್ ಆಗಿವೆ. ಕಳ್ಳತನ ಮಾಡಿದರೂ ಯಾರಿಗೂ ಗೊತ್ತಾಗಲ್ಲ ಅಂತ ಕಳ್ಳರು ಕಳ್ಳತನ ಕೆಲಸವನ್ನ ಮುಂದುವರಿಸಿದ್ದಾರೆ.

CCTV ಕ್ಯಾಮರಾಗಳು ಆಫ್! ಯಾದಗಿರಿಯಲ್ಲಿ ಕಳ್ಳಕಾಕರರ ಹಾವಳಿ ಹೆಚ್ಚಾಯ್ತು
CCTV ಕ್ಯಾಮರಾಗಳು ಆಫ್! ಯಾದಗಿರಿಯಲ್ಲಿ ಕಳ್ಳಕಾಕರರ ಹಾವಳಿ ಹೆಚ್ಚಾಯ್ತು
TV9 Web
| Edited By: |

Updated on:Dec 05, 2022 | 11:10 AM

Share

ಯಾದಗಿರಿ ಜಿಲ್ಲೆಯ ಆ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ನಗರಸಭೆ ಹಾಗೂ ಪೊಲೀಸರಿಂದ ಹೈಟೆಕ್ ಸಿಸಿಟಿವಿ ಕ್ಯಾಮರಾಗಳನ್ನ (cctv camera) ಅಳವಡಿಸಲಾಗಿತ್ತು.. ಇದೆ ಸಿಸಿಟಿವಿಗಳಿಂದ ಸಾಕಷ್ಟು ಅಪರಾಧ ಪ್ರಕರಗಳು ತಡೆಗಟ್ಟಲು ಪೊಲೀಸರಿಗೆ ಅನುಕೂಲ ಆಗ್ತಾಯಿತ್ತು.. ಕಳ್ಳರನ್ನ ಕ್ಷಣಾರ್ಧದಲ್ಲೇ ಲಾಕ್ ಮಾಡಲಾಗುತ್ತಿತ್ತು.. ಆದ್ರೆ ಈ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಲಕ್ಷಾಂತರ ರೂ. ಮೌಲ್ಯದ ಹೈಟೆಕ್ ಸಿಸಿಟಿವಿ ಕ್ಯಾಮರಗಳು ಬಂದ್ ಆಗಿವೆ. ಇದೆ ಕಾರಣಕ್ಕೆ ಈಗ ಕಂಟ್ರೋಲ್ ಆಗಿದ್ದ ಕಳ್ಳತನ ಕೇಸ್ (theft) ಗಳು ಹೆಚ್ಚಾಗುತ್ತಿವೆ (yadgir crime news).

ಪೊಲೀಸರಿಗೆ ವರವಾಗಿದ್ದ ಹೈಟೆಕ್ ಸಿಸಿಟಿವಿ ಕ್ಯಾಮರಗಳು ಬಂದ್ ಆಗಿದ್ದು, ಸಿಸಿಟಿವಿಗಳ ಸಹಾಯದಿಂದ ಕಳ್ಳರನ್ನ ಹಿಡಿಯುತ್ತಿದ್ದ ಪೊಲೀಸರು ಈಗ ಹೈರಾಣರಾಗಿದ್ದಾರೆ. ನಿರ್ವಹಣೆ ಮಾಡಲಾಗದೆ ಹಾಳಾಗುತ್ತಿವೆ ಲಕ್ಷಾಂತರ ರೂ. ಮೌಲ್ಯದ ಸಿಸಿಟಿವಿ ಕ್ಯಾಮರಗಳು ಅನಾಥವಾಗಿವೆ. ಯಸ್, ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ. ಹೌದು ಯಾದಗಿರಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಎನ್ನುವ ಹಾಗೆ ಸುರಪುರ ನಗರದಲ್ಲಿ ಸುರಪುರ ನಗರಸಭೆ ಹಾಗೂ ಪೊಲೀಸರ ಸಂಯುಕ್ತಾಶ್ರಮದಲ್ಲಿ ನಗರದ ಪ್ರಮುಖ ಕಡೆ ಒಂಬತ್ತು ಹೈಟೆಕ್ ಸಿಸಿಟಿವಿ ಕ್ಯಾಮರಗಳನ್ನ ಅಳವಡಿಸಲಾಗಿತ್ತು. ಸಿಸಿಟಿವಿ ಕ್ಯಾಮರಗಳ ಜೊತೆಗೆ ಮೈಕ್ ಗಳನ್ನು ಸಹ ಅಳವಡಿಸಲಾಗಿತ್ತು.

