AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮಸ್ಥರ ಮಾನವೀಯತೆ.. ಅನಾಥನಿಗೆ ಆಶ್ರಯ ನೀಡಿ ಸೇವೆ ಸಲ್ಲಿಸುತ್ತಿರುವ ಊರಿನ ಯುವಕರು

ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ವತಿಯಿಂದ ಇಂತಹ ವೃದ್ಧರನ್ನು, ಅನಾಥರನ್ನು ನೋಡಿಕೊಳ್ಳಲು ಮಾಡಲು ಕಾಳಜಿ ಕೇಂದ್ರಗಳನ್ನು ಆರಂಭಿಸಬೇಕು. ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು, ಅದನ್ನು ಇಂತಹ ಅಸಹಾಯಕರ ಸಹಾಯಕ್ಕೆ ಬಳಸಬೇಕು. ನಮ್ಮ ಜಿಲ್ಲೆಯಲ್ಲಿ ಆದಷ್ಟು ಬೇಗ ಕೇಂದ್ರಗಳನ್ನು ಆರಂಭಿಸಿ ಅನಾಥರನ್ನು ಕಾಪಾಡಬೇಕು ಎಂದು ಯುವಕರ ತಂಡ ಹೇಳಿದೆ.

ಗ್ರಾಮಸ್ಥರ ಮಾನವೀಯತೆ.. ಅನಾಥನಿಗೆ ಆಶ್ರಯ ನೀಡಿ ಸೇವೆ ಸಲ್ಲಿಸುತ್ತಿರುವ ಊರಿನ ಯುವಕರು
ಅನಾಥರಿಗೆ ಆಶ್ರಯ ನೀಡಿದ ಗ್ರಾಮಸ್ಥರು
preethi shettigar
| Edited By: ಸಾಧು ಶ್ರೀನಾಥ್​|

Updated on: Jan 08, 2021 | 12:18 PM

Share

ಯಾದಗಿರಿ: ಸ್ವಂತ ತಂದೆ ತಾಯಿಯನ್ನೇ ನೋಡಿಕೊಳ್ಳದ ಇಂದಿನ ದಿನಗಳಲ್ಲಿ.. ವ್ಯಕ್ತಿ ಎಲ್ಲಿಯವರು? ಎಂದು ಕೂಡ ಗುರುತು ಪರಿಚಯ ಇಲ್ಲದ.. ಮಾತು ಬಾರದ ಅನಾಥನ ಕಾಳಜಿಗೆ ಕಾಲೂರಿ ನಿಂತಿದ್ದಾರೆ ಈ ಗ್ರಾಮದ ಯುವಕರು. ಶಹಾಪುರದಿಂದ ರಾಯಚೂರಿಗೆ ಹೋಗುವ ರಸ್ತೆಯ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಐಕೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಮಲಮೂತ್ರದಲ್ಲಿಯೇ ಮಲಗಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ನೋಡಿ ಆತನಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸಿ ಸ್ವಚ್ಛ ಮಾಡಿದ್ದಾರೆ.

ಹೀಗೆ ಪ್ರತಿನಿತ್ಯ ಒಬ್ಬಿಬ್ಬರು ಸೇರಿ ಸ್ನಾನ ಮಾಡಿಸಿ ಮನೆಯಿಂದ ಅಥವಾ ಹೋಟೆಲ್​ಗಳಿಂದ ಉಪಹಾರ ಮತ್ತು ಊಟ ತೆಗೆದುಕೊಂಡು ಬಂದು ಉಪಚರಿಸುತ್ತಿದ್ದಾರೆ. ಜೊತೆಗೆ ಆ ವ್ಯಕ್ತಿಯ ಬಗ್ಗೆ ನಿರಂತರವಾಗಿ ಕಾಳಜಿ ವಹಿಸಲು ವೃದ್ಧಾಶ್ರಮ ಅಥವಾ ಅನಾಥ ಆಶ್ರಮಗಳಿಗಾಗಿ ಹುಡುಕುತ್ತಿದ್ದಾರೆ. ಇದೇ ವೇಳೆ ಸ್ವತಃ ನಮ್ಮ ಜಿಲ್ಲೆಯಲ್ಲಿಯೇ  ಅಂತಹ ಕಾಳಜಿ ಕೇಂದ್ರ ಇಲ್ಲದೆ..  ಊರಿನ ಯುವಕರು ಪ್ರತಿನಿತ್ಯ ವಿವಿಧ ನಗರ ಪಟ್ಟಣಗಳಿಗೆ ಸಂಪರ್ಕ ಮಾಡುತ್ತಿದ್ದಾರೆ.

ಅನಾಥಾಶ್ರಮ ಸಿಗದಿರುವುದಕ್ಕೆ ಗ್ರಾಮಸ್ಥರಿಂದಲೇ ಆಶ್ರಯ: ಬೆಂಗಳೂರಿನಲ್ಲಿರುವ ಅನಾಥ ಆಶ್ರಮಕ್ಕೆ ಸಂಪರ್ಕಿಸಿದರೆ ಅವರು ಪೋಲಿಸ್ ಠಾಣೆಯಿಂದ ದೂರು ಪ್ರತಿ ಇದ್ದರೆ ಮಾತ್ರ ನಾವು ಸೇರಿಸಿಕೊಳ್ಳತ್ತೇವೆ ಎಂದಿದ್ದಾರೆ. ಆದರೆ ಸ್ಥಳೀಯ ಪೋಲಿಸ್  ಠಾಣೆಯವರು ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ತಾವೇ ಆ ವ್ಯಕ್ತಿಯನ್ನು ಕಾಳಜಿ ಮಾಡುವ ಕಾರ್ಯ ಮುಂದುವರಿಸಿದ್ದಾರೆ.

