Short Circuit: ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಂಗುಲಿ ಯುವ ಕೃಷಿಕ ಸಾವು
ತೋಟದಲ್ಲಿ ಕಾಳು ಮೆಣಸು ಕೊಯ್ಲು ಮಾಡುವಾಗ ಕಬ್ಬಿಣದ ಏಣಿಗೆ ತಾಗಿದ ವಿದ್ಯುತ್ ತಂತಿಯಿಂದ ಯುವಕ ಬಲಿಯಾಗಿದ್ದಾನೆ.
ಮಡಿಕೇರಿ: ವಿದ್ಯುತ್ ತಂತಿ ತಂಗುಲಿ ಯುವ ಕೃಷಿಕ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಿಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ನಾಮೆರ ದಿನೇಶ್ (22) ಮೃತಪಟ್ಟ ಯುವಕ. ತೋಟದಲ್ಲಿ ಕಾಳು ಮೆಣಸು ಕೊಯ್ಲು ಮಾಡುವಾಗ ಕಬ್ಬಿಣದ ಏಣಿಗೆ ತಾಗಿದ ವಿದ್ಯುತ್ ತಂತಿಯಿಂದ ಯುವಕ ಬಲಿಯಾಗಿದ್ದಾನೆ.
ಚಿಕ್ಕಬಳ್ಳಾಪುರದಲ್ಲಿ ಬೈಕ್ ಸವಾರನಿಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿಯಾಗಿ ಮುಂಬದಿ ಬೈಕ್ ಸವಾರ ವಿಶ್ವನಾಥ್ ಆಚಾರಿ ಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಘಟನೆ ನಡೆದಿದೆ. ಆರೋಪಿ ಬೈಕ್ ಸವಾರನಿಗೆ ಸಾರ್ವಜನಿಕರು ಛೀಮಾರಿ ಹಾಕಿದರು. ಗಾಯಾಳು ವಿಶ್ವನಾಥ್ ಆಚಾರಿಯನ್ನು ನಿಮ್ಮಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯರ ನಿರ್ಲಕ್ಷ್ಯ ಆರೋಪ ಆಸ್ಪತ್ರೆಯಲ್ಲಿ ರೋಗಿ ಸಾವು ಕೊಪ್ಪಳ ಜಿಲ್ಲೆ ಕುಕನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂತಹದೊಂದು ಆರೋಪ ಕೇಳಿ ಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯಲ್ಲಿ ರೋಗಿ ಮೃತಪಟ್ಟ ಆರೋಪ ಕೇಳಿ ಬಂದಿದೆ. ಮರಿಯಪ್ಪ ಹಗೇದಾಳ ಮೃತ ರೋಗಿ. ಮೃತ ರೋಗಿಯ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಾವಗಡ: ಮನೆಯಲ್ಲಿದ್ದ ವೃದ್ದೆಯ ಮಾಂಗಲ್ಯ ಸರ ಕದ್ದು ಪರಾರಿ ಮನೆಯಲ್ಲಿ ಇದ್ದ ವೃದ್ದೆಯ ಮಾಂಗಲ್ಯ ಸರ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನಾಗರತ್ನಮ್ಮ ಹಾಗೂ ಪತಿ ನಾರಾಯಣಪ್ಪ ಮನೆಯಲ್ಲಿ ಇರುವುದನ್ನ ಗಮನಿಸಿದ ಕಳ್ಳರು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಈ ವೇಳೆ ನಾಗರತ್ನಮ್ಮ ಕತ್ತಿನಲ್ಲಿದ್ದ 60 ಗ್ರಾಂ ಮಾಂಗಲ್ಯ ಸರವನ್ನ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Video: ಗುಜರಾತ್ ಫ್ಲೋರೋಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಸ್ಫೋಟ; 12ಕ್ಕೂ ಹೆಚ್ಚು ಮಂದಿಗೆ ಗಾಯ