ಅಧಿಕಾರಿಗಳು ಠಾಣೆಯಲ್ಲಿ ಕುಳಿತುಕೊಂಡ್ರೆ ಸಾಕು ನಗರದ ಪ್ರಮುಖ ಕಡೆ ಏನೇನು ಆಗ್ತಾಯಿದೆ ಅಂತ ಕುಳಿತಲ್ಲೇ ನೋಡಬಹುದಿತ್ತು. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳು ಪಾರ್ಕ್ ಮಾಡಿದ್ರೆ ಅಧಿಕಾರಿಗಳು ಸ್ಟೇಷನ್ ನಲ್ಲೇ ಕುಳಿತುಕೊಂಡು ಮಾನಿಟರ್ ಮಾಡಿ ವಾಹನ ಸವಾರರಿಗೆ ಎಚ್ಚರಿಕೆ ನೀಡ್ತಾಯಿದ್ರೆ.. ನಗರದಲ್ಲಿ ಕಳ್ಳತನ ಪ್ರಕರಣಗಳು ನಡೆದ್ರೆ ಪೊಲೀಸರು ಇದೆ ಸಿಸಿಟಿವಿ ಕ್ಯಾಮರಗಳ ಅನುಕೂಲದಿಂದ ಕಳ್ಳರನ್ನ ಆದಷ್ಟು ಬೇಗ ಲಾಕ್ ಮಾಡ್ತಾಯಿದ್ರು. ಆಕ್ಸಿಡೆಂಟ್ ಆದ್ರೆ ಕುಳಿತಲ್ಲೇ ಗಾಡಿ ನಂಬರ್ ನೋಟ್ ಮಾಡಿ ಕೇಸ್ ಹಾಕ್ತಾಯಿದ್ರು.

ಆದ್ರೆ ಈಗ ಎಲ್ಲವೂ ಬಂದ್ ಆಗಿದೆ ಯಾಕೆಂದ್ರೆ ಪೊಲೀಸರಿಗೆ ಸಹಕಾರಿಯಾಗಿದ್ದ ಹೈಟೆಕ್ ಸಿಸಿಟಿವಿ ಕ್ಯಾಮರಗಳು ಬಂದ್ ಆಗಿವೆ. ನಿರ್ವಹಣೆ ಕೊರತೆಯಿಂದಾಗಿ ಲಕ್ಷಾಂತರ ರೂ. ಖರ್ಚು ಮಾಡಿದ್ದ ಸಿಸಿಟಿವಿ ಕ್ಯಾಮರಗಳು ಬಂದ್ ಆಗಿದೆ. ಇದೆ ಕಾರಣಕ್ಕೆ ಈಗ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಖ್ಯ ಸರ್ಕಲ್ ನಲ್ಲಿ ನಿಲ್ಲಿಸಿದ ವಾಹನಗಳನ್ನ ಕಳ್ಳರು ಆರಾಮಾಗಿ ಕದಿಯುತ್ತಿದ್ದಾರೆ. ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದಾರೆ. ಇಷ್ಟೆಲ್ಲ ಆದರೂ ಪೊಲೀಸರು ಕ್ರೈಂ ಕಂಟ್ರೋಲ್ ಮಾಡಲು ಆಗ್ತಾಯಿಲ್ಲ. ಯಾಕೆಂದ್ರೆ ಪೊಲೀಸರಿಗೆ ಊರುಗೋಲಾಗಿದ್ದ ಸಿಸಿಟಿವಿ ಕ್ಯಾಮರಗಳೇ ಬಂದ್ ಆಗಿವೆ.. ಇದೆ ಕಾರಣಕ್ಕೆ ಈಗ ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಸುರಪುರ ನಗರದಲ್ಲಿ ಕಳ್ಳತನ ಕೇಸ್ ಗಳು ಹೆಚ್ಚಾಗುತ್ತಿವೆ ಪ್ರಮುಖ ಸರ್ಕಲ್ ಗಳಲ್ಲಿ ವಾಹನಗಳು ಅಡ್ಡಾತಿಡ್ಡಿ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡುತ್ತಿದ್ದಾರೆ. ಜೊತೆಗೆ ಸರ್ಕಲ್ ನಲ್ಲಿ ನಿಯೋಜನೆ ಮಾಡಿದ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಅಂತ ಪೊಲೀಸರು ಕಳೆದ ಎರಡು ವರ್ಷಗಳ ಹಿಂದೆ ಸುರಪುರದ ಶಾಸಕರು ಹಾಗೂ ನಗರಸಭೆ ಅಧಿಕಾರಿಗಳ ಮನವೊಲಿಸಿ ನಗರದ ಒಂಬತ್ತು ಕಡೆ ಒಂಬತ್ತು ಹೈಟೆಕ್ ಸಿಸಿಟಿವಿ ಕ್ಯಾಮರಗಳು ಅಳವಡಿಸುವ ಕೆಲಸ ಮಾಡಿದ್ರು.