ಆ ವ್ಯಕ್ತಿ ಎಲ್ಲಿಯವರು? ಎಂದೂ ಗೊತ್ತಿಲ್ಲ. ನಾವೆಲ್ಲರೂ ಸೇರಿ ಅವರ ಕಷ್ಟ ನೋಡದೆ ಅವರಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸಿದ್ದೇವೆ. ಅವರೂ ಸಹ ನಮ್ಮ ಹಾಗೆ ಮನುಷ್ಯರು. ಅವರಿಗೂ ಸಹ ಚಳಿ ಆಗುತ್ತದೆ ಎಂದು ಹಾಸಿಗೆ ಬಟ್ಟೆ ನೀಡಿದ್ದೇವೆ. ಅವರಿಗೆ ಮಾತು ಸಹ ಬರುವುದಿಲ್ಲ. ಮಾತು ಬಂದರೆ ಅವರ ವಿಳಾಸವಾದರೂ ಕೇಳಿ ಅವರು ಹೇಳಿದ ವಿಳಾಸಕ್ಕೆ ಬಿಟ್ಟು ಬರುತ್ತಿದ್ದೆವು.

ಆದರೆ ಏನು ಮಾಡುವುದು? ಅವರಿಗೆ ಪಾರ್ಶ್ವವಾಯು ಆಗಿರುವುದರಿಂದ ಬಲಗೈ ಮತ್ತು ಬಲ ಕಾಲು ಬಿದ್ದುಹೋಗಿದೆ. ಇದರಿಂದ ಅವರ ಆರೋಗ್ಯ ಉತ್ತಮವಾಗಿಲ್ಲ. ಅವರು ಇರುವಷ್ಟು ದಿನ ನಮ್ಮ ಊರಲ್ಲಿಯೇ ಇರಲಿ. ನಂತರದಲ್ಲಿ ಆಶ್ರಮ ಸಿಕ್ಕರೆ ಅಲ್ಲಿಗೆ ಕಳಸಿಕೊಡುತ್ತೇವೆ ಎಂದು ಕಾಳಜಿ ಮಾಡುತ್ತಿರುವ ಶ್ರೀರಾಮುಲು ಅಭಿಮಾನಿಗಳ ಬಳಗದ ಮುಖ್ಯಸ್ಥರಾದ ಹೊನ್ನಪ್ಪ ದೊರೆ ಹೇಳಿದ್ದಾರೆ.

ಆಶ್ರಯ ಪಡೆಯುತ್ತಿರುವ ವ್ಯಕ್ತಿ

ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ವತಿಯಿಂದ ಇಂತಹ ವೃದ್ಧರನ್ನು, ಅನಾಥರನ್ನು ನೋಡಿಕೊಳ್ಳಲು ಕಾಳಜಿ ಕೇಂದ್ರಗಳನ್ನು ಆರಂಭಿಸಬೇಕು. ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು, ಅದನ್ನು ಇಂತಹ ಅಸಹಾಯಕರ ಸಹಾಯಕ್ಕೆ ಬಳಸಬೇಕು. ನಮ್ಮ ಜಿಲ್ಲೆಯಲ್ಲಿ ಆದಷ್ಟು ಬೇಗ ಅಂತಹ ಕೇಂದ್ರ ಆರಂಭಿಸಿ ಅನಾಥರನ್ನು ಕಾಪಾಡಬೇಕು ಎಂದು ಯುವಕರ ತಂಡ ಹೇಳಿದೆ.

ಅನಾಥರಿಗೆ ಆಶ್ರಯ ನೀಡಿದ ಯುವಕರ ತಂಡ

ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾಗೂ ಮಾತು ಬರದೆ ಇರುವ ಒಬ್ಬ ಅನಾಥನನ್ನು ನೋಡಿಕೊಳ್ಳುವುದು ಮಾನವೀಯತೆ. ಅದರಂತೆ ನಾವು ಸಹ ನಮ್ಮ ಕೈಯಿಂದ ಆದಷ್ಟು ಸಹಾಯ ಮಾಡುತಿದ್ದೇವೆ ಎಂದು ಗ್ರಾಮಸ್ಥ ನಾಗರಾಜ್ ಲಕ್ಕ ಹೇಳಿದ್ದಾರೆ.

ಅನಾಥರ ಸೇವೆ ಮಾಡುವುದು ಸಂತೋಷದ ವಿಷಯ. ಅವರ ಬಗ್ಗೆ ನಾವು ಯಾವುದೇ ಸಂಕೋಚ, ಮುಜುಗರ, ಅಸಹ್ಯ ಪಡದೆ ಸಂತೋಷದಿಂದ ಸೇವೆ ಮಾಡಿದ್ದೇವೆ. ಮುಂದೆ ಯಾವುದಾದರೂ ಆಶ್ರಮ ಸಿಕ್ಕಿದರೆ ನಾವು ನಮ್ಮ ಕಡೆಯಿಂದ ಸಹಾಯ ಮಾಡುತ್ತೇವೆ ಎಂದು ಮಾನವೀಯತೆ ಮೆರೆದ ಯುವಕ ನಾಗರಾಜ ದೋರೆ ಹೇಳಿದ್ದಾರೆ.

ಅನಾಥಾಶ್ರಮದ ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿ, ನಗು ಮೂಡಿಸಿದ ಅಲ್ಲು ಅರ್ಜುನ್​

Follow Us
preethi shettigar
preethi shettigar
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್