AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS ಪಥ ಸಂಚಲನ: ಶಾಂತಿ ಸಭೆ ಯಶಸ್ವಿ, ಪಟ್ಟು ಸಡಿಲಿಸಿದ ದಲಿತ ಸಂಘಟನೆ

ಯಾದಗಿರಿಯ ಕೆಂಭಾವಿಯಲ್ಲಿ ಪಥಸಂಚಲನ ಸಂಬಂಧ ಆರ್ ಎಸ್ ಎಸ್ ಹಾಗೂ ದಲಿತ ಸಂಘಟನೆಗಳ ನಡುವಿನ ಜಟಾಪಟಿ ಅಂತ್ಯವಾಗಿದೆ. ಇಂದು (ನವೆಂಬರ್ 03) ಸುರಪುರ ತಾಲೂಕಾಡಳಿತ ನಡೆಸಿದ ಶಾಂತಿ ಸಭೆ ಯಶಸ್ವಿಯಾಗಿದ್ದು, ದಲಿತ ಸಂಘಟನೆ ತನ್ನ ಪಟ್ಟು ಸಡಿಲಿಸಿದೆ. ಹೀಗಾಗಿ ನಾಳೆ ಕೆಂಭಾವಿಯಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಕೆಲ ಷರತ್ತುಗೊಳೊಂದಿಗೆ ಅನುಮತಿ ನೀಡಲಾಗಿದೆ.

RSS ಪಥ ಸಂಚಲನ: ಶಾಂತಿ ಸಭೆ ಯಶಸ್ವಿ, ಪಟ್ಟು ಸಡಿಲಿಸಿದ ದಲಿತ ಸಂಘಟನೆ
Rss
ಅಮೀನ್​ ಸಾಬ್​
| Updated By: ರಮೇಶ್ ಬಿ. ಜವಳಗೇರಾ|

Updated on: Nov 03, 2025 | 8:06 PM

Share

ಯಾದಗಿರಿ, (ನವೆಂಬರ್ 03): ಆರ್ ಎಸ್ ಎಸ್  (RSS) ತನ್ನ ಪಯಣದ 100 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟದ ಮೂಲೆ ಮೂಲೆಯಲ್ಲೂ ಸಹ ಆರ್​ಎಸ್​ಎಸ್​ ಪಥಸಂಚಲನ (RSS Route March) ನಡೆಸುವ ಮೂಲಕ ಶತಾಬ್ದಿ ವರ್ಷಾಚರಣೆ ಮಾಡುತ್ತಿದೆ. ಆದ್ರೆ, ಕೆಲವೆಡೆ ಆರ್​​ಎಸ್​ಎಸ್​ ಪಥಸಂಚಲನಕ್ಕೆ ಅಡೆತಡೆಗಳು ಎದುರಾಗಿದೆ. ಅದರಂತೆ ಯಾದಗಿರಿ (Yadagir) ಜಿಲ್ಲೆಯ ಕೆಂಭಾವಿಯಲ್ಲಿ ಸಹ ದಲಿತ ಸಂಘಟನೆಗಳು ಆರ್​ಎಸ್​ಎಸ್​ ಪಥಸಂಚಲನದ ವಿರುದ್ಧವಾಗಿ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಈ ಈ ಹಿನ್ನೆಲೆಯಲ್ಲಿ ಇಂದು (ನವೆಂಬರ್ 03) ಸುರಪುರ ತಾಲೂಕ ಆಡಳಿತ ನಡೆಸಿದ ಶಾಂತಿ ಸಭೆ ಯಶಸ್ವಿಯಾಗಿದ್ದು, ದಲಿತ ಮುಖಂಡರನ್ನು ಮನವೊಲಿಸುವಲ್ಲಿ ಅಧಿಕಾರಿಗಳು ಸಹ ಸಕ್ಸಸ್ ಆಗಿದ್ದಾರೆ. ಹೀಗಾಗಿ ನಾಳೆ(ನವೆಂಬರ್ 04) ಕೆಂಭಾವಿಯಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ನೀಡಲಾಗಿದೆ.

ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಸುರಪುರ ತಹಶೀಲ್ದಾರ್ ಹಾಗೂ ಸುರಪುರ ಡಿವೈಎಸ್‌ಪಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ದಲಿತ ಮುಖಂಡರನ್ನು ಮನವೊಲಿಸಿದರು. ಇದರೊಂದಿಗೆ ಪಥ ಸಂಚಲನ ದಿನವೇ ನಾವು ಪಥ ಸಂಚಲನ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದ ಡಿಎಸ್ಎಸ್ ಮುಖಂಡರು ಕೊನೆಗೆ ಶಾಂತಿ ಸಭೆ ಬಳಿಕ ಪಟ್ಟು ಸಡಿಲಿಸಿದರು. ಇದರೊಂದಿಗೆ ಸುರಪುರ ತಾಲೂಕಾಡಳಿತ ನಡೆಸಿದ ಶಾಂತಿ ಸಭೆ ಯಶಸ್ವಿಯಾಗಿದ್ದು, ನಾಳೆ ಕೆಂಭಾವಿಯಲ್ಲಿ ಆರ್​​ಎಸ್​ಎಸ್​ ಪಥಸಂಚಲನ ನಡೆಯಲಿದೆ.

ಇದನ್ನೂ ಓದಿ: ಕಲಬುರಗಿ ಬಳಿಕ ಯಾದಗಿರಿಯಲ್ಲೂ RSS ಪಥಸಂಚಲನಕ್ಕೆ ಅಡ್ಡಿ: ಅಷ್ಟಕ್ಕೂ ಆಗಿದ್ದೇನು?

ಯಾದಗಿರಿ (Yadgiri) ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ (ನವೆಂಬರ್ 04) ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನಕ್ಕೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ. ಈ ನಿರ್ಧಾರವು ಸ್ಥಳೀಯ ಶಾಂತಿ ಸಭೆಯ ವರದಿಯನ್ನು ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಅನುಮತಿಸಿದ್ದಾರೆ.

ಕಳೆದ ತಿಂಗಳುಗಳಲ್ಲಿ ರಾಜ್ಯದಾದ್ಯಂತ ಆರ್‌ಎಸ್‌ಎಸ್‌ನ ರೂಟ್ ಮಾರ್ಚ್‌ಗಳಿಗೆ ಸಂಬಂಧಿಸಿದಂತೆ ಹಲವು ವಿವಾದಗಳು ನಡೆದಿವೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ್‌ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಆರ್ಥಿಕವಾಗಿ ಅನುಮತಿ ನಿರಾಕರಿಸಲಾಗಿತ್ತು. ಇದೇ ರೀತಿ, ಯಾದಗಿರಿಯಲ್ಲಿ ಸಹ ಸ್ಥಳೀಯ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಅನುಮತಿ ವಿರುದ್ಧ ಪ್ರತಿಭಟನೆ ನಡೆಸಿದ್ದವು.  ಹೀಗಾಗಿ  ಸುರಪುರ ತಾಲೂಕಾಡಳಿತ ಶಾಂತಿ ಸಭೆ ನಡೆಸಿದ್ದು,  ಸಭೆಯಲ್ಲಿ  ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯ ಎಂದು ಒಪ್ಪಂದ ಮಾಡಿಕೊಂಡರು. ಈ ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಬೋಯರ್ ಅವರು ಅನುಮತಿ ನೀಡಿದ್ದಾರೆ.

ಆರ್​ಎಸ್​ಎಸ್​ ಪಥಸಂಚಲನ ಮಂಗಳವಾರ ಬೆಳಿಗ್ಗೆ 9:30ಕ್ಕೆ ಕೆಂಭಾವಿ ಪುರಸಭೆ ಮುಂಭಾಗದಿಂದ ಆರಂಭವಾಗಿ, ಪಟ್ಟಣದ ಮುಖ್ಯ ಬೀಡಿಗಳಾದ ರೈಲ್ವೇ ಸ್ಟೇಷನ್ ರಸ್ತೆ, ಮಾರುಕಟ್ಟೆ ಬೀಡಿ ಮತ್ತು ಗ್ರಾಮ ಪಂಚಾಯಿತಿ ಬಳಿಯವರೆಗೆ ಸಂಚರಿಸುತ್ತದೆ. ಸುಮಾರು 500 ಸ್ವಯಂಸೇವಕರು ಭಾಗವಹಿಸಲಿದ್ದಾರೆ.

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