theft rampant in yadgir as High tech cctv camera not functioning

ಇದು ಯಾದಗಿರಿ ಜಿಲ್ಲೆಯಲ್ಲಿ ಮೊದಲ ಪ್ರಯತ್ನವಾಗಿತ್ತು ಜೊತೆಗೆ ಯಶಸ್ವಿ ಕೂಡ ಆಗಿತ್ತು. ಇದೆ ಸಿಸಿಟಿವಿ ಕ್ಯಾಮರಾಗಳಿಂದ ಪೊಲೀಸರು ಕ್ರೈಂ ಸಹ ಕಂಟ್ರೋಲ್ ಮಾಡ್ತಾಯಿದ್ರು. ಇದರ ಜೊತೆಗೆ ಎಲ್ಲಾ ಸಿಸಿಟಿವಿ ಕ್ಯಾಮರಗಳ ಮೇಲೆ ಮೈಕ್ ಗಳನ್ನ ಸಹ ಅಳವಡಿಸಿದ್ರು. ಆದ್ರೆ ಈಗ ಇರೋ ಒಂಬತ್ತು ಸಿಸಿಟಿವಿ ಕ್ಯಾಮರಗಳು ಬಂದ್ ಆಗಿವೆ.. ಇದರ ನಿರ್ವಹಣೆಯನ್ನ ಸುರಪುರ ನಗರಸಭೆ ಅಧಿಕಾರಿಗಳು ಒಂದು ಕಂಪನಿಗೆ ಗುತ್ತಿಗೆಯನ್ನ ನೀಡಿತ್ತು.

ಆದ್ರೆ ಗುತ್ತಿಗೆ ಪಡೆದ ಕಂಪನಿ ಕ್ಯಾಮರಾಗಳನ್ನ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದೆ ಕಾರಣಕ್ಕೆ ಎಲ್ಲಾ ಕ್ಯಾಮರಾಗಳು ಈಗ ಬಂದ್ ಆಗಿವೆ. ಇದೆ ಕಾರಣಕ್ಕೆ ಸುರಪುರ ನಗರದಲ್ಲಿ ಕಳ್ಳರಿಗೆ ಬಾರಿ ಅನುಕೂಲ ಆಗಿದೆ. ಕಳ್ಳತನ ಮಾಡಿದರೂ ಯಾರಿಗೂ ಗೊತ್ತಾಗಲ್ಲ ಅಂತ ಕಳ್ಳತನ ಕೆಲಸವನ್ನ ಮುಂದುವರಿಸಿದ್ದಾರೆ. ಆದ್ರೆ ಈಗ ಬಗ್ಗೆ ಯಾದಗಿರಿ ಎಸ್ ಪಿ ಡಾ.ಸಿ ಬಿ ವೇದಮೂರ್ತಿ ಅವರಿಗೆ ಕೇಳಿದ್ರೆ ಆದಷ್ಟು ಬೇಗ ನಗರಸಭೆ ಅಧಿಕಾರಿಗಳಿಗೆ ಹೇಳಿ ಸಿಸಿಟಿವಿ ಕ್ಯಾಮರಗಳನ್ನ ಆನ್ ಮಾಡಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಹೈಟೆಕ್ ಕ್ಯಾಮರಾಗಳು ಬಂದ್ ಆದರೂ ಖಾಸಗಿಯಾಗಿ ನಗರದಲ್ಲಿ ಸಾಕಷ್ಟು ಕ್ಯಾಮರಾಗಳು ಇವೆ ಅಂತಾರೆ.

ಒಟ್ನಲ್ಲಿ ಈ ಹಿಂದೆ ಡಿವೈಎಸ್ಪಿ ಅವರು ಮುತುವರ್ಜಿವಹಿಸಿ ಅಧಿಕಾರಿಗಳ ಮನವೊಲಿಸಿ ನಗರದಲ್ಲಿ ಸಿಸಿಟಿವಿ ಕ್ಯಾಮರಗಳನ್ನ ಅಳವಡಿಸುವ ಕೆಲಸ ಮಾಡಿದ್ದರು. ಆದ್ರೆ ಈಗಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಲ್ಲಾ ಸಿಸಿಟಿವಿ ಕ್ಯಾಮರಾಗಳು ಬಂದ್ ಆಗಿದ್ದು ಕಳ್ಳತನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. (ವರದಿ: ಅಮೀನ್ ಹೊಸುರ್, ಟಿವಿ 9, ಯಾದಗಿರಿ)

Published On - 11:09 am, Mon, 5 December 22

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